»   » 'ಪುಟ್ಟಗೌರಿ ಮದುವೆ' ಖ್ಯಾತಿಯ ರಂಜನಿಗಿದ್ದ ಬಹುದೊಡ್ಡ ಆಸೆ ಇದು.!

'ಪುಟ್ಟಗೌರಿ ಮದುವೆ' ಖ್ಯಾತಿಯ ರಂಜನಿಗಿದ್ದ ಬಹುದೊಡ್ಡ ಆಸೆ ಇದು.!

Posted By:
Subscribe to Filmibeat Kannada
Putta Gowri Maduve serial actress Ranjini Raghavan speaks about her career in Super Talk Time

'ಪುಟ್ಟಗೌರಿ ಮದುವೆ' ಧಾರಾವಾಹಿಯನ್ನು ಬಿಟ್ಟೂಬಿಡದೆ ನೋಡುತ್ತಿರುವವರಿಗೆ 'ಗೌರಿ' ಪರಿಚಯ ಇದ್ದೇ ಇರುತ್ತೆ. ಸೀರಿಯಲ್ ನಲ್ಲಿ 'ಗೌರಿ' ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ರಂಜಿನಿ ಅಭಿನಯ ನಿಮಗೆಲ್ಲ ಇಷ್ಟ ಆಗಿರಬಹುದು. ಆದ್ರೆ, ನಟನೆ ಬಗ್ಗೆ ರಂಜನಿಗೆ ಎಳ್ಳಷ್ಟು ಆಸಕ್ತಿಯೇ ಇರಲಿಲ್ಲ ಎಂಬುದು ನಿಮಗೆ ಗೊತ್ತಿರ್ಲಿಕ್ಕಿಲ್ಲ.

ಪ್ರತಿಷ್ಟಿತ ಕಾಲೇಜಿನಲ್ಲಿ ಎಂ.ಬಿ.ಎ ವ್ಯಾಸಂಗ ಮಾಡಿರುವ ರಂಜನಿ ರಾಘವನ್ ಗೆ ಎಚ್.ಆರ್.ಮ್ಯಾನೇಜರ್ ಆಗಬೇಕು ಎಂಬ ಆಸೆ ಇತ್ತಂತೆ. ಆದ್ರೆ, ಎಂ.ಬಿ.ಎ ಫೈನಲ್ ಸೆಮಿಸ್ಟರ್ ಓದುತ್ತಿರುವಾಗ ಸಿನಿಮಾಗಳ ಅವಕಾಶ ಬರಲು ಶುರು ಆಯ್ತಂತೆ.

 ''I always wanted to be HR Manager'' says Ranjani

ಹಳ್ಳಿ ಹುಡುಗಿ ಪಾತ್ರಗಳೇ ಬರುತ್ತಿದ್ದರಿಂದ, ಅದಕ್ಕೆ 'ನೋ' ಎಂದ 'ಪುಟ್ಟಗೌರಿ' ಕಿರುತೆರೆ ಲೋಕದಲ್ಲಿ ಜನಪ್ರಿಯತೆ ಪಡೆದು ಇದೀಗ ಸ್ಯಾಂಡಲ್ ವುಡ್ ಗೂ ಪದಾರ್ಪಣೆ ಮಾಡಿದ್ದಾರೆ.

'ಅಗ್ನಿಸಾಕ್ಷಿ' ಸಿದ್ಧಾರ್ಥ್-ಸನ್ನಿಧಿ ಬಗ್ಗೆ ಹರಿದಾಡಿದ ಗಾಳಿ ಸುದ್ದಿ ನಿಜವೇ.?

ಒಂದ್ವೇಳೆ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿರದಿದ್ದರೆ, ಖಂಡಿತ ಪ್ಲೇ ಬ್ಯಾಕ್ ಸಿಂಗರ್ ಆಗುತ್ತಿದ್ದೆ ಎನ್ನುತ್ತಾರೆ ನಟಿ ರಂಜನಿ. ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿರುವ ರಂಜನಿಗೆ ಗಾಯಕಿ ಆಗಬೇಕೆಂಬ ಮಹಾದಾಸೆ ಕೂಡ ಇದೆ.

ಅಷ್ಟಕ್ಕೂ, ಇದನ್ನೆಲ್ಲ ರಂಜನಿ ಬಾಯ್ಬಿಟ್ಟಿದ್ದು ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ.

'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ನಟಿ ರಂಜನಿ, ''ನನಗೆ ಎಚ್.ಆರ್.ಮ್ಯಾನೇಜರ್ ಆಗಬೇಕು, ಪ್ಲೇ ಬ್ಯಾಕ್ ಸಿಂಗರ್ ಆಗಬೇಕು ಎಂಬ ಆಸೆ ಇತ್ತು'' ಎಂದು ಹೇಳಿದರು.

English summary
''I always wanted to be HR Manager'' says Ranjani in Colors Super Channel's popular show Super Talk Time.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada