For Quick Alerts
  ALLOW NOTIFICATIONS  
  For Daily Alerts

  ಸುವರ್ಣ ವಾಹಿನಿಯ 83 ನೌಕರರಿಗೆ ಪಿಂಕ್‌ಸ್ಲಿಪ್

  By Shami
  |

  ಬೆಂಗಳೂರು, ಆ. 2 : ಅಗತ್ಯಕ್ಕಿಂತ ಮೀರಿ ಉದ್ಯೋಗಿಗಳನ್ನು ನೇಮಕ ಮಾಡಿಕೊಂಡು ಬೊಕ್ಕಸಕ್ಕೆ ಬರೆಹಾಕಿಸಿಕೊಂಡಿದ್ದ ಸುವರ್ಣ ಟಿವಿ ವಾಹಿನಿಯಲ್ಲಿ ಇದೀಗ ಪಿಂಕ್ ಸ್ಲಿಪ್ ಅಧ್ಯಾಯ ಆರಂಭವಾಗಿದೆ. ಇದರ ಮೊದಲ ಕಂತಾಗಿ 83 ಉದ್ಯೋಗಿಗಳನ್ನು ನೌಕರಿಯಿಂದ ಕಿತ್ತುಹಾಕಿ ಮನೆಗೆ ಕಳುಹಿಸಲಾಗಿದೆ.

  ಸುಮಾರು 190 ನೌಕರ ಬಲವಿದ್ದ ಏಷ್ಯಾ ನೆಟ್ ಕಮ್ಯೂನಿಕೇಷನ್ಸ್ / ಸ್ಟಾರ್ ಟಿವಿ ನೆಟ್ ವರ್ಕ್ ಕನ್ನಡ ವಾಹಿನಿಯಲ್ಲಿ ಅರ್ಧಕ್ಕರ್ಧದಷ್ಟು ಉದ್ಯೋಗಿಗಳು ನಿರುದ್ಯೋಗಕ್ಕೆ ಈಡಾಗಿದ್ದರೆ ಇನ್ನಷ್ಟು ನೌಕರರು ಪಿಂಕ್ ಸ್ಲಿಪ್ ಪಡೆಯುವ ಭೀತಿಯಲ್ಲಿದ್ದಾರೆ.

  ವಾಹಿನಿಯು ತನ್ನದೇ ಆದ ಕಾರ್ಯಕ್ರಮಗಳನ್ನು ತಾನೇ ರೂಪಿಸುವ ಯೋಜನೆಯನ್ನು ಈ ಮೂಲಕ ಬಂದ್ ಮಾಡಿದ್ದು ಇನ್ನೇನಿದ್ದರೂ ಕಾರ್ಯಕ್ರಮಗಳನ್ನು ಹೊರಗುತ್ತಿಗೆ ಮೂಲಕ ಮಾತ್ರ ಪಡೆಯುತ್ತದೆ. ಹಾಗಾಗಿ, ಖಾಸಗಿಯಾಗಿ ಕಾರ್ಯಕ್ರಮ ರೂಪಿಸಿ ಟೇಪ್ ಸಲ್ಲಿಸುವ ನಿರ್ಮಾಪಕರಿಗೆ ಸುವರ್ಣ ಟಿವಿ ಬಾಗಿಲು ತೆರೆಯುತ್ತಿದೆ.

  "ನಿಮ್ಮ ಸೇವೆಯನ್ನು ರದ್ದುಗೊಳಿಸಲಾಗಿದೆ" ಎಂಬ ಪತ್ರಗಳು ಏಕಾಏಕಿ ಬಂದಿರುವುದರಿಂದ ಚಾನಲ್ಲಿನ ಪ್ರೊಗ್ರಾಂ ಪ್ರೊಡ್ಯುಸರ್ಸ್, ಎಡಿಟರ್ಸ್, ಫ್ಲೋರ್ ಮ್ಯಾನೇಜರ್ಸ್, ಕ್ಯಾಮರಾ ಮನ್, ವಾಹನ ಚಾಲಕರು ಮುಂತಾದ ಸಿಬ್ಬಂದಿ ಬೆಚ್ಚಿಬಿದ್ದಿದ್ದಾರೆ.

  ಒಂದು ಸಮಾಧಾನದ ವಿಷಯವೆಂದರೆ ಕಿತ್ತುಹಾಕಲಾದ ಸಿಬ್ಬಂದಿಗಳಿಗೆ ಅವರವರ ಸೇವಾ ಅವಧಿಯನ್ನು ಪರಿಗಣಿಸಿ ಮೂರರಿಂದ ಆರು ತಿಂಗಳವರೆವಿಗೂ ಸಂಬಳ ಕೊಟ್ಟು ಸೇವೆಯಿಂದ ಬಿಡುಗಡೆ ಮಾಡಲಾಗಿದೆ. "24 ಕ್ಯಾರೆಟ್ ಮನೋರಂಜನೆ" ಧ್ಯೇಯವಾಕ್ಯದ ಸುವರ್ಣ ಟಿವಿ ಅನೇಕ ಜನಪ್ರಿಯ ಕಾರ್ಯಕ್ರಮಗಳನ್ನು, ರಿಯಾಲಿಟಿ ಶೋಗಳನ್ನು ಪ್ರಸ್ತುತಪಡಿಸಿದೆ.

  ಪ್ರೀತಿಯಿಂದ, ಪಡುವಾರಳ್ಳಿ ಪಡ್ಡೆಗಳು, ಕೃಷ್ಣ ರುಕ್ಮಿಣಿ, ಕಿಚನ್ ಕಿಲಾಡಿಗಳು, ಬೊಂಬಾಟ್ ಭೋಜನ, ನೀನಾ ನಾನಾ, ಅಣ್ಣ ತಂಗಿ, ಅಮೃತವರ್ಷಿಣಿ, ಜ್ಯೋತಿರ್ಗಮಯ, ಭಕ್ತಿ ಲಹರಿ, ಸುವರ್ಣ ಲೇಡೀಸ್ ಕ್ಲಬ್, ಶ್ರೀ ಗುರು ರಾಘವೇಂದ್ರ ವೈಭವ, ನಾಗಪಂಚಮಿ, ಅರಸಿ, ಪಂಚರಂಗಿ ಪೋಂ ಪೋಂ, ತಿರುಪತಿ ತಿರುಮಲ ವೆಂಕಟೇಶ... ಜನಪ್ರಿಯ ಕಾರ್ಯಕ್ರಮಗಳು.

  ಮೇಲಿನ ಎಲ್ಲ ಕಾರ್ಯಕ್ರಮಗಳ ಜನಪ್ರಿಯತೆಯನ್ನು ಮೆಟ್ಟಿನಿಂತು ಕನ್ನಡನಾಡಿನಲ್ಲಿ ಮನೆಮಾತಾಗಿದ್ದ ಗೇಮ್ ಶೊ ಎಂದರೆ ಪುನೀತ್ ಪ್ರಸ್ತುತಪಡಿಸಿದ 'ಕನ್ನಡದ ಕೋಟ್ಯಧಿಪತಿ' (ಕೋಟ್ಯಾಧಿಪತಿ ಕೂಡ ಸರಿಯಾದ ಬಳಕೆ). ಕೆಬಿಸಿ ಕನ್ನಡದ, ಮೊದಲ ಹಂತದ 80 ಕಂತುಗಳ ಈ ಮೆಗಾ ಶೋಗೆ ಕಳೆದ ವಾರವಷ್ಟೆ ಮುಕ್ತಾಯವಾದದ್ದನ್ನು ಸ್ಮರಿಸಬಹುದಾಗಿದೆ.

  ಕನ್ನಡನಾಡಿನಲ್ಲಿ ಈಚೀಚೆಗೆ non-fiction ವಿಭಾಗದಲ್ಲಿನ ಸುದ್ದಿ ವಾಹಿನಿಗಳು ಅಷ್ಟೋಇಷ್ಟೋ ಪ್ರಗತಿ ಮಾಡಿರುವುದು ಬಿಟ್ಟರೆ Fiction ವಿಭಾಗದಲ್ಲಿ ಸಾಧನೆ ನಿರಾಶಾದಾಯಕವಾಗಿದೆ. ಸುವರ್ಣ ಟಿವಿಯ ಇನ್ ಹೌಸ್ non-fiction ಕಾರ್ಯಕ್ರಮಗಳು ಬಂದ್ ಆಗಿರುವುದು ಈ ಟ್ರೆಂಡಿಗೆ ಸಾಕ್ಷಿಯಾಗಿದೆ. ಕನ್ನಡಿಗರು ಮೂಲತಃ ಕನಸುಗಾರರು. ಅದರೂ ಕೂಡ ದೃಶ್ಯಮಾಧ್ಯಮದ ಫಿಕ್ಷನ್ ವಿಭಾಗಗಳು ಏಳಿಗೆ ಕಾಣದಿರುವುದು ಯಾಕೇಂತ ಗೊತ್ತಾಗುತ್ತಿಲ್ಲ.

  English summary
  Star TV net/Asia net TV-Kannada division has issued pink slip to 83 employees working in the Kannada division, Bangalore studios. The channel has stopped all in-house productions and henceforth would out-source content.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X