»   » ಅನಕೊಂಡ ಹೊಟ್ಟೆಹೊಕ್ಕಿ ಜೀವಂತ ಹೊರಬಂದ ಸಾಹಸಿ

ಅನಕೊಂಡ ಹೊಟ್ಟೆಹೊಕ್ಕಿ ಜೀವಂತ ಹೊರಬಂದ ಸಾಹಸಿ

Posted By:
Subscribe to Filmibeat Kannada

ನಶಿಸಿ ಹೋಗುತ್ತಿರುವ ನಿತ್ಯಹರಿದ್ವರ್ಣ ಕಾಡುಗಳ ಬಗ್ಗೆ ಜಾಗೃತಿ ಮೂಡಿಸಲು ತನ್ನ ಪ್ರಾಣವನ್ನೇ ಪಣಕ್ಕಿಟ್ಟ ಸಾಹಸಿಯ ಕಥೆ ಇದು. ಅನಕೊಂಡ ಉದರದೊಳಕ್ಕೆ ಹೊಕ್ಕಿ ಸಜೀವವಾಗಿ ಹೊರಬಂದ ಭೂಪನೊಬ್ಬನ ರೋಚಕ ಕಥನವಿದು. ಆತ ಬೇರಾರು ಅಲ್ಲ ನಿಸರ್ಗ ಪ್ರಿಯ ಪೌಲ್ ರೋಸೋಲಿ ಮಾಡಿದ ಈ ಸಾಹಸವನ್ನು ಡಿಸ್ಕವರಿ ಚಾನಲ್ ಶೀಘ್ರದಲ್ಲೇ ಪ್ರಸಾರ ಮಾಡಲಿದೆ.

ಈ ಸಾಹಸಕ್ಕೆ ಸಂಬಂಧಿಸಿದಂತೆ ಪೌಲ್ ಮಾತನಾಡುತ್ತಾ, "ನಶಿಸುತ್ತಿರುವ ನಿತ್ಯಹರಿದ್ವರ್ಣ ಕಾಡುಗಳ ಬಗ್ಗೆ ಜಾಗೃತಿ ಮೂಡಿಸಬೇಕೆಂದುಕೊಂಡೆ... ಎಲ್ಲರ ದೃಷ್ಟಿಯನ್ನೂ ಆ ಕಡೆಗೆ ಹೊರಳಿಸಬೇಕೆಂದುಕೊಂಡೆ. ಅದಕ್ಕಾಗಿ ಉರಗದ ಉದರದೊಳಗೆ ಹೋಗಿ ಬರಲು ಧೈರ್ಯ ಮಾಡಿದೆ.." [ಡಿಸ್ಕವರಿ ವಾಹಿನಿಯಲ್ಲಿ ಚಿತ್ರದುರ್ಗದ ಕೋತಿ ರಾಜ]


"ಇದಕ್ಕೆಂದೇ ವಿಶೇಷವಾದ ಫೈಬರ್ ಸೂಟ್ ತರಿಸಿಕೊಂಡೆ. ಅಮೆಜಾನ್ ಕಾಡುಗಳಲ್ಲಿ ಈ ಸಾಹಸಕ್ಕೆ ಅನುಕೂಲವಾದ ಅನಕೊಂಡಕ್ಕಾಗಿ ಹುಡುಕಾಡಿದೆ. ಇದಕ್ಕಾಗಿ 60 ದಿನಗಳ ಕಾಲ ನಿರಂತರ ಹುಡುಕಾಡಬೇಕಾಯಿತು. ಕಡೆಗೆ 20 ಅಡಿ ಉದ್ದದ ಅನಕೊಂಡ ಕಾಣಿಸಿತು".

"ಇನ್ನು ಸಾಹಸಕ್ಕೆ ಮುಂದಾದೆ. ಜೀವದೊಂದಿಗೆ ಚೆಲ್ಲಾಟವೇ...ಏನಾದರೂ ಹೆಚ್ಚುಕಡಿಮೆಯಾದರೆ..? ಎಂಬ ಆಲೋಚನೆ ನನ್ನನ್ನು ಕೊಂಚ ಕಂಗೆಡಿಸಿತು. ಫೈಬರ್ ಸೂಟ್ ಧರಿಸಿ ಧೈರ್ಯವಾಗಿ ಮುನ್ನುಗ್ಗಿದೆ. ಅನಕೊಂಡ ಬಾಯಲ್ಲಿ ತಲೆಯಿಟ್ಟೆ. ನಿಧಾನಕ್ಕೆ ಅದರ ಉದರ ಪ್ರವೇಶಿಸಿ ಒಂದು ಗಂಟೆ ಕಾಲ ಅಲ್ಲೇ ಇದ್ದೇ..."

"ಅಲ್ಲಿಂದ ಹೊರಗಿನವರೊಂದಿಗೆ ಮಾತನಾಡುವ ವ್ಯವಸ್ಥೆಯನ್ನೂ ಮಾಡಿಕೊಂಡು ಹೊರಬಂದೆ ಬಿಡಿ...ಒಟ್ಟಾರೆಯಾಗಿ ಕ್ಷೇಮವಾಗಿ ಹಿಂತಿರುಗಿದೆ" ಎಂದು ತನ್ನ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಆದರೆ ಅನಕೊಂಡ ಉದರದಿಂದ ಹೇಗೆ ಹೊರಬಂದೆ ಎಂಬ ಗುಟ್ಟನ್ನು ಮಾತ್ರ ಪಾಲ್ ಬಿಟ್ಟುಕೊಟ್ಟಿಲ್ಲ.

Naturalist Paul Rosolie

ತಾನಷ್ಟೇ ಅಲ್ಲ ಅನಕೊಂಡ ಹಾವೂ ಕ್ಷೇಮವಾಗಿದೆ ಎಂದಿದ್ದಾರೆ ಪಾಲ್. ಇದಕ್ಕೆ ಸಂಬಂಧಿಸಿದ ಸಂಪೂರ್ಣ ವಿಡಿಯೋವನ್ನು ಡಿಸ್ಕವರಿ ಚಾನಲ್ ಶೀಘ್ರದಲ್ಲೇ ಪ್ರಸಾರ ಮಾಡಲಿದೆ. ಆದರೆ ಪೌಲ್ ಅವರ ಸಾಹಸವನ್ನು ಪ್ರಾಣಿದಯಾ ಸಂಘಗಳು ತೀವ್ರವಾಗಿ ಖಂಡಿಸಿವೆ. ಈ ಸಾಹಸ ಪ್ರಾಣಿಗಳ ಹಕ್ಕುಗಳನ್ನು ಕಸಿದುಕೊಂಡಂತೆ ಎಂದು ಪೆಟಾ ಸೇರಿದಂತೆ ಹಲವಾರು ಸಂಘಗಳು ವಿರೋಧಿಸಿವೆ.

ಎರಡು ಗಂಟೆಗಳ ಈ ಕಾರ್ಯಕ್ರಮಕ್ಕೆ ಡಿಸ್ಕವರಿ ಚಾನಲ್ "Eaten Alive" ಎಂದು ಹೆಸರಿಟ್ಟಿದ್ದು, ಮೊದಲು ಯುಎಸ್ ನಲ್ಲಿ ಆ ಬಳಿಕ ಡಿಸೆಂಬರ್ 10ರಂದು ಫಿನ್ ಲ್ಯಾಂಡ್, ಡೆನ್ಮಾರ್ಕ್, ಹಂಗರಿ, ಪೋಲಂಡ್, ಸ್ವೀಡನ್ ದೇಶಗಳಲ್ಲಿ ಪ್ರಸಾರವಾಗಲಿದೆ. ಅದಾದ ಎರಡು ದಿನಗಳ ಬಳಿಕ ಭಾರತ, ಚೀನಾ ಹಾಗೂ ಆಸ್ಟ್ರೇಲಿಯಾಗಳಲ್ಲಿ ಪ್ರಸಾರವಾಗಲಿದೆ. (ಏಜೆನ್ಸೀಸ್)

Post by Oneindia Kannada.
English summary
The anaconda who wrapped itself around the naturalist was not harmed in the Discovery special. When naturalist Paul Rosolie wanted to focus attention on the destruction of the Amazon rainforest, he decided he needed a stunt guaranteed to get people looking. So the staunch environmentalist offered himself as dinner to an anaconda -- and was prepared to be swallowed alive, filming every moment.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada