For Quick Alerts
  ALLOW NOTIFICATIONS  
  For Daily Alerts

  ವಿಶ್ವಾಸ್ ದೇಸಾಯಿ ಸಾವಿನ ರಹಸ್ಯ ತಿಳಿದ ಮೀರಾ..!

  By ಪ್ರಿಯಾ ದೊರೆ
  |

  'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಸಂಜು ಎಂಬ ಅನಾಮಿಕ ವ್ಯಕ್ತಿ ಯಾರು ಎಂದು ತಿಳಿಯುವ ಸಲುವಾಗಿ ಝೇಂಡೇ, ಆತನನ್ನು ಕಿಡ್ನ್ಯಾಪ್‌ ಮಾಡಿ ಹೊಡೆದು ಬಾಯಿ ಬಿಡಿಸಲು ಯತ್ನಿಸಿದ್ದಾನೆ. ಆದರೆ, ಸಂಜುಗೆ ಯಾವ ನೆನಪೂ ಇಲ್ಲದ ಕಾರಣ ಅವನನ್ನು ಬಿಟ್ಟು ಕಳಿಸಿದ್ದಾನೆ.

  ಒದೆ ತಿಂದು ದಾರಿಯಲ್ಲಿ ಸಿಕ್ಕ ಸಂಜುನನ್ನು ಅನು ವಠಾರಕ್ಕೆ ಕರೆದುಕೊಂಡು ಬಂದು ಫಸ್ಟ್‌ ಏಡ್‌ ಮಾಡಿದ್ದಾಳೆ. ಸಂಜುಗೆ ತನ್ನನ್ನು ಅವರು ಯಾಕೆ ಕರೆದುಕೊಂಡು ಹೋಗಿ ಹಿಂಸೆ ಕೊಟ್ಟರು. ತನ್ನದೇನು ತಪ್ಪು. ಅಷ್ಟಕ್ಕೂ ತಾನ್ಯಾರು ಎನ್ನುವ ಗೊಂದಲಮಯ ಪ್ರಶ್ನೆಗಳು ಮೂಡಿವೆ.

  ಪ್ಯಾಲಿಯೋ ಡಯೆಟ್‌ನಿಂದ ಪ್ರಾಣಕ್ಕೆ ಸಂಚಕಾರ? ಖ್ಯಾತ ನಟ ಕಲ್ಯಾಣ್ ಕುಮಾರ್ ಸೊಸೆ ಪ್ರಿಯದರ್ಶಿನಿ ನಿಧನಪ್ಯಾಲಿಯೋ ಡಯೆಟ್‌ನಿಂದ ಪ್ರಾಣಕ್ಕೆ ಸಂಚಕಾರ? ಖ್ಯಾತ ನಟ ಕಲ್ಯಾಣ್ ಕುಮಾರ್ ಸೊಸೆ ಪ್ರಿಯದರ್ಶಿನಿ ನಿಧನ

  ಸಂಜು ತಿಂದ ಹೊಡೆತಕ್ಕೆ ಗಾಬರಿಯಾಗಿದ್ದಾನೆ. ತನ್ನ ಜೀವಕ್ಕೆ ಅಪಾಯವಿದೆ ಎಂದು ತಿಳಿದ ಸಂಜು, ಅನುಳನ್ನು ಸಹಾಯಕ್ಕಾಗಿ ಕೇಳಿಕೊಂಡಿದ್ದಾನೆ. ಅನುಗೆ ಸಂಜು ನಡೆದುಕೊಳ್ಳುತ್ತಿರುವ ರೀತಿ ನೋಡಿ ಬೇಸರ ಮಾಡಿಕೊಂಡಿದ್ದಾಳೆ.

  ನನ್ನನ್ನು ಬಿಟ್ಟು ಹೋಗಬೇಡಿ ಎಂದ ಸಂಜು

  ನನ್ನನ್ನು ಬಿಟ್ಟು ಹೋಗಬೇಡಿ ಎಂದ ಸಂಜು

  ಸಂಜು, ಅನು ಕೈಯನ್ನು ಹಿಡಿದು, ಪ್ಲೀಸ್‌ ನನ್ನನ್ನು ಬಿಟ್ಟು ಹೋಗಬೇಡಿ. ಅನು ನನ್ನ ಜೊತೆಗೆ ಇರಿ ಎಂದಿದ್ದಾನೆ. ಅಲ್ಲದೇ ಅವತ್ತು ನದಿಯಲ್ಲಿ ನೀವು ನೀರಿಗೆ ಬಿದ್ದಾಗ ಯಾರೋ ನಿಮ್ಮನ್ನು ಟಾರ್ಗೆಟ್‌ ಮಾಡಿದ್ದಾರೆ ಎಂದು ತಿಳಿದಿದ್ದೆ. ಆದರೆ ನೀವಲ್ಲ ನಾನು ಎಂಬುದು ಇವತ್ತು ಗೊತ್ತಾಯ್ತು. ಅವತ್ತು ನದಿಯಲ್ಲಿ ಕಂಡ ವ್ಯಕ್ತಿಯೇ ನಿಮ್ಮ ಮನೆ ಬಳಿಯೂ ಕಾಣಿಸಿಕೊಂಡಿದ್ದ. ಇವತ್ತು ಆ ಗುಂಪಿನಲ್ಲಿ ಮತ್ತದೇ ವ್ಯಕ್ತಿ ಇದ್ದ. ಯಾರೋ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ನನ್ನನ್ನು ಹೊಡೆದು ನೀನು ಯಾರು? ನಿನ್ನ ಮನೆಯಲ್ಲಿ ನಿನ್ನ ಫೋಟೋಗೆ ಹೂ ಮುಡಿಸಿದ್ದಾರೆ. ಆಸ್ಪತ್ರೆಯಲ್ಲಿ ನೀನು ಸತ್ತಿದ್ದೀಯಾ ಎನ್ನುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದ ಎನ್ನುತ್ತಾನೆ. ಈ ಮಾತುಗಳಿಂದ ಮರುಗಿದ ಅನು, ಇದು ನಿಮ್ಮ ಮೇಲೆ ಬೇಕಂತ ಅಟ್ಯಾಕ್‌ ಮಾಡಿದ್ದಲ್ಲ. ನಾನು ಪೊಲೀಸರಿಗೆ ಎಲ್ಲಾ ವಿಚಾರ ಹೇಳುತ್ತಿನಿ ಎನ್ನುತ್ತಾಳೆ.

  ವಿಶ್ವಾಸ್‌ ದೇಸಾಯಿ ಸತ್ತ ವಿಚಾರ ತಿಳಿದ ಮೀರಾ

  ವಿಶ್ವಾಸ್‌ ದೇಸಾಯಿ ಸತ್ತ ವಿಚಾರ ತಿಳಿದ ಮೀರಾ

  ಇತ್ತ ಮೀರಾ, ಹರ್ಷನ ನಡವಳಿಕೆಯಿಂದ ಬೇಸತ್ತಿದ್ದಾಳೆ. ಹಾಗಾಗಿ ಝೇಂಡೇ ಅನ್ನು ಭೇಟಿ ಮಾಡಿದ್ದಾಳೆ. ಲೈಫ್‌ನಲ್ಲಿ ಫಸ್ಟ್‌ ಟೈಮ್‌ ನಾನು ಕೂಲಿ ಅಂತ ಅನಿಸ್ತು. ಕೆಲಸಕ್ಕೆ ಬಾರದಿರೋ, ದಿಕ್ಕು ದೆಸೆ ಇಲ್ಲದ ಆ ಸಂಜುಗೋಸ್ಕರ ಇವತ್ತು ಹರ್ಷ ಅವರ ಕೈಯಲ್ಲಿ ಎಲ್ಲರ ಮುಂದೆ ಬೈಯಿಸಿಕೊಳ್ಳಬೇಕಾಯ್ತು ಎನ್ನುತ್ತಾಳೆ. ಆಗ ಝೇಂಡೇ, ಮೇಡಂ, ವಿಶ್ವಾಸ್‌ ದೇಸಾಯಿ ಬದುಕಿಲ್ಲ. ಆತ ಸತ್ತಿರುವುದು ಕನ್ಫರ್ಮ್‌ ಎಂದು ಹೇಳುತ್ತಾನೆ. ಆಗ ಮೀರಾ ಈ ಮಾತನ್ನು ಕೇಳಿ ಶಾಕ್‌ ಆಗುತ್ತಾಳೆ. ಹಾಗಾದರೆ, ಈಗಿರುವ ಸಂಜು ಯಾರು ಎಂದು ಕೇಳಿದ್ದಕ್ಕೆ, ಆತ ಅನಾಮಿಕ ಎಂದು ಝೇಂಡೇ ಹೇಳುತ್ತಾನೆ.

  ಸಂಜುನನ್ನು ಮನೆಗೆ ಕರೆ ತಂದ ಹರ್ಷ

  ಸಂಜುನನ್ನು ಮನೆಗೆ ಕರೆ ತಂದ ಹರ್ಷ

  ಇನ್ನು ಅನು, ಶಾರದಾ ದೇವಿಗೆ ಸಂಜುಗೆ ಅಪಘಾತವಾಗಿರುವ ವಿಚಾರವನ್ನು ಹೇಳುತ್ತಾಳೆ. ಹರ್ಷ ವಠಾರಕ್ಕೆ ಹೋಗಿ ಸಂಜುನ ಕರೆ ತರುತ್ತಾನೆ. ಸಂಜು ರೂಮಿನಲ್ಲಿ ರೆಸ್ಟ್‌ ಮಾಡುವಾಗ ಹೋಗುವ ಶಾರದಾ, ಆತನನ್ನು ವಿಚಾರಿಸುತ್ತಾಳೆ. ಆಗ ಸಂಜು ಈ ಮಾತನ್ನು ನೀವು ನನಗೆ ಈ ಹಿಂದೆಯೇ ಹೇಳಿದ್ದೀರಾ. ನನಗೆ ನೆನಪಿನ ಶಕ್ತಿ ಹೋಗುವ ಮುನ್ನವೇ ನಿಮ್ಮನ್ನು ಭೇಟಿಯಾಗಿದ್ದೇನೆ ಎನ್ನುತ್ತಾನೆ. ಈ ಮಾತಿಗೆ ಹೆಚ್ಚು ತಲೆ ಕೆಡಿಸಿಕೊಳ್ಳದ ಶಾರದಾ ಸುಮ್ಮನಾಗುತ್ತಾಳೆ.

  ಎಲ್ಲರ ಬಳಿ ಸತ್ಯ ಹೇಳುತ್ತಾಳಾ ಪ್ರಿಯದರ್ಶಿನಿ

  ಎಲ್ಲರ ಬಳಿ ಸತ್ಯ ಹೇಳುತ್ತಾಳಾ ಪ್ರಿಯದರ್ಶಿನಿ

  ಪ್ರಿಯದರ್ಶಿನಿ, ಸಂಜುನೇ ಆರ್ಯ ಎಂಬ ಸತ್ಯವನ್ನು ಮುಚ್ಚಿಟ್ಟಿದ್ದಾಳೆ. ಈಗ ಅವಳ ಕನಸಿನಲ್ಲಿ ಜೋಗ್ತವ್ವ ಬಂದಿದ್ದು, ನೀನು ಮುಚ್ಚಿಟ್ಟಿರುವ ಸತ್ಯ ಈಗ ವಿಷವಾಗುತ್ತಿದೆ. ಅದರಿಂದ ಮತ್ತೆ ಯಾರದ್ದಾದರೂ ಪ್ರಾಣ ಹೋಗುವ ಮುನ್ನ ಸತ್ಯ ಹೇಳು. ಸತ್ಯ ಮುಚ್ಚಿಟ್ಟು ಮತ್ತಷ್ಟು ಅನಾಹುತಗಳಿಗೆ ಜಾಗ ಮಾಡಿಕೊಡಬೇಡ ಎನ್ನುತ್ತಾಳೆ. ಈ ಮಾತನ್ನು ಕೇಳಿ ಎಚ್ಚರವಾದ ಪ್ರಿಯದರ್ಶಿನಿ, ಶಾರದಾ ಅವರ ಬಳಿ ಸತ್ಯ ಹೇಳಬೇಕು ಎಂದು ನಿರ್ಧರಿಸುತ್ತಾಳೆ. ಮುಂದೇನಾಗುತ್ತೋ ಕಾದು ನೋಡಬೇಕಿದೆ.

  ಸತ್ಯಳನ್ನು ಹೆಂಡತಿ ಎಂದು ಕಾರ್ತಿಕ್ ಒಪ್ಪಿಕೊಂಡಾಯ್ತಾ..?ಸತ್ಯಳನ್ನು ಹೆಂಡತಿ ಎಂದು ಕಾರ್ತಿಕ್ ಒಪ್ಪಿಕೊಂಡಾಯ್ತಾ..?

  English summary
  jothe jotheyali Serial 03rd november Episode Written Update. jogthavva comes to priyadarshini dream. And she says her to tell the truth about arya.
  Thursday, November 3, 2022, 20:13
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X