Don't Miss!
- News
ಇಂದು ಸಿಎಂ ಬಸವರಾಜ ಬೊಮ್ಮಾಯಿ ಅವರ ಜನ್ಮದಿನ: ತಂದೆ ತಾಯಿಯ ಸಮಾಧಿಗೆ ಪೂಜೆ ಸಲ್ಲಿಸಿದ ಸಿಎಂ
- Lifestyle
ಬೆಳ್ಳಿಯ ಆಭರಣಗಳು ಹೊಳಪಿನಿಂದ ಕೂಡಿರಲು ಈ ಟ್ರಿಕ್ಸ್ ಬಳಸಿ
- Automobiles
ಟಾಟಾದ ಜನಪ್ರಿಯ ಕಾರುಗಳ ಬೆಲೆ ಏರಿಕೆ: ಘೋಷಣೆ
- Sports
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಸರ್ಫರಾಜ್ ಖಾನ್ಗೆ ಅವಕಾಶ ಇಲ್ಲ: ಬಿಸಿಸಿಐ ನೀಡಿದ ಭರವಸೆ ಏನು?
- Technology
ChatGPT Effect: AI ಟೂಲ್ಸ್ ಬ್ಯಾನ್ ಮಾಡಲು ಮುಂದಾದ ಬೆಂಗಳೂರಿನ ಈ ಕಾಲೇಜುಗಳು!
- Finance
ಹಿಂಡನ್ಬರ್ಗ್ vs ಅದಾನಿ ನಡುವೆ ಎಲ್ಐಸಿ, ಎಸ್ಬಿಐ ಉಳಿತಾಯ ರಿಸ್ಕ್ನಲ್ಲಿದೆಯೇ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಆರ್ಯನ ಡೆತ್ ಸರ್ಟಿಫಿಕೆಟ್ ತರಲು ಹೊರಟ ಅನುಗೆ ಸತ್ಯ ಗೊತ್ತಾಗುತ್ತಾ..?
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಅನು, ಮೀರಾಳನ್ನು ರಿಸೈನ್ ಮಾಡಿರುವುದಕ್ಕೆ ಕಾರಣವನ್ನು ಕೇಳುತ್ತಾಳೆ. ಆಗ ಮೀರಾ, ಝೇಂಡೇ ಇಲ್ಲದೇ ಆಫೀಸಿನಲ್ಲಿ ನನಗೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಹೇಳುತ್ತಾಳೆ.
ಇನ್ನು ಅನು ಸದ್ಯಕ್ಕೆ ಕೆಲಸ ಮುಂದುವರಿಸಿ, ನಿನ್ನ ಕೆಲಸಕ್ಕೆ ತೊಂದರೆಯಾಗದಂತೆ ನಾನು ನೋಡಿಕೊಳ್ಳುತ್ತೇನೆ ಎಂದು ಅನು ಸಮಾಧಾನ ಮಾಡುತ್ತಾಳೆ. ಈ ವೇಳೆ ಮೀರಾ, ಅನುಳನ್ನು ಮತ್ತೊಂದು ಪ್ರಶ್ನೆ ಕೇಳುತ್ತಾಳೆ.
ಸಿರಿ
ಅತ್ತೆ
ತುಳಸಿಗೆ
ಸರ್ಪ್ರೈಸ್
ಕೊಡಲು
ಕರೆದುಕೊಂಡು
ಬಂದಿದ್ದೆಲ್ಲಿಗೆ?
ಆರ್ಯ ಸರ್‌ನ ಪ್ರತಿಯೊಂದು ಡಾಕ್ಯುಮೆಂಟ್ಸ್ ಕೂಡ ನನ್ನ ಬಳಿ ಇದೆ. ಆದರೆ ಅವರ ಡೆತ್ ಸರ್ಟಿಫಿಕೆಟ್ ಇಲ್ಲ. ನನಗೊಂದು ಕಾಪಿ ಬೇಕಿತ್ತು ಎಂದು ಕೇಳುತ್ತಾಳೆ. ಅದಕ್ಕೆ ಅನು ನಾನು ತರಿಸಿಕೊಡುತ್ತೀನಿ ಎಂದು ಹೇಳಿ ಮನೆಗೆ ಹೋಗುತ್ತಾಳೆ.

ಆರಾಧನಾ ಕರೆಗೆ ಬೇಸತ್ತ ಸಂಜು
ಆಫೀಸಿನಲ್ಲಿ ಸಂಜು, ಅನುಗಾಗಿ ಕಾಯುತ್ತಿರುತ್ತಾನೆ. ಆದರೆ ಅನು ಮನೆಗೆ ಹೊರಟಿರುತ್ತಾಳೆ. ಈ ಬಗ್ಗೆ ಸಂಜು, ಮೀರಾಳಿಂದ ಮಾಹಿತಿ ಪಡೆದುಕೊಳ್ಳುತ್ತಾನೆ. ಮನೆಗೆ ಹೋಗಬೇಕು ಎನ್ನುವಷ್ಟರಲ್ಲಿ ಆರಾಧನಾ, ಸಂಜುಗೆ ಕರೆ ಮಾಡುತ್ತಾಳೆ. ಮನೆಯಲ್ಲಿ ನನಗೆ ಇರೋದಕ್ಕೆ ಆಗುತ್ತಿಲ್ಲ ಬೇಗ ಬಾ ಎಂದು ಕರೆಯುತ್ತಾಳೆ. ಆದರೆ, ಆಫೀಸಿನಲ್ಲಿ ತನಗೆ ತುಂಬಾ ಕೆಲಸವಿದೆ ಎಂದು ಸುಳ್ಳು ಹೇಳುತ್ತಾನೆ. ಇನ್ನು ಮನೆಗೆ ಹೋಗಿ ಆರಾಧನಾ ಜೊತೆಗೆ ಮಾತನಾಡಲು ಇಷ್ಟವಿಲ್ಲದೇ, ಮನೆಗೆ ಹೋಗುವುದೇ ಬೇಡ ಎಂದು ಅಂದುಕೊಳ್ಳುತ್ತಾನೆ. ಅಷ್ಟರಲ್ಲಿ ಝೇಂಡೇ ಬರುತ್ತಾನೆ. ಎಲ್ಲಿಗೆ ಹೊರಟಿದ್ದೀರಿ ಡ್ರಾಪ್ ಮಾಡಲಾ ಎಂದು ಕೇಳುತ್ತಾನೆ. ಝೇಂಡೇ ಸಿಕ್ಕಿದ್ದೆ ಚಾನ್ಸ್ ಎಂದು ಸಂಜುನನ್ನು ಕರೆದುಕೊಂಡು ಹೋಗುತ್ತಾನೆ.

ಸಂಜುಗೆ ಡ್ರಾಪ್ ಕೊಟ್ಟ ಝೇಂಡೇ
ಆರ್ಯ ಮತ್ತು ಝೇಂಡೇ ಸದಾ ಹೋಗುತ್ತಿದ್ದ ಟೀ ಸ್ಟಾಲ್‌ಗೆ ಸಂಜುನನ್ನು ಕರೆದುಕೊಂಡು ಹೋಗುತ್ತಾನೆ. ಆರ್ಯನ ಬಗ್ಗೆ ಮಾತನಾಡುತ್ತಾ ವರ್ಧನ್ ಕುಟುಂಬ ನನ್ನ ಗೆಳೆಯನಿಗೆ ಮೋಸ ಮಾಡಿತು ಎಂದು ಹೇಳುತ್ತಾನೆ. ಸಂಜುಗೆ ಝೇಂಡೇ ಮಾತುಗಳನ್ನು ಕೇಳಿಸಿಕೊಳ್ಳುತ್ತಾನೆ. ನಂತರ ವಠಾರಕ್ಕೆ ಡ್ರಾಪ್ ಹಾಕಿಸಿಕೊಂಡ ಸಂಜು, ಝೇಂಡೇ ಮಾತನ್ನು ಕೇಳುತ್ತಿರುವಂತೆ ನಟಿಸುತ್ತಾನೆ. ಝೇಂಡೇ ಇದನ್ನು ನಂಬಿಕೊಂಡಿದ್ದಾನೆ. ಹೇಗಾದರೂ ಮಾಡಿ ಸಂಜುನನ್ನು ತನ್ನ ಪರ ಸೆಳೆದುಕೊಳ್ಳುವ ಪ್ರಯತ್ನದಲ್ಲಿದ್ದಾನೆ.

ಅನುಗೆ ಅಪಾಯವಿದೆ ಎಂದ ಸಂಜು
ವಠಾರದಲ್ಲಿ ಸುಬ್ಬು ಮತ್ತು ಪುಷ್ಪಾ ಬಳಿ ಬಂದು ಸಹಾಯ ಕೇಳುತ್ತಾನೆ. ನನಗೆ ಸ್ನೇಹಿತರು ಅಂತ ಯಾರೂ ಇಲ್ಲ. ನನಗೆ ಸಹಾಯ ಮಾಡಿ ನನಗೆ ಆರಾಧನಾ ಅವರು ಕಾಲ್ ಮಾಡುತ್ತಿದ್ದಾರೆ. ಆದರೆ ನಾನು ಅವರ ಬಳಿ ಮಾತನಾಡೋದಕ್ಕೆ ಏನೂ ಇಲ್ಲ. ಅವರು ನನ್ನ ಬಳಿ ಬಂದಷ್ಟೂ ನನಗೆ ಹಿಂಸೆ ಆಗುತ್ತದೆ. ಅವರಿಂದ ತಪ್ಪಿಸಿಕೊಳ್ಳಬೇಕು ಎಂದು ಪ್ರಯತ್ನಿಸುತ್ತಿರುತ್ತೇನೆ. ಆದರೆ, ಇತ್ತ ಝೇಂಡೇ ಬೇರೆ ನನ್ನ ಹಿಂದೆ ಬಿದ್ದಿದ್ದಾನೆ. ಅಲ್ಲದೇ, ಆರ್ಯ ಬಗ್ಗೆ ಏನೇನೋ ಹೇಳುತ್ತಿರುತ್ತಾನೆ. ಝೇಂಡೇ ಇಂದ ಅನುಗೆ ಅಪಾಯವಿದೆ ಎಂದು ಹೇಳುತ್ತಾನೆ. ಈ ಮಾತನ್ನು ಕೇಳಿದ ಪುಷ್ಪಾ-ಸುಬ್ಬು ಶಾಕ್ ಆಗುತ್ತಾರೆ.

ಅನುಗೆ ಸತ್ಯ ಗೊತ್ತಾಗುವ ಸಮಯ ಬಂತು
ಅನು ಮನೆಗೆ ಹೋಗಿ ಶಾರದಾ ಬಳಿ ಆರ್ಯನ ಡೆತ್ ಸರ್ಟಿಫಿಕೆಟ್ ಕೇಳುತ್ತಾಳೆ. ಶಾರದಾ ಫೈಲ್ ಚೆಕ್ ಮಾಡಿದಾಗ ಡೆತ್ ಸರ್ಟಿಫಿಕೆಟ್ ಇರುವುದಿಲ್ಲ. ಆಗ ಗಾಬರಿಯಲ್ಲಿ ಡಾಕ್ಯುಮೆಂಟ್ ಪಡೆದೇ ಇಲ್ಲ ಎಂದು ಹೇಳುತ್ತಾಳೆ. ಆಗ ಅನು, ಆರ್ಯ ಅಡ್ಮಿಟ್ ಆಗಿದ್ದ ಆಸ್ಪತ್ರೆಗೆ ಹೊರಡುತ್ತಾಳೆ. ಡೆತ್ ಸರ್ಟಿಫಿಕೆಟ್ ಇಲ್ಲದೇ, ಆರ್ಯ ಸರ್ ಸಾವನ್ನ ಹೇಗೆ ಒಪ್ಪಿಕೊಂಡೆವು ಎಂಬುದು ಅನು ಯೋಚನೆ. ಆಸ್ಪತ್ರೆಗೆ ಹೋಗುತ್ತಿರುವ ಅನುಗೆ ಆರ್ಯ ಬದುಕಿರುವ ಸತ್ಯ ಗೊತ್ತಾಗುತ್ತಾ..?