»   » 'ದಡಿಯ' ಪ್ರಕಾಶ್ 'ಬುಲೆಟ್' ಪ್ರಕಾಶ್ ಆಗಲು ಕಾರಣ ರವಿಚಂದ್ರನ್.!

'ದಡಿಯ' ಪ್ರಕಾಶ್ 'ಬುಲೆಟ್' ಪ್ರಕಾಶ್ ಆಗಲು ಕಾರಣ ರವಿಚಂದ್ರನ್.!

Posted By:
Subscribe to Filmibeat Kannada

ಕನ್ನಡ ಚಿತ್ರರಂಗಕ್ಕೆ 'ಬಾಲಕ' ಪ್ರಕಾಶ್ ರವರನ್ನ ಕರೆತಂದಿದ್ದು, 'ದಡಿಯ' ಪ್ರಕಾಶ್ ಗೆ 'ಬುಲೆಟ್' ಪ್ರಕಾಶ್ ಅಂತ ನಾಮಕರಣ ಮಾಡಿದ್ದು ಒಬ್ಬರೇ... ಅವರೇ ಕ್ರೇಜಿ ಸ್ಟಾರ್ ವಿ.ರವಿಚಂದ್ರನ್.!

ರವಿಚಂದ್ರನ್ ರವರ 'ಶಾಂತಿ ಕ್ರಾಂತಿ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ 'ಬಾಲಕ' ಪ್ರಕಾಶ್, ಮುಂದೆ ಚಿತ್ರರಂಗದಲ್ಲಿ ಹಾಸ್ಯ ನಟನಾಗಿ ಪರಿಚಯಗೊಂಡರು. ಇಂತಿಪ್ಪ ಪ್ರಕಾಶ್ ಹೆಸರಿನ ಮುಂದೆ 'ಬುಲೆಟ್' ಸೇರಿಕೊಳ್ಳಲು ಕಾರಣ ವಿ.ರವಿಚಂದ್ರನ್.

ಬುಲೆಟ್ ಪ್ರಕಾಶ್ ರವರ 'ಶಾಂತಿ ಕ್ರಾಂತಿ'ಯ ಕಥೆ ಕೇಳಿದ್ದೀರಾ.?

ಈ ಬಗ್ಗೆ ಸ್ವತಃ ನಟ ಬುಲೆಟ್ ಪ್ರಕಾಶ್, ಕಲರ್ಸ್ ಸೂಪರ್ ವಾಹಿನಿಯ 'ಸೂಪರ್ ಟಾಕ್ ಟೈಮ್' ಕಾರ್ಯಕ್ರಮದಲ್ಲಿ ಮಾತನಾಡಿದ್ದಾರೆ. ಮುಂದೆ ಓದಿರಿ...

ಮೊದಲ ಗುರು ರವಿಚಂದ್ರನ್

''ಸಿನಿಮಾ ಇಂಡಸ್ಟ್ರಿಯಲ್ಲಿ ನನ್ನ ಮೊದಲ ಗುರು, ದೇವರು ಅಂದ್ರೆ ಅದು ಕ್ರೇಜಿ ಸ್ಟಾರ್ ರವಿಚಂದ್ರನ್'' ಎಂದರು ನಟ ಬುಲೆಟ್ ಪ್ರಕಾಶ್

'ಪ್ರೀತ್ಸು ತಪ್ಪೇನಿಲ್ಲ'

''ಅವತ್ತು ಬರೀ ಪ್ರಕಾಶ್ ಆಗಿದ್ದೆ, ಆರ್ಟಿಸ್ಟ್ ಆದ್ಮೇಲೆ ನನ್ನ ಮೂರನೇ ಚಿತ್ರವನ್ನ (ಪ್ರೀತ್ಸು ತಪ್ಪೇನಿಲ್ಲ) ರವಿ ಸರ್ ಜೊತೆಯಲ್ಲಿ ಮಾಡಿದೆ. ನನಗೆ ಬುಲೆಟ್ ಪ್ರಕಾಶ್ ಅಂತ ಹೆಸರು ಕೊಟ್ಟಿದ್ದೇ ರವಿಚಂದ್ರನ್'' - ಬುಲೆಟ್ ಪ್ರಕಾಶ್

ಬುಲೆಟ್ ಬರಲು ಕಾರಣ.?

''ಬರೀ ಪ್ರಕಾಶ್ ಎಂದರೆ ಚೆನ್ನಾಗಿರುವುದಿಲ್ಲ. ಬುಲೆಟ್ ಪ್ರಕಾಶ್ ಅಂತ ಹೆಸರಿಟ್ಟುಕೋ ಎಂದು ನನಗೆ ಹೇಳಿದ್ದೇ ರವಿ ಸರ್. ನನ್ನ ಹತ್ತಿರ ಆಗ ಬುಲೆಟ್ ಇತ್ತು. ಬುಲೆಟ್ ನಲ್ಲಿ ಬರುತ್ತಿದ್ದೆ ಅಂತ ಬುಲೆಟ್ ಪ್ರಕಾಶ್ ಅಂತಲೇ ನನ್ನನ್ನ ರವಿ ಸರ್ ಕರೆಯೋಕೆ ಶುರು ಮಾಡಿದರು'' - ಬುಲೆಟ್ ಪ್ರಕಾಶ್

ಆ 'ಬುಲೆಟ್' ಈಗಿಲ್ಲ.!

ಯಾವ ಬುಲೆಟ್ ನೋಡಿ, ಪ್ರಕಾಶ್ ಹೆಸರಿನ ಮುಂದೆ ರವಿಚಂದ್ರನ್ ಬುಲೆಟ್ ಸೇರಿಸಿದರೋ, ಆ ಬುಲೆಟ್ ಸದ್ಯ ಪ್ರಕಾಶ್ ಬಳಿ ಇಲ್ಲ. ಆರ್ಥಿಕ ಸಮಸ್ಯೆಯಿಂದಾಗಿ ಆ ಬುಲೆಟ್ ನ ಒಂದ್ಕಾಲದಲ್ಲಿ ಪ್ರಕಾಶ್ ಮಾರಿಬಿಟ್ಟರಂತೆ.

English summary
It was crazy Star V.Ravichandran who renamed Prakash as Bullet Prakash

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada