For Quick Alerts
  ALLOW NOTIFICATIONS  
  For Daily Alerts

  ಝೇಂಡೇಗೆ ಎಲ್ಲಾ ಸತ್ಯ ಹೇಳಿಬಿಟ್ಟಳಾ ಪ್ರಿಯದರ್ಶಿನಿ?

  By ಪ್ರಿಯಾ ದೊರೆ
  |

  ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅನು ವಠಾರಕ್ಕೆ ಬಂದಿದ್ದಾಳೆ. ರಮ್ಯ ಎಂಗೇಜ್ ಮೆಂಟ್ ಗಾಗಿ ಬಂದಿದ್ದು, ರಜಿನಿಗೆ ಇದು ಇಷ್ಟವಾಗಿಲ್ಲ. ಅನುಳಿಂದ ನಡೆಯುವ ಶುಭ ಕಾರ್ಯಕ್ಕೆ ತೊಂದರೆಯಾಗುತ್ತದೆ ಎಂದು ಭಯಗೊಂಡಿದ್ದಾಳೆ. ಅನುಳನ್ನು ದೂರ ಇಡಲು ಯತ್ನಿಸುತ್ತಿದ್ದಾಳೆ.

  ಸಂಜು ವರ್ಧನ್ ಕಂಪನಿಗೆ ಸೇರಿದ ಸಂಪಿಗೆ ಪುರದ ಬಂಗಲೆಗೆ ಹೋಗಿ ಪರಿಶೀಲನೆ ನಡೆಸಿದ್ದಾನೆ. ಇದರ ಬಗ್ಗೆ ಅನುಗೆ ಮಾಹಿತಿ ನೀಡಲು ಕರೆ ಮಾಡಿದ್ದಾನೆ. ಆದರೆ, ಅನು ಸಂಜು ಸಂಪರ್ಕಕ್ಕೆ ಸಿಕ್ಕಿಲ್ಲ.

  ಇತ್ತ ಆರಾಧನಾಗೆ ಸಂಜುನದ್ದೇ ಯೋಚನೆಯಾಗಿದೆ. ಸಂಜು ಅವಾಯ್ಡ್ ಮಾಡಲು ಕಾರಣವೇನು ಎಂಬುದು ತಿಳಿಯುತ್ತಿಲ್ಲ. ಪ್ರಿಯದರ್ಶನಿ ತನ್ನಿಂದ ದೂರ ಉಳಿಯಲು ಯತ್ನಿಸಿತ್ತಿರುವುದು ಯಾಕೆ ಅನ್ನೋದು ಅರ್ಥವಾಗುತ್ತಿಲ್ಲ.

  ಆರಾಧನಾಳಿಗೆ ಶಾರದಾ ದೇವಿ ಹೇಳಿದ್ದೇನು..?

  ಆರಾಧನಾಳಿಗೆ ಶಾರದಾ ದೇವಿ ಹೇಳಿದ್ದೇನು..?

  ಆರಾಧನಾಗೆ ಇಲ್ಲಿಗೆ ಬಂದು ದೊಡ್ಡ ತಪ್ಪು ಮಾಡಿದ್ದೀನಾ ಎಂಬ ಗಿಲ್ಟ್ ಕಾಡುತ್ತಿದೆ. ಹೀಗಾಗಿ ಆರಾಧನಾ ಶಾರದಾ ದೇವಿ ಬಳಿ ಮಾತನಾಡಿದ್ದಾಳೆ. ನಾನು ಇಲ್ಲಿಗೆ ಬರಬಾರದಿತ್ತು. ಸಂಜು ನನ್ನಿಂದ ದೂರ ಉಳಿಯಲು ಯತ್ನಿಸುತ್ತಿದ್ದಾನೆ. ನನ್ನ ಅತ್ತೆಗೆ ನನ್ನ ಜೊತೆಗೆ ಮಾತನಾಡುವುದೇ ಇಷ್ಟವಿಲ್ಲ ಎಂದು ನೋವು ತೋಡಿಕೊಂಡಿದ್ದಾಳೆ. ಈ ಮಾತುಗಳನ್ನು ಕೇಳಿ ಶಾರದಾ ದೇವಿ ಬೇಸರ ಮಾಡಿಕೊಳ್ಳುತ್ತಾಳೆ. ಆರಾಧನಾ ಶಾರದಾ ಬಳಿ ನನಗೆ ಒಂದು ಸಹಾಯ ಮಾಡಿ, ನನ್ನ ಗಂಡನ ಟ್ರೀಟ್ ಮೆಂಟ್ ಬಗ್ಗೆ ನಾನು ತಿಳಿದುಕೊಳ್ಳಬೇಕು. ಹಾಗಾಗಿ ವೈದ್ಯರ ಫೋನ್ ನಂಬರ್ ಕೊಡಿ. ನಿಮ್ಮಿಂದ ನನಗೆ ಇದೊಂದು ಸಹಾಯ ಮಾಡಿ ಎನ್ನುತ್ತಾಳೆ. ಆರಾಧನಾಗೆ ಶಾರದಾ ಫೋನ್ ನಂಬರ್ ಕಲೆಕ್ಟ್ ಮಾಡಿ ಕೊಡುವುದಾಗಿ ಹೇಳಿದ್ದಾಳೆ.

  ಬಂಗಲೆ ರಹಸ್ಯ ತಿಳಿದ ಅನು

  ಬಂಗಲೆ ರಹಸ್ಯ ತಿಳಿದ ಅನು

  ಸಂಜು ಅನುಳನ್ನು ಭೇಟಿಯಾಗಲು ಪ್ರಯತ್ನಿಸಿದಾಗ ಆಕೆ ಸಿಗುವುದಿಲ್ಲ. ಅನು ವಠಾರದಲ್ಲಿರುವ ವಿಚಾರವನ್ನು ಸಂಜು ಮಾನ್ಸಿಯಿಂದ ಕೇಳಿ ತಿಳಿದುಕೊಳ್ಳುತ್ತಾನೆ. ನೇರವಾಗಿ ಸಂಜು ವಠಾರಕ್ಕೆ ಹೋಗುತ್ತಾನೆ. ಅನುಗೆ ನಿಮ್ಮ ಜೊತೆಗೆ ನಾನು ಮಾತನಾಡಬೇಕು ಎಂದು ಹೇಳಿ ಟೆರೆಸ್ ಗೆ ಕರೆದುಕೊಂಡು ಹೋಗುತ್ತಾನೆ. ಅಲ್ಲಿ ಝೇಂಡೇ ಸಿಕ್ಕ ವಿಚಾರ, ಬಂಗಲೆ ವಿಚಾರವನ್ನೆಲ್ಲಾ ಸಾಕ್ಷಿ ಸಮೇತ ಹೇಳುತ್ತಾನೆ. ಇದನ್ನೆಲ್ಲಾ ಕೇಳಿ ಅನು, ನಮಗೆ ಸೇರಿದ ಚಿಕ್ಕ ಜಾಗವನ್ನೂ ಬಿಡುವುದಿಲ್ಲ. ಇದರ ವಿಚಾರ ನನಗೆ ಬಿಡಿ ಎಂದು ಹೇಳುತ್ತಾಳೆ. ಇನ್ನು ಝೇಂಡೇ ಮಾತನ್ನು ನಂಬಬೇಡಿ. ಆ ವ್ಯಕ್ತಿಯಿಂದ ದೂರವಿರಿ ಎಂದು ಹೇಳುತ್ತಾಳೆ.

  ಪ್ರಿಯದರ್ಶಿನಿಯಿಂದ ಸತ್ಯ ತಿಳಿಯುತ್ತಾನಾ ಝೇಂಡೇ?

  ಪ್ರಿಯದರ್ಶಿನಿಯಿಂದ ಸತ್ಯ ತಿಳಿಯುತ್ತಾನಾ ಝೇಂಡೇ?

  ಪ್ರಿಯದರ್ಶಿನಿ ಆರಾಧನಾ ವಿಚಾರದಲ್ಲಿ ತುಂಬಾನೇ ಪಶ್ಚಾತಾಪ ಪಡುತ್ತಾಳೆ. ನಾನು ಮಾಡಿದ ಒಂದು ತಪ್ಪಿನಿಂದ ನನ್ನ ಸೊಸೆ ತುಂಬಾನೇ ನೋವು ಅನುಭವಿಸುವಂತಾಯ್ತು ಎಂದು ಅಳುತ್ತಿರುತ್ತಾಳೆ. ಅದಕ್ಕೆ ಪ್ರಭು ದೇಸಾಯಿ, ಈಗ ಆಗಿರುವ ತಪ್ಪನ್ನು ಸರಿ ಮಾಡಲು ಸಾಧ್ಯವಿಲ್ಲ. ಈ ಬಗ್ಗೆ ವೈದ್ಯರ ಬಳಿ ಮಾತನಾಡೋಣ. ಸತ್ಯ ಮುಚ್ಚಿಟ್ಟಿರುವುದರಿಂದ ನಮ್ಮ ಮನೆಯಲ್ಲಿ ತುಂಬಾನೇ ಸಮಸ್ಯೆ ಎದುರಾಗಿದೆ ಎಂದು ಹೇಳೋಣ ಎನ್ನುತ್ತಾನೆ. ವೈದ್ಯರನ್ನು ನೋಡಿಕೊಂಡು ಬರುವುದಾಗಿ ಹೋಗುತ್ತಾನೆ. ಇದೇ ಸಂದರ್ಭದಲ್ಲಿ ಝೇಂಡೇ ಅಲ್ಲಿಗೆ ಬಂದು ಪ್ರಿಯದರ್ಶಿನಿಯನ್ನು ಮಾತನಾಡಿಸುತ್ತಾನೆ.

  ಝೇಂಡೇ ಮುಂದಿನ ಪ್ಲಾನ್ ಏನು..?

  ಝೇಂಡೇ ಮುಂದಿನ ಪ್ಲಾನ್ ಏನು..?

  ತನಗೆಲ್ಲಾ ಸತ್ಯ ಗೊತ್ತು ಎಂಬಂತೆ ಪ್ರಿಯದರ್ಶಿನಿ ಬಳಿ ಝೇಂಡೇ ಮಾತನಾಡುತ್ತಾನೆ. ನಿಮ್ಮ ಸಂಕಟ ನನಗೆ ಅರ್ಥವಾಗುತ್ತೆ ಎಂದು ಹೇಳುತ್ತಾನೆ. ಇದನ್ನು ಕೇಳಿದ ಪ್ರಿಯದರ್ಶಿನಿ ಕೇಶವ ನಿನಗೆಲ್ಲಾ ಸತ್ಯ ಗೊತ್ತಾ ಎಂದು ಕೇಳುತ್ತಾಳೆ. ಅದಕ್ಕೆ ಝೇಂಡೇ ತನಗೇನು ಗೊತ್ತಿಲ್ಲದಿರುವುದು ಇದೆ ಎಂದು ಸುಳ್ಳು ಹೇಳುತ್ತಾನೆ. ಆಗ ಪ್ರಿಯದರ್ಶಿನಿ ಸಂಜುನೇ ಆರ್ಯ ಅನ್ನೋದು ಗೊತ್ತಾ..? ಇದೆಲ್ಲಾ ಹೇಗಾಯ್ತು ಅಂತ ಗೊತ್ತಾ ಎನ್ನುತ್ತಾಳೆ. ಆಗ ಜಾಣನಂತೆ ಝೇಂಡೇ ಗೊತ್ತು, ಆದರೆ ಹೇಗಾಯ್ತೋ ಗೊತ್ತಿಲ್ಲ ಎಂದಾಗ ಪ್ರಿಯದರ್ಶಿನಿ ಎಲ್ಲಾ ಸತ್ಯವನ್ನು ಹೇಳಿ ಬಿಡುತ್ತಾಳೆ. ಈ ಮಾತನ್ನು ಕೇಳೀ ಶಾಕ್ ಆಗುವ ಝೇಂಡೇ ಮನದಲ್ಲೇ ಹೊಸ ಲೆಕ್ಕಾಚಾರ ಹಾಕುತ್ತಾನೆ. ಈಗ ಮತ್ತೆ ಸಂಜುನನ್ನು ಕೊಲ್ಲುತ್ತಾನಾ..?

  English summary
  Jothe jotheyali serial may take new turn as Priyadarshini revealed Sanju's secret to Jhende
  Wednesday, November 16, 2022, 20:38
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X