»   » ಯುವ ಬರಹಗಾರರಿಗೆ ಜಯಂತ್ ಕಾಯ್ಕಿಣಿ'ಯ ಸ್ಫೂರ್ತಿಯ ಕಿವಿಮಾತುಗಳಿವು..!

ಯುವ ಬರಹಗಾರರಿಗೆ ಜಯಂತ್ ಕಾಯ್ಕಿಣಿ'ಯ ಸ್ಫೂರ್ತಿಯ ಕಿವಿಮಾತುಗಳಿವು..!

Posted By:
Subscribe to Filmibeat Kannada

ಸಾಹಿತಿ ಜಯಂತ್ ಕಾಯ್ಕಿಣಿ ನೋವನ್ನು ನೋಡುವ ದೃಷ್ಟಿಕೋನವು ಸಹ ಇಂಟ್ರೆಸ್ಟಿಂಗ್ ಆಗಿಯೇ ಇರುತ್ತದೆ. ಕಾಯ್ಕಿಣಿ ರವರು ಲೇಖಕರಾಗಿ, ಕವಿಯಾಗಿ, ನಾಟಕಕಾರರಾಗಿ ಕನ್ನಡ ನಾಡಿನ ಪ್ರತಿಯೊಬ್ಬ ಯುವಕರಿಗೆ ಸ್ಫೂರ್ತಿ.[ಮುಂಬೈ ಎಂಬ ಮಹಾನಗರ ಕಾಯ್ಕಿಣಿ ಕಣ್ಣಿಗೆ ಕಂಡಿದ್ದು ಹೀಗೆ..!]

ಜಯಂತ್ ಕಾಯ್ಕಿಣಿ ರವರು ಹಲವು ಕಾರ್ಯಕ್ರಮಗಳಿಗೆ, ಶಾಲಾ-ಕಾಲೇಜುಗಳಿಗೆ ಹೋದಾಗಲೆಲ್ಲಾ ಯುವ ಬರಹಗಾರರಿಗೆ ಪ್ರೇರಣೆ ನೀಡುವ ಮಾತುಗಳನ್ನು ಹೇಳುವುದು ಸಾಮಾನ್ಯ. ಕನ್ನಡ ನಾಡಿನಾದ್ಯಂತ ತಾವು ಬರಹಗಾರರಾಗಬೇಕು, ಕವಿಯಾಗಬೇಕು, ಕನ್ನಡ ಸಿನಿಮಾಗಳಿಗೆ ಹಾಡು ರಚನೆಕಾರರಾಗಬೇಕು ಎಂದು, ಸ್ಫೂರ್ತಿಗಾಗಿ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ತಮ್ಮ ಎಪಿಸೋಡ್ ನೋಡುತ್ತ ಕುಳಿತ ಯುವ ಮನಸ್ಸುಗಳಿಗೆ ಸಲಹೆಗಳನ್ನು ಜಯಂತ್ ಕಾಯ್ಕಿಣಿ ರವರು ನೀಡಿದ್ದಾರೆ.

ಜೀವನದಲ್ಲಿ ಬರಹಗಾರ ಆಗಬೇಕು ಎಂಬ ಕನಸು ಕಂಡವರಿಗೆ ಜಯಂತ್ ಕಾಯ್ಕಿಣಿ ರವರು ಹೇಳಿದ ಕಿವಿಮಾತುಗಳು ಇಲ್ಲಿವೆ ಓದಿ..

ಬರವಣಿಗೆ ಎನ್ನುವುದು..

"ಬರವಣಿಗೆ ಎನ್ನುವುದು ಒಂದು ವರ್ಕ್ ಶಾಪ್ ನಲ್ಲಿ ಕಲಿಯುವ ಸ್ಕಿಲ್ ಅಲ್ಲ. ಹತ್ತು ದಿನದಲ್ಲಿ ಕವಿಯಾಗಿರಿ. 30 ದಿನಗಳಲ್ಲಿ ಕನ್ನಡ ಕಲಿಯಿರಿ ಆತರಹದ್ದಲ್ಲ. ಅದು ನಮ್ಮ ಉಸಿರಾಟದ ಹಾಗೆ" - ಜಯಂತ್ ಕಾಯ್ಕಿಣಿ, ಸಾಹಿತಿ[ಕನ್ನಡದಲ್ಲಿ ಜಗಳವಾಡಿದರೂ ಸಾಕಪ್ಪ ಅನ್ನೋ ಸ್ಥಿತಿಯಲ್ಲಿ ನಾವಿದ್ದೇವೆ!]

ಹೆಚ್ಚು ಓದಿಕೊಂಡು ಬರಬೇಕು

"ಬರವಣಿಗೆಗೆ ನಾವು ಮೊದಲಿನಿಂದಲೂ ಓದಿಕೊಂಡು ಬಂದಿರಬೇಕು. ತದನಂತರ ಅದು ತಾನಾಗಿಯೇ ಬರುತ್ತೆ. ಅದು... ಪ್ರಾಯಕ್ಕೆ ಬಂದಾಗ ಮೊಡವೆ ಬರೊಲ್ವಾ... ಹಾಗೆ. ಪ್ರಾಯಕ್ಕೆ ಬಂದಾಗ ಎಲ್ಲರಿಗೂ ಕವಿತೆ ಬರುತ್ತೆ. ಎಲ್ಲರೂ ಹೇಳಲ್ಲ. ಆದರೆ ಎಲ್ಲರೂ ಬರೆದಿರುತ್ತಾರೆ. ಅಂತಹವರೆಲ್ಲಾ ನನಗೆ ಈಗಲು ಸಿಕ್ತಾರೆ. ಯಾಕಂದ್ರೆ ನಾನು ಬರೆದಿದ್ದೀನಿ" -ಜಯಂತ್ ಕಾಯ್ಕಿಣಿ, ಸಾಹಿತಿ

ಗುರುಗಳು ಬೇಡ

"ಲಕ್ಕಿ ಏನಪ್ಪಾ ಅಂದ್ರೆ ಉಳಿದ ಎಲ್ಲಾ ಕ್ಷೇತ್ರಗಳಿಗೆ ಗುರುಗಳು ಬೇಕು. ಆದರೆ ಸಾಹಿತ್ಯಕ್ಕೆ ಗುರು ಬೇಡ. ಯಾಕಂದ್ರೆ ಎಲ್ಲರಿಗೂ ಪ್ರಕಟಿತ ಸಾಹಿತ್ಯವೇ ಗುರು. ಎಲ್ಲಾ ಪುಸ್ತಕಗಳನ್ನು ಓದಿ. ನಮಗೆಲ್ಲಾ ಪುಸ್ತಕಗಳನ್ನು ಹಾಗೆ ಬರೀರಿ. ಹೀಗೆ ಬರೀರಿ ಎಂದು ಯಾರು ಹೇಳಿ ಕೊಟ್ಟಿರಲಿಲ್ಲ. ಇದು ನೆನಪಿರಲಿ" -ಜಯಂತ್ ಕಾಯ್ಕಿಣಿ, ಸಾಹಿತಿ

ಸಮಯವಿಲ್ಲ ಅಂದ್ರೆ ಊಟ ಮಾಡೊಲ್ವಾ..

"ತಿರುಮಲೇಶ್ವರನನ್ನು ಓದಿದ್ದೀನಿ. ಎ.ಕೆ.ರಾಮಾನುಜನ್ ಓದಿದ್ದೀನಿ. ಗಂಗಾಧರ ಚಿತ್ತಾಲರನ್ನು ಓದಿದ್ದೀವಿ. ಪಿ.ಲಂಕೇಶ್, ತೇಜಸ್ವಿ ಇವರನ್ನೆಲ್ಲಾ ಓದಿ ನಮಗೆ ಗೊತ್ತಾಯಿತು. ಓದದೇ ಏನು ಆಗಲ್ಲ. ಕೆಲವರು ಸರ್ ನಮಗೆ ಟೈಮಿಲ್ಲ ಅಂತಿರ್ತಾರೆ. ಅದಕ್ಕೆ ನಾನು ಹೇಳ್ತೀನಿ. ಟೈಮಿಲ್ಲ ಅಂದ್ರೆ ಊಟ ಮಾಡೊಲ್ವಾ... ಟೈಮಿಲ್ಲ ಅಂದ್ರೆ ಸ್ನಾನ ಮಾಡೊಲ್ವಾ... ಅದೇ ರೀತಿ ಓದುವುದಕ್ಕೂ ಟೈಮ್ ಮಾಡಿಕೊಳ್ಳಬೇಕು" -ಜಯಂತ್ ಕಾಯ್ಕಿಣಿ, ಸಾಹಿತಿ

ಬದುಕುವವನಾಗಿ ಬರೆಯಬೇಕು

"ಟೈಮಿಲ್ಲ ಅಂತ ಓದದಿದ್ದರೇ ಅನ್ನೋದು ಹೇಗಿದೆ ಅಂದ್ರೆ, ನಮ್ ಕಡೆ ಒಂದು ಗಾದೆ ಮಾತಿದೆ. ಯಾರೋ ನದಿ ಮೇಲಿನ ಸಿಟ್ಟಿನಿಂದ ಸ್ನಾನವನ್ನೇ ಮಾಡಲಿಲ್ಲವಂತೆ. ಅದರಿಂದ ನದಿಗೇನು ನಷ್ಟವಿಲ್ಲ. ಅದೇ ರೀತಿ ಓದುವುದು ಒಂದು ಪ್ರವಾಹ. ಕ್ಲಾಸಿಕಲ್ ಸೌಂಡಿಂಗ್. ಓದು ಮತ್ತು ಬದುಕನ್ನು ಅರ್ಥ ಮಾಡಿಕೊಳ್ಳಲು ಬರೆಯೋದು. ಬರೆಯುವವನಾಗಿ ಬದುಕುವುದು ಅಲ್ಲ. ಬದುಕುವವನಾಗಿ ಬರೆಯಬೇಕು" -ಜಯಂತ್ ಕಾಯ್ಕಿಣಿ, ಸಾಹಿತಿ

English summary
Indian Poet, Short Stories Author and a Lyricist Jayant Kaikini told his advice for young writers in 'Weekend With Ramesh'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada