For Quick Alerts
  ALLOW NOTIFICATIONS  
  For Daily Alerts

  ಅನು- ಆರ್ಯ, ಸರಿ ಯಾರು? ತಪ್ಪು ಯಾರು? 'ಜೊತೆ ಜೊತೆಯಲಿ' ಟ್ವಿಸ್ಟ್!

  By ಪ್ರಿಯಾ ದೊರೆ
  |

  'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಅನು ಆರ್ಯನ ಮೇಲೆ ತನ್ನ ಮೌನ ಯುದ್ಧವನ್ನು ಮುಂದುವರಿಸಿದ್ದಾಳೆ. ಇದರಿಂದ ಆರ್ಯನಿಗೆ ತೀರಾ ಕಷ್ಟ ಎನಿಸಲು ಶುರುವಾಗಿದೆ. ಆದರೆ ಅನುಗೆ ಈಗಿನ ಪರಿಸ್ಥಿತಿಗೆ ತಕ್ಕ ಹಾಗೆ ಹೀಗಿರುವುದು ಅನಿವಾರ್ಯವಾಗಿದೆ.

  ಪುಷ್ಪಾಳನ್ನು ವಠಾರದವರು ಸುಖಾ-ಸುಮ್ಮನೆ ಕೆಣಕಿದ್ದಾರೆ. ಇದೇ ವೇಳೆಗೆ ರಜನಿ ಕೂಡ ತನ್ನ ಮಗಳ ವಿಚಾರಕ್ಕೆ ಹೀಯಾಳಿಸಿದ್ದಾಳೆ. ಇದರಿಂದ ತೀರಾ ಕೋಪಗೊಂಡ ಪುಷ್ಪಾ ಜಗಳಕ್ಕೆ ಇಳಿದಿದ್ದಾಳೆ. ಆಗ ಬಂದ ರಮ್ಯ ನನ್ನ ಅಮ್ಮನ ಮಾತಿಗೆ ತಲೆಕೆಡಿಸಿಕೊಳ್ಳಬೇಡಿ ಎಂದು ಹೇಳುತ್ತಾಳೆ.

  'ಜೊತೆಜೊತೆಯಲಿ' ಧಾರಾವಾಹಿಯಿಂದ ಅನಿರುದ್ಧ್ ಔಟ್: ಕಿರುತೆರೆಯಿಂದ ಬಹಿಷ್ಕಾರ?'ಜೊತೆಜೊತೆಯಲಿ' ಧಾರಾವಾಹಿಯಿಂದ ಅನಿರುದ್ಧ್ ಔಟ್: ಕಿರುತೆರೆಯಿಂದ ಬಹಿಷ್ಕಾರ?

  ಅನು ಹಾಗೂ ಆರ್ಯ ಇಬ್ಬರೂ ಮಾತನಾಡುತ್ತಿಲ್ಲ. ಇದರಿಂದ ಶಾರದಾಗೆ ಭಯ ಶುರುವಾಗಿದೆ. ಮಗಳು ಮತ್ತು ಅಳಿಯ ದೂರಾಗದಂತೆ ನೋಡಿಕೋ ಎಂದು ಜೋಗ್ತವ್ವ ಹೇಳಿದ್ದಾಳೆ. ಇದರಿಂದ ಶಾರದಾ ಆದಷ್ಟು ಅನು ಮತ್ತು ಆರ್ಯನನ್ನು ಒಟ್ಟಿಗೆ ಇರುವಂತೆ ಹೇಳುತ್ತಿದ್ದಾಳೆ. ಆದರೆ ಅನು ಇದಕ್ಕೆ ತಯಾರಿಲ್ಲ.

  ಝೇಂಡೇ ಬಗ್ಗೆ ಆರ್ಯ ಬೇಸರ!

  ಝೇಂಡೇ ಬಗ್ಗೆ ಆರ್ಯ ಬೇಸರ!

  ಆರ್ಯ ಮನೆಯಿಂದ ಆಫೀಸಿಗೆ ಹೊರಟಿದ್ದಾನೆ. ಇದೇ ಸಂದರ್ಭದಲ್ಲಿ ಝೇಂಡೇ ಮನೆಯಾಚೆ ನಿಂತಿರುವುದನ್ನು ನೋಡಿ, ನನ್ನ ಯೋಗಕ್ಷೇಮ ವಿಚಾರಿಸೋದಕ್ಕೆ ಬಂದ್ಯಾ..? ಅದಕ್ಕಿಂತ ಹೆಚ್ಚಾಗಿ ಮನೆಯ ಸ್ಥಿತಿ ತಿಳಿದುಕೊಳ್ಳುವುದಕ್ಕೆ ಬಂದಿರುತ್ತೀಯಾ ಅಲ್ವಾ ಝೇಂಡೇ ಎಂದು ಬೇಸರವನ್ನು ವ್ಯಕ್ತಪಡಿಸುತ್ತಾನೆ. ಆಗ ಝೇಂಡೇ ಅದು ನನ್ನ ಕರ್ತವ್ಯ ಎನ್ನುತ್ತಾನೆ. ಆಗ ಆರ್ಯ, ಅನು ಬಳಿ ಎಲ್ಲಾ ಸತ್ಯವನ್ನೂ ಹೇಳಿಕೊಂಡಿದ್ದೇನೆ. ಇನ್ನೇನಿದ್ದರೂ ಅನು ನನ್ನ ಮಾತುಗಳನ್ನು ನಂಬಿ ಒಪ್ಪಿಕೊಳ್ಳುವುದಷ್ಟೇ ಬಾಕಿ ಝೇಂಡೇ. ಆಮೇಲೆ ಇದೆಲ್ಲವನ್ನು ಬಿಟ್ಟು ನಾನು ಅನು ಇಬ್ಬರೇ ಹಾಯಾಗಿ ಸುಖವಾಗಿರುವುದು ಎಂದು ಹೇಳುತ್ತಾನೆ.

  ಹರ್ಷನಿಗೆ ಔಷಧಿ ಕೊಟ್ಟಿದ್ದು ಯಾರು?

  ಹರ್ಷನಿಗೆ ಔಷಧಿ ಕೊಟ್ಟಿದ್ದು ಯಾರು?

  ಇದೇ ಸಂದರ್ಭದಲ್ಲಿ ಆರ್ಯ, ಝೇಂಡೇಯನ್ನು ಹರ್ಷವರ್ಧನ್‌ಗೆ ಆಫೀಸಿನಲ್ಲಿ ಕೊಡುವ ಆಹಾರದಲ್ಲಿ ಮತ್ತು ಬರುವ ಔಷಧಿಯನ್ನು ಬೆರೆಸುತ್ತಿದ್ದಾರಂತೆ. ಅದರ ಬಗ್ಗೆ ನಿನಗೆ ಮಾಹಿತಿ ಇದ್ಯಾ ಎಂದು ಆರ್ಯ ಝೇಂಡೇಯನ್ನು ಕೇಳುತ್ತಾನೆ. ಅದಕ್ಕೆ ಝೇಂಡೇ ತನಗೇನು ಗೊತ್ತಿಲ್ಲ ಎಂಬಂತೆ, ಇದಕ್ಕೇನು ಉತ್ತರ ಕೊಡಲಿ ಎಂದು ಹೇಳುತ್ತಾನೆ. ಆಗ ಆರ್ಯ ಕೂಡ ನಾನು ಹೀಗೆ ಹೇಳಿದೆ. ಆದರೆ ಅನು ಪುರಾವೆ ಇಲ್ಲದೇ ಸುಖಾ ಸುಮ್ಮನೆ ಹೀಗೆಲ್ಲಾ ಹೇಳೋದಿಲ್ಲ. ನೋಡೋಣ ಏನು ಅಂತ ಎಂದು ಹೇಳುತ್ತಾನೆ. ಆಗ ಮನಸಿನಲ್ಲಿ ಮಾತನಾಡಿಕೊಳ್ಳುವ ಝೇಂಡೇ, ಅನು ಎಲ್ಲವನ್ನೂ ಕೆಣಕಲು ಶುರು ಮಾಡಿದ್ದಾಳೆ. ಸ್ವಲ್ಪ ಎಚ್ಚರವಾಗಿರಬೇಕು. ಇದಕ್ಕೆಲ್ಲಾ ಬ್ರೇಕ್ ಹಾಕಲೇ ಬೇಕು ಇಲ್ಲದಿದ್ದರೆ ಕಷ್ಟವಾಗುತ್ತದೆ ಎಂದು ಅಂದುಕೊಳ್ಳುತ್ತಾನೆ.

  ಅನು ಗರ್ಭಿಣಿ ಎಂದು ತಿಳಿದ ಆರ್ಯ!

  ಅನು ಗರ್ಭಿಣಿ ಎಂದು ತಿಳಿದ ಆರ್ಯ!

  ಅನುಗೆ ಆಸ್ಪತ್ರೆಯಿಂದ ಚೆಕಪ್‌ಗೆ ಬರಬೇಕೆಂದು ರಿಮೈಂಡರ್ ಕಾಲ್ ಬಂದಿದೆ. ಹೀಗಾಗಿ ಅನು ಆಸ್ಪತ್ರೆಗೆ ಬಂದಿದ್ದಾಳೆ. ವೈದ್ಯರು ಅನುಗೆ ಚೆಕಪ್ ಮಾಡಿ, ಆರ್ಯವರ್ಧನ್ ಯಾಕೆ ಬಂದಿಲ್ಲ. ನಿದ್ದೆ ಸರಿಯಾಗಿ ಮಾಡಿ ಎಂದೆಲ್ಲಾ ಪ್ರಶ್ನಿಸುತ್ತಾರೆ. ಆಗ ಅನು ಮೌನವಾಗಿರುವುದನ್ನು ನೋಡಿ. ಏನಾದರೂ ಮಿಸ್ ಅಂಡರ್ಸ್ಟ್ಯಾಡಿಂಗ್ ಆಗಿದೆಯಾ ಎಂದು ಕೇಳುತ್ತಾರೆ. ಅದಕ್ಕೆ ಅನು ಮನೆಯಲ್ಲಿ ಈ ವಿಚಾರ ತಿಳಿಸಿಲ್ಲ ಎನ್ನುತ್ತಾಳೆ. ಆದಷ್ಟು ಬೇಗ ತಿಳಿಸಿ ಎಂದು ಹೇಳಿ ಕಳಿಸಿದಾಗ, ಅನುಗೆ ಆರ್ಯ ಕಾಣುತ್ತಾನೆ. ನನಗೇನು ಗೊತ್ತಾಗೋದಿಲ್ಲ ಅಂದುಕೊಂಡಿದ್ದೀಯಾ ಅನು. ನಿನ್ನಲ್ಲಿನ ಸಣ್ಣ ಬದಲಾವಣೆಯೂ ನನಗೆ ಗೊತ್ತಾಗುತ್ತದೆ ಎಂದೆಲ್ಲಾ ಮಾತನಾಡುತ್ತಾನೆ. ಆದರೆ ಅದು ಅನುಗೆ ಭ್ರಮೆಯಾಗಿರುತ್ತದೆ. ಇದರಿಂದ ಅನು ಒಂದು ಕ್ಷಣ ಸುಮ್ಮನಾಗುತ್ತಾಳೆ. ಅಷ್ಟೊತ್ತಿಗೆ ಆರ್ಯ ಮೆಸೇಜ್ ಮಾಡಿರುತ್ತಾನೆ.

  ಅನುಗಾಗಿ ಎಲ್ಲವನ್ನೂ ಬಿಡಲು ಆರ್ಯ ಸಿದ್ಧ!

  ಅನುಗಾಗಿ ಎಲ್ಲವನ್ನೂ ಬಿಡಲು ಆರ್ಯ ಸಿದ್ಧ!

  ಆರ್ಯನಿಗೆ ಆಫೀಸಿನಲ್ಲಿದ್ದರೂ ಅನುಳದ್ದೇ ಯೋಚನೆಯಾಗಿದೆ. ಅನು ಯಾವ ಮೆಸೇಜ್‌ಗೂ ರೆಸ್ಪಾನ್ಸ್ ಮಾಡುತ್ತಿಲ್ಲ. ಇದರಿಂದ ಆರ್ಯನಿಗೆ ಏನೂ ಬೇಡ ಅನಿಸಿದೆ. ಇದೇ ವೇಳೆಗೆ ಮೀರಾ ಬಂದಿದ್ದಾಳೆ. ಮೀಟಿಂಗ್ ಬಗ್ಗೆ ಹೇಳಿದ್ದಕ್ಕೆ, ಆರ್ಯ ಇನ್ಮೇಲಿಂದ ಎಲ್ಲವನ್ನೂ ಹರ್ಷನೇ ನೋಡಿಕೊಳ್ಳುತ್ತಾನೆ. ಹೇಗಿದ್ದರೂ ಅವನೀಗ ತಯಾರಿ ಪಡೆದಿದ್ದಾನೆ. ಅವನಿಗೇ ಹೇಳು ಮೀರಾ. ನನಗೆ ಇನ್ಯಾವ ಜವಾಬ್ದಾರಿಯೂ ಬೇಡ ಎನ್ನುತ್ತಾನೆ.

  English summary
  Jothe Jotheyali Serial Update On August 18th, Anu Is In Confusion, KNow More,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X