For Quick Alerts
  ALLOW NOTIFICATIONS  
  For Daily Alerts

  ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿ 'ಗೀತಾಂಜಲಿ'

  By Harshitha
  |

  ಹೊಸ ಹೊಸ ಕಾರ್ಯಕ್ರಮಗಳಿಂದ ಮನೆ-ಮನ ಮುಟ್ಟುತ್ತಿರುವ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಈಗ 'ಗೀತಾಂಜಲಿ' ಎಂಬ ಹೊಸ ಧಾರಾವಾಹಿ ಪ್ರಸಾರವಾಗಲು ಸಜ್ಜಾಗಿದೆ.

  ಮುದ್ದು ಮಕ್ಕಳ ಕ್ಯೂಟ್ ಜಗಳದಿಂದ ಅಕಸ್ಮಾತ್ ಆಗಿ ಭೇಟಿ ಆಗುವ ಇಬ್ಬರು ಪ್ರತ್ಯೇಕ ವಿಚ್ಛೇದಿತರು ಪ್ರೀತಿಯಲ್ಲಿ ಬಿದ್ದು ಅನುಭವಿಸುವ ನೋವು-ನಲಿವುಗಳ ವಿನೂತನ ಕತೆಯನ್ನು ಈ ಧಾರಾವಾಹಿ ಹೊಂದಿದೆ. [ಮಹಾ ಸಂಚಿಕೆ: ಕುತೂಹಲಕಾರಿ ತಿರುವು ಪಡೆದ 'ಅಮೃತವರ್ಷಿಣಿ']

  ಸಂಜೀವ್ ತಗಡೂರ್ ನಿರ್ದೇಶಿಸಿರುವ 'ಗೀತಾಂಜಲಿ' ಧಾರಾವಾಹಿಯ ಸಂಪೂರ್ಣ ವಿವರ ಇಲ್ಲಿದೆ ಓದಿರಿ....

  'ಗೀತಾಂಜಲಿ' ಕಥಾಹಂದರ

  'ಗೀತಾಂಜಲಿ' ಕಥಾಹಂದರ

  ಕ್ಲಾಸ್ ಮೇಟ್ ಗಳಾಗಿ ಓದು, ಆಟ, ಪಾಠ, ಹೀಗೆ ಎಲ್ಲಾ ವಿಷಯಗಳಲ್ಲೂ ಸಮಾನ ಸ್ಪರ್ಧೆ ಇರುವ ಪುಟ್ಟ ಮಕ್ಕಳು ಗೀತಾ ಮತ್ತು ಅಂಜಲಿ. ಇವರ ಕಿತ್ತಾಟ ಮಿತಿ ಮೀರಿದಾಗ ರಾಹುಲ್ ಮತ್ತು ಪ್ರಿಯ ಪರಸ್ಪರ ಆಕರ್ಷಿತವಾಗುತ್ತಾರೆ. ಇದಕ್ಕೆ ಗೀತಾ ಮತ್ತು ಅಂಜಲಿ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ ಹಾಗೂ ರಾಹುಲ್ ಮತ್ತು ಪ್ರಿಯಾ ಎಷ್ಟು ಸಮರ್ಥವಾಗಿ ಎದುರಿಸುತ್ತಾರೆ ಎಂಬುದೇ 'ಗೀತಾಂಜಲಿ' ಕಥಾಹಂದರ.

  ಮುಖ್ಯ ಭೂಮಿಕೆಯಲ್ಲಿ ಯಾರ್ಯಾರು?

  ಮುಖ್ಯ ಭೂಮಿಕೆಯಲ್ಲಿ ಯಾರ್ಯಾರು?

  ಗೀತಾ ಮತ್ತು ಅಂಜಲಿ....ಈ ಇಬ್ಬರು ಮುದ್ದಾದ ಹುಡುಗಿಯರ ದೃಷ್ಟಿಕೋನದಲ್ಲಿ ಸಾಗುವ ಈ ಧಾರಾವಾಹಿಯಲ್ಲಿ ಹೇಮಂತ್, ರಚಿತ ಗೌಡ, ನಿಶ್ಚಿತ ಗೌಡ, ರಜತ್, ಶಿವಾನಿ, ಸಾತ್ವಿಕ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. [ಕರ್ನಾಟಕದ ಜನತೆಗೆ ಎಚ್ಚರಿಕೆ ಕೊಡಲು ಬಂದ ಡೈನಾಮಿಕ್ ಹೀರೋ]

  ಪೋಷಕ ಪಾತ್ರದಲ್ಲಿ....

  ಪೋಷಕ ಪಾತ್ರದಲ್ಲಿ....

  ಶ್ರೀನಾಥ್ ವಸಿಷ್ಠ, ಮಾಲತಿ ಸರದೇಶಪಾಂಡೆ, ಚಂದನ ಸುಬ್ರಮಣ್ಯ, ಶ್ರೀರಾಂ, ಮೈಕೋ ಶಿವು ಪೋಷಕ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

  ಸಂಜೀವ್ ತಗಡೂರ್ ನಿರ್ದೇಶನ

  ಸಂಜೀವ್ ತಗಡೂರ್ ನಿರ್ದೇಶನ

  ಬ್ರಹ್ಮ ಈ ಧಾರಾವಾಹಿಗೆ ಕತೆ, ಚಿತ್ರಕಥೆ ರಚಿಸಿದ್ದು, ಹಲವಾರು ಸೂಪರ್ ಹಿಟ್ ಧಾರಾವಾಹಿಯನ್ನು ನಿರ್ದೇಶಿಸಿದ ಸಂಜೀವ ತಗಡೂರ್ 'ಗೀತಾಂಜಲಿ' ಧಾರಾವಾಹಿಗೆ ಆಕ್ಷನ್ ಕಟ್ ಹೇಳ್ತಿದ್ದಾರೆ.

  ಪ್ರಸಾರ ಯಾವಾಗ?

  ಪ್ರಸಾರ ಯಾವಾಗ?

  ಸೆಪ್ಟೆಂಬರ್ 12 ರಿಂದ ರಾತ್ರಿ 10 ಗಂಟೆಗೆ 'ಗೀತಾಂಜಲಿ' ಸ್ಟಾರ್ ಸುವರ್ಣ ವಾಹಿನಿಯಲ್ಲಿ 'ಗೀತಾಂಜಲಿ' ಪ್ರಸಾರವಾಗಲಿದೆ.

  English summary
  Kannada Entertainment Channel Star Suvarna has come up with a new serial called 'Geethanjali' which will go on air from September 12th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X