For Quick Alerts
  ALLOW NOTIFICATIONS  
  For Daily Alerts

  ಡಿಕೆಡಿ-ಡ್ರಾಮಾ ಜೂನಿಯರ್ಸ್‌ ಮಹಾಸಂಗಮ: ಮೋಡಿ ಮಾಡಲಿರುವ ಶಿವಣ್ಣ-ರವಿಚಂದ್ರನ್

  |

  ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಹಾಗೂ ಡ್ರಾಮಾ ಜ್ಯೂನಿಯರ್ಸ್ ಮಹಾಸಂಗಮ ಜೂನ್ 4 ರಂದು ಸಂಜೆ 7.30ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಎರಡು ರಿಯಾಲಿಟಿ ಶೋಗಳು ವೇದಿಕೆಯಲ್ಲಿ ಧೂಳೆಬ್ಬಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಕಾರ್ಯಕ್ರಮವು ಹಲವು ಹೈಲೈಟ್‌ಗಳನ್ನು ಒಳಗೊಂಡಿದೆ.

  ಸದ್ಯಕ್ಕೆ ಕಾರ್ಯಕ್ರಮದ ಪ್ರೋಮೊ ಹರಿದಾಡುತ್ತಿದ್ದು, ಕಾರ್ಯಕ್ರಮದಲ್ಲಿ ದಿಗ್ಗಜರ ಸಮಾಗಮ ಆಗಿದೆ. 'ಸ್ನೇಹಕ್ಕೆ-ಸ್ನೇಹ ಪ್ರೀತಿಗೆ ಪ್ರೀತಿ' ಹಾಡಿಗೆ ಶಿವರಾಜ್ ಕುಮಾರ್-ರವಿಚಂದ್ರನ್ ಸಖತ್ ಆಗಿ ಸ್ಟೆಪ್ ಹಾಕಿದ್ದಾರೆ. ಇವರಿಬ್ಬನ್ನು ಒಂದೇ ವೇದಿಕೆಯಲ್ಲಿ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

  ದರ್ಶನ್ ಆಯ್ತು, ಈಗ ಹೊಂಬಾಳೆ ಫಿಲಮ್ಸ್ ವಿರುದ್ಧ ರವಿಚಂದ್ರನ್ ಅಭಿಮಾನಿಗಳ ಅಸಮಾಧಾನದರ್ಶನ್ ಆಯ್ತು, ಈಗ ಹೊಂಬಾಳೆ ಫಿಲಮ್ಸ್ ವಿರುದ್ಧ ರವಿಚಂದ್ರನ್ ಅಭಿಮಾನಿಗಳ ಅಸಮಾಧಾನ

  ರವಿಚಂದ್ರನ್ ಹಾಗೂ ಶಿವರಾಜ್ ಕುಮಾರ್ ಬಾಲ್ಯದಿಂದಲೂ ಸ್ನೇಹಿತರು. ಇವರಿಬ್ಬರ ಸ್ನೇಹ ಎಷ್ಟು ಆಳವಾದುದು ಎಂಬುದನ್ನು ಇಂದಿನ ಕಾರ್ಯಕ್ರಮ ಮತ್ತೊಮ್ಮೆ ಜಗತ್ತಿಗೆ ಸಾರಲಿದೆ.

  ಕರುನಾಡೇ ಎಂಬ ಹಾಡಿಗೇ ಡಾನ್ಸ್ ಮಾಡಿದ ಡಿಕೆಡಿ ಕಂಟೆಸ್ಟೆಂಟ್‌ಗೆ ವೇದಿಕೆಯಲ್ಲಿದ್ದವರು ಮಾತ್ರ ಅಲ್ಲ ಪ್ರೇಕ್ಷಕರು ಹುಚ್ಚೆದ್ದು ಕುಣಿಯುವ ರೀತಿ ಮಾಡಿದೆ. ರವಿಚಂದ್ರನ್ ಡಾನ್ಸ್ ಮಾಡಿದವರ ಬಳಿ ಹೋಗಿ ನಾನು ಚಿಕ್ಕ ಚಿಕ್ಕ ಕೋಳಿ ಮರಿಗಳನ್ನು ಬಳಸಿಕೊಂಡಿದ್ದೆ ಈಗ ನೋಡಿದ್ರೆ ಎಂದು ಹೇಳಿ ರವಿಚಂದ್ರನ್ ಕೂಡ ಈ ಹಾಡಿಗೆ ಸಖತ್ ಸ್ಟೆಪ್ ಹಾಕಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಮಾತ್ರ ಸಿಕ್ಕಪಟ್ಟೆ ಖುಷಿಯಲ್ಲಿದ್ದಾರೆ.

  ಇನ್ನೂ ಡ್ರಾಮಾ ಜ್ಯೂನಿಯರ್ ಸೀಸನ್ 4 ಮಕ್ಕಳ ಅಭಿನಯ ಬಹಳ ಅಮೋಘವಾಗಿ ಮೂಡಿ ಬರುತ್ತಿದೆ. ಫೈಟರ್ ಫ್ಯಾಮಿಲಿ ಹಾಗು ಡ್ಯಾನ್ಸರ್ ಫ್ಯಾಮಿಲಿ ಹೇಗಿರಲಿದೆ ಎಂಬುವುದನ್ನು ತೊರಿಸಲು ಸಜ್ಜಾಗಿದ್ದಾರೆ ಮಕ್ಕಳು. ಮಕ್ಕಳ ನಟನೆಯನ್ನು ಪ್ರೇಕ್ಷಕರು ಸಖತ್ ಎಂಜಾಯ್ ಮಾಡಿದ್ದಾರೆ.

  ಡಾನ್ಸ್ ಮೂಲಕ ಹೃಷಿಕೇಶ್ ಹಾಗೂ ಶ್ರಾವ್ಯ , ದಿಲೀಪ್ ಮತ್ತು ವಿಧಿತಾ ಫರ್‌ಫಾಮೆನ್ಸ್‌ನಲ್ಲಿ ಈಶ್ವರಿ ಹಾಗೂ ವಜ್ರೇಶ್ವರಿ ಸಾಧನೆಯ ಸಂಭ್ರಮದ ಒಂದು ಝಲಕ್‌ನ್ನು ತೋರಿಸಿದ್ದಾರೆ. ಈ ಖುಷಿಯನ್ನು ಶಿವಣ್ಣ ಕೇಕ್ ಕತ್ತರಿಸುವ ಮೂಲಕ ಹಂಚಿಕೊಂಡರು. ಇನ್ನೂ ಮ್ಯಾಜಿಕಲ್ ಕಂಪೋಸರ್ ಎಂದು ಖ್ಯಾತರಾದ ಅರ್ಜುನ್ ಜನ್ಯಾ ಅವರಿಗೆ ಸಧ್ವಿನ್ ಹಾಗೂ ಶಾರಿಕಾ ಫರ್‌ಪಾಮೆನ್ಸ್ ಮೂಲಕ ಗೌರವವನ್ನು ನೀಡಿದರು. ಡಾನ್ಸ್ ವೀಕ್ಷಿಸಿದ ಅರ್ಜುನ್ ಜನ್ಯ ಕಂಬನಿ ಮಿಡಿದರು. ಲಕ್ಷ್ಮೀ ಅಮ್ಮ ಹಾಗೂ ಶಿವರಾಜ್ ಕುಮಾರ್‌ರವರು 'ನಾನಿನ್ನ ಮರೆಯಲಾರೆ ಹಾಡಿ'ಗೆ ಸಖತ್ ಆಗಿ ಸ್ಟೆಪ್ ಹಾಕಿದ್ದಾರೆ. ಶಿವರಾಜ್ ಕುಮಾರ್ ಹಾಗೆ ಲಕ್ಷ್ಮೀ ಅವರ ಜೋಡಿ ನೋಡಿದ ಜನರು ಕಾರ್ಯಕ್ರಮ ವೀಕ್ಷಿಸಲು ತುದಿಗಾಲಿನಲ್ಲಿ ನಿಂತಿರುವುದಂತು ಸತ್ಯ.

  English summary
  Zee kannada Drama Juniors reality show June 04th episode written update. Hear is more details about the episode.
  Saturday, June 4, 2022, 17:37
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X