»   » ಜೂಲಿ ಲಕ್ಷ್ಮಿ ಮತ್ತು ವಿಜಯ ರಾಘವೇಂದ್ರ ಕಡೆಯಿಂದ ಸರ್ಪ್ರೈಸ್

ಜೂಲಿ ಲಕ್ಷ್ಮಿ ಮತ್ತು ವಿಜಯ ರಾಘವೇಂದ್ರ ಕಡೆಯಿಂದ ಸರ್ಪ್ರೈಸ್

Posted By:
Subscribe to Filmibeat Kannada

ಇಷ್ಟು ದಿನ 'ಡ್ರಾಮಾ ಜೂನಿಯರ್ಸ್' ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸುತ್ತಿದ್ದವರು ಈಗ ತಮ್ಮ ವೃತ್ತಿಯನ್ನ ಬದಲಾಯಿಸಿಕೊಂಡಿದ್ದಾರೆ. ಮಕ್ಕಳ ಅಭಿನಯ ನೋಡಿ ಅಂಕ ನೀಡುತ್ತಿದ್ದ ಜಡ್ಜ್ ಗಳು ಮಕ್ಕಳ ಜೊತೆ ತಾವು ಮಕ್ಕಳಾಗಿದ್ದಾರೆ.

ಹೌದು, 'ಡ್ರಾಮಾ ಜೂನಿಯರ್ಸ್' ತೀರ್ಪುಗಾರರಾದ ಜೂಲಿ ಲಕ್ಷ್ಮಿ ಮತ್ತು ವಿಜಯ ರಾಘವೇಂದ್ರ ಅವರು, ವೇದಿಕೆ ಮೇಲೆ ಪರ್ಫಾಮೆನ್ಸ್ ನೀಡುವ ಮೂಲಕ ಅವರು ಕೂಡ ಡ್ರಾಮಾ ಜೂನಿಯರ್ಸ್ ಆಗಿದ್ದಾರೆ.

ನಟಿ ಜೂಲಿ ಲಕ್ಷ್ಮಿ ಅವರು ಮನೆಯ ಹಿರಿಯ ಮಹಿಳೆ ಪಾತ್ರದಲ್ಲಿ ಬಣ್ಣ ಹಚ್ಚಿದ್ದು, ಪುಟ್ಟ ಬಾಲಕಿ ಜೊತೆ ಮನೋಜ್ಞವಾಗಿ ಅಭಿನಯಿಸಿದ್ದಾರೆ.

ಇನ್ನು ವಿಜಯರಾಘವೇಂದ್ರ ಅವರು 'ಭಕ್ತ ಅಂಬರೀಷ'ನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಪಾತ್ರವನ್ನ ಡಾ ರಾಜ್ ಕುಮಾರ್ ಅವರು ಮಾಡಬೇಕೆಂದು ಆಸೆ ಇಟ್ಟಿಕೊಂಡಿದ್ದರು. ಆದ್ರೆ, ಆ ಆಸೆ ಈಡೇರಲಿಲ್ಲ. ಇದೀಗ, ಭಕ್ತ ಅಂಬರೀಷನಾಗಿ ಚಿನ್ನಾರಿ ಮುತ್ತ ಅಭಿನಯಿಸಿದ್ದಾರೆ.

ಜೀ ಕನ್ನಡದಲ್ಲಿ ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಈ ಎಪಿಸೋಡ್ ಪ್ರಸಾರವಾಗಲಿದೆ.

English summary
Drama juniors judge Actress Lakshmi and Vijay Raghavendra performed in Stage. 'ಡ್ರಾಮಾ ಜೂನಿಯರ್ಸ್' ತೀರ್ಪುಗಾರರಾದ ಲಕ್ಷ್ಮಿ ಮತ್ತು ವಿಜಯರಾಘವೇಂದ್ರ ವೇದಿಕೆ ಮೇಲೆ ಅಭಿನಯಿಸಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada