For Quick Alerts
  ALLOW NOTIFICATIONS  
  For Daily Alerts

  ಕಮಲಮ್ಮನ ವಠಾರದ ಅನು ಮನೆಗೆ ಬಂದ ಸಂಜು!

  By ಪ್ರಿಯಾ ದೊರೆ
  |

  'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಅನು ಸಿರಿಮನೆ ವಠಾರಕ್ಕೆ ಬಂದಾಗಿದೆ. ಅನುಗೆ ಒಂದೇ ಕಡೆ ಮಲಗಿ ಮಲಗಿ ಬೋರಾಗಿದೆ. ಆದರೆ ಸದ್ಯ ಅನು ಸಂಪೂರ್ಣವಾಗಿ ಕೆಲ ದಿನಗಳ ಕಾಲ ರೆಸ್ಟ್ ಮಾಡಬೇಕಿದೆ.

  ಪ್ರಭು ದೇಸಾಯಿ ಮತ್ತು ಪ್ರಿಯದರ್ಶಿನಿ, ವರ್ಧನ್ ಮನೆಯವರಿಗೆ ಆರ್ಯ ಬದುಕಿರುವ ಸತ್ಯವನ್ನು ಹೇಳುವ ಮನಸ್ಸು ಮಾಡಿದ್ದಾರೆ. ಆದರೆ ಅವರು ಹೇಳುವ ಮಾತನ್ನು ನಂಬುತ್ತಾರಾ ಎಂಬುದೇ ಪ್ರಶ್ನೆಯಾಗಿದೆ. ಅಲ್ಲದೇ, ಆರ್ಯನಿಗೂ ತನ್ನ ಬಗ್ಗೆ ಏನೂ ನೆನಪಿನಲ್ಲಿ ಇಲ್ಲ. ಈ ಸಮಯದಲ್ಲಿ ಸತ್ಯ ಹೇಳುವುದು ಹೇಗೆ ಎಂದು ಮಾತನಾಡಿಕೊಂಡಿದ್ದಾರೆ.

  ರಿಸೆಪ್ಷನ್ ಪಾರ್ಟಿಯಲ್ಲಿ ಮಿಂಚಿದ ನಟಿ ಗ್ಯಾಬಿ ಎಲಾ ಸ್ಮಿತ್ ಹಾಗೂ ನಟ ಸುಹಾಸ್ರಿಸೆಪ್ಷನ್ ಪಾರ್ಟಿಯಲ್ಲಿ ಮಿಂಚಿದ ನಟಿ ಗ್ಯಾಬಿ ಎಲಾ ಸ್ಮಿತ್ ಹಾಗೂ ನಟ ಸುಹಾಸ್

  ಪ್ರಿಯದರ್ಶನಿ, ಸಂಜುಗೆ ಟ್ರೀಟ್ ಮೆಂಟ್ ಕೊಡುತ್ತಿರುವ ವೈದ್ಯರಿಂದಲೇ ಸತ್ಯ ಹೇಳಿಸೋಣ. ಆಗ ಎಲ್ಲರೂ ನಂಬುತ್ತಾರೆ ಎಂದು ಹೇಳಿದ್ದಾಳೆ. ಇದಕ್ಕೆ ಒಪ್ಪಿದ ಪ್ರಭು ದೇಸಾಯಿ ವೈದ್ಯರ ಬಳಿ ಹೋಗಲು ಮುಂದಾಗಿದ್ದು, ಸಂಜು ತಾನೊಬ್ಬನೇ ಹೋಗುವುದಾಗಿ ಹೇಳಿ ತಡೆದಿದ್ದಾನೆ.

  ಆರ್ಯನನ್ನು ನೆನಪು ಮಾಡಿಕೊಂಡ ಅನು

  ಆರ್ಯನನ್ನು ನೆನಪು ಮಾಡಿಕೊಂಡ ಅನು

  ಅನು ಮನೆಯಲ್ಲಿ ಮಲಗಿಕೊಂಡು ಆರ್ಯವರ್ಧನ್ ಹೇಳಿದ್ದನ್ನೆಲ್ಲಾ ನೆನಪು ಮಾಡಿಕೊಳ್ಳುತ್ತಿರುತ್ತಾಳೆ. ರಾಜವರ್ಧನ್, ಆರ್ಯನ ತಂದೆಗೆ ಮೋಸ ಮಾಡಿದ್ದಾರೆ. ರಾಜನಂದಿನಿಯನ್ನು ಪ್ರೀತಿಸುತ್ತಿರುವಂತೆ ನಟಿಸಲು ಹೋಗಿ, ನಿಜವಾಗಿಯೂ ಪ್ರೀತಿಸಿದೆ ಎಂದು ಹೇಳಿರುತ್ತಾನೆ. ಇದೆಲ್ಲವನ್ನೂ ನೆನಪಿಸಿಕೊಳ್ಳುತ್ತಿರುವ ಅನು, ಆರ್ಯ ಸರ್ ಹೇಳಿದ್ದೆಲ್ಲಾ ನಿಜಾನಾ ಅಂತ ಯೋಚಿಸ್ತಿದ್ದಾಳೆ. ಇದೇ ವೇಳೆಗೆ ರಮ್ಯಾ ಬರುತ್ತಾಳೆ. ಆಗ ರಮ್ಯಾನ ಜೊತೆ ಮಾತನಾಡುತ್ತಾ, ಅನು ತನ್ನ ಮನದ ಮಾತುಗಳನ್ನು ಹೇಳಿಕೊಳ್ಳುತ್ತಾಳೆ. ಪ್ರಿಯದರ್ಶಿನಿ ಬಳಿ ಎಲ್ಲಾ ಸತ್ಯವನ್ನು ಕೇಳಬೇಕು ಎನ್ನುತ್ತಾಳೆ. ಆದರೆ ರಮ್ಯ ಈಗ ಬೇಡ. ನೀನು ಸ್ವಲ್ಪ ರೆಸ್ಟ್ ಮಾಡು. ಅಷ್ಟೇ ಅಲ್ಲದೇ, ಇದ್ದಕ್ಕಿದ್ದ ಹಾಗೆ ಹೋಗಿ ಕೇಳಿದರೆ, ಪ್ರಿಯದರ್ಶಿನಿ ಅವರಿಗೆ ಇದೆಲ್ಲಾ ಗೊತ್ತಿಲ್ಲ ಎಂದರೆ ಅವರಿಗೆ ಶಾಕ್ ಆಗಲ್ವಾ ಅಂತ ಹೇಳುತ್ತಾಳೆ.

  ಕಂಠಿಗೆ ಮುತ್ತಿಟ್ಟ ಸ್ನೇಹಾ! ಇತ್ತ ಹಳ್ಳ ಹಿಡಿಯುತ್ತಿರುವ ಮುರಳಿ ಮೇಷ್ಟ್ರ ಪ್ರೇಮಕತೆಕಂಠಿಗೆ ಮುತ್ತಿಟ್ಟ ಸ್ನೇಹಾ! ಇತ್ತ ಹಳ್ಳ ಹಿಡಿಯುತ್ತಿರುವ ಮುರಳಿ ಮೇಷ್ಟ್ರ ಪ್ರೇಮಕತೆ

  ದಾರಿ ತಪ್ಪಿದನಾ ಸಂಜು..?

  ದಾರಿ ತಪ್ಪಿದನಾ ಸಂಜು..?

  ಆಸ್ಪತ್ರೆಗೆ ಪಬ್ಲಿಕ್ ವಾಹನದಲ್ಲಿ ಹೋಗಿದ್ದಾನೆ. ಸಂಜು ಒಬ್ಬನೇ ಹೋಗಿದ್ದು, ವೈದ್ಯರನ್ನು ಭೇಟಿ ಮಾಡಿದ್ದಾನೆ. ತನಗೆ ತನ್ನ ಚಿಕ್ಕವಯಸ್ಸಿನ ಕೆಲವು ನೆನಪುಗಳಾಗಿದ್ದು, ಅಸ್ಪಷ್ಟವಾಗಿದೆ ಎಂದು ಹೇಳುತ್ತಾನೆ. ಜೊತೆಗೆ ಅನುಗೆ ಪ್ರಪೋಸ್ ಮಾಡಿದ ಕ್ಷಣವೂ ಸ್ವಲ್ಪ ಸ್ವಲ್ಪ ನೆನಪಾಗಿದೆ. ಇದು ತನ್ನ ಖುಷಿಯ ಕ್ಷಣ ಎಂದು ಹೇಳಿದ್ದಾನೆ. ಬಳಿಕ ಅಲ್ಲಿಂದ ಮನೆಗೆ ಹೋಗುವ ದಾರಿಯಲ್ಲಿ ಸಂಜು, ಕಮಲಮ್ಮನ ವಠಾರವನ್ನು ನೋಡಿದ್ದಾನೆ. ತೀರಾ ಪರಿಚಿತ ಸ್ಥಳದಂತೆ ಗೇಟ್ ತೆಗೆದು ಕೆಲ ಘಟನೆಗಳನ್ನು ನೆನಪು ಮಾಡಿಕೊಳ್ಳಲು ಮುಂದಾಗಿದ್ದಾನೆ. ಆದರೆ ಸಂಜುಗೆ ಯಾವುದೂ ನೆನಪಾಗುತ್ತಿಲ್ಲ. ವಠಾರದ ಆಚೆಯೇ ನಿಂತು ಸಂಜು ದಾರಿ ತಪ್ಪಿ ಬಂದೆನಾ ಎಂದು ಯೋಚಿಸುತ್ತಿದ್ದಾನೆ.

  ಆಸ್ಪತ್ರೆಗೆ ಹೊರಟ ಪ್ರಭು ದೇಸಾಯಿ

  ಆಸ್ಪತ್ರೆಗೆ ಹೊರಟ ಪ್ರಭು ದೇಸಾಯಿ

  ಪ್ರಭು ದೇಸಾಯಿ ಮತ್ತು ಪ್ರಿಯದರ್ಶಿನಿ, ಆರ್ಯ ಬದುಕಿದ್ದಾನೆ ಎಂಬ ಸತ್ಯವನ್ನು ಹೇಳುವುದು ಹೇಗೆ ಎಂದು ಯೋಚಿಸುತ್ತಿದ್ದಾರೆ. ಶಾರದಾ ಯಾಕೆ ಹೀಗಿದ್ದೀರಾ ಎಂದು ಕೇಳಿದಾಗ ಗೊಂದಲದಲ್ಲಿ ಮಾತನಾಡುತ್ತಾರೆ. ಸಂಜು ವೈದ್ಯರ ಜೊತೆಗೆ ಮಾತನಾಡಬೇಕಿತ್ತು. ಅಷ್ಟೇ ಅಲ್ಲದೇ ಅವನು ಒಬ್ಬನೇ ಹೋಗಿರುವುದು ಕೂಡ ಭಯವಾಗುತ್ತಿದೆ ಎಂದು ಹೇಳುತ್ತಾರೆ. ಆಗ ಶಾರದಾ ಆಸ್ಪತ್ರೆಗೆ ಹೊರಡಲು ಕಾರಿನ ವ್ಯವಸ್ಥೆ ಮಾಡುವಂತೆ ಹೊಸಮನಿಗೆ ಹೇಳುತ್ತಾಳೆ. ಆದರೆ ಕಾರಿನ ಡ್ರೈವರ್ ಅನ್ನು ಕಂಡು ಸಂಜುನ ಕರೆದುಕೊಂಡು ಹೋಗಲಿಲ್ಲವಾ ಎಂದು ಶಾರದಾ ಕೇಳುತ್ತಾಳೆ. ಆಗ ಡ್ರೈವರ್ ಸಂಜು ಅವರೇ ಬಸ್ ನಲ್ಲಿ ಹೋಗುತ್ತೀನಿ ಎಂದು ಹೋದರು ಎನ್ನುತ್ತಾನೆ. ಈ ಮಾತನ್ನು ಕೇಳಿದ ಪ್ರಿಯದರ್ಶಿನಿ ಹಾಗೂ ಪ್ರಭುದೇಸಾಯಿ ಅವರು ಗಾಬರಿಯಿಂದ ಆಸ್ಪತ್ರೆಗೆ ತೆರಳುತ್ತಾರೆ.

  ಅನು ಮನೆಗೆ ಬಂದ ಸಂಜು

  ಅನು ಮನೆಗೆ ಬಂದ ಸಂಜು

  ಇನ್ನು ನಾಳಿನ ಸಂಚಿಕೆಯಲ್ಲಿ ಸುಬ್ಬು ಸಂಜುನನ್ನು ವಠಾರದಲ್ಲಿ ನಿಂತಿರುವುದನ್ನು ನೋಡುತ್ತಾನೆ. ಬಳಿಕ ಸಂಜು ಸೀದಾ ಅನು ಮನೆಗೆ ಹೋಗುತ್ತಾನೆ. ಅನು, ಸಂಜುನನ್ನು ನೋಡಿ ಗಾಬರಿಯಾಗುತ್ತಾಳೆ. ಶಾರದಾಗೆ ಕರೆ ಮಾಡಿ ಸಂಜು ನಮ್ಮ ಮನೆಗೆ ಬಂದಿದ್ದಾನೆ ಎಂದು ಹೇಳುತ್ತಾಳೆ. ಆಗ ಶಾರದಾ ಕೂಡ ಶಾಕ್ ಆಗುತ್ತಾಳೆ. ಸಂಜುಗೆ ಈಗಲಾದರೂ ಎಲ್ಲಾ ನೆನಪಾಗುತ್ತದೆಯೇ ಅಥವಾ ಅನು, ಸಂಜು ಜೊತೆಗೆ ಜಗಳವಾಡುತ್ತಾನಾ ಎಂದು ನಾಳಿನ ಸಂಚಿಕೆಯಲ್ಲಿ ಕಾದು ನೋಡಬೇಕಿದೆ.

  English summary
  jothe jotheyali Serial 6th october Episode Written Update. sanju goes to vatara by accidently. May sanju remember everything by seeing vatara.
  Thursday, October 6, 2022, 19:17
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X