For Quick Alerts
  ALLOW NOTIFICATIONS  
  For Daily Alerts

  ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದೆ ಜೋಡಿ ನಂ.1 ರಿಯಾಲಿಟಿ ಶೋ

  By ಪೂರ್ವ
  |

  ಜೀ ಕನ್ನಡ ವಾಹಿನಿಯಲ್ಲಿ ಇದೀಗ ಜೋಡಿ ನಂ.1 ಎಂಬ ಹೊಸ ರಿಯಾಲಿಟಿ ಶೋ ಪ್ರಸಾರವಾಗುತ್ತಿದೆ. ಕಾರ್ಯಕ್ರಮಕ್ಕೆ ಜಡ್ಜ್ ಆಗಿ ಗುರುಕಿರಣ್ ದಂಪತಿ, ಪ್ರೇಮ್, ಮಾಳವಿಕ ಅವಿನಾಶ್ ಆಗಮಿಸಿದ್ದಾರೆ. ನೋಡುಗರ ಚಿತ್ತ ಸೆಳೆಯುತ್ತಿರುವ ರಿಯಾಲಿಟಿ ಶೋ ನಲ್ಲಿ ಸಾಕಷ್ಟು ಕ್ಯೂಟ್ ಆದ ದಂಪತಿಗಳು ಭಾಗವಹಿಸಿದ್ದಾರೆ. ಒಬ್ಬರಿಗಿಂತ ಒಬ್ಬರು ಭಿನ್ನವಾಗಿರುವ ಜೋಡಿಗಳು ರಿಯಾಲಿಟಿ ಶೋ ಸ್ಪರ್ಧಿಸಿದ್ದಾರೆ. ಜೊತೆಗೆ ಅವರ ನೋವು ನಲಿವನ್ನು ಹಂಚಿಕೊಳ್ಳಲು ಒಂದು ಉತ್ತಮ ವೇದಿಕೆ 'ಜೋಡಿ ನಂ 1' ಮೂಲಕ ಅವರಿಗೆ ದೊರಕಿದೆ.

  ಕಾರ್ಯಕ್ರಮಕ್ಕೆ ಸೂಪರ್ ಜೋಡಿಯಾಗಿ ಆಗಮಿಸಿದ ದಿವ್ಯ ಹಾಗೂ ಗೋವಿಂದೆ ಗೌಡರ ಪ್ರೀತಿ ನೋಡಿ ಜನ ಮನಸೋತಿದ್ದಾರೆ. ದಿವ್ಯ ಅವರಿಗೆ ಜನಗಳು ಇಲ್ಲ ಸಲ್ಲದನ್ನೆಲ್ಲ ಮಾತನಾಡಿ ಮನ ನೋಯಿಸಿಬಿಟ್ಟಿದ್ದರು. ಅವಳು ಸರಿಯಿಲ್ಲ, ಎಂದೆಲ್ಲ ಜನಗಳು ಮಾತನಾಡುತ್ತಿದ್ದರು. ಅಂತಹ ಸಂದರ್ಭದಲ್ಲಿ ಗೋವಿಂದೇ ಗೌಡ ರ ಬಳಿ ಪ್ರೀತಿಯನ್ನು ಹೇಳಿಕೊಂಡರಂತೆ. ಆದರೆ ಗೋವಿಂದ ಹಿಂದೆ ಮುಂದೆ ನೋಡುತ್ತಿದ್ದರು.

  ಮೊದಲ ವಾರವೇ ಜೋಡಿ ನಂ.1 TRP ದಾಖಲೆ!ಮೊದಲ ವಾರವೇ ಜೋಡಿ ನಂ.1 TRP ದಾಖಲೆ!

  ಬಳಿಕ ಅವರ ಅಣ್ಣ ಹೇಳುತ್ತಾರಂತೆ ಒಳ್ಳೆಯ ಹುಡುಗಿ ನಿನ್ನ ಮದುವೆಯಾಗುತ್ತೇನೆ ಎಂದು ಹೇಳಿದರು ಸುಮ್ಮನಿದ್ದಿಯಲ್ವಾ ಮದುವೆಯಾಗು ನೀನು ಎಂದು ಹೇಳುತ್ತಾರೆ. ಅದಕ್ಕೆ ಒಪ್ಪಿದ ಗೋವಿಂದ, ದಿವ್ಯಾಳನ್ನು ಮದುವೆಯಾಗುತ್ತಾನೆ. ಮದುವೆಯಾದ ಮೇಲೆ ತಿಳಿಯುತ್ತದೆ. ಒಬ್ಬ ತಾಯಿ ತನ್ನ ಮಗುವನ್ನು ಹೇಗೆ ಸಾಕುತ್ತಾಳೋ ಅದೇ ರೀತಿ ನೋಡಿಕೊಂಡರಂತೆ ದಿವ್ಯ.

  ವೇದಿಕೆ ಮೇಲೆ ಕಣ್ಣೀರಿಟ್ಟ ದಿವ್ಯಾ

  ವೇದಿಕೆ ಮೇಲೆ ಕಣ್ಣೀರಿಟ್ಟ ದಿವ್ಯಾ

  ದಿವ್ಯ ವೇದಿಕೆಯಲ್ಲಿ ಹೇಳುತ್ತಾರೆ ಗೋವಿಂದ ಅವ್ರಿಗೆ ಆಕ್ಸಿಡೆಂಟ್ ಆಗಿರುತ್ತದೆ. ಆ ವೇಳೆ ನಾನು ಗರ್ಭಿಣಿಯಾಗಿದ್ದೆ. ಮೊದಲ ಎರಡು ಬಾರಿ ಮಗು ಹೋಗಿತ್ತು ಈ ವಿಚಾರವನ್ನು ಅವರ ಬಳಿ ಹೇಳೋಣ ಅಂದಾಗ ಆಕ್ಸಿಡೆಂಟ್ ವಿಚಾರ ಗೊತ್ತಾಯಿತು. ಈ ವೇಳೆ. ನಾನು ಕೇಳಿದ್ದು ಇಷ್ಟೇ ನನ್ನ ಗಂಡ ಬದುಕಲಿ ಎಂದು, ಇಲ್ಲದಿದ್ದರೆ ನಾನು ಅತ್ಮಹತ್ಯೆ ಮಾಡಿಕೊಳ್ಳುತ್ತಿದ್ದೆ. ಎಂದು ಹೇಳಿದಾಗ ಜನರ ಮನಸ್ಸಿಗೆ ನೋವಾಗದೆ ಇರದು.

  ಹೆಂಡತಿ ರೂಪದಲ್ಲಿ ತಾಯಿ ಸಿಕ್ಕಿದ್ದಾರೆ: ಜಿಜಿ

  ಹೆಂಡತಿ ರೂಪದಲ್ಲಿ ತಾಯಿ ಸಿಕ್ಕಿದ್ದಾರೆ: ಜಿಜಿ

  ಈ ವೇಳೆ ಗೊವಿಂದೇ ಗೌಡರು ಹೇಳುತ್ತಾರೆ. ನನಗೆ ಮದುವೆಯಾದ ಬಳಿಕ ಒಬ್ಬ ತಾಯಿ ಸಿಕ್ಕಿದ್ದಾರೆ. ಅಪಘಾತವಾದ ವೇಳೆಯಲ್ಲಿ ಬಹಳ ಜಾಗರೂಕತೆಯಿಂದ ನೋಡಿಕೊಂಡಿದ್ದಾರೆ. ಎಂದಾಗ ಪ್ರೇಮ್ ಎದ್ದು ನಿಂತು ಚಪ್ಪಾಳೆ ತಟ್ಟುತ್ತಾರೆ. ನನಗೆ ನಿಮ್ಮ ಪ್ರೀತಿ ಅರ್ಥವಾಗುತ್ತದೆ. ನೀವಿಬ್ಬರೂ ಒಬ್ಬರಿಗೊಬ್ಬರು ಎಷ್ಟು ಅರ್ಥ ಮಾಡಿಕೊಂಡಿದ್ದೀರಿ ಎಂದು ತಿಳಿಯುತ್ತದೆ ಎಂದು ಪ್ರೇಮ್ ಹೇಳುತ್ತಾರೆ.

  ನಿನಾದ್ ಹಾಗೂ ರಮ್ಯಾ ಜೋಡಿ

  ನಿನಾದ್ ಹಾಗೂ ರಮ್ಯಾ ಜೋಡಿ

  ಬಳಿಕ ಇವರಿಗೆ ಒಂದು ಗೇಮ್ ಅನ್ನು ಆಡಿಸಲಾಗುತ್ತದೆ. ದಿವ್ಯ ಹಾಗೂ ಗೋವಿಂದ ಜೋಡಿ ನಂ.1 ಕಾರ್ಯಕ್ರಮಕ್ಕೆ ಭರ್ಜರಿಯಾಗಿ ಎಂಟ್ರಿ ನೀಡಿದ್ದಾರೆ. ಹಾಗೆಯೇ ಇನ್ನೊಂದು ಜೋಡಿ ಭರ್ಜರಿಯಾಗಿ ಜೋಡಿ ನಂ.1 ಗೆ ಲಗ್ಗೆ ಇಟ್ಟಿದೆ. ರಮ್ಯಾ ಹಾಗೂ ನಿನಾದ್ ಕಾರ್ಯಕ್ರಮಕ್ಕೆ ಎಂಟ್ರಿ ನೀಡಿದ್ದಾರೆ. ಇತ್ತೀಚಿಗೆ ಮದುವೆಯಾದ ಈ ನವ ಜೋಡಿಯನ್ನು ಕಂಡ ಜನರಿಗೆ ಫುಲ್ ಖುಷಿಯಾಗಿದೆ. ನಾಗಿಣಿ 2 ಸೀರಿಯಲ್ ಮೂಲಕ ಮಿಂಚಿದ್ದ ನಿನಾದ್ ಇದೀಗ ಜನರನ್ನು ರಂಜಿಸಲು ದಂಪತಿ ಸಮೇತವಾಗಿ ಜೋಡಿ ನಂ.1 ಮೂಲಕ ಎಂಟ್ರಿ ನೀಡಿದ್ದಾರೆ.

  ನಿನಾದ್ ಅನ್ನು ಕಂದ ಎನ್ನುತ್ತಾಳಂತೆ ಹೆಂಡತಿ

  ನಿನಾದ್ ಅನ್ನು ಕಂದ ಎನ್ನುತ್ತಾಳಂತೆ ಹೆಂಡತಿ

  ಮುತ್ತಿನ ಮಳೆಗೆರೆದ ಇನಿಯ ನಿನಾದ್ ಗೆ ಹಾಡಿನ ಮೂಲಕ ತನ್ನ ಪ್ರೀತಿಯನ್ನು ಹೇಳಿಕೊಂಡಿದ್ದಾರೆ. ರಮ್ಯಾ ಗಂಡನನ್ನು ಕಂದ ಎಂದು ಕರೆಯುತ್ತೇನೆ ಎಂದಾಗ ನಿನಾದ್ ನಾಚಿ ನೀರಾಗುತ್ತಾನೆ. ಈ ವೇಳೆ ನಿನಾದ್ ತಾಯಿ ಕೂಡ ಬಹಳ ಖುಷಿ ಪಡುತ್ತಾರೆ. ತಂದೆ ವಿದೇಶಕ್ಕೆ ಹೋದ ಕಾರಣ ತಂದೆಯ ಕೊರಗು ಬಾರದಂತೆ ಸಾಕಿದ್ದೀನಿ. ಈಗ ಮದುವೆಯಾಗಿದೆ. ಸೊಸೆ ಬಂದಿದ್ದಾಳೆ ಎಂದು ಖುಷಿಪಟ್ಟರು.

  English summary
  Jodi no.1 reality show update on 25th June. Some celebrity couples participated in the reality show.
  Sunday, June 26, 2022, 15:48
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X