For Quick Alerts
  ALLOW NOTIFICATIONS  
  For Daily Alerts

  ಕೌಸಲ್ಯ ಪ್ಲ್ಯಾನ್‌ಗೆ ಕೌಂಟರ್ ಕೊಡುತ್ತಾಳಾ ದುರ್ಗಾಂಬಾ?

  By ಪ್ರಿಯಾ ದೊರೆ
  |

  ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಲೀಲಾಗೆ ಗ್ರಹಚಾರ ಹೆಗಲೇರಿದಂತಾಗಿದೆ. ಲೀಲಾ ಪ್ಲ್ಯಾನ್ ಮಾಡಿ ಮೂವರು ಸೊಸೆಯಂದಿರನ್ನು ತನ್ನ ಮನೆಗೆ ಕಳಿಸಿದ್ದಳು. ಕೌಸಲ್ಯ ಸಿಕ್ಕಿದ್ದೇ ಚಾನ್ಸ್ ಅಂತ ಮೂವರಿಗೂ ಕೆಲಸ ಕೊಟ್ಟು ರುಬ್ಬಿದ್ದಳು. ಎಜೆ ಮನೆ ಗೌರವಕ್ಕೆ ಧಕ್ಕೆ ಬರಬಾರದು ಎಂದು ಮೂವರು ಸೊಸೆಯಂದಿರು ಕೌಸಲ್ಯ ಹೇಳಿದಂತೆ ಕೇಳಿದ್ದರು.

  ಇನ್ನು ಲೀಲಾ ಮತ್ತು ಎಜೆ ಇಬ್ಬರೇ ಮನೆಯಲ್ಲಿ ಇರಲಿ ಎಂಬ ಕಾರಣಕ್ಕಾಗಿ ಅಜ್ಜಿ ತೀರ್ಥಯಾತ್ರೆ ಹೆಸರನ್ನು ಹೇಳಿ ಮನೆ ಖಾಲಿ ಮಾಡಿದ್ದರು. ಶಿವರೂಪ್ ಬಳಿ ಮಾತನಾಡಿ, ಮೂವರು ಸೊಸೆಯಂದಿರನ್ನು ಮನೆಯಿಂದ ಹೊರಗೆ ಕಳಿಸಲು ಲೆಕ್ಕಾಚಾರ ಹಾಕಲಾಗಿತ್ತು. ಹಾಗಾಗಿ ದುರ್ಗಾ, ಸರಸ್ವತಿ ಮತ್ತು ಲಕ್ಷ್ಮೀ ಕೌಸಲ್ಯ ಮನೆಗೆ ಬರಬೇಕಾಯ್ತು.

  ಹಿಟ್ಲರ್ ಕಲ್ಯಾಣ: ಕೌಸಲ್ಯಾಳ ಮಾಸ್ ಲುಕ್, ಖಡಕ್ ಮಾತಿಗೆ ಬೆಚ್ಚಿಬಿದ್ದಳಾ ದುರ್ಗಾ..?ಹಿಟ್ಲರ್ ಕಲ್ಯಾಣ: ಕೌಸಲ್ಯಾಳ ಮಾಸ್ ಲುಕ್, ಖಡಕ್ ಮಾತಿಗೆ ಬೆಚ್ಚಿಬಿದ್ದಳಾ ದುರ್ಗಾ..?

  ಫಾರಿನ್ ಟ್ರಿಪ್ ಹೋಗೋ ಆಸೆಯಲ್ಲಿ ಬಂದಿದ್ದ ಸೊಸೆಯಂದಿರಿಗೆ ಕೌಸಲ್ಯ ಮನೆಯನ್ನು ನೋಡಿ ಸುಸ್ತಾಗಿದ್ದರು. ಇನ್ನು ಜೀವನದಲ್ಲಿ ಒಂದು ಬಾರಿಯೂ ಮಾಡದ ಕೆಲಸಗಳನ್ನು ಕೌಸಲ್ಯ ಮನೆಯಲ್ಲಿ ಮೂರು ದಿನ ಮಾಡಿ ಬಿದ್ದೋಗುವಂತೆ ಆಗಿದ್ದರು. ಈಗ ವಾಪಸ್ ಮನೆಗೆ ಹೋಗಲು ಸಜ್ಜಾಗಿ ನಿಂತಿದ್ದಾರೆ.

  ಫುಲ್ ಖುಷಿಯಲ್ಲಿರುವ ಕೌಸಲ್ಯ

  ಫುಲ್ ಖುಷಿಯಲ್ಲಿರುವ ಕೌಸಲ್ಯ

  ಎಜೆ ಮೂವರು ಸೊಸೆಯಂದಿರನ್ನು ಇಲ್ಲಿಗೆ ಕಳಿಸಿದ್ದು ಒಳ್ಳೆಯದೇ ಆಯ್ತು. ದುರ್ಗಾ, ಸರಸ್ವತಿ ಮತ್ತು ಲಕ್ಷ್ಮೀ ಮೂವರನ್ನು ಚೆನ್ನಾಗಿ ರುಬ್ಬಿದ್ದೇನೆ ಎಂದು ಕೌಸಲ್ಯ ಲೀಲಾ ಬಳಿ ಅಡುಗೆ ಮನೆಯಲ್ಲಿ ಮಾತನಾಡುತ್ತಿರುತ್ತಾರೆ. ಕೌಸಲ್ಯ ಮಾತು ಮುಂದುವರಿಸಿ, ಈಗ ಬರೀ ಮೂವರನ್ನೂ ನೀರಲ್ಲಿ ಅದ್ದಿ ಒಗೆದಿದ್ದೇನೆ. ಮತ್ತೆ ಏನಾದರೂ ನಕರಾ ಮಾಡಿದರೂ, ಕೊಬ್ಬು ಹೆಚ್ಚಾಯ್ತು ಎಂದರೆ ಮತ್ತೆ ಒಂದು ವಾರ ಕಳಿಸು, ಒಗೆ ಕಲ್ಲಿನ ಮೇಲೆ ಹಾಕೊಂಡು ಕುಕ್ಕಿ ಕುಕ್ಕಿ ಜಾಲಾಡುತ್ತೀನಿ ಎಂದು ಹೇಳುತ್ತಿರುತ್ತಾಳೆ. ಆಗ ಅಲ್ಲಿಗೆ ದುರ್ಗಾ ಬರುತ್ತಾಳೆ. ದುರ್ಗಾಳನ್ನು ನೋಡದ ಇವರು ಮಾತು ಮಂದುವರೆಸಿರುತ್ತಾರೆ. ಎಜೆಗೆ ಏನೋ ಒಂದು ಹೇಳಿ ಈ ಸಲ ಕಳಿಸಿದ್ದೇ ಹೆಚ್ಚು. ಮುಂದೆ ಹೆಂಗೋ ಏನೋ ಗೊತ್ತಿಲ್ಲ ಎಂದು ಲೀಲಾ ಮಾತನಾಡುತ್ತಿರುತ್ತಾರೆ.

  ಪಾರುವನ್ನು ಹೇಗೆ ಉಳಿಸಿಕೊಳ್ಳುತ್ತಾಳೆ ಅಖಿಲಾಂಡೇಶ್ವರಿ?ಪಾರುವನ್ನು ಹೇಗೆ ಉಳಿಸಿಕೊಳ್ಳುತ್ತಾಳೆ ಅಖಿಲಾಂಡೇಶ್ವರಿ?

  ಕೋಪಗೊಂಡ ದುರ್ಗಾ

  ಕೋಪಗೊಂಡ ದುರ್ಗಾ

  ಆಗ ದುರ್ಗಾಳನ್ನು ಲೀಲಾ ನೋಡಿ ಗಾಬರಿಯಾಗುತ್ತಾಳೆ. ದುರ್ಗಾ ಬಂದು ವಾರ್ನ್ ಮಾಡುತ್ತಾಳೆ. ಎಜೆ ಸೊಸೆಯಂದಿರು ಎಂಬುದನ್ನು ಮರೆತು, ಅಮ್ಮ-ಮಗಳು ಸೇರಿ ಈ ಪ್ಲ್ಯಾನ್ ಮಾಡಿದ್ದೀರಾ. ನೀವಿಲ್ಲಿ ನಮ್ಮ ಮೂವರಿಗೆ ಕೊಟ್ಟ ಹಿಂಸೆಯನ್ನು ನೆನಪಿಟ್ಟುಕೊಳ್ಳಿ. ಅಲ್ಲಿ ನಮ್ಮ ಮನೆಯಲ್ಲಿ ಲೀಲಾ ಒಬ್ಬಳೂ, ನಾವು ಮೂವರು ಇರುತ್ತೇವೆ. ಜೀವನ ಪೂರ್ತಿ ಲೀಲಾ ನಮ್ಮ ಜೊತೆಗೆ ಆ ಮನೆಯಲ್ಲಿ ಇರಬೇಕು. ಇಲ್ಲಿ ನಾವು ಮೂವರು ಅನುಭವಿಸಿದಕ್ಕೆ ತಕ್ಕ ಹಾಗೆ ಲೀಲಾ ಒಬ್ಬಳೇ ಅಲ್ಲಿ ಅನುಭವಿಸುತ್ತಾಳೆ ಬರೆದಿಟ್ಟುಕೊಳ್ಳಿ ಎಂದು ವಾರ್ನಿಂಗ್ ಕೊಡುತ್ತಾಳೆ.

  ದುರ್ಗಾಳನ್ನು ನೋಡಿ ಹೆದರಿದ ಲೀಲಾ

  ದುರ್ಗಾಳನ್ನು ನೋಡಿ ಹೆದರಿದ ಲೀಲಾ

  ದುರ್ಗಾ ಮಾತಿಗೆ ಹೆದರದ ಕೌಸಲ್ಯ ಮಾತು ಮುಂದುವರೆಸಿ, ಹೆಲೋ ಬೇಬಿ ಎನ್ನುತ್ತಾಳೆ. ಹಾಫ್ ಸೆಂಚುರಿ ದಾಟಿರುವ ನಾನೇ ಮೂವರನ್ನು ಈ ಮಟ್ಟಕ್ಕೆ ರುಬ್ಬಿದ್ದೇನೆ. ಇನ್ನು ನನ್ನ ಮಗಳು ಲೀಲಾ ಇನ್ನು ಚಿಕ್ಕವಳು. ಇವಳು ನಿಮ್ಮನ್ನು ಯಾವ ರೇಂಜ್‌ಗೆ ರುಬ್ಬಬಹುದು ಎಂದು ಕೊಂಚ ಊಹಿಸಿಕೊಳ್ಳಿ. ಕೌಸಲ್ಯ ಮಗಳು ಲೀಲಾ ಬಳಿ ಸ್ವಲ್ಪ ಎಚ್ಚರವಾಗಿರು ಎಂದು ಖಡಕ್ ವಾರ್ನಿಂಗ್ ಕೊಡುತ್ತಾಳೆ. ಆದರೆ ಲೀಲಾ ದುರ್ಗಾಗೆ ಹೆದರಿ ನಡುಗುತ್ತಿರುತ್ತಾಳೆ. ಲೀಲಾ ಮಾಡಿದ ಪ್ಲಾನ್ ಈಗ ಅವಳಿಗೆ ತಿರುಗುಬಾಣವಾಗುತ್ತದೆ ಎಂಬಂತೆ ಕಾಣುತ್ತಿದೆ.

  ಬೆಟ್ಟದ ಹೂ: ನಿಜ ಹೇಳೇ ಬಿಟ್ಟ ರಾಹುಲ್: ಹೂವಿ ಮೇಲೆ ಫುಲ್ ಗರಂ..!ಬೆಟ್ಟದ ಹೂ: ನಿಜ ಹೇಳೇ ಬಿಟ್ಟ ರಾಹುಲ್: ಹೂವಿ ಮೇಲೆ ಫುಲ್ ಗರಂ..!

  ಏಟಿಗೆ ಎದಿರೇಟು

  ಏಟಿಗೆ ಎದಿರೇಟು

  ಇನ್ನು ಮನೆಯಿಂದ ಎಲ್ಲರೂ ಹೊರಡುವಾಗ ರಾಮಚಂದ್ರ ಅವರು ಏನಾದರೂ ತಪ್ಪಾಗಿದ್ದರೆ ಕ್ಷಮಿಸಿ ಎಂದು ಕೇಳುತ್ತಾರೆ. ಆಗ ದುರ್ಗಾ ನಾವು ಇಲ್ಲಿಗೆ ಬಂದಿದ್ದು ಒಳ್ಳೆಯದೇ ಆಯ್ತು. ನಾವು ಇಲ್ಲಿ ಸಂಯಮ, ತಾಳ್ಮೆಯನ್ನ ಕಲಿತುಕೊಂಡಿದ್ದೇವೆ ಎಂದು ಹೇಳುತ್ತಾಳೆ. ಇನ್ನು ಕೌಸಲ್ಯ ಬೇಕಂತಲೇ ಮೂವರು ಸೊಸೆಯಂದಿರನ್ನು ಹಚ್ಚಿಕೊಂಡು ಬಿಟ್ಟಿದ್ದೇನೆ. ಬಿಟ್ಟಿರೋಕೆ ಸಾಧ್ಯವಿಲ್ಲ ಎಂದು ನಾಟಕವಾಡುತ್ತಾಳೆ. ಆಗ ಎಜೆ ಮುಂದಿನ ಸಲ ಪ್ಲ್ಯಾನ್ ಮಾಡಿ ಒಂದು ವಾರ ಇರುವಂತೆ ಕಳಿಸುತ್ತೇನೆ ಎಂದು ಹೇಳುತ್ತಾನೆ. ಆಗ ಲೀಲಾ ಮತ್ತು ಕೌಸಲ್ಯ ಗುಸು ಗುಸು ಎನ್ನುತ್ತಾರೆ.

  English summary
  Hitler kalyana Serial 12th September Episode Written Update. Know More.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X