For Quick Alerts
  ALLOW NOTIFICATIONS  
  For Daily Alerts

  ಸಂಜುಗೆ ಬೈದು ಮನೆಗೆ ಹೋಗುವಂತೆ ಅನು ಹೇಳಲು ಕಾರಣವೇಣು?

  By ಪ್ರಿಯಾ ದೊರೆ
  |

  ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಝೇಂಡೇ ರಾತ್ರಿ ಎಲ್ಲರೂ ಮಲಗಿದ ಮೇಲೆ ವಠಾರಕ್ಕೆ ಬರುತ್ತಾನೆ. ಅಲ್ಲಿ ಸಂಜು ಅನು ಮನೆಯ ಹೊರಗಡೆ ಮಲಗಿರುತ್ತಾನೆ. ಇದನ್ನು ನೋಡಿ ಝೇಂಡೇ ಬೇಸರ ಮಾಡಿಕೊಳ್ಳುತ್ತಾನೆ.

  ವರ್ಧನ್ ಕುಟುಂಬದ ಒಡೆಯ ನೀನು. ಯಾಕೋ ಆರ್ಯ ಪ್ರೀತಿ ಅಂತ ಹೇಳಿ ಇಲ್ಲಿ ಬಂದು ಮಲಗಿದ್ದೀಯಾ. ನನ್ನ ಜೊತೆಗೆ ಬಂದು ಬಿಡು ನಮ್ಮ ಸಾಮ್ರಾಜ್ಯದಲ್ಲಿ ನಾವಿಬ್ಬರೇ ಖುಷಿಯಾಗಿ ಇರಬಹುದು ಎಂದು ಮನದಲ್ಲೇ ಮಾತನಾಡಿಕೊಂಡು ಹೊರಡುತ್ತಾನೆ.

  ಸಂಜು ಝೇಂಡೇ ಬಂದಾಗ ತನಗೇನು ಗೊತ್ತಿಲ್ಲದಂತೆ ನಟಿಸಿದ್ದಾನೆ. ಝೇಂಡೇ ವಾಪಸ್ ಹೋಗುತ್ತಿದ್ದಂತೆಯೇ ಫೊಟೋ ತೆಗೆದುಕೊಂಡಿದ್ದಾನೆ. ಆ ಫೋಟೋವನ್ನು ಸಾಕ್ಷಿಗೆಂದು ಸಂಜು ತೆಗೆದುಕೊಂಡಿರಬೇಕು.

   ಸಂಜುಗೆ ನಾನು ಬೇಕಿಲ್ಲ

  ಸಂಜುಗೆ ನಾನು ಬೇಕಿಲ್ಲ

  ಆರಾಧನಾ ಮನೆಯಲ್ಲಿ ಕೂತು ಶಾರದಾ ದೇವಿ ಜೊತೆ ಮಾತನಾಡುತ್ತಿರುತ್ತಾಳೆ. ಈ ವೇಳೆ ಸಂಜುಗೆ ನಾನು ಬಂದಿರುವುದೇ ಇಷ್ಟವಿಲ್ಲ. ಅವನಿಗೆ ಟ್ರೀಟ್ ಮೆಂಟ್ ತೆಗೆದುಕೊಳ್ಳುವುದೂ ಬೇಕಿಲ್ಲ ಎನ್ನುತ್ತಾಳೆ. ಆಗ ಎಲ್ಲರೂ ಶಾಕ್ ಆಗುತ್ತಾರೆ. ಆರಾಧನಾ ಮಾತು ಮುಂದುವರಿಸಿ, ಹೌದು ಸಂಜುಗೆ ಹಳೆಯ ಬದುಕು ಬೇಕಿಲ್ಲ. ಅವನು ಇಲ್ಲಿನ ಜೀವನವನ್ನು ಇಷ್ಟಪಟ್ಟಿದ್ದಾನೆ. ಅದಕ್ಕೆ ಅವನು ನನ್ನನ್ನು ಅವಾಯ್ಡ್ ಮಾಡುತ್ತಿದ್ದಾನೆ. ಆದರೆ, ಇಲ್ಲಿ ನನ್ನದೇನು ತಪ್ಪು ಎಂಬುದು ಗೊತ್ತಾಗುತ್ತಿಲ್ಲ. ಅಷ್ಟು ಸಾಲ ತೀರಿಸಿ ಬಂದಿದ್ದೀನಿ. ಸಂಜು ಹೀಗೆ ನಡೆದುಕೊಳ್ಳಲು ಸರಿಯಾದ ಕಾರಣವೇನು ಎಂಬುದು ಗೊತ್ತಾಗುತ್ತಿಲ್ಲ ಎಂದು ಹೇಳುತ್ತಾಳೆ.

   ಸಂಜುಗೆ ಬೈದ ಅನು

  ಸಂಜುಗೆ ಬೈದ ಅನು

  ಆರಾಧನಾ ಮಾತುಗಳನ್ನು ಕೇಳಿಸಿಕೊಂಡ ಹರ್ಷ ನೀವು ವರಿ ಮಾಡಿಕೊಳ್ಳಬೇಡಿ, ಸಂಜು ಬ್ರದರ್ ಅನ್ನ ನಾನು ಕರೆದುಕೊಂಡು ಬರುತ್ತೀನಿ ಎನ್ನುತ್ತಾನೆ. ಮೀರಾಗೆ ಕರೆ ಮಾಡಿ ಸಂಜು ಬಗ್ಗೆ ವಿಚಾರಿಸುವಂತೆ ಹೇಳುತ್ತಾನೆ. ಮೀರಾ ಅನುಗೆ ಫೋನ್ ಮಾಡಿ ನಡೆದ ಘಟನೆ ಬಗ್ಗೆ ವಿವರಿಸುತ್ತಾಳೆ. ಆಗ ಅನು ಫೋನ್ ಕಟ್ ಮಾಡಿ ಸಂಜುಗೆ ಬೈಯುತ್ತಾಳೆ. ನಿಮ್ಮ ಹೆಂಡತಿಗೆ ಹೇಳದೆ ಯಾಕೆ ಬಂದಿದ್ದೀರಾ.? ಸ್ವಲ್ಪವೂ ಜವಾಬ್ದಾರಿ ಬೇಡವಾ. ಮೊದಲು ಮನೆಗೆ ಹೋಗಿ. ಎಲ್ಲರೂ ನಿಮ್ಮ ಬಗ್ಗೆಯೇ ಯೋಚಿಸುತ್ತಿದ್ದಾರೆ ಎಂದು ಬೈಯುತ್ತಾಳೆ.

   ಮಾನ್ಸಿ ಅನು ಬಗ್ಗೆ ಹೇಳಿದ್ದೇನು..?

  ಮಾನ್ಸಿ ಅನು ಬಗ್ಗೆ ಹೇಳಿದ್ದೇನು..?

  ಪ್ರಿಯದರ್ಶಿನಿ ತಲೆಯಲ್ಲಿ ಈಗ ಝೇಂಡೇ ಹೇಳಿದ ಮಾತುಗಳೇ ಗೂಯ್ ಗುಡುತ್ತಿವೆ. ಅನುಗೆ ನಿಜವಾಗಲೂ ಆರ್ಯನ ಮೇಲೆ ದ್ವೇಷವಿದೆಯಾ ಎಂಬ ಬಗ್ಗೆ ಯೋಚಿಸುತ್ತಿದ್ದಾಳೆ. ಹೀಗಾಗಿ ಪ್ರಿಯದರ್ಶಿನಿ ಮಾನ್ಸಿ ಬಳಿ ಬಂದು ಅನು ಯಾವಾತ್ತಾದರೂ ರಾಜನಂದಿನಿ ತಾನೇ ಎಂದು ಹೇಳಿದ್ದಾಳಾ ಎಂದು ಕೇಳುತ್ತಾಳೆ. ಆಗ ಮಾನ್ಸಿ ಅನು ಬಗ್ಗೆ ನಡೆದಿದ್ದೆಲ್ಲವನ್ನೂ ಹೇಳುತ್ತಾಳೆ. ತಾನೇ ರಾಜನಂದಿನಿ ಎಂದು ಹೇಳಿದ್ದು, ಆರ್ಯನ ಮೇಲೆ ದ್ವೇಷ ಸಾಧಿಸಿದ್ದು. ಪ್ಲಾನ್ ಗಳನ್ನು ಮಾಡಿದ್ದು, ಎಲ್ಲವನ್ನೂ ಮಾನ್ಸಿ ಹೇಳುತ್ತಾಳೆ. ಈ ಮಾತುಗಳನ್ನು ಕೇಳಿ ಪ್ರಿಯದರ್ಶಿನಿ ಅನುಮಾನಗಳು ಮತ್ತಷ್ಟು ಹೆಚ್ಚಾಗುತ್ತದೆ.

   ಸಂಜು ವಿಚಾರವನ್ನು ಹೇಳುವುದಿಲ್ವಾ..?

  ಸಂಜು ವಿಚಾರವನ್ನು ಹೇಳುವುದಿಲ್ವಾ..?

  ಇನ್ನು ಪ್ರಿಯದರ್ಶಿನಿ ಯೋಚಿಸುತ್ತಿರುವ ಶಾರದಾ ಬಂದು ಮಾತನಾಡುತ್ತಾಳೆ. ನಿಮ್ಮ ಮನದಲ್ಲಿ ಇರುವ ಗೊಂದಲವನ್ನು ನನ್ನ ಬಳಿ ಹೇಳಿಕೊಳ್ಳಿ ಎಂದು ಕೇಳುತ್ತಾಳೆ. ಅದಕ್ಕೆ ಪ್ರಿಯದರ್ಶಿನಿ ಆರಾಧನಾ ಸಂಜುನನ್ನು ಕರೆದುಕೊಂಡು ಹೋಗುತ್ತಿನಿ ಎನ್ನುತ್ತಿರುವುದು ತಪ್ಪಲ್ವಾ.? ಸಂಜು ಇಲ್ಲಿದ್ದರೆ ಅರಾಮವಾಗಿ ಇರುತ್ತಾನೆ. ಅವನ ಟ್ರೀಟ್ ಮೆಂಟ್ ಗೂ ಸಹಾಯವಾಗುತ್ತೆ ಎಂದು ಹೇಳುತ್ತಾಳೆ. ಆದರೆ, ಈ ಮಾತನ್ನು ಕೇಳಿದ ಶಾರದಾ, ಆರಾಧನಾ ಹೇಳುತ್ತಿರುವುದರಲ್ಲಿ ತಪ್ಪಿಲ್ಲ. ಫಾರಿನ್ ನಲ್ಲಿ ತುಂಬಾ ಒಳ್ಳೆಯ ಡಾಕ್ಟರ್ಸ್ ಇದ್ದಾರೆ. ಅಲ್ಲಿನ ವಾತಾವರಣ ಸಂಜುಗೆ ನೆನಪಿನ ಶಕ್ತಿ ಬರಲು ಸಾಹಯ ಮಾಡುತ್ತದೆ ಎಂದು ಹೇಳುತ್ತಾಳೆ. ಹಾಗಾದರೆ, ಪ್ರಿಯದರ್ಶಿನಿ ಆರಾಧನಾ ಸಂಜುನನ್ನು ಕರೆದುಕೊಂಡು ಹೋಗಲು ಬಿಡುತ್ತಾಳಾ..?

  English summary
  Viewers are disappointed with Jothe Jotheyali serial storyline. Read on
  Tuesday, November 22, 2022, 17:04
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X