twitter
    For Quick Alerts
    ALLOW NOTIFICATIONS  
    For Daily Alerts

    ಕೋಟ್ಯಧಿಪತಿಯಲ್ಲಿ ರವಿಯನ್ನು ಕಾಪಾಡಿದ ಹಂಸಲೇಖ

    By Rajendra
    |

    Crazy Star Ravichandran
    ಸುವರ್ಣ ವಾಹಿನಿಯಲ್ಲಿ ಮಂಗಳವಾರ (ಜೂ 5) ಪ್ರಸಾರವಾದ 'ಕನ್ನಡದ ಕೋಟ್ಯಧಿಪತಿ' 50ನೇ ಕಂತು ಸಖತ್ ಮಜವಾಗಿತ್ತು. ಕಾರಣ ಹಾಟ್‌ಸೀಟಿನಲ್ಲಿ ಕೂತವರು ಕನ್ನಡ ಚಿತ್ರಗಳ ಕನಸುಗಾರ, ರಸಿಕ, ಒಂಟಿ ಸಲಗ, ಛಲ ಬಿಡದ ತ್ರಿವಿಕ್ರಮ, ಕ್ರೇಜಿಸ್ಟಾರ್, ದಿ ಶೋ ಮ್ಯಾನ್ ಖ್ಯಾತಿಯ ವೀರಾಸ್ವಾಮಿ ರವಿಚಂದ್ರನ್.

    "ಇದು ನನ್ನ ನಿನ್ನ ಪ್ರೇಮಗೀತೆ ಚಿನ್ನ, ಇದು ಎಷ್ಟು ಸಾರಿ ಹಾಡಿದರು ಚೆನ್ನ, ಇದು ನಿಲ್ಲಲಾರದೆಂದು, ಕೊನೆಯಾಗಲಾರದೆಂದು, ಈ ಪ್ರೇಮಲೋಕದ ಗೀತೆಯು..." ಎಂದು 'ಪ್ರೇಮಲೋಕ' ಚಿತ್ರದ ಜನಪ್ರಿಯ ಗೀತೆಯನ್ನು ಪುನೀತ್ ಹಾಡುವ ಮೂಲಕ ರವಿಚಂದ್ರನ್‍‌ರನ್ನು ಕೋಟ್ಯಧಿಪತಿ ಶೋಗೆ ಆಹ್ವಾನಿಸಿದರು.

    ಸರ್ ಫಸ್ಟ್ ಟೈಮ್ ಕನ್ನಡದಲ್ಲಿ ಕೋಟಿ ರುಪಾಯಿ ಬಜೆಟ್‌ ಸಿನಿಮಾ ಮಾಡಿದ ಖ್ಯಾತಿ ನಿಮ್ಮದು ಎಂದರೆ. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ರವಿಚಂದ್ರನ್ ಕೋಟಿ ಖರ್ಚು ಮಾಡಿದ್ದು ನಾನೇ ಕೋಟಿ ರುಪಾಯಿ ಕಳೆದುಕೊಂಡಿದ್ದು ನಾನೆ ಎಂದು ಹಾಸ್ಯ ಚಟಾಕಿ ಸಿಡಿಸಿದರು.

    ನಾವು ಯಾವೊತ್ತೂ ಪ್ರೇಕ್ಷಕರನ್ನು ಅವರ ನೇರಕ್ಕೆ ನೋಡಬೇಕು. ನಾವು ಬೆಳೆದುಬಿಟ್ಟಿದ್ದೀವಿ ಎಂದು ಮೇಲಿನಿಂದ ನೋಡುವ ಪ್ರಯತ್ನ ಮಾಡಿದರೆ 'ಏಕಾಂಗಿ'ಯಾಗಿಬಿಡ್ತೀವಿ ಎಂದರು. ಈಶ್ವರಿ, ವಜ್ರೇಶ್ವರಿ ಎರಡೂ ಸೇರೋ ಏಕೈಕ ವೇದಿಕೆ 'ಕನ್ನಡದ ಕೋಟ್ಯಧಿಪತಿ' ಎಂದು ಪುನೀತ್ ಶೋಗೆ ಚಾಲನೆ ನೀಡಿದರು.

    ಜನರಲ್ ನಾಲೆಡ್ಜ್‌ನಲ್ಲಿ ನಾನು ತುಂಬಾ ವೀಕು. ಯಾಕೆಂದರೆ ನಾನು ನನ್ನದೇ ಪ್ರಪಂಚದಲ್ಲಿ ಇದ್ದವನು. ತುಂಬಾ ಸರಳವಾದ ಪ್ರಶ್ನೆಗಳನ್ನು ಕೇಳು. ಯಾಕೆಂದರೆ ನಾನು ಸೋತರೆ ನಿನ್ನ ಮರ್ಯಾದೆ ಪ್ರಶ್ನೆ ಎಂದರು ರವಿಚಂದ್ರನ್.

    ಈ ಮಾತಿಗೆ ಎದ್ದುಬಿದ್ದು ನಕ್ಕ ಪುನೀತ್, ಸರ್ ಫಸ್ಟ್ ಆಫ್ ಆಲ್ ನಾನು ಪೆದ್ದ ಸಾರ್. ಓದಿರೋದೆ ಹತ್ತನೇ ಕ್ಲಾಕು ಕರೆದುಕೊಂಡು ಬಂದು ಇಲ್ಲಿ ಕೂರಿಸಿದ್ದಾರೆ. ಹೀಗೆ ಲೋಕಾಭಿರಾಮವಾಗಿ ಮಾತನಾಡುತ್ತಲೇ ಕಾರ್ಯಕ್ರಮ ಶುರುವಾಯಿತು.

    ಪುನೀತ್ ಕೇಳಿದ ಪ್ರಶ್ನೆಗಳನ್ನು ರವಿಚಂದ್ರನ್ ಚೆನ್ನಾಗಿಯೇ ಉತ್ತರಿಸುತ್ತಿದ್ದರು. ಉತ್ತರ ಕಷ್ಟವೆನಿಸಿದಾಗಲೆಲ್ಲಾ ರವಿಚಂದ್ರನ್ ಹೆಲ್ಪ್ ಲೈನ್‍‌ಗೆ ಶರಣಾಗುತ್ತಿದ್ದರು. ಹಾಗೆ ಉತ್ತರಿಸುತ್ತಾ ಉತ್ತರಿಸುತ್ತಾ ಅವರು 11 ಪ್ರಶ್ನೆಯವರೆಗೂ ಬಂದು ತಲುಪಿದರು (ರು.6, 40000). ಆದರೆ ಹನ್ನೆರಡನೆ ಪ್ರಶ್ನೆಗೆ ಉತ್ತರ ಗೊತ್ತಾಗದೆ ಅವರು ಫೋನ್ ಮಾಡಿದ್ದು ಯಾರಿಗೆ ಗೊತ್ತೇ?

    ಕನ್ನಡ ಚಿತ್ರರಂಗದಲ್ಲಿ ರವಿಚಂದ್ರನ್ ಜೊತೆ ಯಶಸ್ವಿ ಚಿತ್ರಗಳನ್ನು ಕೊಟ್ಟಂತಹ ಹಂಸಲೇಖ ಅವರಿಗೆ. ಈ ಪ್ರಶ್ನೆಗೆ ಉತ್ತರಿಸಲು ತಮ್ಮದೇ ಆದಂತಹ ಸಮಯವನ್ನು ತೆಗೆದುಕೊಳ್ಳಲು ಪುನೀತ್ ವಿಶೇಷ ವಿನಾಯಿತಿಯನ್ನು ರವಿಚಂದ್ರನ್‌ಗೆ ಕೊಟ್ಟರು.

    ಕೂಡಲೆ ರವಿಚಂದ್ರನ್ ಪ್ರಶ್ನೆಯನ್ನು ಹಂಸಲೇಖ ಅವರಿಗೆ ಕೇಳಿದರು. ಪ್ರಶ್ನೆ ಹೀಗಿತ್ತು. 1898ರಲ್ಲಿ ಬೆಂಗಳೂರಿಗೆ ಪ್ಲೇಗ್ ಬಂದಾಗ ಮಲ್ಲೇಶ್ವರಂ ಜೊತೆ ಮತ್ತೊಂದು ಪ್ರದೇಶವನ್ನು ಅಭಿವೃದ್ಧಿ ಪಡಿಸಲಾಯಿತು ಅದು ಯಾವುದು ಎಂದು. ಈ ಪ್ರಶ್ನೆ ಕೇಳುತ್ತಿದ್ದಂತೆ ಹಂಸಲೇಖ ಕೂಡಲೆ ಬಸವನಗುಡಿ ಎಂದರು. ಅಲ್ಲಿಗೆ ಉತ್ತರ ಸರಿಯಾಗಿತ್ತು. ರವಿಗೆ ಕೈಗೆ ರು.12, 50000 ಚೆಕ್ ಬರೆದುಕೊಟ್ಟರು ಪುನೀತ್.

    ಹಾಟ್ ಸೀಟಲ್ಲಿ ಕೂಳಿತುಕೊಂಡವರ ಕಷ್ಟ ಏನೆಂಬುದು ನಿಮಗೆ ಗೊತ್ತಾಗಬೇಕಾದರೆ ಒಂದ್ಸಲ ಬಂದು ಇಲ್ಲಿ ಕುಳಿತಕೊಳ್ಳಿ, ನಿನ್ನ ಸೀಟಲ್ಲಿ ನಾನು ಕುಳಿದುಕೊಳ್ತೀನಿ. ಆಗ ನಾನು ಕೇಳೋದೆಲ್ಲಾ ಸಿಂಪಲ್ ಪ್ರಶ್ನೆಗಳು. ಹೇಳಿ ಸಾರ್ ಯಾವ ರೀತಿ ಪ್ರಶ್ನೆಗಳನ್ನು ಕೇಳ್ತೀರಾ ಎಂದು ನಗುನಗುತ್ತಲೇ ಪುನೀತ್ ಕೇಳಿದರು.

    ಏನಿಲ್ಲಾ ಮದುವೆಗೂ ಮುಂಚಿನ ನಿನ್ನ ಮೂರು ಜನ ಮಾಜಿ ಲವರ್ಸ್ ಹೆಸರೇಳು ಎಂದು ಕೇಳ್ತೀನಿ ಎಂದರು. ಇದಕ್ಕೆ ನಗುನಗುತ್ತಲೇ ಉತ್ತರಿಸಿದ ಪುನೀತ್ ಮದುವೆ ಮುಂಚೆ ಅಮ್ಮ ಅಮ್ಮ ಅಮ್ಮ ಎಂದರು. ಈಗ ಮಕ್ಕಳು ಹಾಗೂ ಪತ್ನಿ ಎಂದರು. ನಾವು ಕೇಳೋ ಎಲ್ಲಾ ಪ್ರಶ್ನೆಗಳಿಗೂ ನೀನು ಹೀಗೇ ಅಪ್ಪ ಅಮ್ಮ ಎಂದು ಹೇಳಿದರೆ ಕಷ್ಟ ಆಗುತ್ತದೆ ಹಾಗಾಗಿ ನಾವೇ ಆಪ್ಷನ್ ಕೊಡ್ತೀವಿ ಅವುಗಳಲ್ಲೇ ಆಯ್ಕೆ ಮಾಡಬೇಕು ಎಂದು ಹೇಳಿ ಪುನೀತ್‌ರನ್ನೇ ಇಕ್ಕಟ್ಟಿಗೆ ಸಿಕ್ಕಿಸಿದರು. (ಒನ್‌ಇಂಡಿಯಾ ಕನ್ನಡ)

    English summary
    On Puneeth Rajkumar hosted Kannadada Kotyadhipati game show, Ravichandran not only opened up on his friendship and association with Hamsalekha, but also took the music director's help to answer a question on the game show.
    Thursday, June 7, 2012, 12:16
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X