Don't Miss!
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ರೋಹಿತ್ ಬಳಗದ ಅಭ್ಯಾಸಕ್ಕೆ ಭಾನುವಾರ ರಜೆ ನೀಡಿದ ಕೋಚ್ ದ್ರಾವಿಡ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ವೈದ್ಯರು ಹೇಳಿದ ಸುಳ್ಳಿನಿಂದ ಸಂಜುಗೆ ತೊಂದರೆಯಾಗುತ್ತಾ..?
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಆರಾಧನಾಳಿಗೆ ಶಾರದಾ ದೇವಿ ಸಮಾಧಾನ ಮಾಡುತ್ತಾಳೆ. ಸಂಜು ಹೀಗೆ ಯಾಕೆ ನಡೆದುಕೊಳ್ಳುತ್ತಿದ್ದಾನೆ ಎಂಬುದು ಗೊತ್ತಿಲ್ಲ. ಆದರೆ, ಅವನಿಗೆ ಸರಿಯಾದ ಟ್ರೀಟ್‌ಮೆಂಟ್ ಕೊಡಿಸಿ, ಎಲ್ಲವೂ ನೆನಪು ಬರುವಂತೆ ಆಗುವವರೆಗೂ ತಾಳ್ಮೆಯಿಂದ ಇರು ಎಂದು ಹೇಳುತ್ತಾಳೆ.
ಆರಾಧನಾಳಿಗೆ ತನ್ನ ಬದುಕಲ್ಲಿ ಹೀಗೆಲ್ಲಾ ಆಗುತ್ತಿದೆಯಲ್ಲಾ ಎಂದು ಬೇಸರವಾಗುತ್ತದೆ. ಬಂದ ದಿನಕ್ಕಿಂತಲೂ ಸಂಜು ನಡವಳಿಕೆಯಲ್ಲಿ ಹೆಚ್ಚು ಬದಲಾವಣೆಗಳಾಗಿವೆ. ಯಾಕೆ ಸಂಜು ಹೀಗಾಡುತ್ತಿದ್ದಾನೆ ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತಿಲ್ಲ.
Paaru
Serial:
ಅಖಿಲ
ಕಾಲಿಗೆ
ಬಿದ್ದ
ಅರುಂಧತಿ!
ನನ್ನನ್ನ ನೋಡಿದರೆ ಸಂಜುಗೆ ಕೋಪ ಬರುತ್ತದೆ. ಅವನಿಗೆ ಯಾರು ಏನು ಹೇಳಿದ್ದಾರೋ ಗೊತ್ತಿಲ್ಲ. ನನ್ನ ಸಂಸಾರಕ್ಕೆ ಯಾಕೆ ಹೀಗಾಗುತ್ತಿದೆ ಎಂದು ಆರಾಧನಾ ಯೋಚಿಸುತ್ತಿರುತ್ತಾಳೆ.

ಗೊಂದಲದಲ್ಲಿರುವ ಸುಬ್ಬು-ಪುಷ್ಪಾ
ಆಫೀಸಿಗೆ ಹೊರಟ ಸಂಜುನನ್ನು ನಿಲ್ಲಿಸಿ ಆರಾಧನಾ ಪ್ರಶ್ನೆ ಮಾಡುತ್ತಾಳೆ. ಆಗ ಆರಾಧನಾಳಿಗೆ ಸಂಜು ಜೋರು ಧ್ವನಿಯಲ್ಲಿ ಮಾತನಾಡುತ್ತಾನೆ. ನನಗೆ ಕೆಲಸವಿದೆ ಬಿಡಿ. ಸುಮ್ಮನೆ ಏನೇನೋ ಮಾತನಾಡಬೇಡ ಎನ್ನುತ್ತಾನೆ. ಆರಾಧನಾಳಿಗೆ ಸಂಜು ನಡವಳಿಕೆಗಳು ಮತ್ತಷ್ಟು ಗೊಂದಲಗಳನ್ನು ಸೃಷ್ಟಿ ಮಾಡುತ್ತವೆ. ಇನ್ನು ಇತ್ತ ಸುಬ್ಬು ಮತ್ತು ಪುಷ್ಪಾ ಇಬ್ಬರೂ ಸಂಜು ಬಗ್ಗೆ ತಲೆ ಕೆಡಿಸಿಕೊಂಡಿರುತ್ತಾರೆ. ಯಾಕೆ ಸಂಜು ಹೀಗಾಡುತ್ತಿದ್ದಾನೆ. ಇದೆಲ್ಲದರಿಂದ ನಮ್ಮ ಮಗಳ ಮೇಲೆ ಪರಿಣಾಮ ಬೀರುತ್ತಿದೆ ಎಂದು ಬೇಸರ ಮಾಡಿಕೊಳ್ಳುತ್ತಾರೆ. ಈ ವಿಚಾರವನ್ನು ಶಾರದಾ ಬಳಿಯೂ ಹೇಳಿಕೊಳ್ಳುತ್ತಾರೆ. ಶಾರದಾ ಕೂಡ ಸಂಜು ವಿಚಾರದಲ್ಲಿ ಪ್ರಿಯದರ್ಶಿನಿ ಅವರು ಯಾವ ರೆಸ್ಪಾನ್ಸ್ ಅನ್ನು ಕೂಡ ಮಾಡುತ್ತಿಲ್ಲ ಎಂದು ಹೇಳಿ ಬೇಸರವನ್ನು ತೋರಿಸುತ್ತಾರೆ.

ಸುಳ್ಳು ಹೇಳಿದ ಡಾಕ್ಟರ್
ಇನ್ನು ಅನು ಮತ್ತು ಹರ್ಷವರ್ಧನ್ ಇಬ್ಬರೂ ಸೇರಿ ಸಂಜುಗೆ ಟ್ರೀಟ್‌ಮೆಂಟ್ ಕೊಡುತ್ತಿರುವ ವೈದ್ಯರನ್ನು ಮನೆಗೆ ಕರೆಸಿರುತ್ತಾರೆ. ಸಂಜು ತಾನೇ ಆರ್ಯವರ್ಧನ್ ಎಂದು ಹೇಳಲು ನೀವೇ ಕಾರಣ, ಏನಾಗುತ್ತಿದೆ ಎಂದು ಕೇಳುತ್ತಾರೆ. ಆಗ ವೈದ್ಯರು ಝೇಂಡೇ ಹೆದರಿಸಿರುವುದರಿಂದ ನಾನ್ಯಾವತ್ತೂ ಹಾಗಂದಿಲ್ಲ. ವಿಶ್ವಾಸ್ ಅವರೇ ಸಂಜು. ಆರ್ಯವರ್ಧನ್ ಸಾವನ್ನಪ್ಪಿದ್ದಾರಲ್ಲ ಎಂದು ಹೇಳುತ್ತಾನೆ. ಈ ಮಾತನ್ನು ಕೇಳಿದ ಸಂಜುಗೆ ಮನದೊಳಗೆ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ವೈದ್ಯರು ಸುಳ್ಳು ಯಾಕೆ ಹೇಳುತ್ತಿದ್ದಾರೆ ಎಂದು ಅಂದುಕೊಳ್ಳುತ್ತಾನೆ.

ಮಾನ್ಸಿಯನ್ನು ತಡೆಯುತ್ತಿರುವ ಹರ್ಷ
ಇತ್ತ ಮಾನ್ಸಿ ಸಂಜು ಯಾರು ಎಂದು ತಿಳಿಯಲು ಡಿಎನ್‌ಎ ಟೆಸ್ಟ್ ಮಾಡಿಸಲು ಮುಂದಾಗಿದ್ದಾಳೆ. ಹಾಗಾಗಿ ಸಂಜು ಬಳಸುವ ಗ್ಲಾಸ್ ನಿಂದ ಹಿಡಿದು ಡಿಎನ್‌ಎ ಟೆಸ್ಟ್‌ಗೆ ಬೇಕಾದದ್ದನ್ನೆಲ್ಲಾ ಕಲೆಕ್ಟ್ ಮಾಡುತ್ತಿದ್ದಾಳೆ. ಈ ಬಗ್ಗೆ ಹರ್ಷ ಏನದು ಎಂದು ಕೇಳಿದ್ದಕ್ಕೆ ಮಾನ್ಸಿ ಸತ್ಯ ಹೇಳುತ್ತಾಳೆ. ಡಿಎನ್‌ಎ ಟೆಸ್ಟ್ ಮಾಡಿಸಲು ಪ್ರಿಪರೇಷನ್ ಮಾಡುತ್ತಿರುವುದಾಗಿ ಹೇಳಿದಾಗ ಹರ್ಷ ಅವಳನ್ನು ಇದೆಲ್ಲಾ ಮಾಡಬೇಡ ಸುಮ್ಮನಿರು ಎಂದು ತಡೆಯುತ್ತಾನೆ.

ಸಮಾಧಾನದ ಮಾತುಗಳನ್ನಾಡಿದ ಝೇಂಡೇ
ಇತ್ತ ಸಂಜು ಝೇಂಡೇ ಅನ್ನು ಭೇಟಿಯಾಗಲು ಟೀ ಅಂಗಡಿ ಬಳಿ ಹೋಗಿರುತ್ತಾನೆ. ಝೇಂಡೇ ಹಾಗೂ ಸಂಜು ಇಬ್ಬರೂ ಮಾತನಾಡುತ್ತಿರುತ್ತಾರೆ. ಆಗ ಸಂಜು ಅನ್ನ ತಿನ್ನುವ ಸಂಸ್ಥೆಯ ಹಣವನ್ನೇ ಕಂತೆ ಕಂತೆ ದೋಚುತ್ತಿರುವುದು ಎಷ್ಟು ಸರಿ ಎಂದು ಕೇಳುತ್ತಾನೆ. ಈ ಪ್ರಶ್ನೆಗೆ ಹೆದರದ ಝೇಂಡೇ ಸಮಾಧಾನವಾಗಿ ಉತ್ತರಿಸುತ್ತಾನೆ. ಇದೆಲ್ಲಾ ಇರಬೇಕು. ಎಲ್ಲವೂ ನಿನಗೋಸ್ಕರ ಎಂಬಂತೆ ಮಾತನಾಡುತ್ತಾನೆ. ಆದರೆ, ಆರ್ಯನಿಗೆ ಎಲ್ಲವೂ ನೆನಪಾದರೆ, ಆಗಲೂ ಝೇಂಡೇ ವಿರುದ್ಧ ನಿಲ್ಲುತ್ತಾನಾ ಎಂದು ಕಾದು ನೋಡಬೇಕಿದೆ.