For Quick Alerts
  ALLOW NOTIFICATIONS  
  For Daily Alerts

  ಆಫೀಸಿನಲ್ಲಿ ಆರ್ಯವರ್ಧನ್ ಎಂದು ಸಹಿ ಹಾಕಿದ ಸಂಜು: ಮುಂದೇನಾಯ್ತು?

  By ಪ್ರಿಯಾ ದೊರೆ
  |

  ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅನು ಮನೆಗೆ ಸಂಜು ಬಂದಿದ್ದಕ್ಕೆ ಎಲ್ಲರೂ ಶಾಕ್ ಆಗುತ್ತಾರೆ. ಹಾಗಾಗಿ ಸಂಜು ತಾನು ಅನು ಮನೆಗೆ ಬಂದದ್ದು ಹೇಗೆ ಎಂದು ಹೇಳುತ್ತಾನೆ. ತಾನು ಆಫೀಸಿಗೆ ಹೋಗಿದ್ದು, ಅಲ್ಲಿಂದ ಮೀರಾ ತನ್ನನ್ನು ಇಲ್ಲಿಗೆ ಕರೆದುಕೊಂಡು ಬಂದಳು ಎಂದು ಹೇಳುತ್ತಾನೆ.

  ಆಗ ಪ್ರಭು ದೇಸಾಯಿ ಮತ್ತು ಪ್ರಿಯದರ್ಶಿನಿ ಇಬ್ಬರೂ ಮಾತನಾಡಿಕೊಳ್ಳುತ್ತಾರೆ. ಸಂಜುಗೆ ಹೇಗಿದ್ದರೂ ಎಲ್ಲಾ ನೆನಪಾಗುತ್ತಿದೆ ಅನಿಸುತ್ತೆ. ಅದಕ್ಕೆ ಅವನಾಗಿಯೇ ಆಫೀಸಿಗೆ ಹೋಗಿದ್ದಾನೆ. ಇನ್ನು ನಾವು ಊರಿಗೆ ಹೋಗುವುದೇ ಸರಿ ಎಂದು ಮಾತನಾಡಿಕೊಳ್ಳುತ್ತಾರೆ.

  ಇತ್ತ ಮೀರಾ ಆಫೀಸಿನ ಫೈಲ್ ಅನ್ನು ಅನುಗೆ ತೋರಿಸಿ ಚೆಕ್ ಮಾಡಲು ಹೇಳುತ್ತಾಳೆ. ತೊಂದರೆಯಾದರೆ, ಬೇಡ ಎಂದು ಕೂಡ ಹೇಳುತ್ತಾಳೆ. ಆದರೆ ಅನು ಪರವಾಗಿಲ್ಲ ನಾನೇ ನೋಡುತ್ತೀನಿ. ತೊಂದರೆ ಏನೂ ಇಲ್ಲ ಎಂದು ಮೀರಾಗೆ ಹೇಳುತ್ತಾಳೆ.

   ಸಂಜು ಆಫೀಸಿಗೆ ಹೋಗುವುದರ ಬಗ್ಗೆ ಮಾತನಾಡಿದ ಶಾರದಾ

  ಸಂಜು ಆಫೀಸಿಗೆ ಹೋಗುವುದರ ಬಗ್ಗೆ ಮಾತನಾಡಿದ ಶಾರದಾ

  ಸಂಜುಗೆ ಎಲ್ಲಾ ನೆನಪು ಸ್ವಲ್ಪ ಸ್ವಲ್ಪವೇ ಬರುತ್ತಿದೆ ಎಂದು ಪ್ರಿಯದರ್ಶಿನಿ ಹಾಗೂ ಪ್ರಭು ದೇಸಾಯಿ ಇಬ್ಬರು ಊರಿಗೆ ಹೊರಡುತ್ತೀವಿ ಎಂದು ಹೇಳುತ್ತಾರೆ. ಊರಿನಲ್ಲಿ ಸ್ವಲ್ಪ ಕೆಲಸವಿದೆ. ಹೋಗಿ ಬರುತ್ತೇವೆ ಎಂದು ಪ್ರಿಯದರ್ಶಿನಿ ಹೇಳಿದಾಗ ಶಾರದಾ ನೀವು ಹೋಗುವಷ್ಟಿಲ್ಲ, ದೇಸಾಯಿ ಅವರು ಬೇಕಿದ್ದರೆ ಹೋಗಿ ಬರಲಿ ಎಂದು ಹೇಳುತ್ತಾರೆ. ಆಗ ಇಬ್ಬರೂ 'ಇಲ್ಲ ನಮಗೆ ಊರಿನಲ್ಲಿ ಸ್ವಲ್ಪ ಕೆಲಸವಿದೆ' ಎಂದು ಹೇಳುತ್ತಾರೆ. ಆಗ ಸಂಜು ಆಫೀಸಿಗೆ ಹೋಗುವ ವಿಚಾರ ಪ್ರಸ್ತಾಪವಾಗುತ್ತದೆ.

   ಸಂಜುನನ್ನು ಆಫೀಸಿಗೆ ಕಳಿಸುವುದು ಸರಿಯಲ್ಲ ಎಂದ ಅನು

  ಸಂಜುನನ್ನು ಆಫೀಸಿಗೆ ಕಳಿಸುವುದು ಸರಿಯಲ್ಲ ಎಂದ ಅನು

  ಈ ಮಾತನ್ನು ಕೇಳಿದ ಅನು ಶಾಕ್ ಆಗುತ್ತಾಳೆ. ಆಗ ಶಾರದಾ ಸಂಜುಗೆ ಮನೆಯಲ್ಲಿ ಹೊತ್ತು ಕಳೆಯುವುದಿಲ್ಲ ಹಾಗಾಗಿ ಆಫೀಸಿಗೆ ಕಳಿಸುತ್ತಿದ್ದೇನೆ ಎನ್ನುತ್ತಾಳೆ. ಆಗ ಅನು ಹಾಗಲ್ಲಮ್ಮ ಹೀಗೆ ನಮಗೆ ಬೇಕಾದವರು ಎಂದು ಆಫಿಸಿಗೆ ಕಳಿಸಿದರೆ, ಇತರೆ ನೌಕರರು ಬೇಸರ ಮಾಡಿಕೊಳ್ಳುವುದಿಲ್ಲವಾ ಎಂದು ಪ್ರಶ್ನಿಸುತ್ತಾಳೆ. ಆಗ ಸಂಜು ಈ ಮಾತು ಸರಿಯಾಗಿದೆ ಎಂದು ಹೇಳುತ್ತಾನೆ. ಅದಕ್ಕೆ ಶಾರದಾ ಸರಿ ಇಂಟರ್ ವ್ಯೂವ್ ಮಾಡಿಯೇ ಅಪಾಯಿಂಟ್ ಮೆಂಟ್ ಕೊಟ್ಟರೆ ಆಯ್ತು ಎಂದು ಶಾರದಾ ಹೇಳುತ್ತಾಳೆ. ಇನ್ನು ಸಂಜು ವಠಾರದಿಂದ ಆಚೆ ಬಂದು ಒಣಕಸ ಹಾಗೂ ಹಸಿಕಸದ ಡಬ್ಬಿಯನ್ನು ನೋಡಿ, ವಠಾರದವರ ಬಳಿ ಈಗ ಕಸದ ಸಮಸ್ಯೆ ಇಲ್ಲ ಅಲ್ವಾ ಎಂದು ಕೇಳುತ್ತಾನೆ. ಇಷ್ಟು ಸಲೀಸಾಗಿ ವಠಾರದ ಬಗ್ಗೆ ಕೇಳಲು ಹೇಗೆ ಸಾಧ್ಯ ಎಂದು ಅವರು ಯೋಚಿಸುತ್ತಾರೆ. ಈಗ ಸಂಜುಗೆ ಒಂದೊಂದೇ ನೆನಪಾಗುತ್ತಿದೆ.

   ಅನು ಕೊಲೆಗೆ ಸಂಚು ರೂಪಿಸುವುದರ ಬಗ್ಗೆ ಹೇಳಿದ ಸಂಜು

  ಅನು ಕೊಲೆಗೆ ಸಂಚು ರೂಪಿಸುವುದರ ಬಗ್ಗೆ ಹೇಳಿದ ಸಂಜು

  ಇನ್ನು ಸಂಜು ಆಫೀಸಿಗೆ ಹೊರಡುತ್ತಾನೆ. ಇದೇ ವೇಳೆಯಲ್ಲಿ ಪ್ರಿಯದರ್ಶನಿ ಹಾಗೂ ಪ್ರಭು ದೇಸಾಯಿ ಊರಿಗೆ ಹೊರಡುತ್ತಾರೆ. ಸಂಜು ಸ್ವಲ್ಪ ಬೇಸರ ಮಾಡಿಕೊಂಡು ಪ್ರಿಯದರ್ಶಿನಿ ಅವರನ್ನು ತಬ್ಬಿ ಅಳುತ್ತಾನೆ. ಪ್ರಿಯದರ್ಶನಿ, ಇವರೆಲ್ಲಾ ನಮ್ಮವರೇ ಹೆದರಬೇಡ, ನಾನು ಬೇಗ ಬರುತ್ತೇನೆ ಎಂದು ಹೇಳಿ ಹೊರಡುತ್ತಾಳೆ. ಸಂಜುನನ್ನು ನೋಡಿದ ಶಾರದಾ ಯಾಕೆ ಇಂಟರ್ ವ್ಯೂವ್ ಅಟೆಂಡ್ ಮಾಡುವುದಕ್ಕೆ ಭಯವಾ ಎಂದು ಕೇಳಿದ್ದಕ್ಕೆ 'ಇಲ್ಲ ಅಮ್ಮ ಅನುಗೆ ಯಾರಾದರೂ ಶತ್ರುಗಳಿದ್ದಾರಾ' ಎಂದು ಪ್ರಶ್ನೆಯನ್ನು ಕೇಳುತ್ತಾನೆ. ಆಗ ಶಾರದಾ ಶಾಕ್ ಆಗಿ 'ಇಲ್ಲ ಆರ್ಯನಿಗೆ ಶತ್ರುಗಳಿದ್ದಾರೆ ಯಾಕಪ್ಪ ಹೀಗೆ ಕೇಳಿದೆ' ಎಂದು ಕೇಳುತ್ತಾಳೆ. ಆಗ ಸಂಜು ಅನು ನದಿಯಲ್ಲಿ ಬಿದ್ದಾಗ ನಡೆದ ಘಟನೆ ಹಾಗೂ ಅನು ಮನೆಯ ಬಳಿ ಸಿಕ್ಕ ವ್ಯಕ್ತಿಯ ಬಗ್ಗೆ ಹೇಳುತ್ತಾನೆ. ಈ ಮಾತನ್ನು ಕೇಳಿ ಶಾರದಾ ಶಾಕ್ ಆಗುತ್ತಾಳೆ. ಈ ವಿಚಾರವನ್ನು ಹೇಳಿ ತುಂಬಾ ಒಳ್ಳೆಯ ಕೆಲಸ ಮಾಡಿದೆ. ನಾನಿನ್ನು ನೋಡಿಕೊಳ್ಳುತ್ತೀನಿ. ನೀನು ಆಫೀಸಿಗೆ ಅರಾಮಾಗಿ ಹೋಗಿ ಬಾ ಎನ್ನುತ್ತಾಳೆ.

   ಎಲ್ಲರಿಗೂ ಸಂಜು ಯಾರೆಂದು ಗೊತ್ತಾಗೋಯ್ತಾ?

  ಎಲ್ಲರಿಗೂ ಸಂಜು ಯಾರೆಂದು ಗೊತ್ತಾಗೋಯ್ತಾ?

  ಸಂಜು ಆಫೀಸಿಗೆ ಬಂದವನೇ ಆರ್ಯವರ್ಧನ್ ಎಂದು ತನ್ನ ಹೆಸರನ್ನು ಬರೆದು ಸಹಿ ಹಾಕಿರುತ್ತಾನೆ. ಮೀರಾ ಸಂಜುನನ್ನು ನೋಡಿ ಆಫೀಸಿನಲ್ಲಿ ಎಲ್ಲರಿಗೂ ಪರಿಚಯ ಮಾಡಿಕೊಡುತ್ತಾಳೆ. ಆಗ ಇವರ ಹೆಸರು ವಿಶ್ವಾಸ್ ದೇಸಾಯಿ, ಆದರೆ ಎಲ್ಲರೂ ಸಂಜು ಎಂದು ಕರೆಯುತ್ತಾರೆ ಎಂದು ಪರಿಚಯ ಮಾಡಿಕೊಡುತ್ತಾಳೆ. ಆಗ ತಕ್ಷಣವೇ ಸಂಜು ತಾನು ಆಫೀಸಿನ ಎಂಟ್ರಿ ಪುಸ್ತಕದಲ್ಲಿ ಬರೆದುವುದನ್ನು ನೆನಪಿಸಿಕೊಳ್ಳುತ್ತಾನೆ. ಇದರಿಂದ ಸಂಜು ಮೇಲಿನ ಅನುಮಾನ ಮಾನ್ಸಿ ಹಾಗೂ ಮೀರಾಗೆ ದುಪ್ಪಟ್ಟಾಗುತ್ತದೆಯೋ ಇಲ್ಲವೇ ಈ ಘಟನೆಯಿಂದಲೇ ಸಂಜು ಆರ್ಯವರ್ಧನ್ ಎಂಬುದು ಗೊತ್ತಾಗುತ್ತದೆಯೋ ತಿಳಿಯಲು ಸೋಮವಾರದವರೆಗೂ ಕಾಯಬೇಕಿದೆ.

  English summary
  before going to office sanju says sharada about anu attack and after goes to office He signs as aryavardhan. Read on
  Saturday, October 15, 2022, 19:08
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X