For Quick Alerts
  ALLOW NOTIFICATIONS  
  For Daily Alerts

  ಶಾಸ್ತ್ರೋಕ್ತವಾಗಿ ವೈವಾಹಿಕ ಬದುಕಿಗೆ ನಾಂದಿ ಹಾಡಿದ ನಿತ್ಯ ರಾಮ್-ಗೌತಮ್

  |

  ನಟ ರಿಷಿ, ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ಹಿತಾ ಚಂದ್ರಶೇಖರ್, ಕಿರಣ್ ಶ್ರೀನಿವಾಸ್ ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದೀಗ ಕನ್ನಡ ಚಿತ್ರರಂಗದಲ್ಲೂ ಗುರುತಿಸಿಕೊಂಡಿರುವ ಕಿರುತೆರೆ ನಟಿ ನಿತ್ಯ ರಾಮ್ ಸರದಿ.

  ಡಿಂಪಲ್ ಕ್ವೀನ್ ರಚಿತಾ ರಾಮ್ ಸಹೋದರಿ ನಿತ್ಯ ರಾಮ್ ಕಲ್ಯಾಣ ಅದ್ಧೂರಿಯಾಗಿ ಜರುಗಿದೆ. ಇಂದು ಬೆಳಗ್ಗೆ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ನಿತ್ಯ ರಾಮ್ ಮತ್ತು ಗೌತಮ್ ಸಪ್ತ ಪದಿ ತುಳಿದರು.

  ಐದು ದಿನಗಳ ಹಿಂದೆಯಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದ ನಿತ್ಯ ರಾಮ್ ಮತ್ತು ಗೌತಮ್ ವಿವಾಹ ಮಹೋತ್ಸವ ಇವತ್ತು ಶಾಸ್ತ್ರೋಕ್ತವಾಗಿ ನಡೆಯಿತು. ಮದುವೆ ಫೋಟೋಗಳನ್ನು ನೀವೇ ನೋಡಿರಿ...

  ಹ್ಯಾಪಿ ಮ್ಯಾರೀಡ್ ಲೈಫ್ ನಿತ್ಯ ರಾಮ್

  ಹ್ಯಾಪಿ ಮ್ಯಾರೀಡ್ ಲೈಫ್ ನಿತ್ಯ ರಾಮ್

  ಇವತ್ತು (ಡಿಸೆಂಬರ್ 6) ಬೆಳಗ್ಗೆ ಇದ್ದ ಶುಭ ಮುಹೂರ್ತದಲ್ಲಿ ನಟಿ ನಿತ್ಯ ರಾಮ್ ಕೊರಳಿಗೆ ಗೌತಮ್ ಮಾಂಗಲ್ಯಧಾರಣೆ ಮಾಡಿದರು. ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ನಿತ್ಯ ರಾಮ್-ಗೌತಮ್ ಮದುವೆ ಸಾಂಪ್ರದಾಯಿಕವಾಗಿ ನಡೆಯಿತು.

  ನಿಶ್ಚಿತಾರ್ಥ ಸಡಗರದಲ್ಲಿ ನಿತ್ಯ ರಾಮ್: ಹುಡುಗ ಯಾರು.?ನಿಶ್ಚಿತಾರ್ಥ ಸಡಗರದಲ್ಲಿ ನಿತ್ಯ ರಾಮ್: ಹುಡುಗ ಯಾರು.?

  ಚಿತ್ರರಂಗದವರು ಸಾಕ್ಷಿ

  ಚಿತ್ರರಂಗದವರು ಸಾಕ್ಷಿ

  ನಿತ್ಯ ರಾಮ್ ಮತ್ತು ಗೌತಮ್ ಮದುವೆಗೆ ಮನೋಹರ್ ಜೋಷಿ ಸೇರಿದಂತೆ ಕಿರುತೆರೆ ಲೋಕದ ನಟ-ನಟಿಯರು, ಚಿತ್ರರಂಗದವರು ಸಾಕ್ಷಿ ಆದರು.

  'ನಂದಿನಿ' ಸೀರಿಯಲ್ ನಲ್ಲಿ ನಿತ್ಯ ರಾಮ್ ಬಿಟ್ಟು ಹೋದ ಜಾಗಕ್ಕೆ ಬಂದ್ರು 'ಈ' ನಟಿ.!'ನಂದಿನಿ' ಸೀರಿಯಲ್ ನಲ್ಲಿ ನಿತ್ಯ ರಾಮ್ ಬಿಟ್ಟು ಹೋದ ಜಾಗಕ್ಕೆ ಬಂದ್ರು 'ಈ' ನಟಿ.!

  ಮಿರಿ ಮಿರಿ ಮಿಂಚಿದ ನಿತ್ಯ ರಾಮ್

  ಮಿರಿ ಮಿರಿ ಮಿಂಚಿದ ನಿತ್ಯ ರಾಮ್

  ಮುಹೂರ್ತಕ್ಕಾಗಿ ಗೋಲ್ಡನ್ ಬಣ್ಣದ ರೇಶ್ಮೆ ಸೀರೆ ಧರಿಸಿ ಮಿರಿ ಮಿರಿ ಮಿನುಗುತ್ತಿದ್ದರು ವಧು ನಿತ್ಯ ರಾಮ್. ಇನ್ನೂ ವರ ಗೌತಮ್ ಬಿಳಿ ಬಣ್ಣದ ರೇಶ್ಮೆ ಪಂಚೆ-ಶಲ್ಯ ತೊಟ್ಟಿದ್ದರು.

  ಮೆಹಂದಿ, ಅರಿಶಿನ ಶಾಸ್ತ್ರದ ಖುಷಿಯಲ್ಲಿ ರಚಿತಾ ಸಹೋದರಿ ನಿತ್ಯ ರಾಮ್ಮೆಹಂದಿ, ಅರಿಶಿನ ಶಾಸ್ತ್ರದ ಖುಷಿಯಲ್ಲಿ ರಚಿತಾ ಸಹೋದರಿ ನಿತ್ಯ ರಾಮ್

  ಅರೇಂಜ್ಡ್ ಮ್ಯಾರೇಜ್

  ಅರೇಂಜ್ಡ್ ಮ್ಯಾರೇಜ್

  ನಿತ್ಯ ರಾಮ್ ಮದುವೆಗಾಗಿ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಸ್ಪೆಷಲ್ ಸೆಟ್ ಹಾಕಲಾಗಿತ್ತು. ಅಂದ್ಹಾಗೆ, ನಿತ್ಯ ರಾಮ್ ಮತ್ತು ಗೌತಮ್ ರದ್ದು ಅಪ್ಪಟ ಅರೇಂಜ್ಡ್ ಮ್ಯಾರೇಜ್. ನಿತ್ಯ ರಾಮ್ ತಾಯಿಯ ಸ್ನೇಹಿತರ ಮಗ ಈ ವರ ಗೌತಮ್. ಫ್ಯಾಮಿಲಿ ಮೂಲಕ ಪರಿಚಯ ಆದ ಗೌತಮ್ ರನ್ನೇ ಇಂದು ನಿತ್ಯ ರಾಮ್ ವರಿಸಿದ್ದಾರೆ.

  ನಿತ್ಯ ರಾಮ್ 'ನಟಿ' ಅನ್ನೋದೇ ಭಾವಿ ಪತಿ ಗೌತಮ್ ಗೆ ಗೊತ್ತಿರಲಿಲ್ಲ.! ಅಸಲಿಗೆ ಯಾರೀತ.?ನಿತ್ಯ ರಾಮ್ 'ನಟಿ' ಅನ್ನೋದೇ ಭಾವಿ ಪತಿ ಗೌತಮ್ ಗೆ ಗೊತ್ತಿರಲಿಲ್ಲ.! ಅಸಲಿಗೆ ಯಾರೀತ.?

  ಯಾರೀ ಗೌತಮ್.?

  ಯಾರೀ ಗೌತಮ್.?

  ಆಸ್ಟ್ರೇಲಿಯಾದಲ್ಲಿ ಸೆಟಲ್ ಆಗಿರುವ ಉದ್ಯಮಿ ಗೌತಮ್. ಕಳೆದ ಏಪ್ರಿಲ್ ನಲ್ಲಿ ಆಸ್ಟ್ರೇಲಿಯಾದಿಂದ ಭಾರತಕ್ಕೆ ಗೌತಮ್ ಬಂದಿದ್ದರು. ಅಂದು ನಿತ್ಯ ರಾಮ್ ಮತ್ತು ಗೌತಮ್ ಭೇಟಿ ಆಗಿ ಮಾತುಕತೆ ನಡೆಸಿದ್ದರು. ಇಬ್ಬರು ಪರಸ್ಪರ ಇಷ್ಟ ಪಟ್ಟ ನಂತರ ಮದುವೆ ಮಾತುಕತೆ ನಡೆದಿದೆ.

  ಅರಿಶಿನ ಶಾಸ್ತ್ರ

  ಅರಿಶಿನ ಶಾಸ್ತ್ರ

  ನಿನ್ನೆ ನಿತ್ಯ ರಾಮ್ ಮನೆಯಲ್ಲಿ ಸಾಂಪ್ರದಾಯಿಕವಾಗಿ ಅರಿಶಿನ ಶಾಸ್ತ್ರ ನಡೆದಿತ್ತು. ಅರಿಶಿನ ಶಾಸ್ತ್ರಕ್ಕಾಗಿ ಬಿಳಿ ಬಣ್ಣದ ಉಡುಗೆ ಮತ್ತು ಫ್ಲೋರಲ್ ಆಭರಣವನ್ನು ನಿತ್ಯ ರಾಮ್ ತೊಟ್ಟಿದ್ದರು. ಸಹೋದರಿ ಜೊತೆಗೆ ರಚಿತಾ ರಾಮ್ ಕೂಡ ಸಂತಸದಲ್ಲಿದ್ದರು.

  ಬಳೆ ಶಾಸ್ತ್ರದಲ್ಲಿ ರಚಿತಾ ರಾಮ್

  ಬಳೆ ಶಾಸ್ತ್ರದಲ್ಲಿ ರಚಿತಾ ರಾಮ್

  ಅರಿಶಿನ ಶಾಸ್ತ್ರ ಮುಗಿದ ಬಳಿಕ ಬಳೆ ಶಾಸ್ತ್ರ ನಡೆದಿತ್ತು. ಬಳೆ ಶಾಸ್ತ್ರದಲ್ಲಿ ಹಸಿರು ಗಾಜಿನ ಬಳೆಗಳನ್ನು ತೊಟ್ಟು ನಟಿ ರಚಿತಾ ರಾಮ್ ಖುಷಿ ಪಟ್ಟರು.

  ಪ್ರಪೋಸ್ ಮಾಡಿದ ಗೌತಮ್

  ಪ್ರಪೋಸ್ ಮಾಡಿದ ಗೌತಮ್

  ನಿನ್ನೆ ನಡೆದ ಮೆಹಂದಿ ಮತ್ತು ಸಂಗೀತ ಸಮಾರಂಭದಲ್ಲಿ ನಿತ್ಯ ರಾಮ್ ಗೆ ಕೆಂಪು ಗುಲಾಬಿ ಕೊಟ್ಟು ಗೌತಮ್ ಪ್ರಪೋಸ್ ಮಾಡಿದ್ದರು. ರೋಮ್ಯಾಂಟಿಕ್ ಹಾಡುಗಳಿಗೆ ಹೆಜ್ಜೆ ಹಾಕುತ್ತಾ, ನಿತ್ಯ ರಾಮ್ ಕೆನ್ನೆಗೆ ಮುತ್ತಿಟ್ಟಿದ್ದರು ಗೌತಮ್.

  English summary
  Kannada Actress Rachita Ram sister, TV Actress Nithya Ram got married to Gowtham today (December 6th).

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X