For Quick Alerts
  ALLOW NOTIFICATIONS  
  For Daily Alerts

  Sonu Gowda: ಹುಟ್ಟುಹಬ್ಬದ ಸಂಭ್ರಮದಲ್ಲಿ ಸೋನು ಗೌಡ: 'ಜೊತೆ ಜೊತೆಯಲಿ'ಗೆ ಕೊಡಲಿದ್ದಾರೆ ಟ್ವಿಸ್ಟ್

  By ಪೂರ್ವ
  |

  'ಕಿರಗೂರಿನ ಗಯ್ಯಾಳಿಗಳು', 'ಹ್ಯಾಪಿ ನ್ಯೂ ಇಯರ್' ಹಾಗೂ ಇನ್ನಿತರ ಚಿತ್ರಗಳಲ್ಲಿ ನಟಿಸಿರುವ ಖ್ಯಾತ ನಟಿ ಸೋನು ಗೌಡ ಅವರಿಗೆ ಇಂದು ಜನುಮ ದಿನದ ಸಂಭ್ರಮ.

  ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಜೊತೆ ಜೊತೆಯಲಿ'ಯೂ ಸೋನು ಗೌಡ ನಟಿಸುತ್ತಿದ್ದಾರೆ. ಈ ಧಾರಾವಾಹಿಯಲ್ಲಿ ಹೊಸ ಹೊಸ ಟ್ವಿಸ್ಟ್‌ಗಳು ಎದುರಾಗಿವೆ.

  ಕನ್ನಡ ಸೀರಿಯಲ್ ನಟಿಯರ ತೆರೆಹಿಂದಿನ ಅವತಾರ ಹೇಗಿದೆ ನೋಡಿ!ಕನ್ನಡ ಸೀರಿಯಲ್ ನಟಿಯರ ತೆರೆಹಿಂದಿನ ಅವತಾರ ಹೇಗಿದೆ ನೋಡಿ!

  ಯಾವುದು ಸತ್ಯ, ಯಾವುದು ಸುಳ್ಳು ಎಂಬ ಗೊಂದಲದಲ್ಲಿ ಇರುವ ನಾಯಕಿ ಅನು ಸಿರಿಮನೆಗೆ ಜೋಗ್ತವ್ವ ಉತ್ತರ ಕೊಡ್ತಾರಾ ಅಥವಾ ಕನ್ನಡಿಯಲ್ಲಿ ಕಾಣುವ ಪ್ರತಿಬಿಂಬ ಉತ್ತರ ಕೊಡುತ್ತಾ? ಎಂಬುವುದೇ ದೊಡ್ಡ ಪ್ರಶ್ನೆಯಾಗಿದೆ.

  ಧಾರಾವಾಹಿ ಆರಂಭದಿಂದಲೂ ರಾಜನಂದಿನಿ ಪಾತ್ರ ಸರ್ಪ್ರೈಸ್ ಆಗಿ ಇಡಲಾಗಿತ್ತು, ರಾಜನಂದಿನಿ ಸುತ್ತ ಕಥೆ ನಡೆಯುತ್ತಿತ್ತು. ಆಕೆ ಯಾರೆಂದು ರಿವೀಲ್ ಮಾಡಿ ಎಂದು ಪದೇ ಪದೇ ವೀಕ್ಷಕರು ಡಿಮ್ಯಾಂಡ್ ಮಾಡುತ್ತಿದ್ದ ಕಾರಣ ನಿರ್ದೇಶಕರು ಈಗ ಆಕೆಯನ್ನು ರಿವೀಲ್ ಮಾಡಿದ್ದಾರೆ. ಅವರೇ ಸ್ಯಾಂಡಲ್‌ವುಡ್‌ ನಟಿ ಸೋನು ಗೌಡ .

  Star Suvarna: 'ಬೆಟ್ಟದ ಹೂ' ಹಾಗೂ 'ಮುದ್ದುಮಣಿಗಳು' ಧಾರಾವಾಹಿಯಲ್ಲಿ ಕಲ್ಯಾಣೋತ್ಸವ Star Suvarna: 'ಬೆಟ್ಟದ ಹೂ' ಹಾಗೂ 'ಮುದ್ದುಮಣಿಗಳು' ಧಾರಾವಾಹಿಯಲ್ಲಿ ಕಲ್ಯಾಣೋತ್ಸವ

  ಸೀರಿಯಲ್ ಆರಂಭದಿಂದಲೂ ರಾಜನಂದಿನಿ ಪಾತ್ರದ ಬಗ್ಗೆ ಜನರಿಗೆ ಕುತೂಹಲ ಇದೆ. ಆಕೆಯ ಹೆಸರು ಹೇಳುತ್ತಿದ್ದರು. ಆದರೆ ಮುಖ ರಿವೀಲ್ ಮಾಡಿರಲಿಲ್ಲ. ಧಾರಾವಾಹಿಗೆ ಇದು ಮುಖ್ಯವಾದ ಪಾತ್ರ. ಸೋನು ಗೌಡ ಈ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

  ನಟಿ ಸೋನು ಗೌಡ ಜನಿಸಿದ್ದು 23 ಮಾರ್ಚ್ 1990 ಬೆಂಗಳೂರಿನಲ್ಲಿ. ಇವರ ಬಾಲ್ಯ, ವಿದ್ಯಾಭ್ಯಾಸವೆಲ್ಲ ಮುಗಿಸಿದ್ದು ಮೌಂಟ್ ಕಾರ್ಮೆಲ್ ಶಾಲೆ ಬೆಂಗಳೂರಿನಲ್ಲಿ. ಇವರ ತಂದೆ ರಾಮಕೃಷ್ಣ ಕನ್ನಡ ಚಿತ್ರರಂಗದಲ್ಲಿ ಕೇಶ ವಿನ್ಯಾಸಕಾರರಾಗಿ ಕೆಲಸ ನಿರ್ವಹಿಸುತ್ತಿದ್ದರು. ತಂದೆಯ ಪ್ರಭಾವದಿಂದ ಸಿನಿಮಾರಂಗದಲ್ಲಿ ಆಸಕ್ತಿ ಬೆಳೆಸಿಕೊಂಡು ನಟನೆ ಆರಂಭಿಸಿದರು ಈ ನಟಿ.

  ನಟಿ ಸೋನು ಗೌಡ ಅವರು ರಾಜನಂದಿನಿ ಪಾತ್ರ ಮಾಡುತ್ತಿದ್ದಾರೆ. ಈಗಾಗಲೇ ಧಾರಾವಾಹಿ ಎಪಿಸೋಡ್‌ನಲ್ಲಿ ರಾಜನಂದಿನಿಯಾಗಿ ಸೋನು ಗೌಡ ಕಾಣಿಸಿಕೊಂಡಿದ್ದಾರೆ. ಸಿನಿಮಾಗಳಲ್ಲಿ ಇಷ್ಟುದಿನ ಬಣ್ಣ ಹಚ್ಚಿದ್ದ ಸೋನು ಗೌಡ 'ಜೊತೆ ಜೊತೆಯಲಿ' ಮೂಲಕ ಕಿರುತೆರೆಗೆ ಎಂಟ್ರಿ ನೀಡಿದ್ದಾರೆ.

  ರಾಜನಂದಿನಿ ಆರ್ಯವರ್ಧನ್ ಅವರ ಮೊದಲ ಪತ್ನಿ. ಅವಳ ಇತಿಹಾಸವನ್ನು ಅನು ಸಿರಿಮನೆ ಕೆದಕುತ್ತಿದ್ದಾಳೆ. ಆರ್ಯನ್ ಇನ್ನೊಂದು ಮುಖದ ಪರಿಚಯ ಅನುಗೆ ಆಗುತ್ತಿದೆ. ಯಾವುದನ್ನು ನಂಬಬೇಕು, ಯಾವುದನ್ನು ನಂಬಬಾರದು ಎಂದು ಕೂಡ ಅನುಗೆ ತಿಳಿಯುತ್ತಿಲ್ಲ. ಈ ನಡುವೆ ಅನು ಸಿರಿಮನೆ ಮೇಲೆ ಆಗಾಗ ರಾಜನಂದಿನಿ ಆವಾಹನ ಕೂಡ ಆಗುತ್ತಿದೆ. ಒಟ್ಟಿನಲ್ಲಿ ಕುತೂಹಲ ಹೆಚ್ಚುತ್ತಿದೆ.

  'ವೆಡ್ಡಿಂಗ್ ಗಿಫ್ಟ್' ಸಿನಿಮಾದಲ್ಲಿ ಸೋನು ಗೌಡ ನಟಿಸಿದ್ದಾರೆ. ಈ ಚಿತ್ರದಲ್ಲಿ ಪ್ರೇಮಾ ಕೂಡ ಬಣ್ಣಹಚ್ಚಿದ್ದು, ನಿರ್ದೇಶಕ ವಿಕ್ರಮ್ ಪ್ರಭು ಸಿನಿಮಾದ ಶೂಟಿಂಗ್ ಕಂಪ್ಲೀಟ್ ಮಾಡಿದ್ದಾರೆ. ಆಕಾಂಕ್ಷಾ ಎಂಬ ಪಾತ್ರದಲ್ಲಿ, ನೊಂದ ಮನಸ್ಸುಗಳಿಗೆ ಹತ್ತಿರವಾಗುವ ಪಾತ್ರದಲ್ಲಿ ಸೋನು ಗೌಡ ಕಾಣಿಸಿಕೊಂಡಿದ್ದಾರೆ. 'ಇಂತಿ ನಿನ್ನ ಪ್ರೀತಿಯ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ನಟಿ ಸೋನು ಗೌಡ ಅವರು 'ಯುವರತ್ನ', 'ಪರಮೇಶಿ ಪಾನ್‌ವಾಲಾ', 'ಗುಲಾಮ', 'ಹ್ಯಾಪಿ ನ್ಯೂ ಇಯರ್', 'ಗುಲ್ಟು', 'ಐ ಲವ್ ಯು' ಮುಂತಾದ ಸಿನಿಮಾಗಳಲ್ಲಿ ಸೋನು ಗೌಡ ಅಭಿನಯಿಸಿದ್ದಾರೆ.

  English summary
  Jote Joteyali Serial Actress Sonu Gowda Birth Day. Here is some detail about her.
  Thursday, March 24, 2022, 9:30
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X