»   » ಯಾರು ಎಷ್ಟೇ ಹೇಳಿದ್ರೂ, 'ವೀಕೆಂಡ್ ವಿತ್ ರಮೇಶ್' ಬಗ್ಗೆ ವೀಕ್ಷಕರ ಕೋಪ ಕಮ್ಮಿ ಆಗ್ತಿಲ್ಲ.!

ಯಾರು ಎಷ್ಟೇ ಹೇಳಿದ್ರೂ, 'ವೀಕೆಂಡ್ ವಿತ್ ರಮೇಶ್' ಬಗ್ಗೆ ವೀಕ್ಷಕರ ಕೋಪ ಕಮ್ಮಿ ಆಗ್ತಿಲ್ಲ.!

Posted By:
Subscribe to Filmibeat Kannada

ಸಾಧಕರ ಜೀವನ ಚರಿತ್ರೆಯನ್ನ ಎಳೆ ಎಳೆಯಾಗಿ ಬಿಚ್ಚಿಡುವ ಮೂಲಕ ಯುವ ಜನತೆಗೆ ಸ್ಫೂರ್ತಿ ತುಂಬುತ್ತಿರುವ ಜೀ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮ 'ವೀಕೆಂಡ್ ವಿತ್ ರಮೇಶ್'.

'ವೀಕೆಂಡ್ ವಿತ್ ರಮೇಶ್' ಮೊದಲ ಆವೃತ್ತಿಯಲ್ಲಿ ಚಿತ್ರರಂಗ, ಪತ್ರಿಕೋದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರು ಕಾರ್ಯಕ್ರಮಕ್ಕೆ ಹಾಜರ್ ಆಗಿದ್ದರು. ಆದ್ರೆ, ಎರಡನೇ ಆವೃತ್ತಿ ಮಾತ್ರ ಸಂಪೂರ್ಣ 'ಸಿನಿ'ಮಯವಾಗಿತ್ತು. ಇದ್ರಿಂದ ವೀಕ್ಷಕರ ಅಸಮಾಧಾನ ಭುಗಿಲೇಳುತ್ತಿದ್ದಂತೆಯೇ, ಸೀಸನ್ 3 ನಲ್ಲಿ ವಿವಿಧ ಕ್ಷೇತ್ರಗಳ ಗಣ್ಯರನ್ನು ಕರೆತರಲು ಜೀ ಕನ್ನಡ ಪ್ಲಾನ್ ಮಾಡ್ತು.

ಆದ್ರೆ, ಕಳೆದ ವಾರಾಂತ್ಯದಲ್ಲಿ ಪ್ರಸಾರವಾದ 'ವೀಕೆಂಡ್ ವಿತ್ ರಮೇಶ್-3' ಕಾರ್ಯಕ್ರಮದಲ್ಲಿ ಬೆರಳೆಣಿಕೆಯ ಚಿತ್ರಗಳಲ್ಲಿ ನಟಿಸಿದ್ದ ನಟ ರಕ್ಷಿತ್ ಶೆಟ್ಟಿ ಸಾಧಕರ ಸೀಟ್ ಮೇಲೆ ಆಸೀನರಾಗಿದ್ದರು. ಇದರಿಂದ ಸಹಜವಾಗಿ ಫೇಸ್ ಬುಕ್ ನಲ್ಲಿ ವೀಕ್ಷಕರು ಬೇಸರ ವ್ಯಕ್ತಪಡಿಸಿದ್ದರು. ['ವೀಕೆಂಡ್ ವಿತ್ ರಮೇಶ್'ನಲ್ಲಿ ರಕ್ಷಿತ್ ಶೆಟ್ಟಿ: ಸಿಡಿಮಿಡಿಗೊಂಡ ವೀಕ್ಷಕರು.!]

ಇಷ್ಟೆಲ್ಲ ಆದ್ಮೇಲೆ, 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಫಾರ್ಮ್ಯಾಟ್ ಬಗ್ಗೆ ಜೀ ಕನ್ನಡ ವಾಹಿನಿಯ ಬಿಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ತಮ್ಮ ಅಕೌಂಟ್ ನಲ್ಲಿ ಕ್ಲಾರಿಫಿಕೇಷನ್ ಕೊಟ್ಟಿದ್ದಾರೆ. ಆದರೂ, ವೀಕ್ಷಕರಿಗೆ ಯಾಕೋ ಸಮಾಧಾನ ಆದಂತೆ ಕಾಣುತ್ತಿಲ್ಲ. 'ವೀಕೆಂಡ್ ವಿತ್ ರಮೇಶ್-3' ಹಾಗೂ ಜೀ ಕನ್ನಡ ವಾಹಿನಿ ಬಗ್ಗೆ ರಾಘವೇಂದ್ರ ಹುಣಸೂರು ರವರ ಫೇಸ್ ಬುಕ್ ಪುಟದಲ್ಲಿಯೇ ವೀಕ್ಷಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಮುಂದೆ ಓದಿರಿ....

ಅಸಮಾಧಾನ ತಂದ ಕಳೆದ ಎರಡು ಸಂಚಿಕೆ

''ಕಳೆದ ಎರಡು ಸಂಚಿಕೆಗಳು ನಮಗೆ ಅಸಮಾಧಾನ ತಂದಿದೆ. ರಕ್ಷಿತ್ ಶೆಟ್ಟಿ ಪ್ರತಿಭಾನ್ವಿತ ಎನ್ನುವುದರಲ್ಲಿ ಡೌಟೇ ಇಲ್ಲ. ಆದ್ರೆ, ಇಷ್ಟು ಬೇಗ ಕರೆತರಬಾರದಿತ್ತು. ಈ ಸಂಚಿಕೆಯಿಂದ ಏನು ಸ್ಫೂರ್ತಿ ಸಿಗುತ್ತೋ ಗೊತ್ತಿಲ್ಲ. ಆದ್ರೆ, ಸಿನಿ ತಾರೆಯರ ಬಗ್ಗೆ ಫೋಕಸ್ ಮಾಡುತ್ತಿರುವುದು ಯಾಕೆ.? ಕರ್ನಾಟಕದಲ್ಲಿ ಬೇರೆ ಯಾರೂ ಸಾಧಕರು ಇಲ್ಲವೇ.?'' ಎಂದು ವೀಕ್ಷಕರೊಬ್ಬರು ಜೀ ಕನ್ನಡ ವಾಹಿನಿಯ ಬಿಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ಫೇಸ್ ಬುಕ್ ಪುಟದಲ್ಲಿ ಸಿಡಿಮಿಡಿಗೊಂಡಿದ್ದಾರೆ. [ಈ ವಾರ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ 'ಯುವ' ಸಾಧಕರು.!]

ಟಿ.ಆರ್.ಪಿ ಚಿಂತೆಯೇ.?

''ಸಾಲು ಮರದ ತಿಮ್ಮಕ್ಕ'ನಂತಹ ಸಾಧಕರನ್ನು ಕರೆತಂದರೆ ಟಿ.ಆರ್.ಪಿ ಸಿಗುವುದಿಲ್ಲ ಎಂಬ ಚಿಂತೆಯೇ'' ಎಂದು ವೀಕ್ಷಕರೊಬ್ಬರು ಜೀ ಕನ್ನಡ ವಾಹಿನಿಯ ಬಿಸಿನೆಸ್ ಹೆಡ್ ರಾಘವೇಂದ್ರ ಹುಣಸೂರು ರವರಿಗೆ ನೇರವಾಗಿ ಪ್ರಶ್ನೆ ಕೇಳಿದ್ದಾರೆ. ಆದ್ರೆ, ಈ ಪ್ರಶ್ನೆಗೆ ರಾಘವೇಂದ್ರ ಹುಣಸೂರು ಪ್ರತಿಕ್ರಿಯೆ ನೀಡಿಲ್ಲ. ['ವೀಕೆಂಡ್' ಕಾರ್ಯಕ್ರಮಕ್ಕೆ ರಕ್ಷಿತ್ ಯಾಕೆ.? ಅಂತ ಕೇಳಿದವರಿಗೆ 'ಉತ್ತರ' ಸಿಕ್ಕಿದೆ.!]

ಕಷ್ಟದ ಕೆಲಸ ಅಲ್ಲ.!

''ವಾಹಿನಿ ನಡೆಸುತ್ತಿರುವ ನಿಮಗೆ ಸಾಧಕರನ್ನು ಕರೆತರುವುದು ಕಷ್ಟ ಅಲ್ಲ. ಸಂಗೀತ, ಉದ್ಯಮ, ರಂಗಭೂಮಿ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಸಾಧಕರು ಇದ್ದಾರೆ. ನಿಮ್ಮ ವಾಹಿನಿಯಲ್ಲಿ ಜನರಿಗೆ ಗೊತ್ತಿಲ್ಲದ ವಿಷಯ ಕುರಿತು ತಿಳಿಸಿ'' ಎಂಬುದು ವೀಕ್ಷಕರೊಬ್ಬರ ಅಭಿಪ್ರಾಯ.

ಹಳಿ ತಪ್ಪಿದ ರೈಲು...

''ಸಮಾಜ ಸೇವೆ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿನ ಸಾಧಕರನ್ನು ಪರಿಚಯಿಸಿದರೆ, ಅದರಿಂದ ಯುವ ಪೀಳಿಗೆಗೆ ಸ್ಫೂರ್ತಿಯಾಗುತ್ತದೆ. ಅದನ್ನು ಬಿಟ್ಟು ಒಂದೆರಡು ಸಿನಿಮಾಗಳಲ್ಲಿ ನಟಿಸಿದ ನಟ-ನಟಿಯರನ್ನು ಕರೆದುಕೊಂಡು ಬಂದರೆ ಹೇಗೆ.? ಇದರಿಂದ 'ವೀಕೆಂಡ್ ವಿತ್ ರಮೇಶ್' ಹಳಿ ತಪ್ಪಿದ ರೈಲಾಗಿದೆ'' ಎಂದು ವೀಕ್ಷಕರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಚಿತ್ರರಂಗದವರೇ ಯಾಕೆ.?

''ಚಿತ್ರರಂಗದಲ್ಲಿ ಸಾಧನೆ ಮಾಡಿರುವವರಿಗೆ ಮಾತ್ರ ಈ ಶೋ ಇದೆಯಾ'' ಎಂಬುದು ವೀಕ್ಷಕರೊಬ್ಬರ ಪ್ರಶ್ನೆ.

ಈ ಕಾಮೆಂಟ್ಸ್ ಸಾಕ್ಷಿ.!

'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಅತಿಥಿಗಳ ಬಗ್ಗೆ ಟ್ರೋಲ್ ಗಳು ಕೂಡ ಶುರು ಆಗಿದೆ.

ಎಲ್ಲರದ್ದೂ ಒಂದೇ ಕೂಗು

'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮಕ್ಕೆ ಹಂಸಲೇಖ, ರಾಹುಲ್ ಡ್ರಾವಿಡ್, ಅನಿಲ್ ಕುಂಬ್ಳೆ ರವರನ್ನ ಕರೆಯಿಸಿ ಎಂಬುದೇ ಬಹುತೇಕ ಜನರ ಕೂಗು.

ವೀಕ್ಷಕರ ಬೇಡಿಕೆ...

''ದೇಶಕ್ಕೆ ಪ್ರಾಣ ಕೊಟ್ಟ ದಿಟ್ಟ ಕುಟುಂಬವನ್ನು ಕರೆಯಿಸಿ, ಅವರ ಮೂಲಕ ಇಡೀ ಯೋಧರ ವರ್ಗಕ್ಕೆ ಒಂದು ಟ್ರಿಬ್ಯೂಟ್ ಕೊಡಬೇಕು'' ಎಂದು ರಾಘವೇಂದ್ರ ಹುಣಸೂರು ರವರ ಬಳಿ ವೀಕ್ಷಕರೊಬ್ಬರು ಬೇಡಿಕೆ ಇಟ್ಟಿದ್ದಾರೆ.

ದಿವಂಗತ ನಟರ ಕುರಿತು ತಿಳಿಸಿ...

''ಕನ್ನಡ ಚಿತ್ರರಂಗವನ್ನು ಕಟ್ಟಿ ಬೆಳೆಸಿದ ಬಾಲಣ್ಣ, ದಿನೇಶ್, ವಜ್ರಮುನಿ ರವರ ಕುಟುಂಬಕ್ಕೆ ಆಹ್ವಾನ ಕೊಡಿ'' ಎಂದು ವೀಕ್ಷಕರು ಆಗ್ರಹಿಸಿದ್ದಾರೆ.

ಹೊಗಳುವವರೂ ಇದ್ದಾರೆ.!

'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಬಗ್ಗೆ ತೆಗಳುವವರು ಮಾತ್ರ ಅಲ್ಲ. ಹೊಗಳುವವರೂ ಇದ್ದಾರೆ. ಅದಕ್ಕೆ ಸಾಕ್ಷಿ ಈ ಕಾಮೆಂಟ್.

ರಾಘವೇಂದ್ರ ಹುಣಸೂರು ಫೇಸ್ ಬುಕ್ ಪೋಸ್ಟ್

ಅಷ್ಟಕ್ಕೂ ಇಷ್ಟೆಲ್ಲ ಕಾಮೆಂಟ್ಸ್ ಬಂದಿರುವುದು ರಾಘವೇಂದ್ರ ಹುಣಸೂರು ರವರ ಫೇಸ್ ಬುಕ್ ಪೋಸ್ಟ್ ನಿಂದ. ಆ ಪೋಸ್ಟ್ ನಲ್ಲಿ ಏನಿತ್ತು ಅಂದ್ರೆ, ''ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರ ಪಟ್ಟಿ ನಮ್ಮ ಬಳಿ ಇದೆ. ಆದ್ರೆ ಎಲ್ಲರನ್ನೂ ಸಾಧಕರ ಸೀಟ್ ಮೇಲೆ ಕೂರಿಸುವುದು ಸುಲಭದ ಮಾತಲ್ಲ. ನೀವು ಸೂಚಿಸುತ್ತಿರುವ ಸಾಧಕರನ್ನು ಕರೆತರಲು ನಾವು ಕೂಡ ಪ್ರಯತ್ನ ಪಟ್ಟಿದ್ದೇವೆ. ಆದ್ರೆ, ಕಾರ್ಯಕ್ರಮಕ್ಕೆ ಬಾರದಿರಲು ಕೆಲವರಿಗೆ ಅವರದ್ದೇ ಆದ ಕಾರಣಗಳಿವೆ'' ಎಂದು ಜೀ ಕನ್ನಡ ವಾಹಿನಿಯ ಬಿಜಿನೆಸ್ ಹೆಡ್ ರಾಘವೇಂದ್ರ ಹುಣಸೂರು ಫೇಸ್ ಬುಕ್ ನಲ್ಲಿ ಸ್ಟೇಟಸ್ ಅಪ್ ಡೇಟ್ ಮಾಡಿದ್ದಾರೆ. ['ವೀಕೆಂಡ್' ಕಾರ್ಯಕ್ರಮದಲ್ಲಿ ನಿಮ್ಮ ಮೆಚ್ಚಿನ ಸಾಧಕರು ಯಾಕಿಲ್ಲ ಎಂದರೆ 'ಸಮಸ್ಯೆ' ಖಂಡಿತ ಇದೆ.!]

English summary
Zee Kannada Viewers are not happy with Zee Kannada Channel's Business Head Raghavendra Hunsur's clarification over Weekend with Ramesh-3 Achievers list.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada