»   » ತುಂಬಾ ತಪ್ಪುಗಳನ್ನು ಮಾಡಿದ್ದಾರಂತೆ ನಟಿ ಶ್ರುತಿ ಹರಿಹರನ್.!

ತುಂಬಾ ತಪ್ಪುಗಳನ್ನು ಮಾಡಿದ್ದಾರಂತೆ ನಟಿ ಶ್ರುತಿ ಹರಿಹರನ್.!

Posted By:
Subscribe to Filmibeat Kannada

'ಲೂಸಿಯಾ' ಚಿತ್ರದ ಮೂಲಕ ಕನ್ನಡ ಬೆಳ್ಳಿ ಪರದೆ ಮೇಲೆ 'ನಾಯಕಿ' ಆಗಿ ಮಿಂಚಲಾರಂಭಿಸಿದ ಶ್ರುತಿ ಹರಿಹರನ್, 'ರಾಟೆ', 'ಗೋಧಿ ಬಣ್ಣ ಸಾಧಾರಣ ಮೈಕಟ್ಟು', 'ಮಾದ ಮತ್ತು ಮಾನಸಿ' ಸೇರಿದಂತೆ ಅನೇಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 'ಬ್ಯೂಟಿಫುಲ್ ಮನಸ್ಸುಗಳು' ಚಿತ್ರದಲ್ಲಿನ ತಮ್ಮ ಅಭಿನಯಕ್ಕೆ ರಾಜ್ಯ ಪ್ರಶಸ್ತಿ ಕೂಡ ಮುಡಿಗೇರಿಸಿಕೊಂಡಿದ್ದಾರೆ.

ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ 'ತಾರಕ್' ಸಿನಿಮಾದಲ್ಲಿ ಅಭಿನಯಿಸಿರುವ ಶ್ರುತಿ ಹರಿಹರನ್ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಮೇಲೆ ಕೆಲವು ತಪ್ಪುಗಳನ್ನು ಮಾಡಿದ್ದಾರಂತೆ.

ಹಾಗಂತ ಸ್ವತಃ ಶ್ರುತಿ ಹರಿಹರನ್ ಹೇಳಿಕೊಂಡಿದ್ದಾರೆ. ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಭಾಗವಹಿಸಿದ ನಟಿ ಶ್ರುತಿ ಹರಿಹರನ್, ತಮ್ಮ ಸಿನಿಮಾ ಜರ್ನಿ ಬಗ್ಗೆ ಮಾತನಾಡುವಾಗ 'ತಪ್ಪು'ಗಳ ಬಗ್ಗೆ ಉಲ್ಲೇಖಿಸಿದ್ದಾರೆ. ಮುಂದೆ ಓದಿರಿ...

ಅಕುಲ್ ಪ್ರಶ್ನೆಗೆ ಶ್ರುತಿ ಉತ್ತರ..

''ಶ್ರುತಿ ಹರಿಹರನ್ ಇದೀಗ ದಿ ಮೋಸ್ಟ್ ಬಿಜಿಯೆಸ್ಟ್ ಆಕ್ಟ್ರೆಸ್. ಸಿಕ್ಕಾಪಟ್ಟೆ ಸಿನಿಮಾಗಳನ್ನ ಮಾಡುತ್ತಿದ್ದಾರೆ. ಒಂದು ಕಡೆ 'ವಿಸ್ಮಯ' ಸಿನಿಮಾ ರಿಲೀಸ್ ಆಗಿದೆ'' ಅಂತ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದ ನಿರೂಪಕ ಅಕುಲ್ ಬಾಲಾಜಿ ಕೇಳುತ್ತಿದ್ದಂತೆಯೇ, ನಟಿ ಶ್ರುತಿ ಹರಿಹರನ್ ಕೊಟ್ಟ ಉತ್ತರ ಹೀಗಿತ್ತು....

ತಪ್ಪುಗಳನ್ನು ಮಾಡಿದ್ದೇನೆ

''ನನ್ನ ಸಿನಿಮಾ ಜರ್ನಿ ತುಂಬಾ ಚೆನ್ನಾಗಿದೆ. ಒಳ್ಳೆಯ ಪಯಣ, ಅದರಲ್ಲಿ ನಾನು ತುಂಬಾ ಕಲಿತಿದ್ದೇನೆ. ತುಂಬಾ ತಪ್ಪುಗಳನ್ನು ಮಾಡಿದ್ದೇನೆ'' ಎಂದರು ಶ್ರುತಿ ಹರಿಹರನ್.

ಮಾಡಿರುವ ತಪ್ಪೇನು.?

''ಏನು ತಪ್ಪು ಮಾಡಿದ್ದೀರಿ.?'' ಎಂದು ಅಕುಲ್ ಬಾಲಾಜಿ ಕೇಳಿದ್ದಕ್ಕೆ, ಸ್ಪಷ್ಟವಾಗಿ... ನೇರವಾಗಿ ಉತ್ತರ ಕೊಡದೆ ಮಾರ್ಮಿಕವಾಗಿ ಶ್ರುತಿ ಹೇಳಿದಿಷ್ಟು - ''ಕೆಲವೊಂದು ಬಾರಿ ಮಾತನಾಡುವ ವಿಚಾರದಲ್ಲಿ ಗೊತ್ತಿರುವುದಿಲ್ಲ. ನಮ್ಮಂಥವರು ಇಂಡಸ್ಟ್ರಿ ಒಳಗೆ ಬಂದಾಗ, ಅದು ಒಂದು ದೊಡ್ಡ ಸಮುದ್ರ ತರಹ. ಅದರಲ್ಲಿ ನಾವೊಂದು ಚಿಕ್ಕ ಮೀನು ಇದ್ದ ಹಾಗೆ. ಒಳಗೆ ಹೋದಾಗ ಆ ಲೋಕವೇ ಬೇರೆ ತರಹ ಕಾಣುತ್ತೆ. ಈ ತರಹ ಟಾಕ್ ಶೋಗೆ ಬಂದಾಗ ಏನು ಹೇಳಬೇಕು ಅಂತ ಗೊತ್ತಿರುವುದಿಲ್ಲ''

ಗೊತ್ತಿಲ್ಲದೇ ಮಾತನಾಡಿ ತಪ್ಪು ಮಾಡಿದ್ದಾರಾ.?

ಚಿತ್ರರಂಗಕ್ಕೆ ಕಾಲಿಟ್ಟ ಹೊಸದರಲ್ಲಿ ಗೊತ್ತಿಲ್ಲದೇ ಮಾತನಾಡಿದ್ದು ತಪ್ಪು ಎಂದು ನಟಿ ಶ್ರುತಿ ಹರಿಹರನ್ ಗೆ ಅನಿಸುತ್ತಿದ್ಯಾ.? ನಮಗಂತೂ ಗೊತ್ತಿಲ್ಲ. ಆದ್ರೆ, 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಮಾತ್ರ ಎಲ್ಲ ಪ್ರಶ್ನೆಗಳಿಗೂ ಶ್ರುತಿ ಜಾಣ್ಮೆಯಿಂದ ಉತ್ತರಿಸಿದ್ದಾರೆ.

English summary
''I have done lot of mistakes'' says Kannada Actress Sruthi Hariharan in Colors Super Channel's popular show 'Super Talk Time'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada