For Quick Alerts
  ALLOW NOTIFICATIONS  
  For Daily Alerts

  ತಂದೆಯ ಕೊಲೆ ಕಥೆಯನ್ನು ಹೇಳಿದ ಆರ್ಯ!

  By ಪ್ರಿಯಾ ದೊರೆ
  |

  ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ರಾಜನಂದಿನಿ ಕಥೆ ಮುಗಿದ ಮೇಲೆ ಈಗ ಆರ್ಯವರ್ಧನ್ ತನ್ನ ತಂದೆಯ ಕಥೆಯನ್ನು ಹೇಳಲು ಶುರು ಮಾಡಿದ್ದಾರೆ. ತನ್ನ ತಂದೆಗೆ ಕೊಟ್ಟ ಮಾತನ್ನು ನೆರವೇರಿಸುತ್ತಿರುವುದಾಗಿ ಆರ್ಯ ಅನು ಬಳಿ ಹೇಳಿದ್ದಾನೆ.

  ಇಷ್ಟು ದಿನ ಅನು ಆರ್ಯ ಕೇವಲ ಆಸ್ತಿ, ಅಧಿಕಾರಕ್ಕೋಸ್ಕರ ರಾಜನಂದಿನಿಯನ್ನು ಪ್ರೀತಿ, ನಂಬಿಕೆ ಹೆಸರಲ್ಲಿ ಸಾಯಿಸಿದನು ಎಂದು ತಿಳಿದುಕೊಂಡಿದ್ದಾಳೆ. ಈ ತಪ್ಪು ಮಾಡಿದ್ದಕ್ಕೆ ಆರ್ಯನಿಗೆ ತಕ್ಕೆ ಶಿಕ್ಷೆ ನೀಡಬೇಕು ಎಂದು ಸಹ ತೀರ್ಮಾನ ಮಾಡಿದ್ದಾಳೆ.

  ಸುಳ್ಳಿನ ಅರಮನೆ ಕಟ್ಟಿರುವ ಬಾಲ ದಿವ್ಯ ಕೈಗೆ ಸಿಕ್ಕಿ ಬೀಳುತ್ತಾನ?ಸುಳ್ಳಿನ ಅರಮನೆ ಕಟ್ಟಿರುವ ಬಾಲ ದಿವ್ಯ ಕೈಗೆ ಸಿಕ್ಕಿ ಬೀಳುತ್ತಾನ?

  ಆದರೆ ಅನು ಆಲೋಚನೆಗಳು ಈಗ ಉಲ್ಟಾ-ಪಲ್ಟಾ ಆಗುತ್ತಿದೆ. ತಾನು ಅಂದುಕೊಂಡಿದ್ದು, ತಿಳಿದುಕೊಂಡಿದ್ದು ಒಂದು, ಆದರೆ ಇನ್ನೊಂದು ವಿಚಾರವೂ ಇದೆ ಎಂಬುದನ್ನು ಅನು ಈಗ ಅರ್ಥ ಮಾಡಿಕೊಳ್ಳುತ್ತಿದ್ದಾಳೆ.

  ಆರ್ಯ ಹೊಸ ಕತೆಯನ್ನು ಶುರು ಮಾಡಿದ್ದಾನೆ!

  ಆರ್ಯ ಹೊಸ ಕತೆಯನ್ನು ಶುರು ಮಾಡಿದ್ದಾನೆ!

  ಆರ್ಯ ತನ್ನ ತಾಯಿ ಇಂದ ಬಲವಂತವಾಗಿ ತಂದೆಯ ಹೆಸರನ್ನು ತಿಳಿದುಕೊಂಡರಂತೆ. ತಂದೆಯನ್ನು ಹುಡುಕಿಕೊಂಡು ಹೊರಾಟಾಗ ಆರ್ಯವರ್ಧನ್ ಅವರಿಗೆ ಶಾಕ್ ಆಗಿತ್ತಂತೆ. ಯಾಕೆಂದರೆ, ತಂದೆಯನ್ನು ನೋಡಿ ಅವರೊಟ್ಟಿಗೆ ಬದುಕುವ ಆಸೆಯಿಂದ ಹೋದ ಆರ್ಯವರ್ಧನ್‌ಗೆ ಕಂಡಿದ್ದು, ರಾಜವರ್ಧನ್. ಅದೂ ಕೂಡ ಅವರ ತಂದೆಯನ್ನು ಕೊಲ್ಲುತ್ತಿರುವ ಸಂದರ್ಭವನ್ನು ನೋಡಿದ್ದಾರೆ. ಆಸ್ತಿಗಾಗಿ ರಾಜವರ್ಧನ್ ತಮ್ಮ ತಂದೆಯ ಹಣೆಗೆ ಗನ್ ಪಾಯಿಂಟ್ ಇಟ್ಟಿದ್ದರಂತೆ. ಆಸ್ತಿಗಾಗಿ ನನ್ನನ್ನು ಕೊಲ್ಲಬೇಡ, ನನಗೂ ಒಬ್ಬ ಮಗನಿದ್ದಾನೆ ಎಂದರೂ ಕೇಳದೇ, ರಾಜವರ್ಧನ್ ನೇರವಾಗಿ ಹಣೆಗೆ ಗುಂಡಿಟ್ಟು ಕೊಂದು ಬಿಡುತ್ತಾನೆ. ಇದೇ ವಿಚಾರವನ್ನು ಅನುಗೆ ಆರ್ಯ ಹೇಳುತ್ತಾನೆ. ಆಗ ಅನು ಶಾಕ್ ಆಗುತ್ತಾಳೆ.

  ಮಗನ ನಡವಳಿಕೆಯ ಬಗ್ಗೆ ಅನುಮಾನ ಪಟ್ಟ ಬಂಗಾರಮ್ಮ: ಸಿಕ್ಕಿ ಬೀಳುತ್ತಾನ ಕಂಠಿ?ಮಗನ ನಡವಳಿಕೆಯ ಬಗ್ಗೆ ಅನುಮಾನ ಪಟ್ಟ ಬಂಗಾರಮ್ಮ: ಸಿಕ್ಕಿ ಬೀಳುತ್ತಾನ ಕಂಠಿ?

  ಆರ್ಯ ಮಾತನ್ನು ನಂಬಿದಳಾ ಅನು..?

  ಆರ್ಯ ಮಾತನ್ನು ನಂಬಿದಳಾ ಅನು..?

  ಆರ್ಯ ಹೇಳಿದ್ದನ್ನು ಕೇಳುವ ಅನು ಮತ್ತೆ ಪ್ರಶ್ನೆ ಮಾಡುತ್ತಾಳೆ. ನೀವು ಹೇಳಿದ್ದನ್ನೆಲ್ಲವನ್ನೂ ನಂಬುತ್ತೀನಿ. ಆದರೆ ನನ್ನ ಜಾಗದಲ್ಲಿ ನೀವೂ ಸ್ವಲ್ಪ ನಿಂತು ಯೋಚಿಸಿ. ನೀವು ಮಾಡಿದ್ದು ಸರೀನಾ..? ಒಂದು ಸಾವಿಗೆ ಪ್ರತಿಕಾರವೆಂದರೆ ಮತ್ತೊಂದು ಕೊಲೆನಾ..? ಈ ನನ್ನ ಪ್ರಶ್ನೆಗೆ ಉತ್ತರ ಕೊಡಿ ಸರ್ ಎಂದು ಕೇಳುತ್ತಾಳೆ. ಪ್ರಶ್ನೆ ಕೇಳಿದವಳೇ, ಅನು ಅಲ್ಲಿಂದ ಹೊರಟು ಹೋಗುತ್ತಾಳೆ. ಆರ್ಯ ಎಷ್ಟು ಕೂಗಿದರೂ ಅನು ನಿಲ್ಲದೇ, ಹೊರಟು ಬಿಡುತ್ತಾಳೆ.

  ಝೇಂಡೆಯಗೆ ಆಶ್ಚರ್ಯ!

  ಝೇಂಡೆಯಗೆ ಆಶ್ಚರ್ಯ!

  ಝೇಂಡೇ ಆರ್ಯನನ್ನು ಹುಡುಕಿಕೊಂಡು ಬಂದಿದ್ದಾನೆ. ಅಲ್ಲಿ ಅನು ಕಾರು ಇರುವುದನ್ನು ನೋಡಿ, ಇವಳ್ಯಾಕೆ ಆರ್ಯನನ್ನ ಇಲ್ಲಿಗೆ ಕರೆದುಕೊಂಡು ಬಂದಳು ಎಂದು ಯೋಚಿಸುತ್ತಿರುತ್ತಾನೆ. ಅದೇ ಸಮಯಕ್ಕೆ ಅನು ಬರುವುದನ್ನು ನೋಡಿ, ಬಚ್ಚಿಟ್ಟುಕೊಳ್ಳುತ್ತಾನೆ. ಆರ್ಯ ಅನು ಹಿಂದೆ ಓಡಿ ಬರುತ್ತಾನೆ. ಅನುಳನ್ನು ತಡೆಯಲು ಯತ್ನಿಸಿದಾಗ ಆರ್ಯನನ್ನು ಝೇಂಡೇ ತಡೆಯುತ್ತಾನೆ. ಆಗ ಆರ್ಯ ಮತ್ತೆ ಝೇಂಡೇ ಮೇಲೆ ಕೂಗಾಡುತ್ತಾನೆ. ನಿನ್ನ ಸ್ನೇಹಿತನನ್ನು ಬದುಕಲು ಬಿಡು ಎಂದು ಕಿರುಚುತ್ತಾನೆ.

  ಶಾರದಾ ದೇವಿ ಹೊಸ ಟ್ವಿಸ್ಟ್!

  ಶಾರದಾ ದೇವಿ ಹೊಸ ಟ್ವಿಸ್ಟ್!

  ಇನ್ನು ಇತ್ತ ಮೀರಾ, ಹರ್ಷನನ್ನು ಭೇಟಿಯಾಗಲು ಸೀದಾ ಅವರಿರುವ ಜಾಗಕ್ಕೇ ಬಂದಿದ್ದಾಳೆ. ಝೇಂಡೇ ಶಾನುಭೋಗರ ಬಳಿ ಹೆಬ್ಬೆಟ್ಟು ಒತ್ತಿಸಿಕೊಳ್ಳುತ್ತಿರುವುದನ್ನು ತಿಳಿಸುತ್ತಾಳೆ. ಅಲ್ಲದೇ ಗೋಡೌನ್‌ಗೆ ಬೆಂಕಿ ಬಿದ್ದ ವಿಚಾರವನ್ನು ಕೂಡ ಹೇಳುತ್ತಾಳೆ. ಇದ್ಯಾವುದೂ ಆಕಸ್ಮಿಕವಾಗಿ ನಡೆದಿಲ್ಲ. ಬೇಕಂತಲೇ ಮಾಡಿರುವುದು ಎಂದು ಮೀರಾ ಹೇಳುತ್ತಾಳೆ. ಆಗ ಹರ್ಷ ವಿಚಾರವನ್ನು ಕೇಳಿ ಶಾಕ್ ಆಗುತ್ತಾನೆ. ಇತ್ತ ಅನು ಮನೆಗೆ ಬರುತ್ತಾಳೆ. ಮನೆಗೆ ಬಂದ ಕೂಡಲೇ ಶಾರದಾ ದೇವಿ ಆರ್ಯನನ್ನು ಯಾಕೆ ಬಿಟ್ಟು ಬಂದೆ. ಇನ್ಯಾವತ್ತು ಎಂತಹ ಸಂದರ್ಭವಿದ್ದರೂ ಆರ್ಯನನ್ನು ಎಲ್ಲೂ ಬಿಟ್ಟು ಬರಬೇಡ ನನ್ನ ಮೇಲೆ ಆಣೆ ಎನ್ನುತ್ತಾಳೆ.

  English summary
  Jothe Jotheyali Serial Update On August 16th, Anu Is In Confusion, Know More,
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X