For Quick Alerts
  ALLOW NOTIFICATIONS  
  For Daily Alerts

  ದಾಖಲೆ ಕುಸಿತ ಕಂಡ ಬಿಗ್‌ಬಾಸ್ ಪ್ರೀಮಿಯರ್ ಟಿಆರ್‌ಪಿ: ಕಾರಣ?

  |

  ತೆಲುಗು ಬಿಗ್‌ಬಾಸ್ ಸೀಸನ್ 06 ಆರಂಭವಾಗಿ ಎರಡು ವಾರವಾಗುತ್ತಾ ಬಂದಿದೆ. ನಾಗಾರ್ಜುನ ನಡೆಸಿಕೊಡುತ್ತಿರುವ ಈ ಶೋ ಇದೇ ತಿಂಗಳ ನಾಲ್ಕನೇ ತಾರೀಖಿನಂದು ಪ್ರಾರಂಭವಾಗಿತ್ತು.

  ತೆಲುಗಿನ ಕಳೆದ ಬಿಗ್‌ಬಾಸ್ ಸೀಸನ್ ದಾಖಲೆಯ ಟಿಆರ್‌ಪಿ ಪಡೆದುಕೊಂಡಿತ್ತು. ಅದೇ ನಿರೀಕ್ಷೆಯಲ್ಲಿ ಈ ಬಾರಿಯ ಬಿಗ್‌ಬಾಸ್ ಅನ್ನು ಆಯೋಜಕರು ಪ್ರಾರಂಭಿಸಿದ್ದರು. ಆದರೆ ಆರಂಭದಲ್ಲಿಯೇ ಆಯೋಜಕರಿಗೆ ಶಾಕ್ ನೀಡಿದ್ದಾರೆ ವೀಕ್ಷಕರು.

  BBK 9 : ಸೆಪ್ಟೆಂಬರ್ 24ರಿಂದ ಟಿವಿಗೆ ಬಿಗ್‌ಬಾಸ್: ಹಿರಿಯರು ಕಿರಿಯರು, ಹಾಗೂ ಓಟಿಟಿಯವರ ಸಮಾಗಮBBK 9 : ಸೆಪ್ಟೆಂಬರ್ 24ರಿಂದ ಟಿವಿಗೆ ಬಿಗ್‌ಬಾಸ್: ಹಿರಿಯರು ಕಿರಿಯರು, ಹಾಗೂ ಓಟಿಟಿಯವರ ಸಮಾಗಮ

  ತೆಲುಗು ಬಿಗ್‌ಬಾಸ್‌ ಸೀಸನ್ 6ರ ಗ್ರ್ಯಾಂಡ್ ಪ್ರೀಮಿಯರ್ ಉತ್ತಮ ಟಿಆರ್‌ಪಿ ಗಳಿಸುವಲ್ಲಿ ಧಾರುಣವಾಗಿ ಸೋತಿದೆ. ಈ ಹಿಂದಿನ ತೆಲುಗು ಬಿಗ್‌ಬಾಸ್ ಉದ್ಘಾಟನಾ ಕಾರ್ಯಕ್ರಮಗಳಿಗೆ ಹೋಲಿಸಿದರೆ ಈ ಬಾರಿಯ ಕಾರ್ಯಕ್ರಮ ಅರ್ಧಕ್ಕಿಂತಲೂ ಕಡಿಮೆ ಟಿಆರ್‌ಪಿ ಗಳಿಸಿದೆ. ಇದಕ್ಕೆ ಕಾರಣವೂ ಇದೆ.

  ನಾಗಾರ್ಜುನ ನಿರೂಪಿಸುತ್ತಿರುವ ಶೋ

  ನಾಗಾರ್ಜುನ ನಿರೂಪಿಸುತ್ತಿರುವ ಶೋ

  ತೆಲುಗು ಬಿಗ್‌ಬಾಸ್ ಸೀಸನ್ 1 ಅನ್ನು ಜೂ ಎನ್‌ಟಿಆರ್ ನಿರೂಪಣೆ ಮಾಡಿದ್ದರು. ಬಳಿಕ ನಟ ನಾನಿ ನಿರೂಪಣೆ ಮಾಡಿದರು. ಆ ನಂತರ ನಾಗಾರ್ಜುನ ಸತತವಾಗಿ ಬಿಗ್‌ಬಾಸ್ ನಿರೂಪಣೆ ಮಾಡುತ್ತಾ ಬರುತ್ತಿದ್ದಾರೆ. ಜೂ ಎನ್‌ಟಿಆರ್ ನಿರೂಪಿಸಿದ್ದ ಶೋ ಚೆನ್ನಾಗಿ ಟಿಆರ್‌ಪಿ ಪಡೆದುಕೊಂಡಿತ್ತು. ನಾನಿಯ ಶೋ ಸಹ ಉತ್ತಮ ಟಿಆರ್‌ಪಿ ಗಳಿಸಿತ್ತು. ನಾಗಾರ್ಜುನ ನಿರೂಪಣೆ ಮಾಡಲು ಆರಂಭಿಸಿದ ಬಳಿಕ ಟಿಆರ್‌ಪಿಯಲ್ಲಿ ಹೆಚ್ಚಳ ಆಗಿತ್ತು. ಆದರೆ ಹಠಾತ್ತನೆ ಬಿಗ್‌ಬಾಸ್ 6 ಟಿಆರ್‌ಪಿ ಧಾರುಣವಾಗಿ ಕುಸಿದಿದೆ. ಚಿರಂಜೀವಿ ಅತಿಥಿಯಾಗಿ ಭಾಗವಹಿಸಿದ್ದ ಸೀಸನ್ 3 ರ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮವು 22.4 ಟಿಆರ್‌ಪಿ ಗಳಿಸಿ ದಾಖಲೆ ಬರೆದಿತ್ತು.

  ಬಿಗ್​ ಬಾಸ್ ಓಟಿಟಿ ಸ್ಫರ್ಧಿಗಳಿಗೆ ಶಾಕ್​: ಫಿನಾಲೆ ಟೈಮ್​ನಲ್ಲಿ ಲೋಕಿ ರೀ ಎಂಟ್ರಿಬಿಗ್​ ಬಾಸ್ ಓಟಿಟಿ ಸ್ಫರ್ಧಿಗಳಿಗೆ ಶಾಕ್​: ಫಿನಾಲೆ ಟೈಮ್​ನಲ್ಲಿ ಲೋಕಿ ರೀ ಎಂಟ್ರಿ

  ಯಾವ ಸೀಸನ್ ಎಷ್ಟು ಟಿಆರ್‌ಪಿ ಗಳಿಸಿತ್ತು?

  ಯಾವ ಸೀಸನ್ ಎಷ್ಟು ಟಿಆರ್‌ಪಿ ಗಳಿಸಿತ್ತು?

  ತೆಲುಗು ಬಿಗ್‌ಬಾಸ್ ಸೀಸನ್ ಒನ್ 16.18 ಟಿಆರ್‌ಪಿ ಗಳಿಸಿತ್ತು. ತೆಲುಗು ಬಿಗ್‌ಬಾಸ್ ಸೀಸನ್ ಎರಡು 15.05 ಟಿಆರ್‌ಪಿ ಗಳಿಸಿತ್ತು. ಬಿಗ್‌ಬಾಸ್‌ನ ಮೂರನೇ ಸೀಸನ್ 17.09, ತೆಲುಗು ಬಿಗ್‌ಬಾಸ್‌ ನಾಲ್ಕನೇ ಸೀಸನ್ 18.05 ಟಿಆರ್‌ಪಿ ಗಳಿಸಿತ್ತು. ತೆಲುಗು ಬಿಗ್‌ಬಾಸ್‌ ಐದನೇ ಸೀಸನ್ 15.71 ಟಿಆರ್‌ಪಿ ಪಡೆದುಕೊಂಡಿತ್ತು. ಆದರೆ ಇದೇ ತಿಂಗಳ 4ನೇ ತಾರೀಖು ಪ್ರಸಾರವಾದ ಬಿಗ್‌ಬಾಸ್ ಸೀಸನ್ ಆರು ಕೇವಲ 8.86 ಟಿಆರ್‌ಪಿ ಪಡೆದುಕೊಂಡಿದೆ. ಅಲ್ಲಿಗೆ ಈ ಹಿಂದಿನ ಬಿಗ್‌ಬಾಸ್ ಸೀಸನ್‌ಗಳ ಗ್ರ್ಯಾಂಡ್ ಪ್ರೀಮಿಯರ್‌ಗಳ ಅರ್ಧದಷ್ಟು ಟಿಆರ್‌ಪಿ ಅನ್ನಷ್ಟೆ ಹೊಸ ಸೀಸನ್‌ನ ಗ್ರ್ಯಾಂಡ್ ಪ್ರೀಮಿಯರ್ ಪಡೆದುಕೊಂಡಿದೆ.

  ಟಿಆರ್‌ಪಿ ಕುಸಿಯಲು ಕಾರಣವೇನು?

  ಟಿಆರ್‌ಪಿ ಕುಸಿಯಲು ಕಾರಣವೇನು?

  ತೆಲುಗು ಬಿಗ್‌ಬಾಸ್ ಸೀಸನ್ 6ರ ಗ್ರ್ಯಾಂಡ್ ಪ್ರೀಮಿಯರ್‌ನ ಟಿಆರ್‌ಪಿ ಕುಸಿಯಲು ಮುಖ್ಯ ಕಾರಣ ಪ್ರೀಮಿಯರ್‌ಗೆ ಆಯ್ಕೆ ಮಾಡಿಕೊಂಡಿದ್ದ ದಿನ. ಬಿಗ್‌ಬಾಸ್ ಗ್ರ್ಯಾಂಡ್ ಪ್ರೀಮಿಯರ್‌ ಆದ ಸೆಪ್ಟೆಂಬರ್ 4 ರಂದೇ ಭಾರತ-ಪಾಕಿಸ್ತಾನದ ನಡುವೆ ಏಷ್ಯಾ ಕಪ್ ಟೂರ್ನಿಯ ಪಂದ್ಯ ನಡೆದಿತ್ತು. ಹೆಚ್ಚು ಮಂದಿ ಭಾರತ-ಪಾಕಿಸ್ತಾನ ಮ್ಯಾಚ್ ವೀಕ್ಷಿಸಿದರೇ ಹೊರತು ಬಿಗ್‌ಬಾಸ್ ನೋಡುವ ಆಸಕ್ತಿ ತೋರಿಸಲಿಲ್ಲ. ಹೀಗಾಗಿ ಶೋನ ಟಿಆರ್‌ಪಿ ಧಾರುಣವಾಗಿ ಕುಸಿದಿದೆ. ಆದರೆ ಈಗ ಪ್ರಸಾರವಾಗುತ್ತಿರುವ ದಿನವಹಿ ಎಪಿಸೋಡ್‌ಗಳ ಟಿಆರ್‌ಪಿಯಲ್ಲಿ ಚೇತರಿಕೆ ಕಂಡು ಬಂದಿದೆ ಎನ್ನಲಾಗುತ್ತಿದೆ.

  ಕನ್ನಡ ಬಿಗ್‌ಬಾಸ್ ಸೀಸನ್ 09 ಆರಂಭಕ್ಕೆ ಮುಹೂರ್ತ

  ಕನ್ನಡ ಬಿಗ್‌ಬಾಸ್ ಸೀಸನ್ 09 ಆರಂಭಕ್ಕೆ ಮುಹೂರ್ತ

  ಕನ್ನಡದಲ್ಲಿ ಸಹ ಟಿವಿ ಬಿಗ್‌ಬಾಸ್‌ ಹೊಸ ಸೀಸನ್ ಪ್ರಾರಂಭವಾಗಲಿದೆ. ಪ್ರಸ್ತುತ ಒಟಿಟಿ ಬಿಗ್‌ಬಾಸ್ ಜಾರಿಯಲ್ಲಿದ್ದು, ಈ ಶೋ ಇದೇ ವಾರಾಂತ್ಯಕ್ಕೆ ಮುಕ್ತಾಯವಾಗಲಿದೆ. ಒಂದು ವಾರದ ಗ್ಯಾಪ್ ಬಳಿಕ ಟಿವಿ ಬಿಗ್‌ಬಾಸ್ ಆರಂಭವಾಗಲಿದೆ. ಕನ್ನಡ ಬಿಗ್‌ಬಾಸ್ ಸೀಸನ್ 09 ಸೆಪ್ಟೆಂಬರ್ 24 ರಿಂದ ಪ್ರಾರಂಭವಾಗಲಿದ್ದು, ಈ ಬಾರಿಯ ಸೀಸನ್‌ನಲ್ಲಿ ಹಳೆಯ ಸ್ಪರ್ಧಿಗಲು, ಒಟಿಟಿ ಸ್ಪರ್ಧಿಗಳ ಜೊತೆಗೆ ಕೆಲವು ಹೊಸ ಸ್ಪರ್ಧಿಗಳು ಸಹ ಇರಲಿದ್ದಾರೆ. ಪ್ರಶಾಂತ್ ಸಂಬರ್ಗಿ, ಅನುಪಮಾ ಹಾಗೂ 'ನಾಗಿಣಿ' ಧಾರಾವಾಹಿ ಖ್ಯಾತಿಯ ದೀಪಿಕಾ ದಾಸ್ ಅವರುಗಳು ಟಿವಿ ಬಿಗ್‌ಬಾಸ್‌ನಲ್ಲಿ ಪಾಲ್ಗೊಳ್ಳುವುದು ಬಹುತೇಕ ಖಾತ್ರಿಯಾಗಿದೆ.

  English summary
  Huge drop in Telugu Bigg Boss season 06 grand premier TRP. Program hosted by Nagarjuna Akkineni.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X