For Quick Alerts
  ALLOW NOTIFICATIONS  
  For Daily Alerts

  Jothe Jotheyali: ಆರ್ಯನಿಗೆ ಹಳೆಯದೆಲ್ಲಾ ನೆನಪಾಯ್ತು: ಅನು-ಆರ್ಯ ಒಂದಾಗುತ್ತಾರಾ..?

  By ಪ್ರಿಯಾ ದೊರೆ
  |

  'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಅನು ಸಿರಿಮನೆ ಹೋಟೆಲ್‌ನ ಬಿಲ್ ಅನ್ನು ಕ್ಲಿಯರ್ ಮಾಡಲು ಮುಂದಾಗುತ್ತಾಳೆ. ಹೋಟೆಲ್ ಮ್ಯಾನೇಜರ್ ಅನು ನಡೆದುಕೊಳ್ಳುವ ರೀತಿಯನ್ನು ನೋಡಿ ಗಾಬರಿಯಾಗುತ್ತಾರೆ.

  ಆದರೆ, ಅನು ಹಾಗೆಲ್ಲಾ ಏನಿಲ್ಲ. ನಾನು ಬೇಗ ಹೊರಡುತ್ತೇನೆ. ಹಾಗಾಗಿ ಈಗಲೇ ಬಿಲ್ ಕ್ಲಿಯರ್ ಮಾಡುತ್ತೇನೆ ಎಂದು ಹೇಳುತ್ತಾಳೆ. ನಂತರ ಪೆನ್ನು ಪೇಪರ್ ಅನ್ನು ಪಡೆಯುತ್ತಾಳೆ.

  ಅತ್ತೆ ಮನ ಗೆಲ್ಲುವ ಪ್ರಯತ್ನದಲ್ಲಿ ದಿವ್ಯ; ಬಾಲ ಮಾಡುತ್ತಿರುವ ಕುತಂತ್ರ ದಿವ್ಯ ಗಮನಕ್ಕೆ ಬರುತ್ತಾ?ಅತ್ತೆ ಮನ ಗೆಲ್ಲುವ ಪ್ರಯತ್ನದಲ್ಲಿ ದಿವ್ಯ; ಬಾಲ ಮಾಡುತ್ತಿರುವ ಕುತಂತ್ರ ದಿವ್ಯ ಗಮನಕ್ಕೆ ಬರುತ್ತಾ?

  ಆರಾಧನಾಳಿಗೆ ಕಾಲ್ ಮಾಡಿದರೆ, ಇನ್ನೂ ನಾಟ್ ರೀಚೆಬಲ್ ಎಂದೇ ಬರುತ್ತಿರುತ್ತದೆ. ಹಾಗಾಗಿ ಆರಾಧನಾಳಿಗೆ ತಾವಿರುವ ಲೊಕೇಶನ್ ಕಳಿಸಿ, ಆರ್ಯನನ್ನು ಕರೆದುಕೊಂಡು ಹೋಗುವಂತೆ ವಾಯ್ಸ್ ಮೆಸೇಜ್ ಮಾಡುತ್ತಾಳೆ.

  ಒಂಟಿ ಪಯಣ ಆರಂಭಿಸಿದ ಅನು

  ಒಂಟಿ ಪಯಣ ಆರಂಭಿಸಿದ ಅನು

  ಆರ್ಯನಿಗೆ ಅನು ಪತ್ರವನ್ನು ಬರೆದಿಡುತ್ತಾಳೆ. ಆರಾಧನಾ ಜೊತೆಗೆ ಆರ್ಯ ಹೊಸ ಜೀವನವನ್ನು ಆರಂಭಿಸಲಿ ಎಂದು ಅನು ಬಯಸಿರುತ್ತಾಳೆ. ಹೀಗಾಗಿ ತನ್ನ ನಿರ್ಧಾರವನ್ನು ಯಾರು ಹೇಳಿದರೂ ಬದಲಿಸುವುದಿಲ್ಲ. ಆರ್ಯ ಎಂಬ ಸತ್ಯ ಗೊತ್ತಿದ್ದರೂ, ಅದು ಸುಳ್ಳು ಎಂದು ಸಾಧಿಸುತ್ತಾಳೆ. ಕೊನೆಗೆ ಆರ್ಯನನ್ನು ಇದಕ್ಕೆ ಒಪ್ಪಿಸಿರುತ್ತಾಳೆ. ಹಾಗಾಗಿಯೇ ಮನೆಯಿಂದ ಕರೆದುಕೊಂಡು ಬಂದಿರುತ್ತಾಳೆ. ಇನ್ನು ಪುಂಡರ ಜೊತೆಗಿನ ಗಲಾಟೆಯಲ್ಲಿ ಆರ್ಯನ ತಲೆಗೆ ಏಟು ಬಿದ್ದಿರುತ್ತದೆ. ಇದರಿಂದಾಗಿ ಆತ ಪ್ರಜ್ಞೆ ತಪ್ಪಿರುತ್ತಾನೆ. ಇನ್ನು ಅನು ಆರ್ಯ ಮಲಗಿರುವಾಗಲೇ ತನ್ನ ಒಂಟಿ ಪಯಣವನ್ನು ಆರಂಭಿಸುತ್ತಾಳೆ.

  ಆರ್ಯನನ್ನು ಕರೆದುಕೊಂಡು ಹೋಗುತ್ತಾಳಾ..?

  ಆರ್ಯನನ್ನು ಕರೆದುಕೊಂಡು ಹೋಗುತ್ತಾಳಾ..?

  ಇನ್ನು ಆರಾಧನಾಳಿಗೆ ಅನು ಮೇಲೆ ನಂಬಿಕೆ ಇರುತ್ತದೆ. ಹಾಗಾಗಿ ಅನು ಹೇಳಿದ ಕಡೆಗೆ ಬರುತ್ತಿರುತ್ತಾಳೆ. ಅವಳ ಮೊಬೈಲ್‌ನಲ್ಲಿ ನೆಟ್ ವರ್ಕ್ ಇರದ ಕಾರಣ ಅನು ಕಳಿಸಿದ ಮೆಸೇಜ್‌ಗಳು ಬಂದಿರಲಿಲ್ಲ. ಪೆಟ್ರೋಲ್ ಬಂಕ್‌ಗೆ ಬಂದ ಆರಾಧನಾ, ಅನು ಕಳಿಸಿದ ವಾಯ್ಸ್ ಮೆಸೇಜ್ ಅನ್ನು ಕೇಳುತ್ತಾಳೆ. ಕೊನೆಗೂ ತನ್ನ ವಿಶು ಸಿಕ್ಕುತ್ತಾರೆ ಎಂಬ ಖುಷಿಯಲ್ಲಿ ಆರಾಧನಾ ಇದ್ದಾಳೆ. ಅನು ಕಳಿಸಿರುವ ಲೊಕೇಶನ್‌ಗೆ ಹೋಗಲು ಮುಂದಾಗುತ್ತಾಳೆ. ಆರಾಧನಾ, ಆರ್ಯನನ್ನು ಕರೆದುಕೊಂಡು ಹೋಗುತ್ತಾಳಾ ಎಂಬುದೇ ಈಗ ದೊಡ್ಡ ಪ್ರಶ್ನೆಯಾಗಿದೆ.

  ಜೋಗ್ತವ್ವನನ್ನು ಭೇಟಿ ಮಾಡಿದ ಅನು

  ಜೋಗ್ತವ್ವನನ್ನು ಭೇಟಿ ಮಾಡಿದ ಅನು

  ಇತ್ತ ಅನು, ಶಾರದಾಳಿಗೂ ಮೆಸೇಜ್ ಕಳಿಸಿರುತ್ತಾಳೆ. ತನಗೆ ಕೆಲ ದಿನ ಒಂಟಿ ಜೀವನ ಬೇಕೆಂದು, ತಾನು ಸ್ವಲ್ಪ ದಿನ ದೂರ ಇರುವುದಾಗಿಯೂ ಮೆಸೇಜ್ ಮಾಡಿರುತ್ತಾಳೆ. ಇದನ್ನು ಕೇಳಿದ ಶಾರದಾ ಚಿಂತೆಗೀಡಾಗುತ್ತಾಳೆ. ಇದೇ ವಿಚಾರವನ್ನು ಮಾನ್ಸಿ ಹಾಗೂ ಹರ್ಷನ ಬಳಿಯೂ ಹೇಳುತ್ತಾಳೆ. ಇನ್ನು ಅನು ಒಬ್ಬಳೇ ದಾರಿಯಲ್ಲಿ ನಡೆದು ಹೋಗುವಾಗ ಜೋಗ್ತವ್ವ ಎದುರಿಗೆ ಬರುತ್ತಾಳೆ. ಅನುಗೆ ನೀನು ತೆಗೆದುಕೊಂಡಿರುವ ನಿರ್ಧಾರ ತಪ್ಪು. ಸ್ವಲ್ಪ ಸಮಯ ಕಳೆದರೂ ನೀನು ಎಲ್ಲವನ್ನೂ ಕಳೆದುಕೊಳ್ಳುತ್ತೀಯಾ ಎಂದು ಎಚ್ಚರಿಕೆಯನ್ನು ನೀಡುತ್ತಾಳೆ. ಆದರೆ ಅನು ಮಾತ್ರ ತನ್ನ ನಿರ್ಧಾರವನ್ನು ಬದಲಿಸಲು ತಯಾರಿರುವುದಿಲ್ಲ. ಏನು ನಡೆಬೇಕೋ ಅದೇ ನಡೆಯುತ್ತದೆ ಎಂದು ಸುಮ್ಮನಿರುತ್ತಾಳೆ.

  ಅನು ನಿರ್ಧಾರ ಬದಲಾಗುತ್ತಾ..?

  ಅನು ನಿರ್ಧಾರ ಬದಲಾಗುತ್ತಾ..?

  ಇದರ ನಡುವೆ ಆರ್ಯನಿಗೆ ಎಚ್ಚರವಾಗುತ್ತದೆ. ಆತನಿಗೆ ಹಳೆಯದೆಲ್ಲಾ ನೆನಪಾಗುತ್ತದೆ. ಅನುಳನ್ನು ಹುಡುಕಾಡುತ್ತಿರುತ್ತಾನೆ. ಅನು ಎಲ್ಲೂ ಕಾಣುವುದಿಲ್ಲ. ಆರ್ಯ ಈಗ ಆರಾಧನಾ ಬಂದರೆ ಏನು ಮಾಡುತ್ತಾನೆ ಎಂಬುದೇ ಕುತೂಹಲ ಮೂಡಿದೆ. ಇನ್ನು ಅನು ಕೂಡ ತನ್ನ ನಿರ್ಧಾರವನ್ನು ಬದಲಿಸುತ್ತಾಳಾ..? ಇಲ್ಲ ಆರ್ಯನಿಂದ ಸಂಪೂರ್ಣವಾಗಿ ದೂರವಾಗುತ್ತಾಳಾ ಎಂದು ಕಾದು ನೋಡಬೇಕಿದೆ.

  English summary
  jothe jotheyali Serial 20th January Episode Written Update. Arya wakesup and he remembers everthing. Anu and arya may come together.
  Sunday, January 22, 2023, 16:59
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X