For Quick Alerts
  ALLOW NOTIFICATIONS  
  For Daily Alerts

  ಈಟಿವಿ ಕನ್ನಡದಲ್ಲಿ ಅಣ್ಣಾವ್ರ 'ಸಂಪತ್ತಿಗೆ ಸವಾಲ್' ಚಿತ್ರ

  By Rajendra
  |

  ವರನಟ ಡಾ.ರಾಜ್ ಕುಮಾರ್ ಅವರಿಗೆ ಅಪಾರ ಹೆಸರು, ಕೀರ್ತಿ, ಹೊಸ ಇಮೇಜ್ ತಂದುಕೊಟ್ಟಂತಹ ಚಿತ್ರ 'ಸಂಪತ್ತಿಗೆ ಸವಾಲ್' (1974). ಉತ್ತರ ಕರ್ನಾಟಕದಲ್ಲಿ ಅತ್ಯಂತ ಜನಪ್ರಿಯವಾಗಿದ್ದ ಈ ನಾಟಕವನ್ನು ಬರೆದವರು ಹೆಸರಾಂತ ನಾಟಕಕಾರರಾದ ಪಿ.ಬಿ.ಧುತ್ತರಗಿ.

  ಶ್ರೀಮಂತರ ಸೊಕ್ಕು ಅಡಗಿಸುವ ಅವರ ಅಹಂಕಾರ, ದೌರ್ಜನ್ಯದ ವಿರುದ್ಧ ಸಿಡಿದೇಳುವ ನಾಯಕ ಹೇಗೆ ಸಂಪತ್ತಿಗೆ ಸವಾಲ್ ಒಡ್ಡುತ್ತಾನೆ ಎಂಬುದೇ ಚಿತ್ರದ ಕಥಾವಸ್ತು. ಸಂಪತ್ತಿಗೆ ಸವಾಲ್ ನಾಟಕವನ್ನು ನೋಡಿದ ರಾಜಕುಮಾರ್ ಮತ್ತು ಕುಟುಂಬ ಇದೇ ಹೆಸರಿನಲ್ಲಿ ಚಿತ್ರ ಮಾಡಲು ನಿರ್ಧರಿಸಿದರು.

  ಚಲನಚಿತ್ರವಾಗುವಾಗ, ನಾಯಕನ ವೈಭವೀಕರಣಕ್ಕಾಗಿ, ಮೂಲಕಥೆಯಲ್ಲಿ ಬದಲಾವಣೆಗಳನ್ನು ಮಾಡಿಕೊಂಡು ತೆರೆಗೆ ತರಲಾಯಿತು. ಚಿತ್ರದಲ್ಲಿ ನಾಯಕನ ಅತ್ತಿಗೆಯ ಪಾತ್ರ ವಹಿಸಿದ ಕಲಾವಿದೆ, ನಾಟಕದಲ್ಲಿ ಇದೇ ಪಾತ್ರವನ್ನು ವಹಿಸಿರುವುದು ಇಲ್ಲಿ ಗಮನಾರ್ಹ.

  ಪದ್ಮಶ್ರೀ ಬ್ಯಾನಲ್ ಲಾಂಛನದಲ್ಲಿ ನಿರ್ಮಾಣವಾದ ಈ ಚಿತ್ರದಲ್ಲಿ ರಾಜ್ ಕುಮಾರ್ ಗೆ ಮಂಜುಳಾ ಜೋಡಿ. ಪೋಷಕ ಪಾತ್ರಗಳಲ್ಲಿ ಎಂ.ವಿ.ರಾಜಮ್ಮ, ವಜ್ರಮುನಿ, ರಾಜಾಶಂಕರ್, ಬಾಲಕೃಷ್ಣ, ಜೋಕರ್ ಶ್ಯಾಮ್, ಬಿ.ಜಯ ಮುಂತಾದವರಿದ್ದಾರೆ.

  ಜಿ.ಕೆ.ವೆಂಕಟೇಶ್ ಅವರ ಸಂಗೀತ, ಚಿ.ಉದಯಶಂಕರ್ ಸಾಹಿತ್ಯ, ಚಿಟ್ಟಿಬಾಬು ಛಾಯಾಗ್ರಹಣವಿರುವ ಚಿತ್ರವನ್ನು ಎ.ವಿ.ಶೇಷಗಿರಿರಾವ್ ನಿರ್ದೇಶಿಸಿದ್ದಾರೆ. ಚಿತ್ರದ ನಿರ್ಮಾಪಕರು ಎ.ಎನ್.ಮೂರ್ತಿ. ಈಟಿವಿ ಕನ್ನಡದಲ್ಲಿ ಇದೇ ಭಾನುವಾರ (ನವೆಂಬರ್ 24) ಸಂಜೆ 5ಕ್ಕೆ ವೀಕ್ಷಿಸಬಹುದು. (ಒನ್ಇಂಡಿಯಾ ಕನ್ನಡ)

  English summary
  Dr Rajkumar and Manjula lead super hit Kannada movie Sampattige Saval (1974) will be screened on Etv Kannada on 24th December, Sunday. In this movie the father and his daughter are taught a lesson by the hero.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X