For Quick Alerts
  ALLOW NOTIFICATIONS  
  For Daily Alerts

  ಆತ್ಮಹತ್ಯೆಗೆ ಶರಣಾದ ಖ್ಯಾತ ಕಿರುತೆರೆ ನಟಿ ಸೆಜಲ್ ಶರ್ಮಾ

  |
  ವೈಯಕ್ತಿಕ ಸಮಸ್ಯೆಯಿಂದ ಬೇಸತ್ತು ಆತ್ಮಹತ್ಯೆ!! | FILMIBEAT KANNADA

  ಹಿಂದಿಯ ಖ್ಯಾತ ಕಿರುತೆರೆ ನಟಿ ಸೆಜಲ್ ಶರ್ಮಾ ಆತ್ಮಹತ್ಯೆಗೆ ಶರಣಾಗಿದ್ದಾರೆ. 'ದಿಲ್ ತೋ ಹ್ಯಾಪಿ ಹೈ ಜಿ' ಶೋ ಮೂಲಕ ಕಿರುತೆರೆ ಪ್ರೇಕ್ಷಕರ ಮನೆಮಾತಾಗಿದ್ದ ನಟಿ ಸೆಜಲ್ ನಿನ್ನೆ ರಾತ್ರಿ(ಜನವರಿ 25) ಮುಂಬೈನ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆ ಹಿಂದಿನ ಕಾರಣ ಬಹಿರಂಗವಾಗಿಲ್ಲ. ಆದರೆ ವೈಯಕ್ತಿಕ ಬದುಕಿನ ಸಮಸ್ಯೆಯಿಂದ ಸೆಜಲ್ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗಿದೆ.

  ದಿಲ್ ತೋ ಹ್ಯಾಪಿ ಹೈ ಜಿ ಧಾರಾವಾಹಿಯ ಸಿಮ್ಮಿ ಖೋಸ್ಲಾ ಪಾತ್ರ ಸೆಜಲ್ ಗೆ ದೊಡ್ಡ ಮಟ್ಟಕ್ಕೆ ಖ್ಯಾತಿ ತಂದುಕೊಟ್ಟಿತ್ತು. ಉದಯಪುರ ಮೂಲದ ಈ ನಟಿ 2017ರಲ್ಲಿ ಮುಂಬೈಗೆ ಬಂದಿದ್ದರು. ನಟಿಯಾಗಬೆನ್ನುವ ಕನಸಿಟ್ಟುಕೊಂಡು ಮುಂಬೈಗೆ ಬಂದಿದ್ದ ಸೆಜಲ್ ಗೆ 'ದಿಲ್ ತೋ ಹ್ಯಾಪಿ ಹೈ ಜಿ' ಧಾರಾವಾಹಿಯಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಳ್ಳುವ ಮೂಲಕ ಕನಸು ನನಸಾಗಿತ್ತು.

  18 ವರ್ಷದ ಮಗಳನ್ನ ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡ ನಟಿ.!18 ವರ್ಷದ ಮಗಳನ್ನ ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡ ನಟಿ.!

  ಸ್ಟಾರ್ ಪ್ಲಸ್ ನಲ್ಲಿ ಈ ಧಾರಾವಾಹಿ ಪ್ರಸಾರವಾಗುತ್ತಿತ್ತು. ಸೆಲಜ್ ಧಾರಾವಾಹಿ ಮಾತ್ರವಲ್ಲದೆ ಸಾಕಷ್ಟು ಜಾಹಿರಾತುಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಜೊತೆಗೆ ಇತ್ತೀಚಿಗೆ ಕಿರುತೆರೆ ಮಾತ್ರವಲ್ಲದೆ ವೆಬ್ ಸಿರೀಸ್ ಗೂ ಎಂಟ್ರಿ ಕೊಟ್ಟಿದ್ದರು. ಆಜಾದ್ ಪರಿಂಡೆ ಎನ್ನುವ ವೆಬ್ ಸಿರೀಸ್ ನಲ್ಲಿ ಸಲೆಜ್ ಕಾಣಿಸಿಕೊಳ್ಳುತ್ತಿದ್ದರು.

  ಸದ್ಯ ಮುಂಬೈನಲ್ಲಿರುವ ಸೆಜಲ್ ಮೃತದೇಹವನ್ನು ಉದಯಪುರಗೆ ಕೊಂಡೊಯ್ಯಲಾಗುತ್ತಿದ್ದು, ಅಲ್ಲಿಯೆ ಅಂತಿಮ ವಿಧಿವಿದಾನಗಳನ್ನು ಮಾಡಲು ಕುಟುಂಬದವರು ನಿರ್ಧಾರಿಸಿದ್ದಾರೆ. ಸೆಲಜ್ ಅವರ ಆತ್ಮಹತ್ಯೆ ಕುಟುಂಬದವರಿಗೆ ದೊಡ್ಡ ಆಘಾತ ನೀಡಿದೆ. ಜೊತೆಯಲ್ಲಿಯೆ ಕೆಲಸ ಮಾಡುತ್ತಿದ್ದ ಸಹಕಲಾವಿದರೂ ಶಾಕ್ ಆಗಿದ್ದಾರೆ.

  Famous Serial Actress Sejal Sharma Committed Suicide Mumbai

  ಈ ಬಗ್ಗೆ ಸೆಜಲ್ ಜೊತೆ ಅಭಿನಯಿಸುತ್ತಿದ್ದ ಸಹಕಲಾವಿದ ಅರು ಕೆ ವರ್ಮಾ ಪತ್ರಿಕೆಯೊಂದಕ್ಕೆ ಮಾತನಾಡಿದ್ದು "ಈ ಸುದ್ದಿ ಕೇಳಿ ನಾನು ಆಘಾತಕ್ಕೊಳಗಾಗಿದ್ದೀನಿ. ನಾನು ಅವಳನ್ನು ಕಕೇವಲ 10 ದಿನಗಳ ಹಿಂದೆಯಷ್ಟೆ ಭೇಟಿಯಾಗಿದ್ದೆ. ಈ ಸುದ್ದಿ ನಂಬಲು ಸಾಧ್ಯವಾಗುತ್ತಿಲ್ಲ. ತುಂಬಾ ಕಷ್ಟವಾಗುತ್ತಿದೆ. ನಾನು ಅವಳನ್ನು ಭೇಟಿಯಾದಾಗ ಚೆನ್ನಾಗಿಯೆ ಇದ್ದಳು" ಎಂದು ಹೇಳಿದ್ದಾರೆ.

  English summary
  Famous Serial Actress Sejal Sharma committed suicide Mumbai.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X