Don't Miss!
- Automobiles
ಹಲವು ಫೀಚರ್ಸ್, ADAS ತಂತ್ರಜ್ಞಾನದೊಂದಿಗೆ ಸಜ್ಜಾಗುತ್ತಿದೆ 2022ರ ಕಿಯಾ ಸೆಲ್ಟೋಸ್ ಫೇಸ್ಲಿಫ್ಟ್
- News
ಕಾಮಗಾರಿ ಮುಗಿಸಿದ ಬಳಿಕ ಟೆಂಡರ್ ಕರೆದ ಕಾರವಾರ ನಗರಸಭೆ: ಅವ್ಯವಹಾರದ ಶಂಕೆ
- Sports
ಕೊಹ್ಲಿ ಶತಕಗಳಿಸುವುದು ನಮಗೆ ಬೇಕಿಲ್ಲ, ಆದರೆ..: ಹೀಗೆ ಯಾಕಂದ್ರು ಕೋಚ್ ರಾಹುಲ್ ದ್ರಾವಿಡ್!
- Technology
ಈ ವರ್ಷದ ಅಂತ್ಯದೊಳಗೆ ಲಾಂಚ್ ಆಗಲಿರುವ ಪ್ರಮುಖ ಫೋನ್ಗಳು!
- Lifestyle
ನಿಮ್ಮ ಹುಬ್ಬಿನ ಅಂದ ಕೆಡಿಸುವ ಈ ತಪ್ಪುಗಳನ್ನು ಎಂದಿಗೂ ಮಾಡದಿರಿ
- Finance
ಷೇರು ಪೇಟೆ ಮತ್ತೆ ಚೇತರಿಕೆ: ಬ್ರಿಟಾನಿಯಾ ಸ್ಟಾಕ್ಗೆ ಭಾರೀ ಲಾಭ
- Education
CBSE CISCE Result 2022 : ಬೋರ್ಡ್ ಪರೀಕ್ಷೆಗಳ ಫಲಿತಾಂಶ ಜು.15ರೊಳಗೆ ಪ್ರಕಟ ನಿರೀಕ್ಷೆ
- Travel
ದೇವಿ ಮೂಕಾಂಬಿಕೆಯ ದೈವಿಕ ಸನ್ನಿಧಿಯ ಸ್ಥಳ - ಕೊಲ್ಲೂರು
ಹಿಟ್ಲರ್ ಕಲ್ಯಾಣ: ಕುಸಿದು ಬಿದ್ದ ಏಜೆ ತಾಯಿ? ಲೀಲಾ ಮುನಿಸು ಕಡಿಮೆಯಾಗುತ್ತಾ?
ಹಿಟ್ಲರ್ ಕಲ್ಯಾಣ ಧಾರವಾಹಿ ನೋಡುಗರ ಮನ ಗೆದ್ದಿದೆ. ಲೀಲಾ ಹಾಗೂ ಏಜೆ ಆಕ್ಟಿಂಗ್‌ಗೆ ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಧಾರಾವಾಹಿಯಲ್ಲಿ ಈಗ ಪ್ರಮುಖ ತಿರುವು ಬಂದಿದ್ದು, ಏಜೆ ಮೇಲೆ ಕೋಪ ಮಾಡಿಕೊಂಡು ಲೀಲಾ ಮನೆ ಬಿಟ್ಟು ಬಂದಿದ್ದಾಳೆ. ಆಕೆಯನ್ನು ವಾಪಸ್ ಮನೆಗೆ ಕರೆದುಕೊಂಡು ಬರುವುದಾಗಿ ಏಜೆ ಸಹ ತಾಯಿಗೆ ಮಾತು ಕೊಟ್ಟಿದ್ದಾನೆ.
ಆದರೆ ಏಜೆ, ಲೀಲಾ ಮನೆಯವರ ಬಳಿ, ಲೀಲಾ ಬಳಿ ಅದೆಷ್ಟೂ ಕೇಳಿಕೊಂಡರು ಲೀಲಾ ಮಾತ್ರ ಏಜೆಯ ಮುಖವನ್ನೇ ನೋಡಲು ಇಚ್ಚಿಸುತ್ತಿಲ್ಲ, ಇತ್ತ ಲೀಲಾಳ ತಂದೆಯ ಮೇಲೆ ಅತ್ಯಾಚಾರ ಆರೋಪ ಮಾಡಿದಾಕೆ ಕೂಡ ನಾಪತ್ತೆಯಾಗಿದ್ದಾಳೆ ಇದರಿಂದ ಕಂಗೆಟ್ಟ ಏಜೆ ಮಾತ್ರ ಏನೂ ಮಾತನಾಡದೇ ಲೀಲಾ ಮನೆಯಿಂದ ಹೊರಬರಬೇಕಾದ ಅನಿವಾರ್ಯತೆ ಬಂದೊದಗಿದೆ.
ಲೀಲಾ, ಏಜೆ ಎಂದು ಅಕ್ಷರ ನೋಡಿದ್ರು ಅದರ ಮೇಲೂ ಕಿಡಿಕಾರುತ್ತಿದ್ದಾಳೆ ಅಷ್ಟು ದ್ವೇಷ ಏಜೆ ಎಂದರೆ. ಇನ್ನೂ ಏಜೆ ಮನೆಯಿಂದ ಹೋದ ಬಳಿಕ ಲೀಲಾ ಮನೆಯನ್ನು ನಿಭಾಯಿಸಲು ಏನು ಮಾಡಬೇಕು ಎಂಬುವುದನ್ನು ಯೋಚಿಸುತ್ತಿರುತ್ತಾಳೆ. ಬಳಿಕ ಪೇಪರ್‌ಗಳಲ್ಲಿ ಯಾವ ಕೆಲಸಕ್ಕೆ ಅರ್ಜಿ ಹಾಕಿದರೆ ಉತ್ತಮ ಎಂಬುವುದನ್ನು ನೋಡುತ್ತಿರುತ್ತಾಳೆ. ಕೆಲವೊಂದನ್ನು ಆಯ್ಕೆ ಮಾಡಿಕೊಂಡು ಪೇಪರ್‌ನ ಪುಟ ಹಿಂದೆ ತಿರುಗಿಸುವ ವೇಳೆ ಪತ್ರಿಕೆಯಲ್ಲಿ ಏಜೆ ಎಂಬ ಅಕ್ಷರ ಕಾಣಿಸುತ್ತದೆ. ಇದನ್ನು ನೋಡುತ್ತಿದ್ದ ಲೀಲಾಗೆ ಕೆಟ್ಟ ಕೋಪ ಬಂದು ಏಜೆ ಎಂಬ ಪದವನ್ನು ಪೆನ್ನಿನಲ್ಲಿ ಗೀಚುತ್ತಾಳೆ ಅಷ್ಟರ ಮಟ್ಟಿಗೆ ಏಜೆ ಕಂಡರೆ ಕೋಪ.

ದೇವ್‌ನ ಕಳ್ಳಾಟ ಏಜೆ ಮುಂದೆ ಬಯಲು
ಏಜೆ, ಲೀಲಾಳ ಮನೆಯಿಂದ ತೆರಳಬೇಕಾದರೆ ದಾರಿ ಮಧ್ಯೆ ದೇವ್‌ನ ಬೈಕ್ ನೋಡುತ್ತಾನೆ. ದೇವ್ ಯಾಕೆ ಇಲ್ಲಿ ಬೈಕ್ ಪಾರ್ಕ್ ಮಾಡಿದ್ದಾನೆ ಎಂದು ನೋಡಲು ತೆರಳುತ್ತಾನೆ ಈ ವೇಳೆ ದೇವ್ ರೇವತಿಗೆ ಪ್ರೀತಿ ಹೇಳುತ್ತಿರುತ್ತಾನೆ. ನಾವು ಎಲ್ಲರಿಗೂ ಮಾದರಿಯಾಗುವ ಎಂದೆಲ್ಲ ಹೇಳಿ ರೇವತಿ ಮನಸ್ಸನ್ನು ಕದಲಿಸಿ ಆಕೆಯನ್ನು ತನ್ನ ಪ್ರೀತಿಯಲ್ಲಿ ಬೀಳಿಸಿಕೊಳ್ಳುತ್ತಾನೆ ದೇವ್, ಇನ್ನೇನೂ ರೇವತಿ ಕೈಗೆ ಮುತ್ತಿಕ್ಕಬೇಕು ಎನ್ನುವಷ್ಟರಲ್ಲಿ ಇತ್ತ ಅದನ್ನು ನೋಡಿದ ಏಜೆ ನೋಡಿ ಕುಪಿತನಾಗುತ್ತಾನೆ.

ಶಾಕ್ ಆದ ದೇವ್
ಅವರಿಬ್ಬರಲ್ಲಿಗೆ ಏಜೆ ನಡೆದು ಬರುತ್ತಿರುವುದನ್ನು ದೇವ್ ನೋಡಿ ಶಾಕ್ ಆಗುತ್ತಾನೆ. ಇನ್ನೂ ರೇವತಿ ಎಜೆನ ನೋಡಿ ಭಯಗೊಳ್ಳುತ್ತಾಳೆ. ಈ ವೇಳೆ ಏಜೆ ಹೇಳುತ್ತಾನೆ ಇಷ್ಟೆಲ್ಲ ವಾರ್ನಿಂಗ್ ಕೊಟ್ರು ಈ ರೀತಿ ನಡೆದುಕೊಳ್ಳುತ್ತಿರುವುದು ನಾಚಿಕೆಯಾಗುತ್ತಿಲ್ಲವೇ ಎಂದೆಲ್ಲ ಬಯ್ಯುತ್ತಾನೆ.

ಏಜೆ ಸ್ವಾಗತಿಸಲು ತಯಾರಿ ನಡೆಸಿದ ಅಮ್ಮ
ಎಜೆ ಹಾಗೂ ಲೀಲಾಳನ್ನು ಸ್ವಾಗತ ಮಾಡಬೇಕು ಎಂದು ಏಜೆ ತಾಯಿ ಎಲ್ಲಾ ತಯಾರಿಯನ್ನು ಮಾಡಿಕೊಂಡಿರುತ್ತಾರೆ. ಏಜೆ ಬಂದ ವೇಳೆ ನೀನ್ಯಾಕೆ ಒಳಗಡೆ ಬಂದೆ, ನಿಮ್ಮಬ್ಬರಿಗೂ ನಾನು ಸ್ವಾಗತ ಮಾಡಬೇಕು ಎನ್ನುತ್ತಾರೆ. ಆಗ ಏಜೆ, 'ಲೀಲಾ ನನ್ನ ಮೇಲೆ ತುಂಬಾ ಕೋಪಿಸಿಕೊಂಡಿದ್ದಾಳೆ. ಅವಳ ಕೋಪ ಏನು ತಪ್ಪಲ್ಲ, ಆ ರೀತಿಯ ಅವಮಾನವಾಗಿ ನಮ್ಮ ಮನೆಯಲ್ಲಿ ಆಕೆ ಮನೆಯವರಿಗೆ. ಆದ್ರೆ ಲೀಲಾಳನ್ನು ಈ ಮನೆಗೆ ಕರೆದು ತರುತ್ತೇನೆ' ಎಂದು ಹೇಳುತ್ತಾನೆ ಏಜೆ. ಇದನ್ನು ಕೇಳಿ ಏಜೆ ತಾಯಿ ಕಣ್ಣೀರು ಹಾಕುತ್ತಾರೆ.

ಲೀಲಾ ಮನೆಗೆ ಏಜೆ ತಾಯಿ ಭೇಟಿ
ಇನ್ನೂ ಲೀಲಾ ಮನೆಗೆ ಏಜೆ ತಾಯಿ ಬರುತ್ತಾರೆ. ಏಜೆ ತಾಯಿ ಬಂದಿರುವುದನ್ನು ಕಂಡು ಲೀಲಾ ರೂಮ್‌ಗೆ ಹೋಗಿ ಬಾಗಿಲು ಹಾಕಿಕೊಳ್ಳುತ್ತಾಳೆ. ಏಜೆ ತಾಯಿ ಏನೇ ಹೇಳಿದರು ಲೀಲಾ ಮಾತ್ರ ಬಾಗಿಲು ತೆರೆಯದ್ದನ್ನು ನೋಡಿ ದುಃಖ ತಡೆದುಕೊಳ್ಳದೇ ಮನೆಯಿಂದ ಹೊರ ನಡೆಯುವ ವೇಳೆ ಏಜೆ ತಾಯಿ ಕುಸಿದು ಬೀಳುತ್ತಾರೆ, ಮುಂದೇನಾಗುತ್ತದೆ ಎಂಬುವುದನ್ನು ಮುಂದಿನ ಸಂಚಿಕೆಯಲ್ಲಿ ನೋಡಬೇಕಾಗಿದೆ.