ಹೇಮಶ್ರೀ ಕೊಲೆ ಪ್ರಕರಣ; ಪ್ರಮುಖ ಸಾಕ್ಷಿ ಬಂಧನ
ಹೇಮಶ್ರೀ ಅನುಮಾನಾಸ್ಪದ ಸಾವಿನ ಪ್ರಕರಣ ಬಯಲಾಗುತ್ತಿದ್ದಂತೆ (ಅ.9, 2012) ಸತೀಶ್ ನಾಪತ್ತೆಯಾಗಿದ್ದ. ಈತನಿಗಾಗಿ ಪೊಲೀಸರು ಬಲೆ ಬೀಸಿದ್ದರು. ಆದರೂ ಈತ ತಲೆಮರೆಸಿಕೊಂಡು ಪೊಲೀಸರ ಕೈಗೆ ಸಿಕ್ಕಿರಲಿಲ್ಲ.
ಈತ ಇಷ್ಟು ದಿನಗಳ ಕಾಲ ಎಲ್ಲಿ ತಲೆಮರೆಸಿಕೊಂಡಿದ್ದ, ಏಕೆ ನಾಪತ್ತೆಯಾಗಿದ್ದ? ಹೇಮಶ್ರೀ ಕೊಲೆ ಪ್ರಕರಣಕ್ಕೂ ಈತನಿಗೂ ಏನು ಸಂಬಂಧ? ಈ ಪ್ರಕರಣದಲ್ಲಿ ಈತನ ಪಾತ್ರವೇನು? ಎಂಬುದು ಇನ್ನಷ್ಟೇ ಗೊತ್ತಾಗಬೇಕಾಗಿದೆ. ಸದ್ಯಕ್ಕೆ ಈತನನ್ನು ಬಂಧಿಸಿರುವ ಹೆಬ್ಬಾಳ ಪೊಲೀಸರು ಈತನಿಂದ ಹೆಚ್ಚಿನ ಮಾಹಿತಿ ಪಡೆಯಲಿದ್ದಾರೆ.
ಹೇಮಶ್ರೀ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸತೀಶ್ ಕೇವಲ ಸಾಕ್ಷಿಯೇ? ಅಥವಾ ಈ ಅನುಮಾನಾಸ್ಪದ ಸಾವಿನ ಹಿಂದೆ ಈತನ ಕೈವಾಡವೂ ಇದೆಯೇ ಎಂಬುದು ಪೊಲೀಸರ ತನಿಖೆಯಲ್ಲಿ ಗೊತ್ತಾಗಲಿದೆ.
ಕಳೆದ ಎರಡು ವರ್ಷಗಳಿಂದ ಈತ ಹೇಮಶ್ರೀ ಪತಿ ಸುರೇಂದ್ರ ಬಾಬು ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಕೆಲ ದಿನಗಳ ಕಾಲ ಕೆಲಸ ಬಿಟ್ಟಿದ್ದ ಈತ ಪುನಃ ಕೆಲಸಕ್ಕೆ ಸೇರಿದ್ದ ಎನ್ನುತ್ತವೆ ಮೂಲಗಳು. ಹೇಮಶ್ರೀ ಸಾವಪ್ಪಿದ ದಿನವೇ ಈತ ಪುನಃ ಕೆಲಸಕ್ಕೆ ಸೇರಿಕೊಂಡಿದ್ದನೇ ಎಂಬುದು ತನಿಖೆಯಿಂದ ಗೊತ್ತಾಗಲಿದೆ. (ಏಜೆನ್ಸೀಸ್)


Click it and Unblock the Notifications












