»   » ಈಟಿವಿ ಮೆಗಾ ಧಾರಾವಾಹಿ 'ಮುಕ್ತ ಮುಕ್ತ'ಗೆ ತೆರೆ

ಈಟಿವಿ ಮೆಗಾ ಧಾರಾವಾಹಿ 'ಮುಕ್ತ ಮುಕ್ತ'ಗೆ ತೆರೆ

Posted By:
Subscribe to Filmibeat Kannada
Muktha Muktha serial
ಕೊನೆಗೂ ಮತ್ತೊಂದು ಮೆಗಾ ಧಾರಾವಾಹಿಗೆ ತೆರೆಬೀಳುತ್ತಿದೆ. ಟಿ.ಎನ್.ಸೀತರಾಮ್ ಅವರ 'ಮುಕ್ತ ಮುಕ್ತ' ಧಾರಾವಾಹಿ ಇದೇ ಜನವರಿ 25ಕ್ಕೆ ಕೊನೆಯ ಸಂಚಿಕೆ ಮುಗಿಸುತ್ತಿದೆ. ಜಾಗತೀಕರಣ, ರೈತ ಸಮಸ್ಯೆ, ನಕ್ಸಲರು,ವೈದ್ಯಕೀಯ ವ್ಯವಸ್ಥೆ, ರಾಜಕೀಯ ಬಗ್ಗೆ ವ್ಯವಸ್ಥಿತವಾಗಿ ಹೇಳಬಹುದು ಎಂದು ತೋರಿಸಿಕೊಟ್ಟ ಧಾರಾವಾಹಿ ಇದು.

ಸತತ ಮೂರು ವರ್ಷಗಳ ಕಾಲ ಪ್ರಸಾರವಾಗುವ ಮೂಲಕ ದಾಖಲೆ ನಿರ್ಮಿಸಿದೆ ಮುಕ್ತ ಮುಕ್ತ ಧಾರಾವಾಹಿ. ಶಾಂಭವಿ ಟೀಚರ್, ಕಲ್ಯಾಣಿ, ಶಶಿ, ಶಂಕರಮೂರ್ತಿ, ನಿರ್ಮಲಾ ಕೊಂಡಹಳ್ಳಿ, ಮಂಗಳತ್ತೆ, ಮಿಶ್ರ, ದೇಶಪಾಂಡೆ ಸೇರಿದಂತೆ ಸಿಎಸ್ ಪಿ ಪಾತ್ರದಲ್ಲಿ ಸ್ವತಃ ಸೀತಾರಾಮ್ ತನ್ನ ವೀಕ್ಷಕ ಬಳಗಕ್ಕೆ ಅಚ್ಚಳಿಯದ ನೆನಪು.

ಮುಕ್ತ ಮುಕ್ತ ಧಾರಾವಾಹಿ ಬಗ್ಗೆ ಸೀತಾರಾಮ್ ಅವರು ಮಾತನಾಡುತ್ತಾ, "ಇದೇ ಜ.25ಕ್ಕೆ ನನ್ನ ಮುಕ್ತ ಮುಕ್ತ ಮುಗಿಯುತ್ತಿದೆ. ಎಲ್ಲರೂ ಆನಂದದ ನಿಟ್ಟುಸಿರು ಬಿಡಬಹುದು" ಎಂದಿದ್ದಾರೆ. ಅಂದಹಾಗೆ ಇದೇ ಜ.25ಕ್ಕೆ ಮುಕ್ತ ಮುಕ್ತ ಧಾರಾವಾಹಿ 1204 ಸಂಚಿಕೆಗಳನ್ನು ಪೂರೈಸಲಿದೆ.

ಮುಖ್ಯವಾಗಿ ಸೀತಾರಾಮ್ ಅವರ ಧಾರಾವಾಹಿಗಳ ಕೇಂದ್ರ ಬಿಂದು ಕೋರ್ಟ್ ಸೀನ್ ಗಳು. 'ಮುಕ್ತ ಮುಕ್ತ' ಕೂಡ ಇದಕ್ಕೆ ಹೊರತಾಗಿರಲಿಲ್ಲ. ಕೋರ್ಟ್ ಸೀನ್ ಗಳನ್ನು ವಾರಗಟ್ಟಲೆ ಎಳೆದು, ಅಲ್ಲಿ ವಾದ ವಿವಾದ ಚರ್ಚೆಗಳು ಹೇಗೆ ನಡೆಯುತ್ತವೆ ಎಂಬುದನ್ನು ಎಳೆಎಳೆಯಾಗಿ ಬಿಚ್ಚಿಟ್ಟ ನೋಡುಗರ ಕುತೂಹಲ ಕಾದಿರಿಸಿಕೊಂಡು ಬಂದಿದ್ದರು.

'ಮುಕ್ತ ಮುಕ್ತ' ಮುಕ್ತಾಯವಾಗುತ್ತಿರುವ ಹಿನ್ನೆಲೆಯಲ್ಲಿ ಈಟಿವಿ ಕನ್ನಡ ಈಗ ಹೊಸ ಧಾರಾವಾಹಿಯನ್ನು ಆರಂಭಿಸುತ್ತಿದೆ. ಜ.28ರಿಂದ 'ಪವಿತ್ರ ಬಂಧನ' ಧಾರಾವಾಹಿ ಆರಂಭವಾಗಲಿದೆ.

ಸೋಮವಾರದಿಂದ ಶುಕ್ರವಾರದ ತನಕ ಪ್ರತಿ ರಾತ್ರಿ 9.30ರಿಂದ 10ರ ತನಕ ಈ ಧಾರಾವಾಹಿಯನ್ನು ವೀಕ್ಷಿಸಬಹುದು. ಮಹಿಳೆಯರಿಗೆ ಇಷ್ಟವಾಗುವಂತಹ ಕೌಟುಂಬಿಕ ಕಥಾಹಂದರದ ಧಾರಾವಾಹಿ ಇದಾಗಿದೆ.

ಕಾರ್ತಿಕ್ ಹಾಗೂ ರವಿ ಬಸಪ್ಪನದೊಡ್ಡಿ ನಿರ್ದೇಶನದ ಈ ಧಾರಾವಾಹಿಯಲ್ಲಿ ನಟ ಕಲ್ಯಾಣ್ ಕುಮಾರ್ ಅವರ ಪುತ್ರ ಭರತ್ ಅಭಿನಯಿಸಿದ್ದಾರೆ. ಇವರ ಜೊತೆಗೆ ನಟಿ ಮೇಘನಾ ಹಾಗೂ ರೇಖಾ ವಿ ಕುಮಾರ್ ಪೋಷಕ ಪಾತ್ರಗಳಲ್ಲಿದ್ದಾರೆ.  ದಟ್ಸ್ ಕನ್ನಡ ಕಾಮೆಂಟ್ ವಿಭಾಗ ಮುಕ್ತ ಮುಕ್ತ! (ಒನ್ಇಂಡಿಯಾ ಕನ್ನಡ)

English summary
Etv Kannada's mega serial Muktha Muktha goes to end on 25th January. Watch the final episode on 25th January 2012 at 10.30 pm. The serial explores issues such as those involving the Naxal, farmers, and the medical system. The unique impact of these serials is caused by the way the stories can be modified to reflect current issues and events.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada