Don't Miss!
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ರೋಹಿತ್ ಬಳಗದ ಅಭ್ಯಾಸಕ್ಕೆ ಭಾನುವಾರ ರಜೆ ನೀಡಿದ ಕೋಚ್ ದ್ರಾವಿಡ್
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Jothe Jotheyali: ಕನ್ನಡಿ ನೋಡಿದ ಆರ್ಯವರ್ಧನ್ ಮಾಡಿದ್ದೇನು..?
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಅನು ಪತ್ರ ಬರೆದಿಟ್ಟು ಒಂಟಿ ಪಯಣ ಆರಂಭಿಸಿದ್ದಾಳೆ. ಒಬ್ಬಳೇ ಬೀದಿ ಬೀದಿಯಲ್ಲಿ ಅಲೆದಾಡುತ್ತಿದ್ದಾಳೆ. ಇತ್ತ ಆರಾಧನಾ ಹೋಟೆಲ್‌ಗೆ ಬಂದಿದ್ದಾಳೆ.
ಆದರೆ ಆರ್ಯ ಹೋಟೆಲ್‌ನಿಂದ ಅನುಳನ್ನು ಹುಡುಕಿಕೊಂಡು ಹೋಗುತ್ತಾನೆ. ಆರಾಧನಾಳಿಗೆ ಅನು ಹಾಗೂ ಆರ್ಯ ಇಬ್ಬರು ಇಲ್ಲದೇ ಇರುವುದದ್ನು ನೋಡಿ ಸಿಟ್ಟು ಮಾಡಿಕೊಳ್ಳುತ್ತಾಳೆ.
ತುಳಸಿಯನ್ನು
ಮನೆಯಲ್ಲಿ
ಕಾಣದೇ
ಪರದಾಡಿದ
ದತ್ತ;
ತಾತನ
ಒದ್ದಾಟ
ನೋಡಿ
ನಕ್ಕ
ಸಮರ್ಥ್
ಅನು ಬೇಕಂತಲೇ ತನ್ನ ಬಳಿ ಸುಳ್ಳು ಹೇಳಿದ್ದಾಳೆ. ಎಲ್ಲರೂ ಸೇರಿ ನನ್ನ ಮತ್ತು ವಿಶುನ ದೂರ ಮಾಡುತ್ತಿದ್ದಾರೆ ಎಂದು ತಿಳಿದ ಆರಾಧನಾ ಸೀದಾ ರಾಜನಂದಿನಿ ನಿವಾಸಕ್ಕೆ ತೆರಳುತ್ತಾಳೆ.

ಅನುಳನ್ನು ಹುಡುಕಿ ಹೊರಟ ಆರ್ಯ
ಆರ್ಯನಿಗೆ ನೆನಪು ಬಂದಿರುತ್ತದೆ. ಹಾಗಾಗಿ ಎಚ್ಚರವಾದ ಕೂಡಲೇ ಆರ್ಯ ಅನುಳನ್ನು ಹುಡುಕುತ್ತಾ ಹೊರಡುತ್ತಾನೆ. ದಾರಿಯಲ್ಲಿ ಎಷ್ಟು ಹುಡುಕಿದರೂ ಅನು ಕಾಣುವುದಿಲ್ಲ. ಸುಬ್ಬು ಮತ್ತು ಪುಷ್ಪಾ ಇಬ್ಬರಿಗೂ ಅನು ಬಗ್ಗೆ ಆತಂಕ ಪಡದಂತೆ ಮಾಡಬಾರದು ಎಂದು ಅವರಿಗೆ ಸಮಾಧಾನ ಮಾಡಲು ಆರ್ಯ ಬರುತ್ತಾನೆ. ಆದರೆ, ವಠಾರದಲ್ಲಿ ಇಬ್ಬರೂ ಇರುವುದಿಲ್ಲ. ಹೀಗಾಗಿ ವಾಪಸ್ ಮನೆಗೆ ಹೋಗುತ್ತಾನೆ. ಆರ್ಯ ಬಂದಿದ್ದನ್ನು ನೋಡಿ ಶಾರದಾ ದೇವಿ ಖುಷಿ ಪಡುತ್ತಾಳೆ.

ಆತಂಕದಲ್ಲಿರುವ ಶಾರದಾ ದೇವಿ
ಆದರೆ ಆರ್ಯನಿಗೆ ಎರಡು ವರ್ಷದ ಹಿಂದಿನ ನೆನಪು ಮಾತ್ರ ಬಂದಿರುತ್ತದೆ. ಇದರಿಂದ ಮಾನ್ಸಿ, ಹರ್ಷ ಹಾಗೂ ಶಾರದಾ ಮೊದಲು ಕನ್‌ಫ್ಯೂಸ್ ಆಗುತ್ತಾರೆ. ನಂತರ ಆರ್ಯ 2020 ಹೊಸ ವರ್ಷಕ್ಕೆ ವಿಶ್ ಮಾಡುತ್ತಾನೆ. ಆಗ ಎಲ್ಲರಿಗೂ ಆರ್ಯನಿಗೆ ಹಳೆಯ ನೆನಪು ಬಂದಿರುವುದು ಗೊತ್ತಾಗುತ್ತದೆ. ಆರ್ಯನ ನಡವಳಿಕೆ ಶಾರದಾಳಿಗೆ ಆತಂಕವನ್ನು ಹೆಚ್ಚಿಸುತ್ತದೆ. ಅಷ್ಟರಲ್ಲಿ ಆರ್ಯ ಫ್ರೆಶ್ ಆಗಿ ಬರುತ್ತೀನಿ ಎಂದು ಹೇಳುತ್ತಾನೆ.

ಕನ್ನಡಿ ನೋಡಿ ಆರ್ಯ ಶಾಕ್
ರೂಮಿಗೆ ಹೋದ ಆರ್ಯ ಕನ್ನಡಿಯಲ್ಲಿ ಮುಖ ನೋಡಿಕೊಳ್ಳುತ್ತಾನೆ. ಅಲ್ಲಿ ಬೇರೆಯರ ಮುಖವನ್ನು ನೋಡಿದ ಆರ್ಯನಿಗೆ ಶಾಕ್ ಆಗುತ್ತದೆ. ಕಿರುಚಿಕೊಂಡು ಕೆಳಗೆ ಬರುವ ಆರ್ಯ ತನ್ನ ಮುಖಕ್ಕೆ ಏನಾಗಿದೆ ಎಂದು ಕೇಳುತ್ತಾನೆ. ಇದೇ ವೇಳೆಗೆ ಆರಾಧನಾ ಬಂದು ಕೂಗಾಡುತ್ತಾಳೆ. ಆಗ ಶಾರದಾ ಇಬ್ಬರನ್ನೂ ಕೂರಿಸಿಕೊಂಡು ನಡೆದ ಘಟನೆಯನ್ನು ವಿವರವಾಗಿ ಹೇಳುತ್ತಾಳೆ. ಅಪಘಾತವಾದ ದಿನ ಪ್ರಿಯದರ್ಶಿನಿ ತೆಗೆದುಕೊಂಡ ನಿರ್ಧಾರದ ಬಗ್ಗೆ ಬಿಡಿಸಿ ಹೇಳುತ್ತಾಳೆ. ಅವರಿಗೆಲ್ಲಾ ವಿಚಾರ ತಿಳಿದಿದ್ದೇ ತಡವಾಗಿ. ಹಾಗಾಗಿ ಎಲ್ಲರಿಗೂ ಗೊಂದಲ ಸೃಷ್ಟಿಯಾಯ್ತು ಎಂದು ಶಾರದಾ ದೇವಿ ಹೇಳುತ್ತಾಳೆ.

ಈಗ ಅನು ಸಿಗುತ್ತಾಳಾ..?
ಶಾರದಾ ದೇವಿ ಮಾತುಗಳನ್ನು ಕೇಳಿದ ಆರಾಧನಾ ಹಾಗೂ ಆರ್ಯವರ್ಧನ್ ಇಬ್ಬರಿಗೂ ಶಾಕ್ ಆಗುತ್ತದೆ. ಈ ವೇಳೆ ಝೇಂಡೇ ಎಲ್ಲಿ ಎಂದು ಆರ್ಯ ಕೇಳುತ್ತಾನೆ. ಆಗ ಝೇಂಡೇ ಮನೆಹಾಳ, ನಾಯಿಗಿಂತ ಕಡೆ ಎಂದು ಹರ್ಷ ಹೇಳುತ್ತಾನೆ. ಇದರಿಂದ ಕೋಪ ಮಾಡಿಕೊಳ್ಳುವ ಆರ್ಯ, ಹರ್ಷನ ಮೇಲೆ ಕಿರುಚಾಡುತ್ತಾನೆ. ಇನ್ನು ಅನು ವಾಪಸ್ ಮನೆಗೆ ಬರುತ್ತಾಳಾ..? ಇಲ್ಲ ಹಾಗೆ ಕಳೆದು ಹೋಗುತ್ತಾಳಾ ಎಂಬ ಕುತೂಹಲ ಮೂಡಿದೆ. ಇದರ ಜೊತೆಗೆ ಆರಾಧನಾ ಸತ್ಯವನ್ನು ಈಗಲಾದರೂ ಒಪ್ಪಿಕೊಳ್ಳುತ್ತಾಳಾ.? ಇಲ್ಲ ಈಗಲೂ ಹಠ ಹಿಡಿಯುತ್ತಾಳಾ ಗೊತ್ತಿಲ್ಲ.