»   » ಸತಿಯ ಪ್ರಾಣ ರಕ್ಷಣೆಗೆ ರೌದ್ರಾವತಾರ ತಾಳಿದ ಮಹಾದೇವ

ಸತಿಯ ಪ್ರಾಣ ರಕ್ಷಣೆಗೆ ರೌದ್ರಾವತಾರ ತಾಳಿದ ಮಹಾದೇವ

Posted By:
Subscribe to Filmibeat Kannada

ಎಲ್ಲರ ಅಚ್ಚುಮೆಚ್ಚಿನ ಸ್ಟಾರ್ ಸುವರ್ಣವಾಹಿನಿಯಲ್ಲಿ ಪ್ರಸಾರವಾಗುವ "ಹರ ಹರ ಮಹಾದೇವ" ಪ್ರತಿ ವಾರಕ್ಕೂ ವಿಭಿನ್ನ ರೀತಿಯ ಉಪ ಕಥೆಗಳನ್ನು ಕನ್ನಡ ವೀಕ್ಷಕರಿಗೆ ನೀಡುತ್ತಾ ಬರುತ್ತಿದೆ. ಅಂತೆಯೇ ಈ ವಾರದಲ್ಲಿ (ಸೋಮವಾರ) ದಕ್ಷನಿಗೆ ಶಿವ ಎಚ್ಚರಿಕೆ ನೀಡುವ ವಿಶಿಷ್ಠ ಸಂಗತಿ ಇದೆ.

ಚಂದ್ರ ತನ್ನ ತಪ್ಪನ್ನು ಒಪ್ಪಿಕೊಂಡು ಮುಂದಿನ ದಿನಗಳಲ್ಲಿ ರೇವತಿಯನ್ನು ಪ್ರೀತಿಯಿಂದ ನೋಡಿಕೊಳ್ಳುವುದಾಗಿ ಆಣೆ ಮಾಡುತ್ತಾನೆ. ಇನ್ನು ಮಹಾದೇವ ತನ್ನನ್ನು ಒಪ್ಪಿಕೊಳ್ಳುತ್ತಿಲ್ಲವೆಂದು ಸತಿ ತುಂಬಾ ಬೇಸರಗೊಳ್ಳುತ್ತಾಳೆ.[ಈ ವಾರದ 'ಹರ ಹರ ಮಹಾದೇವ' ಸಂಚಿಕೆಗಳ ವಿಶೇಷತೆ ಏನು?]

ಇತ್ತ ಸತಿ ನಂದಾವ್ರತವನ್ನು ಆಚರಿಸಲು ಸಿದ್ಧಳಾಗಿ ಶಿವಲಿಂಗವನ್ನು ತಯಾರಿಸುತ್ತಾಳೆ. ಆದರೆ ಮಹಾದೇವ ಪ್ರತ್ಯಕ್ಷರಾಗಿ ಸತಿಯನ್ನು ನಂದಾವ್ರತ ಕೈಗೊಳ್ಳದಂತೆ ಹೇಳುತ್ತಾನೆ. ಆವಾಗ ದಕ್ಷ ಸತಿಗೆ ಮೃತ್ಯುದಂಡನೆಯನ್ನು ನೀಡುತ್ತಾನೆ. ಮುಂದೆ ಓದಲು ಸ್ಲೈಡ್ಸ್ ಕ್ಲಿಕ್ಕಿಸಿ.....

ದಕ್ಷನಿಗೆ ಮಹಾದೇವನಿಂದ ಎಚ್ಚರಿಕೆ

ದಕ್ಷ ಸತಿಗೆ ಮೃತ್ಯುದಂಡನೆಯನ್ನು ನೀಡಿದಾಗ ಮಹಾದೇವ ದಕ್ಷನಿಗೆ ತ್ರಿಶೂಲ ತೋರಿಸುತ್ತಾ ಸತಿಗೆ ತೊಂದರೆ ಕೊಡದಂತೆ ಎಚ್ಚರಿಸುತ್ತಾರೆ.[ಶಿವ 'ಚಂದ್ರಶೇಖರ'ನ ಅವತಾರ ತಾಳುವುದಾದರೂ ಯಾಕೆ.?]

ಶಿವಲಿಂಗ ವಿಸರ್ಜಿಸಿದ ಸತಿ

ಆವಾಗ ದಕ್ಷ, ಸತಿ ಮಹಾದೇವನನ್ನು ಮರೆಯದಿದ್ದರೆ ತಾನು ಜಲಸಮಾಧಿಯಾಗುವುದಾಗಿ ತಿಳಿಸುತ್ತಾರೆ. ಅದಕ್ಕೆ ಸತಿ ಒಪ್ಪಿ ಶಿವಲಿಂಗವನ್ನು ವಿಸರ್ಜಿಸಲು ಮುಂದಾಗುತ್ತಾಳೆ.

ಸತಿಯನ್ನು ಕೊಲ್ಲಲು ಸಂಚು

ಇತ್ತ ತಾರಕಾಸುರ, ಸತಿಯನ್ನು ಕೊಲ್ಲಲು ವೃಶ್ಚಿಕನನ್ನು ಕಳುಹಿಸುತ್ತಾನೆ, ಆವಾಗ ಮಹಾದೇವ ಉಗ್ರಾರಾಗಿ ವೃಶ್ಚಿಕನನ್ನು ಸಂಹರಿಸುತ್ತಾರೆ. ಇನ್ನೊಂದೆಡೆ ದಕ್ಷ ಸತಿಯ ವಿವಾಹವನ್ನು ಅಂಗೀರನ ಮಗನಾದ ಶತಬಿಷನೊಂದಿಗೆ ನಿಶ್ಚಯಿಸುತ್ತಾರೆ ,

ಶತಭಿಷನೊಂದಿಗೆ ಮದುವೆ ಒಪ್ಪುವ ಸತಿ

ಶತಭಿಷನೊಂದಿಗೆ ಮದುವೆಗೆ ಸತಿಯು ಒಪ್ಪುತ್ತಾಳೆ. ವಿಷ್ಣು ಮತ್ತು ಲಕ್ಷ್ಮೀದೇವಿ ಮಹಾದೇವನಿಗೆ ಸತಿಯನ್ನು ವರಿಸಲು ಒಪ್ಪುವಂತೆ ಸೂಚಿಸುತ್ತಾರೆ. ಸತಿ ಆರೋಗ್ಯದಲ್ಲಿ ಏರು ಪೇರಾಗುತ್ತದೆ. ಪ್ರಸೂತಿ ದಕ್ಷನೊಂದಿಗೆ ಸತಿಯ ವಿವಾಹದ ಕುರಿತು ಆಕ್ಷೇಪವನ್ನು ವ್ಯಕ್ತಪಡಿಸುತ್ತಾಳೆ.

ತಪ್ಪದೇ ವೀಕ್ಷಿಸಿ

ಒಟ್ನಲ್ಲಿ ಸತಿಯನ್ನು, ಮಹಾದೇವ ವರಿಸುತ್ತಾರಾ.?, ಶತಭಿಷನ ಜೊತೆ ಸತಿಯ ಮದುವೆ ನೆರವೇರುತ್ತಾ.? ಮುಂತಾದ ಕುತೂಹಲಭರಿತ ಸಂಚಿಕೆ ನಿಮಗಾಗಿ ಇದೇ ವಾರದಿಂದ, ವೀಕ್ಷಿಸಿ 'ಹರ ಹರ ಮಹಾದೇವ' ಸೋಮವಾರದಿಂದ ಶುಕ್ರವಾರ ರಾತ್ರಿ 7.30 ಕ್ಕೆ ಸ್ಟಾರ್ ಸುರ್ವಣ ವಾಹಿನಿಯಲ್ಲಿ ಮಾತ್ರ.

English summary
Daksh goes to Angeera to arrange for a marriage between Angeera Son Sabdish and Sati. Sati accepts for marriage, Vishnu and Lakshmi asks Shiva to appear in front of Sati and ask her not to marry. Sati goes on ill health, Prasuti objects Daksh decision about Sati marriage considering her health. To know more story of 'Hara Hara Mahadeva', watch Mon to Friday night at 7.30 PM in your favourite Star Suvarna channel.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada