For Quick Alerts
  ALLOW NOTIFICATIONS  
  For Daily Alerts

  ಆರಾಧನಾ ತೆಗೆದುಕೊಂಡ ನಿರ್ಧಾರದಿಂದ ಇಕ್ಕಟ್ಟಿಗೆ ಸಿಲುಕಿದ ಪ್ರಿಯದರ್ಶಿನಿ

  By ಪ್ರಿಯಾ ದೊರೆ
  |

  'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಝೇಂಡೇಗೆ ಈಗ ಸಂಜುನೇ ಆರ್ಯ ಎಂಬ ಸತ್ಯ ಗೊತ್ತಾಗಿದೆ. ಪ್ರಿಯದರ್ಶಿನಿ ತನಗೆ ಗೊತ್ತಿಲ್ಲದೆಯೇ ಸತ್ಯ ಹೇಳಿದ್ದಾಳೆ. ಝೇಂಡೇ ಬೇರೆ ಈ ಸತ್ಯವನ್ನು ಯಾರಿಗೂ ಹೇಳಬಾರದು ಎಂದು ಹೇಳಿದ್ದಾನೆ.

  ಅನುಳಿಂದಲೇ ಆರ್ಯನ ಜೀವಕ್ಕೆ ಅಪಾಯವಿದೆ ಎಂದು ಸುಳ್ಳು ಹೇಳಿ ನಂಬಿಸಿದ್ದಾನೆ. ಪ್ರಿಯದರ್ಶಿನಿ ಝೇಂಡೇ ಮಾತನ್ನು ನಂಬಿ ಎಲ್ಲರಿಂದಲೂ ಸತ್ಯವನ್ನು ಮುಚ್ಚಿಡುತ್ತಿದ್ದಾಳೆ. ಇದರಿಂದ ಮುಂದೆ ಭಾರೀ ಅನಾಹುತವಾಗುತ್ತದೆ.

  ದಿವ್ಯಾಳನ್ನು ಕರೆದುಕೊಂಡು ಹೋಗಲು ಬಾಲ ಮಾಡಿದ ಹೊಸ ಪ್ಲಾನ್ ಸಕ್ಸಸ್ ಆಗುತ್ತಾ?ದಿವ್ಯಾಳನ್ನು ಕರೆದುಕೊಂಡು ಹೋಗಲು ಬಾಲ ಮಾಡಿದ ಹೊಸ ಪ್ಲಾನ್ ಸಕ್ಸಸ್ ಆಗುತ್ತಾ?

  ಇತ್ತ ಅನುಗೆ ಸಂಪಿಗೆಪುರದ ಬಂಗಲೆ ಬಗ್ಗೆ ಹೇಳಲು ಬಂದ ಸಂಜು, ರಮ್ಯಾ ಎಂಗೇಜ್ ಮೆಂಟ್ ಎಂದು ವಠಾರದಲ್ಲೇ ಉಳಿದುಕೊಂಡಿದ್ದಾನೆ. ಅನು, ಸಂಜುನನ್ನು ಹೊರಡಿ ಎಂದು ಹೇಳಿದರೂ ಕೇಳುತ್ತಿಲ್ಲ.

  ಅನುಗಾಗಿ ಹುಡುಗನನ್ನು ಬಿಡುತ್ತೀನಿ ಎಂದ ರಮ್ಯಾ

  ಅನುಗಾಗಿ ಹುಡುಗನನ್ನು ಬಿಡುತ್ತೀನಿ ಎಂದ ರಮ್ಯಾ

  ರಮ್ಯಾ ಎಂಗೇಜ್‌ಮೆಂಟ್‌ಗೆ ವಠಾರದಲ್ಲಿ ತಯಾರಿ ನಡೆಯುತ್ತಿದೆ. ರಮ್ಯಾ ಮೆಹಂದಿ ಹಾಕಿಸಿಕೊಳ್ಳಲು ಒಪ್ಪುತ್ತಿಲ್ಲ. ತನಗೆ ಮೆಹಂದಿ ಸ್ಮೆಲ್ ಎಂದರೆ ಆಗುವುದಿಲ್ಲ. ನನಗೆ ಬೇಡ ಎಂದು ಹಠ ಹಿಡಿಯುತ್ತಾಳೆ. ಆದರೆ ಎಲ್ಲರೂ ಮೆಹಂದಿ ಹಾಕಿಕೊಳ್ಳಲೇಬೇಕು ಎಂದು ಹೇಳುತ್ತಿರುತ್ತಾರೆ. ಹೀಗೆ ಮಾತಿಗೆ ಮಾತು ಬೆಳೆದು ರಮ್ಯಾ, ಅನುಗೋಸ್ಕರ ಬೇಕಿದ್ದರೆ ಈ ಹುಡುಗನನ್ನು ಬಿಡುತ್ತೀನಿ. ನನಗೆ ಮದುವೆ ಬೇಡ ಎನ್ನುತ್ತಾಳೆ. ಇದರಿಂದ ರಜಿನಿ ಗಾಬರಿಯಾಗುತ್ತಾಳೆ. ಅನು ಕೂಡ ರಮ್ಯಾ ಹೀಗೆಲ್ಲಾ ಹೇಳಬೇಡ ಎಂದಾಗ ರಮ್ಯಾ ಹಾಗೆಲ್ಲಾ ಏನಿಲ್ಲ ಎಂದು ಹೇಳುತ್ತಾಳೆ.

  ಕಂಠಿ ಮೇಲೆ ಕಾಳಿಯ ಕೆಂಗಣ್ಣು, ಸ್ನೇಹಾ ಸಹವಾಸದಿಂದಲೇ ಕಂಠಿ ಜೀವಕ್ಕೆ ಕುತ್ತುಕಂಠಿ ಮೇಲೆ ಕಾಳಿಯ ಕೆಂಗಣ್ಣು, ಸ್ನೇಹಾ ಸಹವಾಸದಿಂದಲೇ ಕಂಠಿ ಜೀವಕ್ಕೆ ಕುತ್ತು

   ವಠಾರದಲ್ಲೇ ಉಳಿದ ಸಂಜು

  ವಠಾರದಲ್ಲೇ ಉಳಿದ ಸಂಜು

  ಸಂಜು, ಅನುಗೆ ಅಪಾಯವಿದೆ ಎಂದು ತಿಳಿದು ವಠಾರದಲ್ಲೇ ಉಳಿದಿದ್ದಾನೆ. ಝೇಂಡೇ ಜೊತೆಗಿರುವ ಗನ್ ಮ್ಯಾನ್‌ಗಳನ್ನು ಗಮನಿಸುತ್ತಲೇ ಇರುತ್ತಾನೆ. ಅನುಗೆ ಏನೂ ಅಪಾಯವಾಗುತ್ತದೆ ಎಂದು ಕಾವಲು ಕಾಯುತ್ತಿದ್ದಾನೆ. ಆದರೆ ಝೇಂಡೇ ಗನ್ ಮ್ಯಾನ್‌ಗಳಿಗೆ ಸಂಜು ಫೋಟೋ ತೋರಿಸಿ, ಅವನನ್ನು ಕಿಡ್ನ್ಯಾಪ್ ಮಾಡಲು ಹೇಳಿದ್ದಾನೆ. ಸಂಜುನೇ ಆರ್ಯ ಎಂದು ತಿಳಿದ ಮೇಲೆ ಹೊಸ ಪ್ಲ್ಯಾನ್ ಮಾಡಿದ್ದು, ಆತನನ್ನು ತನ್ನ ಬಳಿ ಇರಿಸಿಕೊಳ್ಳಲು ಯೋಚಿಸುತ್ತಿದ್ದಾನೆ. ಪ್ರಿಯದರ್ಶಿನಿ ಸತ್ಯ ಹೇಳದೇ ಇದ್ದರೆ, ಆರ್ಯ ಝೇಂಡೇ ವಶವಾಗುತ್ತಾನಾ.? ಅನು ತನ್ನ ಪತಿಯನ್ನು ಶಾಶ್ವತವಾಗಿ ಕಳೆದುಕೊಳ್ಳುತ್ತಾಳಾ.?

  ಗರಂ ಆದ ಆರಾಧನಾ

  ಗರಂ ಆದ ಆರಾಧನಾ

  ವೈದ್ಯರ ಬಳಿ ಮಾತನಾಡಿದ ಆರಾಧನಾಗೆ ಕೋಪ ಬಂದಿದೆ. ಹೀಗಾಗಿ ಮನೆಯಲ್ಲಿ ಎಲ್ಲರ ಎದುರಿಗೂ ತನ್ನ ಬೇಸರವನ್ನು ಹೇಳಿಕೊಂಡಿದ್ದಾಳೆ. ಸಂಜುಗೆ ಇಲ್ಲಿ ನೀವ್ಯಾರು ಸರಿಯಾದ ಟ್ರೀಟ್‌ಮೆಂಟ್ ಕೊಡಿಸುತ್ತಿಲ್ಲ. ಸಂಜು ಟ್ರೀಟ್‌ಮೆಂಟ್ ತೆಗೆದುಕೊಳ್ಳುತ್ತಿಲ್ಲ. ಅವರ ಬಗ್ಗೆ ನೀವ್ಯಾರು ಗಮನ ಹರಿಸುತ್ತಿಲ್ಲ. ಎಷ್ಟೇ ಆದರೂ ನನ್ನ ಗಂಡನ ಬಗ್ಗೆ ನಾನೇ ಕಾಳಜಿ ವಹಿಸಬೇಕು. ಹಾಗಾಗಿ ನಾನು ಅವರನ್ನು ಕರೆದುಕೊಂಡು ಹೋಗುತ್ತೇನೆ ಎಂದು ಹೇಳುತ್ತಾಳೆ. ಈ ಮಾತನ್ನು ಕೇಳಿದ ಮಾನ್ಸಿ, ಆರಾಧನಾ ಹೇಳುತ್ತಿರುವುದು ಸರಿಯಾಗಿದೆ ಎನ್ನುತ್ತಾಳೆ. ಆದರೆ, ಇದನ್ನು ಪ್ರಿಯದರ್ಶಿನಿ, ಶಾರದಾ, ಹರ್ಷ ವಿರೋಧಿಸಲು ಯತ್ನಿಸುತ್ತಾರೆ. ಆದರೆ ಅದು ಸಾಧ್ಯವಾಗುವುದಿಲ್ಲ.

  ಸಂದಿಗ್ಧ ಪರೀಸ್ಥಿತಿಯಲ್ಲಿ ಸಿಲುಕಿದ ಪ್ರಿಯದರ್ಶಿನಿ

  ಸಂದಿಗ್ಧ ಪರೀಸ್ಥಿತಿಯಲ್ಲಿ ಸಿಲುಕಿದ ಪ್ರಿಯದರ್ಶಿನಿ

  ಸಂಜು ಮನೆಗೆ ಹೋಗದೇ ವಠಾರದಲ್ಲೇ ಉಳಿದಿರುವುದಕ್ಕೆ ಅನು ಬೈಯುತ್ತಾಳೆ. ನೀವು ಮಾಡುತ್ತಿರುವುದು ತಪ್ಪು. ಆರಾಧನಾ ಅವರನ್ನು ಅವಾಯ್ಡ್ ಮಾಡಬಾರದು. ಮನೆಗೆ ಹೋಗಿ ಎನ್ನುತ್ತಾಳೆ. ಆದರೆ ಸಂಜು ತನ್ನದೇ ರೀತಿಯಲ್ಲಿ ಮಾತನಾಡುತ್ತಾನೆ. ಅನು ಏನೂ ಹೇಳಲಾಗದೆ ಹೊರಟು ಬಿಡುತ್ತಾಳೆ. ಇತ್ತ ಪ್ರಿಯದರ್ಶಿನಿ, ಆರಾಧನಾ ಸಂಜುನ ಕರೆದುಕೊಂಡು ಹೋಗುವುದು ತಪ್ಪಾಗುತ್ತೆ. ಈ ಬಗ್ಗೆ ಅನುಗೆ ಹೇಗೆ ಹೇಳುವುದು. ಅನುಳಿಂದಲೇ ಆರ್ಯನಿಗೆ ಅಪಾಯವಿದೆ ಎಂಬ ಝೇಂಡೇ ಮಾತನ್ನು ನೆನಪಿಸಿಕೊಳ್ಳುತ್ತಾಳೆ. ಪ್ರಿಯದರ್ಶಿನಿ ಮಾಡಿದ ಒಂದು ತಪ್ಪಿನಿಂದ ಈಗ ಅನು ಹಾಗೂ ಆರಾಧನಾ ಜೀವನದಲ್ಲಿ ದೊಡ್ಡ ಬಿರುಗಾಳಿ ಏಳುವ ಸಂದರ್ಭ ಬಂದಿದೆ.

  English summary
  jothe jotheyali Serial 18th november Episode Written Update. priyadarshini believed jhende words. And she is making a big mistake. This leads to a problem.
  Friday, November 18, 2022, 19:57
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X