»   » ಬ್ರೇಕಿಂಗ್ ನ್ಯೂಸ್: ಸಾಧಕರ ಸೀಟ್ ಮೇಲೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ.!

ಬ್ರೇಕಿಂಗ್ ನ್ಯೂಸ್: ಸಾಧಕರ ಸೀಟ್ ಮೇಲೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ.!

Posted By:
Subscribe to Filmibeat Kannada

ಅಂತೂ ವೀಕ್ಷಕರ ಕೂಗಿಗೆ ಜೀ ಕನ್ನಡ ವಾಹಿನಿ ಸ್ಪಂದಿಸಿದೆ. ಕೋಟ್ಯಾಂತರ ಕನ್ನಡಿಗರ ಕನವರಿಕೆ ಈಡೇರಿದೆ.

ಸಾಧಕರ ಕುರ್ಚಿ ಮೇಲೆ ಮಾಜಿ ಪ್ರಧಾನಿ... ಕರ್ನಾಟಕದ ಹೆಮ್ಮೆಯ 'ಮಣ್ಣಿನ ಮಗ'...'ದಳ'ಪತಿ ಎಚ್.ಡಿ.ದೇವೇಗೌಡ ರವರನ್ನು ನೋಡಬೇಕು ಎಂದು ಆಸೆ ಪಟ್ಟವರ ಸಂಖ್ಯೆ ಲೆಕ್ಕವಿಲ್ಲ. ಆ ಎಲ್ಲರ ಆಸೆ ಇಂದು ಈಡೇರಿದೆ.

ಕಡೆಗೂ ಸಾಧಕರ ಸೀಟ್ ಮೇಲೆ ಎಚ್.ಡಿ.ದೇವೇಗೌಡ ರವರನ್ನು ಕೂರಿಸುವಲ್ಲಿ ಜೀ ಕನ್ನಡ ವಾಹಿನಿ ಯಶಸ್ವಿ ಆಗಿದೆ. ಮುಂದೆ ಓದಿರಿ...

'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಎಚ್.ಡಿ.ದೇವೇಗೌಡ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಜನಪ್ರಿಯ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಭಾಗವಹಿಸಿದ್ದಾರೆ. ಅದಕ್ಕೆ ಸಾಕ್ಷಿ ನಿಮ್ಮ 'ಫಿಲ್ಮಿಬೀಟ್ ಕನ್ನಡ'ಗೆ ಸಿಕ್ಕಿರುವ ಈ ಫೋಟೋಗಳು.[ಯಾರು ಎಷ್ಟೇ ಹೇಳಿದ್ರೂ, 'ವೀಕೆಂಡ್ ವಿತ್ ರಮೇಶ್' ಬಗ್ಗೆ ವೀಕ್ಷಕರ ಕೋಪ ಕಮ್ಮಿ ಆಗ್ತಿಲ್ಲ.!]

ಇಂದು ನಡೆಯುತ್ತಿದೆ ರೆಕಾರ್ಡಿಂಗ್

'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಎಚ್.ಡಿ.ದೇವೇಗೌಡ ಪಾಲ್ಗೊಂಡಿರುವ ಸಂಚಿಕೆಯ ಚಿತ್ರೀಕರಣ ಇಂದು ಬೆಂಗಳೂರಿನ ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ನಡೆಯುತ್ತಿದೆ.['ವೀಕೆಂಡ್' ಕಾರ್ಯಕ್ರಮದಲ್ಲಿ ನಿಮ್ಮ ಮೆಚ್ಚಿನ ಸಾಧಕರು ಯಾಕಿಲ್ಲ ಎಂದರೆ 'ಸಮಸ್ಯೆ' ಖಂಡಿತ ಇದೆ.!]

ಫೇಸ್ ಬುಕ್ ನಲ್ಲಿ ಲೈವ್

'ವೀಕೆಂಡ್ ವಿತ್ ರಮೇಶ್' ಶೂಟಿಂಗ್ ಸ್ಪಾಟ್ ನಿಂದ ಇಂದು ಜೀ ಕನ್ನಡ ವಾಹಿನಿ ಫೇಸ್ ಬುಕ್ ನಲ್ಲಿ ಲೈವ್ ಕೂಡ ಮಾಡಿದೆ. ಅದನ್ನ ನೋಡಲು ಈ ಲಿಂಕ್ ಕ್ಲಿಕ್ ಮಾಡಿ....

ಅಪವಾದ ಮುಕ್ತ

ಜೀ ಕನ್ನಡ ವಾಹಿನಿಯ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮ ಕೇವಲ ಸಿನಿಮಾ ರಂಗದವರಿಗೆ ಮಾತ್ರ ಸೀಮಿತ ಎಂಬ ಅಪವಾದ ಹೊಂದಿತ್ತು. ಆದ್ರೀಗ, ಅದೇ ಕಾರ್ಯಕ್ರಮದ ಮೂಲಕ ರಾಜಕಾರಣಿ ಎಚ್.ಡಿ.ದೇವೇಗೌಡ ರವರನ್ನ ಸಾಧಕರ ಸೀಟ್ ಮೇಲೆ ಕೂರಿಸುವಲ್ಲಿ ಜೀ ಕನ್ನಡ ಯಶಸ್ವಿ ಆಗಿ ಅಪವಾದ ಮುಕ್ತವಾಗಿದೆ.

ಪ್ರಸಾರ ಯಾವಾಗ.?

ಇಂದು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಎಚ್.ಡಿ.ದೇವೇಗೌಡ ಭಾಗವಹಿಸಿರುವ ಸಂಚಿಕೆಯ ಚಿತ್ರೀಕರಣ ನಡೆಯುತ್ತಿದೆ. ಪ್ರಸಾರ ಯಾವಾಗಾಗುತ್ತೆ ಎಂಬುದನ್ನು ಕಾದು ನೋಡಬೇಕಿದೆ.

English summary
EX Prime Minister, Politician, JDS Leader, HD Devegowda takes part in Zee Kannada Channel's popular show 'Weekend With Ramesh 3'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada