For Quick Alerts
  ALLOW NOTIFICATIONS  
  For Daily Alerts

  ಆಫೀಸಿನಲ್ಲಿ ಪ್ರತಿಭಟನೆ ನಿಲ್ಲಿಸಲು ಸಂಜು ಮಾಡಿದ ಪ್ಲ್ಯಾನ್ ಸಕ್ಸಸ್ ಆಯ್ತಾ..?

  By ಪ್ರಿಯಾ ದೊರೆ
  |

  'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಮಾನ್ಸಿ ಅಟೆಂಡರ್ ಕೆನ್ನೆಗೆ ಹೊಡೆದಿದ್ದಾಳೆ. ಇದರಿಂದ ಕೋಪಗೊಂಡ ಅಟೆಂಡರ್ ಮತ್ತು ಇತರೆ ನೌಕರರು ಪ್ರತಿಭಟನೆ ಮಾಡುತ್ತಿದ್ದಾರೆ. ಮಾನ್ಸಿ ಕ್ಷಮೆ ಕೇಳಬೇಕು ಎಂದು ನೌಕರರು ಪಟ್ಟು ಹಿಡಿದಿದ್ದಾರೆ.

  ಆದರೆ ಮಾನ್ಸಿ ಸುತಾರಾಂ ಕ್ಷಮೆ ಕೇಳುವುದಿಲ್ಲ ಎಂದು ಹೇಳಿದ್ದಾಳೆ. ಇನ್ನು ಹರ್ಷ ತನಗೆ ಸಪೋರ್ಟ್ ಮಾಡುತ್ತಾನೆ ಎಂದು ನಂಬಿದ್ದ ಮಾನ್ಸಿಗೆ ನಿರಾಸೆಯಾಗಿದೆ. ಯಾಕೆಂದರೆ ಹರ್ಷವರ್ಧನ್ ಕೂಡ ಕ್ಷಮೆ ಕೇಳುವಂತೆ ಹೇಳಿರುವುದಕ್ಕೆ ಮಾನ್ಸಿ ಕೋಪ ಹೆಚ್ಚಾಗಿದೆ.

  ಸಹನಾ ಪ್ರೀತಿ ವಿಚಾರ ಸ್ನೇಹಾಗೆ ತಿಳಿಯಿತು! ಸ್ನೇಹಾಳ ಮುಂದಿನ ನಡೆ ಏನು?ಸಹನಾ ಪ್ರೀತಿ ವಿಚಾರ ಸ್ನೇಹಾಗೆ ತಿಳಿಯಿತು! ಸ್ನೇಹಾಳ ಮುಂದಿನ ನಡೆ ಏನು?

  ಇತ್ತ ಅನು ಸಿರಿಮನೆ ಆಫೀಸಿನಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ನಿಲ್ಲಿಸುವ ಸಲುವಾಗಿ ಆಫೀಸಿಗೆ ಹೊರಟಿದ್ದಾಳೆ. ಆದರೆ ಪುಷ್ಪಾ ಮನೆ ಬಿಟ್ಟು ಎಲ್ಲೂ ಹೋಗಬೇಡ ಎಂದು ಹೇಳಿದ್ದಕ್ಕೆ ಕೋಪ ಮಾಡಿಕೊಂಡು ಅದು ನನ್ನ ಆಫೀಸ್, ನಾನು ಹೋಗಲೇಬೇಕು ಎಂದು ಹೇಳಿ ಅನು ಹೊರಡುತ್ತಾಳೆ.

  ಸಂಜು ಪ್ಲ್ಯಾನ್ ಸಕ್ಸಸ್

  ಸಂಜು ಪ್ಲ್ಯಾನ್ ಸಕ್ಸಸ್

  ಪ್ರತಿಭಟನೆ ನಡೆಯುವ ಸಮಯಕ್ಕೆ ಸರಿಯಾಗಿ ಸಂಜು ಆಫೀಸಿಗೆ ಬರುತ್ತಾನೆ. ಘಟನೆಯನ್ನು ನೋಡಿದ ಅವನು ಪ್ಲ್ಯಾನ್ ಒಂದನ್ನು ಮಾಡುತ್ತಾನೆ. ಮಾನ್ಸಿ ಕೋಪ ಮಾಡಿಕೊಂಡು ಕ್ಷಮೆ ಕೇಳುವುದಿಲ್ಲ ಎಂದು ಹೇಳಿ ಕ್ಯಾಬಿನ್‌ಗೆ ಹೋಗಿ ಬಿಡುತ್ತಾಳೆ. ಆಗ ಸಂಜು ಟೀಯನ್ನು ತೆಗೆದುಕೊಂಡು ಬರುತ್ತಾನೆ. ಅಟೆಂಡರ್ ಬಳಿ ಬಂದು ಟೀ ತೆಗೆದುಕೊಳ್ಳಿ. ಮಾನ್ಸಿ ಮೇಡಂ ನಿಮಗೋಸ್ಕರ ಕಳಿಸಿದ್ದಾರೆ ಎಂದು ಹೇಳುತ್ತಾನೆ. ಇದನ್ನು ಯಾರು ನಂಬದಿದ್ದಾಗ, ನೀವು ಮಾನ್ಸಿ ಮೇಡಂ ಬಳಿ ಕ್ಷಮೆ ಕೇಳಲು ಹೇಳಿದಿರಿ. ಆದರೆ, ಅವರು ಮಾಡಿದ ತಪ್ಪಿಗೆ ಕೇವಲ ಕ್ಷಮೆ ಕೇಳುವುದು ಸರಿಯಲ್ಲ ಎಂದು ಹೇಳಿ, ಅವರೇ ಕೈಯ್ಯಾರೆ ಟೀ ಮಾಡಿ ಕಳಿಸಿದ್ದಾರೆ ಎಂದು ಸಂಜು ಹೇಳುತ್ತಾನೆ. ಆಗ ನಂಬಿದ ಅಟೆಂಡರ್ ಪ್ರತಿಭಟನೆಯನ್ನು ನಿಲ್ಲಿಸಿ, ಇದರಲ್ಲಿ ತಮ್ಮದೂ ತಪ್ಪಿದೆ ಎಂದು ಹೇಳುತ್ತಾನೆ.

  ಮಗನ ಕೊಲೆ ಆರೋಪ ಹೊತ್ತು ಜೈಲು ಪಾಲಾದ ಅಖಿಲಾಂಡೇಶ್ವರಿ!ಮಗನ ಕೊಲೆ ಆರೋಪ ಹೊತ್ತು ಜೈಲು ಪಾಲಾದ ಅಖಿಲಾಂಡೇಶ್ವರಿ!

  ಸಂಜುನನ್ನು ಹೊಗಳಿದ ಅನು

  ಸಂಜುನನ್ನು ಹೊಗಳಿದ ಅನು

  ಆಫೀಸಿಗೆ ಬಂದ ಅನು ಅಲ್ಲಿ ನಡೆದ ಘಟನೆಯನ್ನೆಲ್ಲಾ ಕಣ್ಣಾರೆ ಗಮನಿಸುತ್ತಾಳೆ. ಬಳಿಕ ಮಾನ್ಸಿಗೆ ನಿಮ್ಮದೇ ತಪ್ಪು ಎಂದು ಹೇಳಿದ್ದಕ್ಕೆ, ಮಾನ್ಸಿ ಮತ್ತಷ್ಟು ಕೋಪ ಮಾಡಿಕೊಂಡು ಮನೆಗೆ ಹೋಗುತ್ತಾಳೆ. ಅನು, ಸಂಜು ಬಳಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಕ್ಕೆ ಧನ್ಯವಾದ ಎಂದು ಕೂಡ ಹೇಳುತ್ತಾಳೆ. ಇದರಿಂದ ಸಂಜು ಖುಷಿ ಪಡುತ್ತಾನೆ. ಇನ್ನು ಆಫೀಸಿನಲ್ಲಿ ನೌಕರರು ಸಂಜು ಬಗ್ಗೆ ಅನುಳನ್ನು ಪ್ರಶ್ನೆ ಮಾಡುತ್ತಾರೆ. ಯಾರೀತ ಎಂದಿದ್ದಕ್ಕೆ, ಆರ್ಯ ಸರ್ ಸಂಬಂಧಿಕರು. ನಮ್ಮ ಮನೆಯವರು ಎಂದು ಅನು ಹೇಳುತ್ತಾಳೆ. ಈ ಮಾತಿನಿಂದಲೂ ಸಂಜು ಖುಷಿಯಾಗಿ ತೇಲಾಡುವುದು ಒಂದು ಬಾಕಿ.

  ಹರ್ಷ ಮಾತನ್ನು ಕೇಳದ ಮಾನ್ಸಿ

  ಹರ್ಷ ಮಾತನ್ನು ಕೇಳದ ಮಾನ್ಸಿ

  ಆಫೀಸಿನಲ್ಲಿ ಎಲ್ಲರೂ ತನ್ನದೇ ತಪ್ಪು ಎಂದರಲ್ಲ ಎಂದು ಮಾನ್ಸಿ ಕೋಪ ಮಾಡಿಕೊಂಡಿದ್ದಾಳೆ. ಕೊನೆಯ ಪಕ್ಷ ಹರ್ಷವರ್ಧನ್ ಕೂಡ ತನ್ನನ್ನು ಸಪೋರ್ಟ್ ಮಾಡಲಿಲ್ಲವಲ್ಲಾ. ಅಟೆಂಡರ್ ಅನ್ನು ಕೆಲಸದಿಂದ ತೆಗೆಯುವುದು ಬಿಟ್ಟು ನನಗೆ ಅವಮಾನ ಮಾಡಿದರು ಎಂದು ಕೋಪದಲ್ಲಿ ಮನೆಗೆ ಬರುತ್ತಾಳೆ. ಹರ್ಷ ಆಕೆಯನ್ನು ಸಮಾಧಾನ ಮಾಡಲು ಪ್ರಯತ್ನಿಸುತ್ತಾನೆ. ಆದರೆ ಮಾನ್ಸಿ ಯಾರ ಮಾತನ್ನೂ ಕೇಳುವುದಿಲ್ಲ. ಈ ಬಗ್ಗೆ ಶಾರದಾ ಏನಾಯ್ತು ಎಂದು ಕೇಳುತ್ತಾಳೆ.

  ಸಂಜುನನ್ನು ಹೊಗಳಿದ ಶಾರದಾ

  ಸಂಜುನನ್ನು ಹೊಗಳಿದ ಶಾರದಾ

  ಮೀರಾ ಆಫೀಸಿನಿಂದ ಮನೆಗೆ ಬಂದು ಶಾರದಾ ದೇವಿಗೆ ನಡೆದ ಘಟನೆಯನ್ನೆಲ್ಲಾ ವಿವರಿಸುತ್ತಾಳೆ. ಅಲ್ಲದೇ, ಸಂಜು ಮಾಡಿದ ಕೆಲಸದ ಬಗ್ಗೆಯೂ ಹೇಳುತ್ತಾಳೆ. ಶಾರದಾ ದೇವಿ ಕೂಡ ಶಾಕ್ ಆಗುತ್ತಾರೆ. ನೆನಪಿನ ಶಕ್ತಿ ಇಲ್ಲದಿದ್ದರೂ, ಕೆಲವನ್ನು ನೆನಪಿನಲ್ಲಿಟ್ಟುಕೊಂಡು ಮಾಡುತ್ತಿದ್ದಾರಲ್ಲಾ ಎಂದು ಹೊಗಳುತ್ತಾಳೆ. ಇನ್ನು ಮಾನ್ಸಿ ಕೋಪ ತಾರಕಕ್ಕೇರಿದ್ದು, ಇದು ಎಲ್ಲಿಗೆ ಹೋಗಿ ಮುಟ್ಟುತ್ತದೋ ಗೊತ್ತಿಲ್ಲ.

  English summary
  jothe jotheyali Serial 20th october Episode Written Update. For mansi mistake sanju plans to solve problem. And he does it. Anu sees sanju plan and feels proud.
  Thursday, October 20, 2022, 19:44
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X