For Quick Alerts
  ALLOW NOTIFICATIONS  
  For Daily Alerts

  Jothe Jotheyali: ಮನೆಯಿಂದ ಹೊರಟ ಆರಾಧನಾ ಹಾಗೂ ಆರ್ಯ: ಇಬ್ರು ಹೋಗಿದ್ದೆಲ್ಲಿಗೆ..?

  By ಪ್ರಿಯಾ ದೊರೆ
  |

  'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಆರಾಧನಾ ನನಗೆ ಇಲ್ಲಿ ಉಸಿರು ಕಟ್ಟುವಂತೆ ಮಾಡಿದೆ. ವಿಶು ಇಲ್ಲಿಗೆ ಬರುವ ಮುಂಚೆ ನನ್ನನ್ನ ನೀನೇ ನನ್ನ ಉಸಿರು ಅಂತಿದ್ದರು. ಆದರೆ ಈಗ ತುಂಬಾ ಬದಲಾಗಿದ್ದಾರೆ ಎಂದು ಹೇಳುತ್ತಾಳೆ.

  ಇದಕ್ಕೆ ಅನು ಇಷ್ಟೇ ಸಹಿಸಿಕೊಂಡಿದ್ದೀರಾ, ಇನ್ನು ಸ್ವಲ್ಪ ದಿನ ಇರಿ ನಾನು ಕೊಂಚ ಅವರಿಗೆ ಅರ್ಥ ಮಾಡಿಸುತ್ತೀನಿ. ನೀವು ಒಬ್ಬರೇ ಹೋಗಬೇಡಿ. ವಿಶುನು ಜೊತೆಗೆ ಕರೆದುಕೊಂಡು ಹೋಗಿ. ನಾನು ಮಾತನಾಡುತ್ತೀನಿ ಎಂದು ಹೇಳುತ್ತಾಳೆ.

  ದೇವರಕೊಂಡ ಜೊತೆ 5 ದಿನ 100 ಮಂದಿಗೆ ಉಚಿತ ಪ್ರವಾಸ: ನೀವು ಆ ಅದೃಷ್ಟವಂತರಾಗಬಹುದು! ದೇವರಕೊಂಡ ಜೊತೆ 5 ದಿನ 100 ಮಂದಿಗೆ ಉಚಿತ ಪ್ರವಾಸ: ನೀವು ಆ ಅದೃಷ್ಟವಂತರಾಗಬಹುದು!

  ಅದಕ್ಕೆ ಆರಾಧನಾ ನಿಮ್ಮನ್ನ ಕೇಳಿ ವಿಶು ನನ್ನ ಜೊತೆ ಬರುವುದಾದರೆ ನನಗೆ ಅವನು ಬೇಡ. ನಿಮ್ಮನ್ನ ಕೇಳಿ ವಿಶು ನನ್ನನ್ನು ಪ್ರೀತಿಸಿರಲಿಲ್ಲ. ನಾನು ಹೊರಡುತ್ತೀನಿ ಎಂದು ಹೇಳುತ್ತಾಳೆ.

  ಆರ್ಯನನ್ನು ಒಪ್ಪದ ಅನು

  ಆರ್ಯನನ್ನು ಒಪ್ಪದ ಅನು

  ಆರ್ಯನನ್ನು ತನ್ನ ಗಂಡ ಎಂದು ಒಪ್ಪದ ಅನು, ಆರಾಧನಾಳಿಗೆ ಸಮಾಧಾನ ಹೇಳಿದರೂ ಆಕೆ ಹೊರಟು ನಿಲ್ಲುತ್ತಾಳೆ. ಆಗ ಅನು ನೀವು ಈ ಮನೆಯಿಂದ ಹೋಗಲೇಬೇಕು ಎಂದು ನಿರ್ಧಾರ ಮಾಡಿದ್ದರೆ, ಮೊದಲು ನಾನು ಹೋಗುತ್ತೇನೆ. ಆಗ ನೀವು ಇಲ್ಲೇ ಇರಿ ಅಥವಾ ಹೋಗಿ ಅದನ್ನ ಕೇಳುವುದಕ್ಕೆ ನಾನು ಇರುವುದಿಲ್ಲ ಎಂದು ಹೇಳುತ್ತಾಳೆ. ಆಗ ಶಾರದಾ ದೇವಿ ಅನುಳನ್ನು ಈ ನಿರ್ಧಾರ ತಪ್ಪು ಎಂದು ಹೇಳಿದಾಗ, ಆಕೆ ಕೇಳುವುದಿಲ್ಲ. ಇಲ್ಲಿ ಎಲ್ಲಾ ಸಮಸ್ಯೆಯೂ ನನ್ನಿಂದಲೇ ಆಗುತ್ತಿದೆ. ನಾನು ಹೋಗುವುದೇ ಸರಿ ಎಂದು ಹೇಳುತ್ತಾಳೆ.

  ಬೇಸರಗೊಂಡು ಮಾತನಾಡಿದ ಮಾನ್ಸಿ

  ಬೇಸರಗೊಂಡು ಮಾತನಾಡಿದ ಮಾನ್ಸಿ

  ಆಗ ಆರ್ಯ ಬೇಡ ಯಾರೂ ಈ ಮನೆಯಿಂದ ಹೊರಗೆ ಹೋಗುವುದು ಬೇಡ. ನಿಮಗೆ ಆರಾಧನಾಗೆ ಇಬ್ಬರಿಗೂ ನಾನೇ ಅಲ್ವಾ ಸಮಸ್ಯೆ. ನಾನೇ ಹೋದರೆ, ನೀವು ಆರಾಧನಾ ಇಬ್ಬರಿಗೂ ನೆಮ್ಮದಿ ಎಂದು ಹೇಳಿ ಆರ್ಯ ಮನೆಯಿಂದ ಹೊರಟು ಬಿಡುತ್ತಾನೆ. ಆಗ ಮಾನ್ಸಿ ಮಾತನಾಡುತ್ತಾಳೆ. ಮಾಮ್ ಇನ್ ಲಾ ಇಲ್ಲಿ ಏನ್ ನಡೆಯುತ್ತಿದೆ. ನಾನು ಮಾತನಾಡಲು ಇದು ಸರಿಯಾದ ಸಮಯ ಅಲ್ಲದೇ ಇರಬಹುದು. ಆದರೆ ನಾನು ಈಗ ಮಾತನಾಡಲೇಬೇಕು. ಅನು ನಿನಗೆ ಏನಾಗಿದೆ. ಮಾಮ್ ಇನ್ ಲಾ ಆಫಿಸಿನಲ್ಲಿ ಎಲ್ಲರ ಮುಂದೆ ಸಂಜುನೇ ಆರ್ಯ ಎಂದು ಹೇಳಿದ್ದೆಲ್ಲಾ ಕತೆ ಅಂತ ಹೇಳುತ್ತಿದ್ದೀಯಾ. ನಾವೆಲ್ಲಾ ಫೂಲ್ಸ್ ಆ ಎಂದು ಹೇಳುತ್ತಾಳೆ. ಮಾಮ್ ಇನ್ ಲಾನ ನೀವು ಹೇಳಿದ್ದೆಲ್ಲಾ ನಿಜಾನ ಎಂದು ಕೇಳಿದ್ದಕ್ಕೆ ಶಾರದಾ ದೇವಿ ಹೌದು ಎನ್ನುತ್ತಾಳೆ. ಅದಕ್ಕೆ ಅನುಗೆ ಮಾನ್ಸಿ ನೀನು ತಪ್ಪು ಮಾಡುತ್ತಿದ್ದೀಯಾ ಇನ್ನೊಂದು ಸಲ ಯೋಚನೆ ಮಾಡು ಎಂದು ಹೇಳುತ್ತಾಳೆ.

  ಬುದ್ದಿ ಹೇಳಿದ ಶಾರದಾ ದೇವಿ

  ಬುದ್ದಿ ಹೇಳಿದ ಶಾರದಾ ದೇವಿ

  ಇದರಿಂದ ಬೇಸರಗೊಂಡ ಆರಾಧನಾ ಅನು ಇದನ್ನೆಲ್ಲಾ ಕೇಳುವುದಕ್ಕೆ ನನಗೂ ಹಿಂಸೆ ಆಗುತ್ತಿದೆ. ನಾನು ಮಾಡಬೇಕಿರುವುದನ್ನೆಲ್ಲಾ ಮಾಡಿ ಆಗಿದೆ. ಇನ್ನೇನಿದ್ದರೂ ವಿಶುಗೆ ಬಿಟ್ಟಿದ್ದು. ಅವನು ನನ್ನ ಜೊತೆಗೆ ಬಂದರೆ ಖುಷಿಯಾಗಿ ಹೋಗುತ್ತೀನಿ. ಇಲ್ಲಾಂದ್ರೆ ಇದು ನನ್ನ ಹಣೆಬರಹ ಎಂದು ಹೇಳುತ್ತಾಳೆ. ಆಗ ಮಾನ್ಸಿ ಈ ಮೆಲೋ ಡ್ರಾಮನಾ ನೋಡಲು ಆಗುತ್ತಿಲ್ಲ. ಇಲ್ಲಿ ಯಾರೂ ಪಾರದರ್ಶಕರಾಗಿಲ್ಲ ಎಂದು ಹೇಳಿ ಹರ್ಷನನ್ನು ಮೇಲೆ ಬರುವುದಕ್ಕೆ ಹೇಳಿ ಹೊರಡುತ್ತಾಳೆ. ಆಗ ಅನುಗೆ ಆರಾಧನಾ ಥ್ಯಾಂಕ್ಸ್ ಹೇಳಿ ಮನೆಯಿಂದ ಹೊರಟು ಬಿಡುತ್ತಾಳೆ. ಇದರಿಂದ ಅನು ಬೇಸರ ಮಾಡಿಕೊಳ್ಳುತ್ತಾಳೆ. ಅನುಗೆ ಶಾರದಾ ಬುದ್ಧಿ ಹೇಳುತ್ತಾಳೆ. ನೀನು ಆರ್ಯನ ಬಿಟ್ಟು ಕೊಡುವುದು ಸರಿಯಲ್ಲ. ಇದರಿಂದ ಎಲ್ಲರಿಗೂ ಸಮಸ್ಯೆ ಎಂದು ಬುದ್ಧಿ ಹೇಳುತ್ತಾಳೆ.

  ಅನು - ಆರ್ಯನಿಗೆ ಒಟ್ಟಿಗೆ ಆರತಿ

  ಅನು - ಆರ್ಯನಿಗೆ ಒಟ್ಟಿಗೆ ಆರತಿ

  ಇತ್ತ ಆಫೀಸಿನಲ್ಲಿ ಆರ್ಯನನ್ನು ವೆಲ್ಕಂ ಮಾಡಲು ಮೀರಾ ಸಜ್ಜಾಗಿರುತ್ತಾಳೆ. ಆಫೀಸಿನಲ್ಲಿ ಅಲಂಕಾರವನ್ನೂ ಮಾಡಿರುತ್ತಾಳೆ. ಅನು ಮತ್ತು ಆರ್ಯ ಬಂದ ಕೂಡಲೇ ಇಬ್ಬರಿಗೂ ಆಫಿಸಿನವರೆಲ್ಲಾ ಸೇರಿ ಆರತಿ ಮಾಡಿ ವೆಲ್ಕಂ ಮಾಡುತ್ತಾರೆ. ಇದು ಅನುಗೆ ಶಾಕ್ ಕೊಟ್ಟರೆ, ಆರ್ಯನಿಗೆ ಖುಷಿ ಕೊಟ್ಟಿರುತ್ತದೆ. ಆರ್ಯನಿಗೆ ನೆನಪು ಮರುಕಳಿಸುವುದರೊಳಗೆ ಅನು ಬೇರೆ ಯಾವ ನಿರ್ಧಾರ ಮಾಡುತ್ತಾಳೋ ಗೊತ್ತಿಲ್ಲ.

  English summary
  mansi speaks and scolds anu for her behavior. And she shouts on everyone.
  Wednesday, January 11, 2023, 20:23
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X