For Quick Alerts
  ALLOW NOTIFICATIONS  
  For Daily Alerts

  ಕಲರ್ಸ್ ನ ಇಂಡಿಯಾ ಗಾಟ್ ಟ್ಯಾಲೆಂಟ್ ಫಸ್ಟ್ ಲುಕ್

  By ಜೇಮ್ಸ್ ಮಾರ್ಟಿನ್
  |

  ಕಲರ್ಸ್ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ ಇಂಡಿಯಾ ಗಾಟ್ ಟ್ಯಾಲೆಂಟ್(India's Got Talent) ರಿಯಾಲಿಟಿ ಶೋನ ಐದನೇ ಆವೃತ್ತಿ ವಿಶಿಷ್ಟವಾಗಿ ರೂಪುಗೊಂಡಿದ್ದು, ಫಸ್ಟ್ ಲುಕ್ ಇಲ್ಲಿದೆ.

  ದರ್ಬಾರ್ ಸೆಟ್ ನಲ್ಲಿ ಜಡ್ಜ್ ಗಳಾದ ಕಿರಣ್ ಖೇರ್, ಕರಣ್ ಜೋಹರ್ ಹಾಗೂ ಮಲೈಕಾ ಅರೋರಾ ಖಾನ್ ಕಾಣಿಸಿಕೊಂಡಿದ್ದಾರೆ. ಈ ಜನಪ್ರಿಯ ಶೋಗೆ ಕನ್ನಡ ಮಣ್ಣಿನ ಪ್ರತಿಭೆಗಳು ಮತ್ತೆ ಆಯ್ಕೆಗೊಂಡಿರುವ ಸುದ್ದಿ [ಇಲ್ಲಿದೆ ಓದಿ] ಗೊತ್ತೇ ಇದೆ.

  ಅನಾರ್ಕಲಿ ಡ್ರೆಸ್ ತೊಟ್ಟ ಮಲೈಕಾ, ರೇಷ್ಮೆ ಸೀರೆಯುಟ್ಟ ಕಿರಣ್, ಕಪ್ಪು ಬಣ್ಣದ ಜೋಧ್ ಪುರಿ ದಿರಿಸಿನಲ್ಲಿ ಕರಣ್ ಸಕತ್ ಆಗಿ ಕಾಣುತ್ತಿದ್ದಾರೆ. ದರ್ಬಾರ್ ನಲ್ಲಿ ಕುಳಿತು ಪ್ರತಿಭಾವಂತ ಅಡಿಷನ್ ತೆಗೆದುಕೊಳ್ಳುವ ಕಾರ್ಯಕ್ರಮದ ಪ್ರೋಮೋ ಇತ್ತ್ತೀಚೆಗೆ ಬಿಡುಗಡೆ ಮಾಡಲಾಗಿತ್ತು. ಅದ್ಭುತ ಪ್ರತಿಭೆಯುಳ್ಳ ಅಭ್ಯರ್ಥಿಗಳನ್ನು ಮಾತ್ರ ಆಯ್ಕೆ ಮಾಡಲಾಗುವುದು ಎಂದು ಫರ್ಮಾನು ಹೊರಡಿಸಿದ್ದಾರೆ.

  ರಾಯಲ್ ಲುಕ್ ವುಳ್ಳ ಈ ರಿಯಾಲಿಟಿ ಶೋ ನಿರೂಪಕರಾಗಿ ಡ್ಯಾನ್ಸರ್ ಭಾರ್ತಿ ಸಿಂಗ್ ಹಾಗೂ ಮಂತ್ರ ಆಯ್ಕೆಯಾಗಿದ್ದಾರೆ. ದೇಶದೆಲ್ಲೆಡೆಯಿಂದ ಪ್ರತಿಭಾವಂತರು ನೃತ್ಯ, ಸೃಜನಾತ್ಮಕ ಕಲೆ, ಹಾಡುಗಾರಿಕೆ, ಜಾದೂ ಮುಂತಾದ ಪ್ರದರ್ಶನ ನೀಡುವ ಮೂಲಕ ಪ್ರಶಸ್ತಿಗಾಗಿ ಸೆಣಸಲಿದ್ದಾರೆ. 3 ರಿಂದ 80 ವರ್ಷ ವಯಸ್ಸಿನ ಸ್ಪರ್ಧಿಗಳನ್ನು ಇಲ್ಲಿ ಕಾಣಬಹುದು. ಯಾವುದೇ ಭಾಷೆ, ಪ್ರಾಂತ್ಯದ ಪ್ರತ್ಯೇಕತೆ ಇಲ್ಲಿಲ್ಲ. ಪ್ರತಿಭೆಗೆ ಮಾತ್ರ ಮನ್ನಣೆ ಎನ್ನುತ್ತಾರೆ ಜಡ್ಜ್ ಗಳು. ಮೂವರು ಜಡ್ಜ್ ಗಳು, ನಿರೂಪಕರು ಸೇರಿದಂತೆ ಮೊದಲ ಹಂತದ ಕುತೂಹಲಕಾರಿ ಸ್ಪರ್ಧಿಗಳ ಫಸ್ಟ್ ಲುಕ್ ಇಲ್ಲಿದೆ

  ಇಂಡಿಯಾ ಗಾಟ್ ಟ್ಯಾಲೆಂಟ್ 5 ಫಸ್ಟ್ ಲುಕ್

  ಇಂಡಿಯಾ ಗಾಟ್ ಟ್ಯಾಲೆಂಟ್ 5 ಫಸ್ಟ್ ಲುಕ್

  ದರ್ಬಾರ್ ಸೆಟ್ ನಲ್ಲಿ ಕಾಣಿಸಿಕೊಂಡಿದ್ದ ಜಡ್ಜ್ ಗಳಾದ ಕಿರಣ್ ಖೇರ್, ಕರಣ್ ಜೋಹರ್ ಹಾಗೂ ಮಲೈಕಾ ಅರೋರಾ ಖಾನ್ ಅವರ ಉಡುಗೆ ತೊಡಗೆ ಮೇಲೆ ಕೂಡಾ ಪ್ರೇಕ್ಷಕರ ಕಣ್ಣು ಸದಾ ಇರುತ್ತದೆ

  ಈ ಬಾರಿ ಹೊಸ ನಿರೂಪಕರು

  ಈ ಬಾರಿ ಹೊಸ ನಿರೂಪಕರು

  ಖ್ಯಾತ ಡ್ಯಾನ್ಸರ್ ಭಾರ್ತಿ ಸಿಂಗ್ ಹಾಗೂ ಆರ್ ಜೆ ಮಂತ್ರ ಈ ಬಾರಿ ಇಂಡಿಯಾ ಗಾಟ್ ಟ್ಯಾಲೆಂಟ್ 5 ನ ನಿರೂಪಕರಾಗಿದ್ದಾರೆ

  ಹಾಸ್ಯಮಯ ಹೊಸ ನಿರೂಪಕರು

  ಹಾಸ್ಯಮಯ ಹೊಸ ನಿರೂಪಕರು

  ಡ್ಯಾನ್ಸರ್ ಭಾರ್ತಿ ಸಿಂಗ್ ಹಾಗೂ ಆರ್ ಜೆ ಮಂತ್ರ ಹಾಸ್ಯದ ಹೊನಲು ಹರಿಸುತ್ತಾ ಪ್ರೇಕ್ಷಕರ ಕುತೂಹಲ ಕೆರಳಿಸಲಿದ್ದಾರೆ

  ದೇಶದ ನಂ.1 ಐಟಂ ಡ್ಯಾನ್ಸರ್

  ದೇಶದ ನಂ.1 ಐಟಂ ಡ್ಯಾನ್ಸರ್

  ಮದುವೆ ಮಕ್ಕಳು ಸಂಸಾರ ತಾಪತ್ರಯದ ನಡುವೆ ವಿವಿಧ ಭಾಷೆಗಳ ಚಿತ್ರಗಳಲ್ಲೂ ನಟಿಸಿ, ನರ್ತಿಸುತ್ತಾ ಸಿನಿರಸಿಕರ ಮನ ತಣಿಸುವ ಮಲೈಕಾ ಅರೋರಾ ಖಾನ್ ಅವರು ಪ್ರಮುಖ ಆಕರ್ಷಣೆ

  ಈ ಬಾರಿಯ ಆಕರ್ಷಣೆ 1

  ಈ ಬಾರಿಯ ಆಕರ್ಷಣೆ 1

  ಮಹಾರಾಷ್ಟ್ರದ ಗುಂಪು ಆಕರ್ಷಕ ನೃತ್ಯ, ಸಂಗೀತ ಮೇಳ ಪ್ರದರ್ಶನ ನೀಡಲಿದೆ.

  ಈ ಬಾರಿಯ ಆಕರ್ಷಣೆ 2

  ಈ ಬಾರಿಯ ಆಕರ್ಷಣೆ 2

  ಚೆನ್ನೈ ಮೂಲದ ಬಾಲಕ ಸಾಯಿ ಪಿಯೋನಾ ವಾದನ ಕೇಳಿ ಕರಣ್ ಜೋಹರ್ ಫುಲ್ ಖುಷ್ ಆಗಿದ್ದಾರೆ.

  ಈ ಬಾರಿಯ ಆಕರ್ಷಣೆ 3

  ಈ ಬಾರಿಯ ಆಕರ್ಷಣೆ 3

  ಪೋಲ್ ಡ್ಯಾನ್ಸರ್ ಆಗಿ ಕಾಣಿಸಿಕೊಂಡಿರುವ ನೃತ್ಯಗಾರ್ತಿ ಭಾವನಾ

  ಈ ಬಾರಿಯ ಆಕರ್ಷಣೆ 4

  ಈ ಬಾರಿಯ ಆಕರ್ಷಣೆ 4

  ಬೀಟ್ ಬ್ರೇಕರ್ಸ್ ಹೆಸರಿನ ನೃತ್ಯ ತಂಡದ ಪ್ರದರ್ಶನ ಜನ ಮೆಚ್ಚುಗೆ ಗಳಿಸುವ ನಿರೀಕ್ಷೆಯಿದೆ. ಪ್ರಿನ್ಸ್ ಡ್ಯಾನ್ಸ್ ಗ್ರೂಪ್ ಮಾದರಿಯಲ್ಲೇ ಬೀಟ್ ಬ್ರೇಕರ್ಸ್ ಮೋಡಿ ಮಾಡಲಿದೆ ಎನ್ನಲಾಗಿದೆ.

  ಜಡ್ಜ್ ಗಳಿಂದ ಪ್ರತಿಭೆ ಪ್ರದರ್ಶನ

  ಜಡ್ಜ್ ಗಳಿಂದ ಪ್ರತಿಭೆ ಪ್ರದರ್ಶನ

  ಪ್ರತಿ ಎಪಿಸೋಡ್ ನಲ್ಲಿ ಅತಿಥಿ ಗಣ್ಯರನ್ನು ಆಹ್ವಾನಿಸಲಾಗುತ್ತದೆ. ಜತೆಗೆ ಸ್ಪರ್ಧಿಗಳಲ್ಲದೆ ಜಡ್ಜ್ ಗಳು ಕೂಡಾ ಪ್ರತಿಭೆ ಪ್ರದರ್ಶಿಸಲಿದ್ದಾರೆ

  ರಿಯಾಲಿಟಿ ಶೋಗೆ ಪ್ರೇಕ್ಷಕರೇ ಪ್ರಭುಗಳು

  ರಿಯಾಲಿಟಿ ಶೋಗೆ ಪ್ರೇಕ್ಷಕರೇ ಪ್ರಭುಗಳು

  ದೇಶದೆಲ್ಲೆಡೆಯಿಂದ ಬಂದು ಪ್ರತಿಭೆ ಪ್ರದರ್ಶಿಸುವವರನ್ನು ಕೈ ಎತ್ತಿ ಮುಂದೆ ನಡೆಸುವ ಜವಾಬ್ದಾರಿ ಪ್ರೇಕ್ಷಕರ ಕೈಲಿದೆ

  English summary
  Colors TV is back with its immensely popular show India's Got Talent Season 5. This season there would be added tadka as the funny Bharti Singh and Mantra will be hosting the show. It would be a never seen avtaar of the royal judge trio; Karan Johar, Malaika Arora Khan and Kiron Kher. There would be perfromances from all age groups that will leave both the audiences and the judges speechless.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X