For Quick Alerts
  ALLOW NOTIFICATIONS  
  For Daily Alerts

  ಈ ಕಾರಣಕ್ಕಾಗಿ ಬೋಲ್ಡ್ ಪಾತ್ರಗಳಲ್ಲಿ ನಟಿಸಲ್ಲ ಎಂದ 'ನಿನ್ನಿಂದಲೇ' ನಟಿ ಎರಿಕಾ ಫರ್ನಾಂಡಿಸ್

  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ನಿನ್ನಿಂದಲೇ ಸಿನಿಮಾ ಮೂಲಕ ಚಂದನವನಕ್ಕೆ ಕಾಲಿಟ್ಟ ನಟಿ ಎರಿಕಾ ಫರ್ನಾಂಡಿಸ್ ಕನ್ನಡಿಗರಿಗೆ ಚಿರಪರಿಚಿತರು. ಕನ್ನಡದಲ್ಲಿ ಎರಡು ಸಿನಿಮಾಗಳಲ್ಲಿ ನಟಿಸಿ ಕಣ್ಮರೆಯಾಗಿದ್ದ ಎರಿಕಾ ಮತ್ತೆ ಕನ್ನಡಕ್ಕೆ ಮರಳುತ್ತಾರೆ ಎನ್ನುವ ಸುದ್ದಿ ಇತ್ತೀಚಿಗಷ್ಟೆ ವೈರಲ್ ಆಗಿತ್ತು.

  ಇದೀಗ ಎರಿಕಾ ಮತ್ತೆ ಸುದ್ದಿಯಲ್ಲಿದ್ದಾರೆ. ಹಿಂದಿ ಕಿರುತೆರೆ ಲೋಕದಲ್ಲಿ ಪ್ರಸಿದ್ಧಿಗಳಿಸಿರುವ ಎರಿಕಾ ಸಾಲು ಸಾಲು ಧಾರಾವಾಹಿಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗೆ ಆಂಗ್ಲ ಮಾಧ್ಯಮವೊಂದಕ್ಕೆ ನೀಡಿದ್ದ ಸಂದರ್ಶನವೊಂದರಲ್ಲಿ ಎರಿಕಾ ಬೋಲ್ಡ್ ಪಾತ್ರಗಳಲ್ಲಿ ನಟಿಸಲು ತಿರಸ್ಕರಿಸಿದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಮುಂದೆ ಓದಿ..

  'ಜೊತೆ ಜೊತೆಯಲಿ' ಬದಲು ಮತ್ತೊಂದು ಧಾರಾವಾಹಿಯಲ್ಲಿ ಪುನೀತ್ ನಾಯಕಿ ಎರಿಕಾ ಫರ್ನಾಂಡಿಸ್'ಜೊತೆ ಜೊತೆಯಲಿ' ಬದಲು ಮತ್ತೊಂದು ಧಾರಾವಾಹಿಯಲ್ಲಿ ಪುನೀತ್ ನಾಯಕಿ ಎರಿಕಾ ಫರ್ನಾಂಡಿಸ್

  ನಾನು ಬೋಲ್ಡ್ ಪಾತ್ರಗಳಲ್ಲಿ ನಟಿಸಲ್ಲ- ಎರಿಕಾ

  ನಾನು ಬೋಲ್ಡ್ ಪಾತ್ರಗಳಲ್ಲಿ ನಟಿಸಲ್ಲ- ಎರಿಕಾ

  'ಬೋಲ್ಡ್ ಪಾತ್ರಗಳಲ್ಲಿ ನಾನು ನಟಿಸಲ್ಲ. ನನಗೆ ಅದು ಕಂಫರ್ಟ್ ಆಗಿರಲ್ಲ. ಈ ವಿಚಾರವಾಗಿ ನಾನು ತುಂಬಾ ಮುಕ್ತವಾಗಿರುತ್ತೇನೆ. ಇಲ್ಲಿವರೆಗೆ ನನಗೆ ಕೆಲವು ಪಾತ್ರಗಳಿಗೆ ಆಫರ್ ಮಾಡಲಾಗಿತ್ತು, ಆದರೆ ಬೋಲ್ಡ್ ಪಾತ್ರ ಎನ್ನುವ ಕಾರಣಕ್ಕೆ ತಿರಸ್ಕರಿಸಿದೆ. ಏಕೆಂದರೆ ವ್ಯವಹಾರದ ದೃಷ್ಟಯಿಂದ ಇಂಥ ಬೋಲ್ಡ್ ದೃಶ್ಯಗಳನ್ನು ಬಲವಂತವಾಗಿ ಸೇರಿಸಲಾಗುತ್ತೆ ಎಂದು ನಾನು ಭಾವಿಸುತ್ತೇನೆ. ಹಾಗಾಗಿ ನಾನು ಬೋಲ್ಡ್ ಪಾತ್ರ ಮಾಡಲ್ಲ' ಎಂದು ಹೇಳಿದ್ದಾರೆ.

  ಅಗತ್ಯವಿದ್ದರೆ ಮಾನಸಿಕವಾಗಿ ಸಿದ್ಧವಾಗಬಹುದು

  ಅಗತ್ಯವಿದ್ದರೆ ಮಾನಸಿಕವಾಗಿ ಸಿದ್ಧವಾಗಬಹುದು

  'ಯಾವುದೇ ಪಾತ್ರವಾದರೂ ಅದರಲ್ಲಿ ಲಾಜಿಕ್ ಇರಬೇಕು. ಬೋಲ್ಡ್ ಪಾತ್ರಗಳು ಪ್ರಾಮಾಣಿಕವಾಗಿ ಅಗತ್ಯವಿದ್ದರೆ ಅದಕ್ಕೆ ಮಾನಸಿಕವಾಗಿ ಸಿದ್ಧವಾಗಬಹುದು. ಯಾವುದೇ ಚಿತ್ರದಲ್ಲಿ ಬೋಲ್ಡ್ ದೃಶ್ಯಗಳು ಯಾಕೆ ಬೇಕು ಎಂದು ಮೊದಲು ತಿಳಿದುಕೊಳ್ಳಬೇಕು' ಎಂದು ಎರಿಕಾ ಹೇಳಿದ್ದಾರೆ.

  'ಜೊತೆ ಜೊತೆಯಲ್ಲಿ' ಧಾರಾವಾಹಿಯಲ್ಲಿ 'ನಿನ್ನಿಂದಲೇ' ನಾಯಕಿ: ಎರಿಕಾ ಎಂಟ್ರಿ ಬಗ್ಗೆ ನಿರ್ದೇಶಕರು ಹೇಳಿದ್ದೇನು?'ಜೊತೆ ಜೊತೆಯಲ್ಲಿ' ಧಾರಾವಾಹಿಯಲ್ಲಿ 'ನಿನ್ನಿಂದಲೇ' ನಾಯಕಿ: ಎರಿಕಾ ಎಂಟ್ರಿ ಬಗ್ಗೆ ನಿರ್ದೇಶಕರು ಹೇಳಿದ್ದೇನು?

  ಹಿಂದಿ ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಎರಿಕಾ

  ಹಿಂದಿ ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಎರಿಕಾ

  ಹಿಂದಿ ಕಿರುತೆರೆ ಲೋಕದಲ್ಲಿ ಪ್ರಸಿದ್ಧಿಗಳಿಸಿರುವ ಎರಿಕಾ ಕನ್ನಡ ಸಿನಿಮಾಗಳ ಜೊತೆಗೆ ತಮಿಳು ಮತ್ತು ತೆಲುಗಿನಲ್ಲೂ ಮಿಂಚಿದ್ದಾರೆ. ಹಿಂದಿಯಲ್ಲಿ ಎರಿಕಾ ಎರಡು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಕುಚ್ ರಂಗ್ ಪ್ಯಾರ್ ಕೆ ಐಸೆ ಭಿ ಧಾರಾವಾಹಿ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿದೆ. 2020ರಲ್ಲಿ ಈ ಧಾರಾವಾಹಿ ಪ್ರಸಾರ ಮುಕ್ತಾಯವಾಗಿದೆ. ಇದೀಗ ಮತ್ತೆ ಕುಚ್ ರಂಗ್ ಪ್ಯಾರ್ ಕೆ ಐಸೆ ಭಿ ಸೀಸನ್ 3 ಪ್ರಾರಂಭವಾಗುತ್ತಿದ್ದು, ಎರಿಕಾ ನಟಿಸಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.

  ಕನ್ನಡ ಕಿರುತೆರೆಗೆ ಬರ್ತಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು

  ಕನ್ನಡ ಕಿರುತೆರೆಗೆ ಬರ್ತಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು

  ಇತ್ತೀಚಿಗಷ್ಟೆ ಎರಿಕಾ ಕನ್ನಡದ ಪ್ರಸಿದ್ಧ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ನಟಿಸಲಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಈ ಧಾರಾವಾಹಿಯ ರಾಜನಂದಿನಿ ಪಾತ್ರದಲ್ಲಿ ಬಣ್ಣ ಹಚ್ಚುವ ಮೂಲಕ ಕನ್ನಡ ಕಿರುತೆರೆಗೆ ಬರ್ತಿದ್ದಾರೆ ಎನ್ನುವ ಸುದ್ದಿ ಬಲವಾಗಿ ಕೇಳಿಬಂದಿತ್ತು. ಆದರೆ ಧಾರಾವಾಹಿ ನಿರ್ದೇಶಕ ಆರೂರು ಜಗದೀಶ್ ಈ ಸುದ್ದಿಯನ್ನು ತಳ್ಳಿಹಾಕುವ ಮೂಲಕ ವದಂತಿಗೆ ಬ್ರೇಕ್ ಹಾಕಿದ್ದರು.

  English summary
  Actress Erica Fernandes says I am not comfortable doing bold roles.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X