Don't Miss!
- Sports
WIPL Auction 2023: ಫೆ.13ರಂದು ಮುಂಬೈನಲ್ಲಿ ಮಹಿಳಾ ಐಪಿಎಲ್ ಹರಾಜು ನಡೆಯುವ ಸಾಧ್ಯತೆ
- News
Bill Pending: ಲಕ್ಷಾಂತರ ರೂ. ವಿದ್ಯುತ್ ಬಿಲ್ ಬಾಕಿ: ಕೆಸಿ ಜನರಲ್ ಆಸ್ಪತ್ರೆಗೆ ಬೆಸ್ಕಾಂ ನೋಟಿಸ್
- Finance
ಉದ್ಯೋಗಿಗಳಿಗೆ ಟೊಯೋಟಾ ಗ್ಲಾನ್ಜಾ ಗಿಫ್ಟ್ ನೀಡಿದ ರಮೇಶ್ ಮರಂದ್ ಯಾರು?
- Automobiles
ಭಾರತದಲ್ಲಿ ದುಬಾರಿ ಬೆಲೆಯ ಈ ಕಿಯಾ ಕಾರಿಗೆ ಭಾರೀ ಡಿಮ್ಯಾಂಡ್: ಇನೋವಾಗೆ ಹೆಚ್ಚಿದ ಪೈಪೋಟಿ
- Lifestyle
ಸುಖಿ ಸಂಸಾರ ಅಂತ ಇದ್ದರೂ ಗಂಡ ಅನೈತಿಕ ಸಂಬಂಧ ಬೆಳೆಸುವುದೇಕೆ?
- Technology
ಮಾರುಕಟ್ಟೆಗೆ ಎಂಟ್ರಿ ಕೊಟ್ಟ ವಾಯರ್ಲೆಸ್ ಚಾರ್ಜಿಂಗ್ ಬೆಂಬಲಿಸುವ ಸ್ಮಾರ್ಟ್ವಾಚ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅನು ಮೇಲೆ ಆವರಿಸಿದ ರಾಜನಂದಿನಿ ಮನೆಯವರೆಲ್ಲಾ ಶಾಕ್!
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಈಗ ರಾಜನಂದಿನಿ ಹಾಗೂ ಅನು ಸಿರಿಮನೆ ಇಬ್ಬರ ಕಥೆಯೂ ನಡೆಯುತ್ತಿದೆ. ರಾಜನಂದಿನಿಗೆ ಆರ್ಯವರ್ಧನ್ ಮೇಲೆ ತನ್ನ ಸೇಡನ್ನು ತೀರಿಸಿಕೊಳ್ಳುವ ತವಕದಲ್ಲಿದ್ದಾಳೆ. ಅನು ಸಿರಿಮನೆಗೆ ಸತ್ಯ-ನ್ಯಾಯದ ಜೊತೆಗೆ ತನ್ನ ಬದುಕಿನ ಬಗ್ಗೆ ಆತಂಕವೂ ಶುರುವಾಗಿದೆ.
ಹರ್ಷವರ್ಧನ್‌ಗೆ ಅನು ಸಿರಿಮನೆಯ ನಡವಳಿಕೆಯೇ ಗೊಂದಲವನ್ನು ಸೃಷ್ಟಿಸುತ್ತಿದೆ. ಅನು ಸಿರಿಮನೆ ಕ್ಷಣಕ್ಕೊಂದು ರೀತಿ ನಡೆದುಕೊಳ್ಳುತ್ತಿದ್ದಾಳೆ. ಒಮ್ಮೆ ರಾಜನಂದಿನಿಯ ರೀತಿ ಮಾತನಾಡಿದರೆ, ಇನ್ನೊಮ್ಮೆ ಅನು ರೀತಿ ಮಾತನಾಡಿ, ತನ್ನ ಸುತ್ತ ಇರುವವರನ್ನು ಕನ್‌ಫ್ಯೂಸ್ ಮಾಡುತ್ತಿದ್ದಾಳೆ.
ಮಾನ್ಸಿ ಅಂತೂ ಮನೆಯವರ ನಡವಳಿಕೆಗೆ ಬೇಸತ್ತಿದ್ದಾಳೆ. ಹರ್ಷವರ್ಧನ್‌ಗೆ ಏನ್ ಹೇಳಿದರೂ ಅರ್ಥವಾಗಿವುದಿಲ್ಲ. ಅನು ಮತ್ತು ಶಾರದಾ ದೇವಿಯನ್ನು ಕೇಳಿದರೆ, ಅವರು ಕೊಡುವ ಉತ್ತರ ಮಾನ್ಸಿಗೆ ಇನ್ನಷ್ಟು ಸಿಟ್ಟು ಬರುವಂತೆ ಮಾಡುತ್ತದೆ.

ಜೋಗ್ತವ್ವನನ್ನು ಭೇಟಿಯಾದ ಅನು ಸಿರಿಮನೆ!
ಅನು ಮನೆಯಿಂದ ದೇವರನ್ನು ಹುಡುಕಿಕೊಂಡು ಹೋಗುತ್ತಿದ್ದೇನೆ ಎಂದು ಹೇಳುತ್ತಲೇ ಹೊರಡುತ್ತಾಳೆ. ಒಬ್ಬಳೇ ಕಾರ್ ಡ್ರೈವ್ ಮಾಡಿಕೊಂಡು ಹೋಗುವ ಅನು ಸೀದಾ ಜೋಗ್ತವ್ವ ಇರುವ ಜಾಗಕ್ಕೆ ಬರುತ್ತಾಳೆ. ನನಗೆ ಗೊತ್ತಿಲ್ಲದೆ ಇಲ್ಲಿಗೆ ಬಂದೆ. ನನ್ನ ಸಮಸ್ಯೆಗಳಿಗೆ ನೀನೇ ಪರಿಹಾರ ಹೇಳಬೇಕು ಅವ್ವ. ನನ್ನ ಬಗ್ಗೆ ನೀನೇ ಮೊದಲು ಹೇಳಿದ್ದು ಎಂದು ಹೇಳುತ್ತಾಳೆ. ಆಗ ಜೋಗ್ತವ್ವ ನನಗಲ್ಲ ಮಗಳೇ ಗೊತ್ತಾಗಿದ್ದು ಈ ತಾಯಿಗೆ. ಈ ತಾಯಿ ಹೇಳಿದಂತೆ ನಾನು ಮಾಡುತ್ತೇನೆ ಅಷ್ಟೇ ನನ್ನ ಕೆಲಸ ಎಂದು ಹೇಳುತ್ತಾಳೆ. ನೀನು ಈಗ ಸತ್ಯಕ್ಕೆ ಹತ್ತಿರವಾಗುತ್ತಿದ್ದೀಯಾ. ಹೀಗೆ ಮುಂದೆ ಸಾಗು ನಿನಗೆ ಎಲ್ಲವೂ ಗೊತ್ತಾಗುತ್ತದೆ ಎಂದು ಹೇಳಿ ಕಳಿಸುತ್ತಾಳೆ.

ಮಗಳ ಬಗ್ಗೆ ಯೋಚಿಸುತ್ತಿರುವ ಸುಬ್ಬು-ಪುಷ್ಪ
ಇನ್ನು ಪುಷ್ಪ ಮಗಳಿಗೆ ಫೋನ್ ಮಾಡಿದ್ದರೆ, ಅನು ಇಲ್ಲ ಎಂದು ಅನುನೇ ಹೇಳಿ ಫೋನ್ ಕಟ್ ಮಾಡಿರುವುದು ಆತಂಕ ಸೃಷ್ಟಿಸಿದೆ. ಹೀಗಾಗಿ ಯಾವುದಕ್ಕೂ ಮನಸಿಲ್ಲದಂತೆ ಪುಷ್ಪ ಯೋಚಿಸುತ್ತಿದ್ದಾಳೆ. ಸಂಕಟ ಅನುಭವಿಸುತ್ತಿರುವ ಪುಷ್ಪ ಸುಬ್ಬು ಬಳಿಯೂ ಮಾತನಾಡಿದ್ದು, ಸುಬ್ಬು ಕೂಡ ಮಗಳ ಜವಾಬ್ದಾರಿ ಹಾಗೂ ಅವಳ ಮುಂದಿನ ಬದುಕಿನ ಬಗ್ಗೆ ಯೋಚಿಸುತ್ತಿದ್ದಾನೆ. ಮಗಳನ್ನು ನೋಡಲು ಹೋಗಬೇಕು ಎಂದುಕೊಂಡಿರುವ ಸುಬ್ಬು, ಪುಷ್ಪ ಈಗಲೇ ಹೋದರೆ ಅನುಮಾನ ಬರುತ್ತದೆ. ಬೆಳಗ್ಗೆ ಎದ್ದು ಹೋಗೋಣ ಎಂದುಕೊಂಡಿದ್ದಾರೆ.

ಇದ್ದಕ್ಕಿದ್ದಂತೆ ಮನೆಗೆ ಬಂದ ಅನು!
ಪುಷ್ಪ ಹಾಗೂ ಸುಬ್ಬು ಮಗಳ ಬಗ್ಗೆಯ ಯೋಚನೆಯಲ್ಲಿ ಊಟ ಮಾಡಲು ಸಿದ್ಧರಾಗುತ್ತಿದ್ದಾರೆ. ಆದರೆ ಇದೇ ಹೊತ್ತಿಗೆ ಅನು ಮನೆಗೆ ಬಂದಿದ್ದಾಳೆ. ಅನು ಇದ್ದಕ್ಕಿದ್ದಂತೆ ಮನೆಗೆ ಬಂದಿರುವುದು ಸುಬ್ಬು-ಪುಷ್ಪಾಗೆ ಶಾಕ್ ಆಗಿದೆ. ನಿಮ್ಮ ಮನೆಯಲ್ಲಿ ನನಗೆ ಬೇಕಾದ ಕೆಲ ಪೇಪರ್ಸ್ ಇವೆ. ಅದನ್ನು ತೆಗೆದುಕೊಂಡು ಹೋಗಬಹುದಾ ಎಂದು ಕೇಳಿದ್ದಾಳೆ. ಅನು ಮಾತು ಕೇಳಿ ಪುಷ್ಪ-ಸುಬ್ಬು ದಂಗಾಗಿದ್ದಾರೆ. ಪೇಪರ್ ಹುಡುಕುವಾಗ ಅನುಗೆ ತಾನು ಮಾತನಾಡುತ್ತಿರುವುದು ರಾಜನಂದಿನಿ ಎಂದು ತಿಳಿದು ಮಾತು ಬದಲಾಯಿಸುತ್ತಾಳೆ.

ಮೀರಾ ಜೊತೆ ಅನು ಮಾತು!
ದಾರಿ ಮಧ್ಯೆ ರಮ್ಯಾ ಸಿಗುತ್ತಾಳೆ. ರಮ್ಯಾಳನ್ನು ಕೂಡ ಸರಿಯಾಗಿ ಮಾತನಾಡಿಸುವುದಿಲ್ಲ. ಇದು ಮೊದಲು ರಮ್ಯಾಗೆ ಕಸಿವಿಸಿ ಆದರೂ, ಅರ್ಥ ಮಾಡಿಕೊಳ್ಳುತ್ತಾಳೆ. ಇನ್ನು ಮೀರಾ ಅನು ಎಲ್ಲಿದ್ದಾಳೆ? ಯಾಕೆ ಅನು ಮತ್ತೆ ಕರೆ ಮಾಡಿಲ್ಲ ಎಂದು ತಿಳಿಯಲು ಫೋನ್ ಮಾಡಿದ್ದಾಳೆ. ಅನು ಕಾಲ್ ರಿಸೀವ್ ಮಾಡಿ ಸ್ವಲ್ಪ ಬ್ಯುಸಿ ಇದ್ದೆ. ಈಗ ನೀನು ಸಿಗುವುದಕ್ಕೆ ಆಗುತ್ತಾ ಎಂದು ಕೇಳಿದ್ದಾಳೆ. ಮೀರಾ ಸರಿ ಬರುತ್ತೇನೆ ಎಂದು ಹೇಳಿದ್ದಾಳೆ.