For Quick Alerts
ALLOW NOTIFICATIONS  
For Daily Alerts

  ಬಿಗ್ ಬಾಸ್ ರಿಯಾಲಿಟಿ ಶೋ ನಿರೂಪಕನಿಗಾಗಿ 'ಸರ್ಚ್'

  By ಜೇಮ್ಸ್ ಮಾರ್ಟಿನ್
  |

  ಕಾಲ ಇದ್ದಂತೆ ಇರಲ್ಲ. ಕ್ಷಣ ಕ್ಷಣ ಬದಲಾಗುತ್ತಿರುತ್ತದೆ. ಸ್ವರ್ಗ ನರಕಗಳಂತೆ ಜೀವನ ಕೂಡಾ ಬದಲಾಗುತ್ತದೆ ಎಂದು ಹೇಳುತ್ತಾ ಎಲ್ಲರ ಮನ ಗೆದ್ದಿದ್ದ ಬಾಲಿವುಡ್ ನ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಅವರು ಮುಂದಿನ ಬಿಗ್ ಬಾಸ್ ಸರಣಿಯಲ್ಲಿ ಕಾಣಿಸಿಕೊಳ್ಳುವುದು ಅಸಾಧ್ಯ ಎಂಬುದು ಖಚಿತವಾಗಿದೆ. ಹೀಗಾಗಿ ಹೊಸ ನಿರೂಪಕನಿಗಾಗಿ ಸರ್ಚ್ ನಡೆಡಿದೆ.

  ಕೃಷ್ಣಮೃಗ ಬೇಟೆ ಪ್ರಕರಣ, ಗುದ್ದೋಡು ಪ್ರಕರಣ, ಸಾಲು ಸಾಲು ಚಿತ್ರಗಳ ಬಿಡುಗಡೆ, ಶೂಟಿಂಗ್ ನಡುವೆ ಬಿಗ್ ಬಾಸ್ ಕಾರ್ಯಕ್ರಮ ನಿರೂಪಣೆ ನನ್ನಿಂದ ಸಾಧ್ಯವಿಲ್ಲ ಎಂದು ಸಲ್ಲೂ ನೇರವಾಗಿ ಹೇಳಿದ್ದಾನಂತೆ. ಜತೆಗೆ ಕಳೆದ ಬಾರಿ ಸೀಸನ್ 7 ರಲ್ಲಿ ಸಲ್ಮಾನ್ ವಿರುದ್ಧ ಅನೇಕ ಆರೋಪಗಳು ಕೇಳಿ ಬಂದಿತ್ತು. ಅರ್ಮಾನ್ ಹಾಗೂ ತನೀಶಾ ಪರ ಸಲ್ಲೂ ನಿರ್ಣಯ ಕೈಗೊಳ್ಳುತ್ತಾ ಸ್ವಜನಪಕ್ಷಪಾತ ಮಾಡುತ್ತಿದ್ದಾರೆ ಎಂಬ ಗುರುತರ ಆರೋಪ ಕೇಳಿ ಸಲ್ಲೂ ಕೆರಳಿದ್ದ.[ಗೌಹರ್ ಖಾನ್ ಗೋವಾದಲ್ಲಿ ವಿಹಾರ]

  ಇದಲ್ಲದೆ ಸ್ವರ್ಗ ನರಕ ಕಲ್ಪನೆ ಹೊರ ತಂದ ಕಲರ್ಸ್ ವಾಹಿನಿಯ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಈಗ ಕೋರ್ಟ್ ಮೆಟ್ಟಿಲೇರಿತ್ತು. ಹಲವಾರು ಕೇಸುಗಳನ್ನು ಕೊರಳಿಗೆ ಸುತ್ತಿಕೊಂಡಿರುವ ನಿರೂಪಕ ಸಲ್ಮಾನ್ ಖಾನ್ ಅವರ ಮೇಲೆ ಹೊಸದಾಗಿ ದೂರು ದಾಖಲಾಗಿತ್ತು. ಮುಸ್ಲಿಂ ಭಾವನೆಗಳಿಗೆ ಸಲ್ಮಾನ್ ಖಾನ್ ಅವರು ಧಕ್ಕೆ ತಂದಿದ್ದಾರೆ ಎಂಬ ಆರೋಪದ ಮೇಲೆ ದೂರು ಸಲ್ಮಾನ್ ವಿರುದ್ಧ ಎಫ್ ಐಆರ್ ದಾಖಲಿಸಲಾಗಿತ್ತು.

  ಬಿಗ್ ಬಾಸ್ 8 ರ ನಿರೂಪಣೆ ಯಾರು ಮಾಡಬಹುದು, ಬಿಗ್ ಬಾಸ್ 7 ರ ಸ್ಪರ್ಧಿಗಳ ಕಥೆ ಏನಾಗಿದೆ? ಸಲ್ಮಾನ್ ಇಲ್ಲದೆ ಬಿಗ್ ಬಾಸ್ 'ಕಿಕ್' ನೀಡುತ್ತಾ ಕಾದು ನೋಡಬೇಕಿದೆ.

  ಬಿಗ್ ಬಾಸ್ ನಂತರ ಸ್ಪರ್ಧಿಗಳ ರಿಯಾಲಿಟಿ

  ಬಿಗ್ ಬಾಸ್ ಪ್ರಶಸ್ತಿಗೆದ್ದ ಮೊದಲ ಮಹಿಳಾ ಸ್ಪರ್ಧಿ ಗೌಹರ್ ತನ್ನ ಗೆಳಯ ಕುಶಾಲ್ ಜತೆ ಗೋವಾದಲ್ಲಿ ಸುತ್ತಾಡಿ ಕೊನೆಗೆ ಎಂಗೇಜ್ ಆದರು. ತನಿಶಾ ಹಾಗೂ ಅರ್ಮಾನ್ ಕೂಡಾ ಎಂಗೇಜ್ ಆಗಿದ್ದಾರೆ. ಸಂಗ್ರಾಮ್ ಸಿಂಗ್ ತನ್ನ ಗೆಳತಿ ಪಾಯಲ್ ರೋಹ್ಟಗಿ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

  ಸುನಿಲ್ ಗ್ರೋವರ್ ಅಲಿಯಾಸ್ ಗುತ್ತಿ

  ಕಲರ್ಸ್ ವಾಹಿನಿಯ ಕಾಮಿಡಿ ನೈಟ್ಸ್ ಖ್ಯಾತಿಯ ಸುನಿಲ್ ಗ್ರೋವರ್ ಅವರ ಹೆಸರು ಅಭಿಮಾನಿಗಳು ಸೂಚಿಸಿದ್ದಾರೆ. ಗುತ್ತಿ ಎಂಬ ಕ್ಯಾರೆಕ್ಟರ್ ಮೂಲಕ ಮನೆ ಮಾತಾಗಿದ್ದಾರೆ.

  ಕಿಂಗ್ ಖಾನ್ ಶಾರುಖ್

  ಕಿಂಗ್ ಖಾನ್ ಶಾರುಖ್ ಅವರು ಸದ್ಯಕ್ಕೆ ಯಾವುದೇ ರಿಯಾಲಿಟಿ ಶೋ ಒಪ್ಪಿಕೊಂಡಿಲ್ಲ ,ಕೆಕೆಆರ್ ಐಪಿಎಲ್ ಪಂದ್ಯಗಳು ಇಲ್ಲ. ದೊಡ್ಡ ಬಜೆಟ್ ಚಿತ್ರವೊಂದೆರಡು ಬಿಟ್ಟರೇ ಶಾರುಖ್ ಸೂಕ್ತ ಆಯ್ಕೆ ಎನ್ನಲಾಗಿದೆ.

  ಬಿಗ್ ಬಾಸ್ ಗೆ ಬಿಗ್ 'ಬಿ'

  ಬಿಗ್ ಬಾಸ್ ರಿಯಾಲಿಟಿ ಶೋ ನಿರೂಪಕರಾಗಿ ಕಾರ್ಯಕ್ರಮ ನಡೆಸಿಕೊಟ್ಟ ಅನುಭವ(ಸೀಸನ್ 3) ವಿರುವ ಅಮಿತಾಬ್ ಬಚ್ಚನ್ ಅವರನ್ನು ಮತ್ತೆ ಕರೆಸಿಕೊಳ್ಳುವ ಸಾಧ್ಯತೆಯಿದೆ. ಆದರೆ, ಅಮಿತಾಬ್ ಸದ್ಯಕ್ಕೆ ಟಿವಿ ಸರಣಿ 'ಯುದ್ಧ್' ನಲ್ಲಿ ನಿರತರಾಗಿದ್ದಾರೆ. ಆರ್ ಭಾಲ್ಕಿ ಚಿತ್ರ ಕೂಡಾ ಜಾರಿಯಲ್ಲಿದೆ.

  ಅಜಯ್ ದೇವಗನ್ ಅಚ್ಚರಿ

  ಸಾಹಸ ಪ್ರಧಾನ ಚಿತ್ರಗಳಂತೆ ಹಾಸ್ಯ ಚಿತ್ರಗಳಲ್ಲೂ ಮಿಂಚಿರುವ ಅಜಯ್ ದೇವಗನ್ ಅವರನ್ನು ಕರೆ ತಂದು ಟಿವಿ ಲೋಕದಲ್ಲಿ ಅಚ್ಚರಿ ಮೂಡಿಸಲು ಆಯೋಜಕರು ಯತ್ನಿಸುತ್ತಿದ್ದಾರಂತೆ.

  ರಣಬೀರ್ ಕಪೂರ್ ಡೌಟ್

  ರಣಬೀರ್ ಕಪೂರ್ ಡೌಟ್ಎನಿಸುತ್ತದೆ. ಸಲ್ಮಾನ್ ಇಲ್ಲದಿದ್ದರೆ ರಣಬೀರ್ ಪಕ್ಕಾ ಎನ್ನಲಾಗಿತ್ತು. ಆದರೆ, ರಿಷಿ ಕಪೂರ್ ದಂಪತಿ ರಣಬೀರ್ ಗೆ ಕಡಿವಾಣ ಹಾಕಿದ್ದಾರೆ. ಜತೆಗೆ ಗೆಳತಿ ಕತ್ರೀನಾ ಕೂಡಾ ಮತ್ತೆ ಟೂರ್ ಹೋಗೋಣ ಬಾ ಎನ್ನುತ್ತಿದ್ದಾಳೆ. ರಣಬೀರ್ ಗೆ ಇಷ್ಟವಿದ್ದರೂ ಬಿಗ್ ಬಾಸ್ ಗೆ ಬರೋಕೆ ಆಗುತ್ತಿಲ್ಲ.

  ಹಾಟ್ ನಟ ರಣವೀರ್ ಸಿಂಗ್

  ಯುವ ಪೀಳಿಗೆಯ ಹಾಟ್ ನಟ ರಣವೀರ್ ಸಿಂಗ್ ಕರೆಸಿಕೊಳ್ಳುವ ಯತ್ನವೂ ನಡೆದಿದೆ

  ಕಲರ್ಸ್ ವಾಹಿನಿಯಿಂದ ಬದಲು

  ಅಂದ ಹಾಗೆ, ಈ ಬಾರಿ ಕಲರ್ಸ್ ವಾಹಿನಿ ಬದಲಿಗೆ ಲೈಫ್ ಓಕೆ ಚಾನೆಲ್ ನಲ್ಲಿ ಬಿಗ್ ಬಾಸ್ 8 ಪ್ರಸಾರವಾಗುವುದು ಖಾತ್ರಿಯಾಗಿದೆ. ಯಾವಾಗ? ಯಾರು ನಿರೂಪಕ? ಯಾರು ಸ್ಪರ್ಧಿಗಳು? ವಿವರಗಳು ಸಿಕ್ಕಾಗ ನಿಮ್ಮ ಮುಂದಿಡುತ್ತೇವೆ

  English summary
  As usual rumours about Salman Khan not hosting the upcoming Bigg Boss season is making rounds. If it's not going to be Salman Khan after all, who would make a good or better host for this controversial reality show?

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more