For Quick Alerts
  ALLOW NOTIFICATIONS  
  For Daily Alerts

  Ashwini: 'ಕಾಂತಾರ' ಲೀಲಾಳ ಮೂಗುತಿ ಫುಲ್ ಟ್ರೆಂಡ್: ಎರಡೂ ಕಡೆ ಬೊಟ್ಟು ಇಟ್ಟ ಕಿರುತೆರೆ ನಟಿ!

  By ಎಸ್ ಸುಮಂತ್
  |

  'ಕಾಂತಾರ' ಸಿನಿಮಾ ಎಲ್ಲಾ ಭಾಷೆಯಲ್ಲೂ ಅಬ್ಬರಿಸುತ್ತಿದೆ. ಮೊದಲಿಗೆ ಕನ್ನಡದಲ್ಲಿ ರಿಲೀಸ್ ಆದ 'ಕಾಂತಾರ' ಎಲ್ಲಾ ಭಾಷೆಯಲ್ಲೂ ತನ್ನ ಡಿಮ್ಯಾಂಡ್ ಹೆಚ್ಚಿಸಿಕೊಂಡಿತ್ತು. ಹೀಗಾಗಿ ಎಲ್ಲಾ ಭಾಷೆಯಲ್ಲೂ ರಿಲೀಸ್ ಆಗಿದೆ. ಈ ಮಧ್ಯೆ ಸಿನಿಮಾದಲ್ಲಿನ ಲೀಲಾ ಸ್ಟೈಲ್ ಗೆ ಹಲವರು ಮಾರು ಹೋಗಿದ್ದಾರೆ. ಲೀಲಾ ಸ್ಟೈಲ್ ಅನ್ನೇ ಕಾಪಿ‌ ಮಾಡುತ್ತಿದ್ದಾರೆ.

  ಮೂಗುತಿ ಹಿಂದಿನ ಕಾಲದಲ್ಲಿ ಹೆಣ್ಣು ಮಕ್ಕಳು ಹಾಕಲೇಬೇಕಾಗಿತ್ತು. ಅದರಲ್ಲೂ ಹಿಂದಿನ ಕಾಲದ ಹಿರಿಯರು ಎರಡು ಕಡೆಗೂ ಮೂಗು ಚುಚ್ಚಿಸಿಕೊಳ್ಳುತ್ತಿದ್ದರು. ಆದರೆ ಕಾಲ ಕಳೆದಂತೆ ಮೂಗುತಿ ಇಡುವವರ ಸಂಖ್ಯೆ ಕಡಿಮೆ ಆಯ್ತು. ಎರಡು ಕಡೆ ಇರಲಿ ಒಂದು ಕಡೆಗೂ ಮೂಗುತಿ ಇಡುತ್ತಿಲ್ಲ. ಅದೊಂದು ಫ್ಯಾಷನ್ ಎಂಬುದಾಗಿ ಎಲ್ಲರೂ ಮೂಗುತಿ ಚುಚ್ಚುವುದನ್ನೇ ಬಿಟ್ಟಿದ್ದಾರೆ. ಆದರೆ ಕಿರುತೆರೆ ನಟಿ ಅಶ್ವಿನಿ ಎರಡು ಕಡೆ ಮೂಗು ಚುಚ್ಚಿಸಿದ್ದಾರೆ.

  ಮದುವೆಯ ಬಳಿಕ ಅಶ್ವಿನಿ ಬದಲಾವಣೆ

  ಮದುವೆಯ ಬಳಿಕ ಅಶ್ವಿನಿ ಬದಲಾವಣೆ

  'ಗಟ್ಟಿಮೇಳ'ದಲ್ಲಿ ಆರತಿ ಅಂದ್ರೆ ತುಂಬಾ ಸಾಫ್ಟ್ ಕ್ಯಾರೆಕ್ಟರ್. ಯಾರಿಗೂ ಎದುರು ಮಾತನಾಡದವಳು. ಪ್ರೀತಿಸಿದ ವಿಕ್ರಾಂತ್ ನನ್ನು ಮದುವೆಯಾಗಿದ್ದಳು. ವಸಿಷ್ಠ ಫ್ಯಾಮಿಲಿಗೆ ಸೊಸೆಯಾಗಿ ಬರುವ ತನಕ ಆರತಿ ಸ್ಥಾನದಲ್ಲಿ ಅಶ್ವಿನಿ ಮುಂದುವರೆದಿದ್ದರು. ಆದರೆ ಬಳಿಕ ಅಶ್ವಿನಿ ಕ್ಯಾರೆಕ್ಟರ್ ಬದಲಾಗಿತ್ತು. ಈಗ ಆರತಿ ಕ್ಯಾರೆಕ್ಟರ್‌ನಲ್ಲಿ ಗಗನ ನಿಭಾಯಿಸುತ್ತಿದ್ದಾರೆ.

  ಲೀಲಾ ಸ್ಟೈಲ್‌ಗೆ ಫಿದಾ ಆದ ಅಶ್ವಿನಿ

  ಲೀಲಾ ಸ್ಟೈಲ್‌ಗೆ ಫಿದಾ ಆದ ಅಶ್ವಿನಿ

  'ಕಾಂತಾರ' ಸಿನಿಮಾದಲ್ಲಿ ಲೀಲಾ ಪಾತ್ರ ಸಾಕಷ್ಟು ಖ್ಯಾತಿ ಪಡೆಯುತ್ತಿದೆ. ಲೀಲಾ ಪಕ್ಕ ಹಳ್ಳಿ ಹುಡುಗಿ. ಎಣ್ಣೆ ಹಾಕಿದ ಕೂದಲಲ್ಲಿ ಜಡೆ ಎಣೆದು, ಯಾವಾಗಲೂ ಚೂಡಿದಾರ್ ಹಾಕಿಕೊಂಡು ಇರುತ್ತಾಳೆ. ಅದರ ಜೊತೆಗೆ ಎಲ್ಲರಿಗೂ ಗಮನ ಸೆಳೆಯುವುದು ಎರಡು ಕಡೆಗೂ ಚುಚ್ಚಿರುವ ಮೂಗುತ್ತಿ. ಇತ್ತಿಚೆಗೆ ಒಂದು ಕಡೆ ಚುಚ್ಚುವುದೇ ಕಷ್ಟ. ಅಂತದ್ದರಲ್ಲಿ ಎರಡು ಕಡೆ ಸಪ್ತಮಿ ಗೌಡ, ಸಿನಿಮಾಕ್ಕಾಗಿಯೇ ಮೂಗು ಚುಚ್ಚಿಸಿಕೊಂಡಿದ್ದಾರೆ. ಇದು ಟ್ರೆಂಡ್ ಆಗುತ್ತಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ಅಶ್ವಿನಿ ಇದೀಗ ಎರಡು ಕಡೆ ಮೂಗುತಿ ಚುಚ್ಚಿಸಿಕೊಂಡು ಫೋಟೊ ಹಂಚಿಕೊಂಡಿದ್ದಾರೆ.

  ಮೂಗುತ್ತಿ ಸುಂದರಿಯನ್ನು ಹೊಗಳಿದ ನೆಟ್ಟಿಗರು

  ಅಶ್ವಿನಿಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನ ಫಾಲೋವರ್ಸ್ ಇದ್ದಾರೆ. 261 ಸಾವಿರ ಜನ ಫಾಲೋವರ್ಸ್ ಇದ್ದು, ಅಶ್ವಿನಿ ಹಾಕುವ ಒಂದೊಂದು ಪೋಸ್ಟ್‌ಗೂ ಸಾಕಷ್ಟು ಲೈಕ್ಸ್ ಬರುತ್ತೆ. ಇದೀಗ 'ಕಾಂತಾರ' ಸ್ಟೈಲ್ ಕಾಪಿ ಮಾಡಿರುವುದಕ್ಕೆ ಎಲ್ಲರೂ ಹೊಗಳುತ್ತಿದ್ದಾರೆ. ಹಾರ್ಟ್ ನೀಡುತ್ತಿದ್ದಾರೆ. ನಿನ್ನ ಅಂದ ನೋಡಿ ದೇವದಾಸ ಕೂಡ ಕಾಳಿದಾಸನಾಗುತ್ತಿದ್ದಾನೆ ಎಂಬೆಲ್ಲಾ ರೀತಿಯಲ್ಲಿ ಕಮೆಂಟ್ ಹಾಕುತ್ತಿದ್ದಾರೆ. ಈ ಒಂದೇ ವಿಡಿಯೋಗೆ 80 ಕಮೆಂಟ್ ಬಂದಿದ್ದು, 7 ಸಾವಿರಕ್ಕಿಂತ ಹೆಚ್ಚು ಲೈಕ್ಸ್ ಬಂದಿದೆ. 'ಕಾಂತಾರ' ಸಿನಿಮಾದ ಕಣ್ಣಿಗೆ ಕಾಣೋ ಹೂಗಳೆಲ್ಲಾ ಎಂಬ ಹಾಡಿಗೆ ರೀಲ್ಸ್ ಮಾಡಿದ್ದಾರೆ.

  ಬೇರೆ ಭಾಷೆಯಲ್ಲಿ ಅಶ್ವಿನಿ ಬ್ಯುಸಿ

  ಬೇರೆ ಭಾಷೆಯಲ್ಲಿ ಅಶ್ವಿನಿ ಬ್ಯುಸಿ

  'ಗಟ್ಟಿಮೇಳ' ಧಾರಾವಾಹಿಯಲ್ಲಿ ಆರತಿಯಾಗಿ ಕಾಣಿಸಿಕೊಂಡು ಮರೆಯಾದ ಬಳಿಕ ಅಶ್ವಿನಿ ಸ್ವಲ್ಪ ದಿನಗಳ ಕಾಲ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಆದರೆ ಇನ್ಸ್ಟಾಗ್ರಾಂನಲ್ಲಿ ತುಂಬಾ ಆಕ್ಟೀವ್ ಆಗಿ ಇರುತ್ತಾ ಇದ್ದರು. ಬಳಿಕ ತೆಲುಗು ಭಾಷೆಗೆ ಮೂವ್ ಆದ ಅಶ್ವಿನಿ ಅಲ್ಲಿಯೇ ಧಾರಾವಾಹಿ ಮಾಡುತ್ತಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ತನ್ನ ಫಾಲೋವರ್ಸ್ ಗೆ ರೀಲ್ಸ್ ಮಾಡುತ್ತಾ ಗಮನ ಕೇಂದ್ರಿಕರಿಸಿದ್ದಾರೆ.

  English summary
  Gattimela Serial Actress Arathi Follows Kantara Actress Sapthami Gowda. Here is the details.
  Sunday, October 16, 2022, 23:19
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X