For Quick Alerts
  ALLOW NOTIFICATIONS  
  For Daily Alerts

  'ಬಿಗ್ ಬಾಸ್' ವಿನ್ನರ್ ಯಾರೆಂದು ಮೊದಲೇ ಊಹಿಸಿದ್ದ ಫಿಲ್ಮಿಬೀಟ್ ಓದುಗರು.!

  By Bharath Kumar
  |

  ಚಂದನ್ ಶೆಟ್ಟಿ 'ಬಿಗ್ ಬಾಸ್ ಕನ್ನಡ 5' ಆವೃತ್ತಿಯ ವಿಜೇತ ಆಗಿ ಹೊರಹೊಮ್ಮಿದ್ದಾರೆ. 50 ಲಕ್ಷದ ಜೊತೆ, ಬಿಗ್ ಬಾಸ್ ಟ್ರೋಫಿಯನ್ನ ಕೂಡ ಮುಡಿಗೇರಿಸಿಕೊಂಡಿದ್ದಾರೆ. ಇದು ನಿರೀಕ್ಷೆ ಮಾಡಿದ್ದ ಫಲಿತಾಂಶವೇ ಎನ್ನುವುದು ಗಮನಿಸಬೇಕಾದ ವಿಚಾರ.

  ಹೌದು, ಬಿಗ್ ಬಾಸ್ ಫಿನಾಲೆಯ ಫಲಿತಾಂಶದ ಬಗ್ಗೆ ಫಿಲ್ಮಿಬೀಟ್ ಕನ್ನಡ ಓದುಗರು ಈ ಮೊದಲೇ ಊಹಿಸಿದ್ದರು. ಯಾರು ವಿನ್ನರ್ ಆಗ್ತಾರೆ, ಯಾರು ರನ್ನರ್ ಆಗ್ತಾರೆ? ಮತ್ತು ಮೂರನೇ ಹಾಗೂ ನಾಲ್ಕನೇ ಸ್ಥಾನ ಯಾರು ಪಡೆಯುತ್ತಾರೆ ಎಂಬುದು ಫಿಲ್ಮಿಬೀಟ್ ಕನ್ನಡ ನಡೆಸಿದ್ದ ಸಮೀಕ್ಷೆಯಲ್ಲಿ ಬಹಿರಂಗವಾಗಿತ್ತು. ಗ್ರ್ಯಾಂಡ್ ಫಿನಾಲೆಗೂ ಮುಂಚೆ 'ಫಿಲ್ಮಿಬಿಟ್ ಕನ್ನಡ Poll' ನಡೆಸಿತ್ತು.

  ಫಿಲ್ಮಿಬೀಟ್ ಕನ್ನಡ ಸಮೀಕ್ಷೆಯಲ್ಲಿ ಹೊರಬಿದ್ದ ಫಲಿತಾಂಶವೇ ಈಗ ಕಲರ್ಸ್ ಸೂಪರ್ ವಾಹಿನಿಯಲ್ಲೂ ಹೊರಬಿದ್ದಿದೆ. ನಮ್ಮ ಓದುಗರು ನಿರ್ಧರಿಸಿದ್ದಂತೆ ವಿಜಯಶಾಲಿ ನಿರ್ಣಯವಾಗಿದ್ದಾರೆ. ಮುಂದೆ ಓದಿ....

  ಚಂದನ್ ಶೆಟ್ಟಿ ವಿನ್ನರ್

  ಚಂದನ್ ಶೆಟ್ಟಿ ವಿನ್ನರ್

  ಜನವರಿ 25 ರಂದು ಅಯೋಜಿಸಿದ್ದ 'ಫಿಲ್ಮಿಬಿಟ್ ಕನ್ನಡ Poll' ನಲ್ಲಿ ಚಂದನ್ ಶೆಟ್ಟಿ ಅತಿ ಹೆಚ್ಚು ಮತ ಪಡೆದು ವಿನ್ನರ್ ಆಗಿ ಹೊರಹೊಮ್ಮಿದ್ದರು. ಉಳಿದ ಸ್ಪರ್ಧಿಗಳಿಂತ ಹೆಚ್ಚು ವೋಟ್ ಪಡೆದು ಗೆಲುವು ಕಂಡಿದ್ದರು. ನಿರೀಕ್ಷೆಯಂತೆ ಬಿಗ್ ಬಾಸ್ ನಲ್ಲೂ ಚಂದನ್ ಶೆಟ್ಟಿ ವಿನ್ನರ್ ಎಂದು ಘೋಷಣೆ ಆಯಿತು

  ದಿವಾಕರ್ ರನ್ನರ್ ಅಪ್

  ದಿವಾಕರ್ ರನ್ನರ್ ಅಪ್

  'ಫಿಲ್ಮಿಬಿಟ್ ಕನ್ನಡ Poll' ನಲ್ಲಿ ದಿವಾಕರ್ ರನ್ನರ್ ಅಪ್ ಎಂಬ ಫಲಿತಾಂಶ ಬಂದಿತ್ತು. ಚಂದನ್ ನಂತರ ಅತಿ ಹೆಚ್ಚು ಮತಗಳನ್ನ ದಿವಾಕರ್ ಪಡೆದುಕೊಂಡಿದ್ದರು. ಬಿಗ್ ಬಾಸ್ ನಲ್ಲೂ ಅದೇ ನಿಜವಾಯಿತು. ಚಂದನ್ ಶೆಟ್ಟಿ ಮತ್ತು ದಿವಾಕರ್ ಕೊನೆಯ ಎರಡು ಸ್ಥಾನದಲ್ಲಿ ನಿಂತುಕೊಂಡರು.

  ಮೂರನೇ ಸ್ಥಾನಕ್ಕೆ ಜೆ.ಕೆ

  ಮೂರನೇ ಸ್ಥಾನಕ್ಕೆ ಜೆ.ಕೆ

  ಇನ್ನು ನಿರೀಕ್ಷೆ ಮೂಡಿಸಿದ್ದ ಕಾರ್ತಿಕ್ ಜಯರಾಂ, 'ಫಿಲ್ಮಿಬಿಟ್ ಕನ್ನಡ Poll' ನಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದ್ದರು. ಅಚ್ಚರಿ ಅಂದ್ರೆ, ಬಿಗ್ ಬಾಸ್ ಫಲಿತಾಂಶದಲ್ಲೂ ಕೂಡ ಜೆ.ಕೆ ಮೂರನೆ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.

  ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡ ನಟ ಜಯರಾಂ ಕಾರ್ತಿಕ್.!

  ನಿವೇದಿತಾ ಹಾಗೂ ಶ್ರುತಿ

  ನಿವೇದಿತಾ ಹಾಗೂ ಶ್ರುತಿ

  ಇನ್ನುಳಿದಂತೆ ನಿವೇದಿತಾ ಗೌಡ ಮತ್ತು ಶ್ರುತಿ ಪ್ರಕಾಶ್ ನಾಲ್ಕನೇ ಹಾಗೂ ಐದನೇ ಸ್ಥಾನ ಗಳಿಸುತ್ತಾರೆ ಎಂದು 'ಫಿಲ್ಮಿಬಿಟ್ ಕನ್ನಡ Poll' ನಲ್ಲಿ ಓದುಗರು ನಿರ್ಧರಿಸಿದ್ದರು. ಅತಿ ಕಡಿಮೆ ವೋಟ್ ಪಡೆದು ನಿವೇದಿತಾ ನಾಲ್ಕನೇ ಸ್ಥಾನ ಹಾಗೂ ಅವರಿಗಿಂತ ಕಡಿಮೆ ವೋಟ್ ಪಡೆದು ಶ್ರುತಿ ಐದನೇ ಸ್ಥಾನ ಗಿಟ್ಟಿಸಿಕೊಂಡರು.

  ಮೊದಲು ಶ್ರುತಿ ನಂತರ ನಿವೇದಿತಾ: ಸದ್ಯ ಉಳಿದಿರೋದು ಮೂವರು ಮಾತ್ರ.!

  ಕಳೆದ ವರ್ಷವೂ ಸಮೀಕ್ಷೆ ನಿಜವಾಗಿತ್ತು

  ಕಳೆದ ವರ್ಷವೂ ಸಮೀಕ್ಷೆ ನಿಜವಾಗಿತ್ತು

  ಬಿಗ್ ಬಾಸ್ ಕನ್ನಡ 4ನೇ ಆವೃತ್ತಿಯಲ್ಲೂ 'ಫಿಲ್ಮಿಬಿಟ್ ಕನ್ನಡ Poll' ನಿಜ ಹೇಳಿತ್ತು. ಪ್ರಥಮ್ ವಿನ್ನರ್ ಎಂದು ಘೋಷಿಸಿತ್ತು. ಅದರಂತೆಯೇ ಪ್ರಥಮ್ ಬಿಗ್ ಬಾಸ್ ಟ್ರೋಫಿಗೆ ಮುತ್ತಿಟ್ಟಿದ್ದರು.

  English summary
  Oneindia/Filmibeat Conducted Poll Prediction On various Social Networking platform by asking Public Who will win this Season Biggboss Kannada? Our Result is same As BBK5.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X