For Quick Alerts
  ALLOW NOTIFICATIONS  
  For Daily Alerts

  ತಾಯಿ ಬಗ್ಗೆ ಇದುವರೆಗೆ ಕಾಯ್ಕಿಣಿ ಹಾಡು ಬರೆದಿಲ್ಲ, ಯಾಕೆ?

  |
  ಹಾಡುಗಳಿಂದಲೇ ಮನೆಮಾತಾದ ಪ್ರೇಮಕವಿ ಜಯಂತ್ ಕಾಯ್ಕಿಣಿ

  ಸಿನಿಮಾ ಹಾಡುಗಳು ಹೆಚ್ಚಾಗಿ ಪ್ರೀತಿ, ಪ್ರೇಮದ ಬಗ್ಗೆ ಇರುತ್ತದೆ. ಅದನ್ನು ಬಿಟ್ಟರೆ ತಾಯಿಯ ಬಗ್ಗೆ ನೂರಾರೂ ಹಾಡುಗಳು ಕನ್ನಡದಲ್ಲಿ ಇವೆ. ಸಾಕಷ್ಟು ಗೀತರಚನೆಗಾರರು ತಾಯಿಯ ಬಗ್ಗೆ ಅದ್ಬುತ ಹಾಡುಗಳನ್ನು ಬರೆದಿದ್ದಾರೆ.

  ಆದರೆ, ಜಯಂತ್ ಕಾಯ್ಕಿಣಿ ಮಾತ್ರ ಈವರೆಗೆ ತಾಯಿಯ ಬಗ್ಗೆ ಒಂದೇ ಒಂದು ಹಾಡನ್ನು ಬರೆದಿಲ್ಲವಂತೆ. ಈ ವಿಷಯನ್ನು ಅವರೇ ಇತ್ತೀಚಿಗಷ್ಟೆ 'ಕನ್ನಡದ ಕಣ್ಮಣಿ' ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದಾರೆ.

  ಜಯಂತ್ ಕಾಯ್ಕಿಣಿ ಸಾಹಿತ್ಯಕ್ಕೆ ಜೋಗಿ ಪ್ರೇಮ್ ಧ್ವನಿ

  ಕಾರ್ಯಕ್ರಮ ಸಂಚಿಕೆಯಲ್ಲಿ ತಾಯಿಯ ಕಾಯಕದ ಬಗ್ಗೆ ಒಬ್ಬ ಸ್ಪರ್ಧಿ ಮಾತನಾಡಿದರು. ಈ ವೇಳೆ ತಮ್ಮ ತಾಯಿಯನ್ನು ಕಾಯ್ಕಿಣಿ ನೆನೆದರು. ''ಅಮ್ಮನ ಬಗ್ಗೆ ಹೇಳಲು ಆಗುವುದಿಲ್ಲ. ಅದು ಒಂದು ಅನುಭೂತಿ. ಅಮ್ಮನ ಬಗ್ಗೆ ಹೇಳಿದಷ್ಟು ಸರಳೀಕೃತ ಆಗುತ್ತದೆಯೇನೋ ಅನಿಸುತ್ತದೆ.'' ಎಂದಿರುವ ಅವರು ತಾಯಿಯ ಬಗ್ಗೆ ಹಾಡು ಬರೆಯದ ವಿಷಯ ಹಂಚಿಕೊಂಡರು.

  ''ನಾನು ತಂದೆಯ ಬಗ್ಗೆ ಬರೆದಿದ್ದೇನೆ. ಆದರೆ, ತಾಯಿಯ ಬಗ್ಗೆ ಯಾವ ಹಾಡು, ಪದ್ಯವನ್ನು ಬರೆದಿಲ್ಲ. ತಾಯಿಯ ಬಗ್ಗೆ ಬರೆದರೆ ಆಕೆಯನ್ನು ಯಾವುದೇ ಒಂದು ಚೌಕಟ್ಟಿನಲ್ಲಿ ಇಟ್ಟಿದ್ದೇನೆ ಎನ್ನಿಸಿ ಬಿಡುತ್ತದೆ. ಅದಕ್ಕೆ ನಾನು ನನ್ನ ತಾಯಿ ತೀರಿಕೊಂಡಾಗಲೂ ಅವರ ಬಗ್ಗೆ ಬರೆಯಲಿಲ್ಲ.'' ಎಂದರು ಕಾಯ್ಕಿಣಿ.

  'ಸ್ಫೂರ್ತಿಯ ಚಿಲುಮೆ' ಜಯಂತ್ ಕಾಯ್ಕಿಣಿಗೆ ಫಿಲ್ಮಿಬೀಟ್ ಕನ್ನಡದ ಪ್ರಶಸ್ತಿ

  ಕನ್ನಡದಲ್ಲಿ 'ಬೇಡುವನು ವರವನ್ನು..', 'ಬ್ರಹ್ಮ ವಿಷ್ಣು ಶಿವ..' ಹೀಗೆ ತಾಯಿಯ ಬಗ್ಗೆ ಇರುವ ಸಾಕಷ್ಟು ಹಾಡುಗಳು ಸೂಪರ್ ಹಿಟ್ ಆಗಿವೆ.

  English summary
  Popular kannada lyricist Jayanth Kaikini didn't write a song about mother

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X