For Quick Alerts
  ALLOW NOTIFICATIONS  
  For Daily Alerts

  ಅಪ್ಪ-ಅಮ್ಮನ ಆಸೆಯಂತೆ ಕಿರುತೆರೆ ನಟಿಯಾದ ಭವ್ಯಾ ಈಗ ದೊಡ್ಡ ಪರದೆಯತ್ತ!

  By ಪೂರ್ವ
  |

  ಇತ್ತೀಚೆಗಷ್ಟೇ ಜೀ ಕನ್ನಡ ವಾಹಿನಿಯ 'ಪಾರು', 'ಜೊತೆ ಜೊತೆಯಲಿ', 'ಗಟ್ಟಿಮೇಳ' ಧಾರಾವಾಹಿಯಲ್ಲಿ ನಟಿಸುತ್ತಿರುವ ನಟಿಯರಿಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಅವಕಾಶ ಸಿಕ್ಕಿದೆ. ಕಿರುತೆರೆ ಯಲ್ಲಿ ಪ್ರೇಕ್ಷಕರ ಮನ ಗೆದ್ದ ನಟ ನಟಿಯರು ಬೆಳ್ಳಿ ತೆರೆಯಲ್ಲೂ ನಟಿಸಲು ಸಜ್ಜಾಗುತ್ತಿದ್ದಾರೆ. ಅಂದಹಾಗೆ ಈ ಸರದಿಗೆ ಮತ್ತೊಬ್ಬ ನಟಿ ಸೇರ್ಪಡೆಯಾಗಿದ್ದಾರೆ ಅವರೇ ಭವ್ಯಾ ಗೌಡ.

  ಮೂಲತಃ ಬೆಂಗಳೂರಿನವರಾದ ಭವ್ಯಾ ಗೌಡಗೆ ಗಗನ ಸಖಿಯಾಗಬೇಕೆಂಬ ಕನಸಿತ್ತು. ಅದಕ್ಕಾಗಿ ತಯಾರಿ ಸಹ ನಡೆಸಿ ಪರೀಕ್ಷೆ ಬರೆದಿದ್ದರು, ಆದರೆ ಭವ್ಯಾರ ತಂದೆ ತಾಯಿಗೆ ಮಗಳನ್ನು ನಟಿಯಾಗಿ ನೋಡುವ ಅಭಿಲಾಷೆ ಇತ್ತು. ತಂದೆ ತಾಯಿಯ ಆಸೆಯಂತೆ ಭವ್ಯಾ ಗೌಡ ಆಡಿಷನ್ ಕೊಟ್ಟು ಮೊದಲ ಆಡಿಷನ್ ಅಲ್ಲೇ ಸೆಲೆಕ್ಟ್ ಸಹ ಆದರು.

  ಬಿಕಾಂ ಮುಗಿಸಿರುವ ಭವ್ಯಾ 'ಗೀತಾ' ಧಾರಾವಾಹಿಗಳಲ್ಲಿ ಬ್ಯುಸಿಯಾಗಿದ್ದಾರೆ. ಕೆ ಎಸ್ ರಾಮ್‌ಜಿ 'ಗೀತಾ' ಧಾರಾವಾಹಿಯನ್ನು ನಿರ್ದೇಶಿಸಿದ್ದರೆ ಶೀರ್ಷಿಕೆ ಗೀತೆಗೆ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಧ್ವನಿ ನೀಡಿದ್ದಾರೆ. ಧನುಶ್ ಗೌಡ್ ಮತ್ತು ಭವ್ಯಾ ಗೌಡ ಜೋಡಿ ಪ್ರೇಕ್ಷಕರ ಮೆಚ್ಚುಗೆ ಪಡೆದುಕೊಂಡಿದೆ. ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಸಿರಿವಂತ ಹುಡುಗ ಮತ್ತು ಹೂ ಮಾರುವ ಸ್ವಾಭಿಮಾನಿ ಹುಡುಗಿ ನಡುವೆ ಬೆಳೆಯುವ ಸಂಘರ್ಷದ ಸಂಬಂಧದ ಬಗ್ಗೆ ಈ ಕತೆ ಅದ್ಬುತವಾಗಿ ಮೂಡಿಬರುತ್ತಿದೆ.

  ಮೊದಲ ಆಡಿಷನ್‌ನಲ್ಲಿಯೇ ಸೆಲೆಕ್ಟ್

  ಮೊದಲ ಆಡಿಷನ್‌ನಲ್ಲಿಯೇ ಸೆಲೆಕ್ಟ್

  ಭವ್ಯಾ, 'ಗೀತಾ' ಸೀರಿಯಲ್ ಗೆ ಮೊದಲು ಸೆಲೆಕ್ಟ್ ಆದಾಗ ಹಲವರು ಇವರು ಟಿಕ್ ಟಾಕ್ ಮೂಲಕ ಧಾರಾವಾಹಿಗೆ ಎಂಟ್ರಿ ಕೊಟ್ಟಿದ್ದಾರೆ ಎಂದು ಬಿಂಬಿಸಿದರು. ಆದರೆ ಈ ಕಾರಣಕ್ಕೆ ತುಂಬಾ ಬೇಜಾರಾದರು ಏಕೆಂದರೆ ಅವರ ಪ್ರಕಾರ ಟಿಕ್ ಟಾಕ್ ನಲ್ಲಿ ನಟಿಸುವುದೆ ಬೇರೆ ಮತ್ತು ಧಾರಾವಾಹಿಯಲ್ಲಿ ನಟಿಸುವುದೆ ಬೇರೆ ಎನ್ನುತ್ತಾರೆ. ಅದಾಗಿಯೋ ಇವರು ತಾವೇ ಹೋಗಿ ಆಡಿಷನ್ ಕೊಟ್ಟು ಗೀತಾ ಸೀರಿಯಲ್ ಗೆ ಸೆಲೆಕ್ಟ್ ಆಗಿದ್ದರು. ಮೊದಲ ಧಾರಾವಾಹಿಯಲ್ಲಿಯೆ ನಾಯಕಿಯಾಗಿ ನಟಿಸುತ್ತಿರುವ ಸಂತೋಷದಲ್ಲಿದ್ದಾರೆ ಭವ್ಯ ಗೌಡ.

  ಕಿರುತೆರೆಯಿಂದ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಭವ್ಯಾ

  ಕಿರುತೆರೆಯಿಂದ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಭವ್ಯಾ

  ಕಿರುತೆರೆಯಲ್ಲಿ ಫೇಮಸ್ ಆದವರಿಗೆ ಬಿಗ್ ಸ್ಕ್ರೀನ್‌ನಲ್ಲಿ ಅವಕಾಶ ಸಿಗುವುದು ಹೊಸತೇನಲ್ಲ. ಇದೀಗ ಗೀತಾ ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ಸದ್ದು ಮಾಡಿರುವ ನಟಿ ಭವ್ಯಾ ಗೌಡಗೆ ಸಿನಿಮಾ ಆಫರ್ ಸಿಕ್ಕಿದೆ. ಅವರೀಗ ಬೆಳ್ಳಿತೆರೆ ಮೇಲೆ ಕಾಣಿಸಿಕೊಳ್ಳುವುದಕ್ಕೆ ಸಜ್ಜಾಗಿದ್ದಾರೆ. ದಿವ್ಯಾ ನಟಿಸುತ್ತಿರುವ ಸಿನಿಮಾ ಹೆಸರು 'ಡಿಯರ್ ಕಣ್ಮಣಿ'. ಕೆಲ ದಿನಗಳ ಹಿಂದಷ್ಟೇ ವಿಸ್ಮಯಾ ಗೌಡ ನಿರ್ದೇಶನದಲ್ಲಿ ಸೆಟ್ಟೇರಿದ ಈ ಸಿನಿಮಾದಲ್ಲಿ ನಾಯಕರಾಗಿ ಬಿಗ್ ಬಾಸ್ ಕಿಶನ್ ನಟಿಸುತ್ತಿದ್ದಾರೆ. ಇದೇ ಸಿನಿಮಾಕ್ಕೆ ಈಗ ಭವ್ಯಾ ಕೂಡ ಸೆಲೆಕ್ಟ್ ಆಗಿದ್ದಾರೆ.

  ಈ ಮೊದಲು ಸಿಕ್ಕಿತ್ತು ಅವಕಾಶ

  ಈ ಮೊದಲು ಸಿಕ್ಕಿತ್ತು ಅವಕಾಶ

  ಗೀತಾ ಧಾರವಾಹಿಯಲ್ಲಿ ಸಾಂಪ್ರದಾಯಿಕ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಆದರೆ ಇಲ್ಲಿ ಅವರ ಪಾತ್ರ ಸ್ವಲ್ಪ ಮಾಡ್ರರ್ನ್ ಆಗಿರಲಿದೆಯಂತೆ. ಇಲ್ಲಿಯವರೆಗೂ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕಿಲ್ಲ ಅಂತೇನಿಲ್ಲ. ಆದರೆ ನನಗೆ ಇಷ್ಟವಾಗುವ ಪಾತ್ರ ಸಿಕ್ಕಿರಲಿಲ್ಲ. ಇಲ್ಲಿ ತೂಕವಾದ ಪಾತ್ರ ಇದೆ. ತುಂಬ ಸವಾಲಿನಿಂದ ಕೂಡಿದೆ. ಈ ಪಾತ್ರದ ಬಗ್ಗೆ ಕೇಳಿದ ಮೇಲೆ, ಒಂದೆರೆಡು ದಿನ ನಾನು ಅದೇ ಗುಂಗಿನಲ್ಲೇ ಇದ್ದೆ. ಈ ಸಿನಿಮಾದ ನಿರ್ದೇಶಕಿ ಹಾಗೂ ನಿರ್ಮಾಪಕಿ ವಿಸ್ಮಯಾ ಅವರು ತುಂಬಾ ಇಷ್ಟ ಆದರು. ನಿರ್ದೇಶಕಿ ಜೊತೆ ಕೆಲಸ ಮಾಡುವ ಖುಷಿಯೇ ಬೇರೆ. ನನ್ನ ಧಾರಾವಾಹಿಯ ಕೆಲಸಕ್ಕೆ ಯಾವುದೇ ತೊಂದರೆಯಾಗದಂತೆ ಡೇಟ್ ಹೊಂದಿಸುವುದಾಗಿ ವಿಸ್ಮಯಾ ಹೇಳಿದ್ದು ನನಗೆ ತುಂಬಾ ಖುಷಿಯಾಯಿತು' ಎಂದು ಹೇಳಿಕೊಳ್ಳುತ್ತಾರೆ ಭವ್ಯಾ.

  ಸಿನಿಮಾದ ಹೆಸರು 'ಡಿಯರ್ ಕಣ್ಮಣಿ'

  ಸಿನಿಮಾದ ಹೆಸರು 'ಡಿಯರ್ ಕಣ್ಮಣಿ'

  ಸ್ವತಃ ಆಡಿಷನ್ ನೀಡುವ ಮೂಲಕ ಗೀತಾ ಎನ್ನುವ ಸೀರಿಯಲ್‌ನಲ್ಲಿ ಮುಖ್ಯ ಪಾತ್ರವನ್ನು ಪಡೆದುಕೊಂಡರು. ಗೀತಾ ಧಾರವಾಹಿ ಪ್ರಮುಖ ಪಾತ್ರದಲ್ಲಿ ಮಿಂಚುತ್ತಿರುವ ಭವ್ಯ ಗೌಡ ಅವರದ್ದು ಸ್ವಾಭಿಮಾನ ಹೊಂದಿರುವ ಪಾತ್ರವಾಗಿದೆ. ಇವರಿಗೆ ಸಾಕಷ್ಟು ಅಭಿಮಾನಿಗಳು ಕೂಡಾ ಹುಟ್ಟಿಕೊಂಡಿದ್ದು, ಗೀತಾ ಧಾರಾವಾಹಿ ಪ್ರಾರಂಭದಿಂದಲೇ ಜನರಿಂದ ಮೆಚ್ಚಿಕೊಂಡು ಉತ್ತಮ ರೀತಿಯಲ್ಲಿ ಮುಂದುವರೆದಿದೆ ಇದೀಗ ಸಿನಿಮಾದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಈ ಸಿನಿಮಾಕ್ಕೆ 'ಡಿಯರ್ ಕಣ್ಮಣಿ' ಎಂದು ಹೆಸರು ಕೂಡ ಇಡಲಾಗಿದೆ.

  English summary
  Kannada serial actress Bhavya Gowda use to make tik tok videos. Now she is debuting as movie actress.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X