ಕೊನೆಗೂ ಅನು ಸಿರಿಮನೆಯನ್ನು ಅಪಹರಿಸಿದ ಝೇಂಡೆ!

By ಪ್ರಿಯಾ ದೊರೆ

'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಅನು ಸಿರಿಮನೆ ತನ್ನ ಮಗುವಿಗಾಗಿ ಮನೆಯವರೆಲ್ಲರನ್ನೂ ದೇವಸ್ಥಾನಕ್ಕೆ ಕರೆದುಕೊಂಡು ಬಂದಿದ್ದಾಳೆ. ಆದರೆ ಆರ್ಯವರ್ಧನ್ ಬರುತ್ತೀನಿ ಎಂದು ಹೇಳಿ ಇನ್ನೂ ಬಂದಿಲ್ಲ. ಇದರಿಂದ ಬೇಸರ ಮಾಡಿಕೊಂಡಿದ್ದಾಳೆ. ಕರೆ ಮಾಡಿದರೂ ಆರ್ಯ ಫೋನ್‌ ರಿಸೀವ್ ಮಾಡಿಲ್ಲ.

ಈ ನಡುವೆಯೇ ಜೋಗ್ತವ್ವ ಬಂದಿದ್ದು, ಜೀವಗಳನ್ನು ಉಳಿಸಿಕೊಳ್ಳುವ ಸಮಯ. ಈಗಲೇ ಗೂಡು ಸೇರಿಕೋ ಎಂದು ಎಚ್ಚರಿಸಿದ್ದಾಳೆ. ಈ ಮಾತನ್ನು ಕೇಳಿದ ಅನು ಅರ್ಥವಾಗದೇ ಆರ್ಯನಿಗೆ ಬರದಂತೆ ಕರೆ ಮಾಡಿ ಹೇಳಿದ್ದಾಳೆ. ಇನ್ನು ಮನೆಯವರೆಲ್ಲರನ್ನೂ ಬೇಗ ವಾಪಸ್‌ ಕರೆದುಕೊಂಡು ಹೋಗಲು ಮುಂದಾಗಿದ್ದಾಳೆ.

ಇತ್ತ ಝೇಂಡೆಗೆ ಅನು ಸಿರಿಮನೆ ದೊಡ್ಡ ತಲೆನೋವಾಗಿದ್ದಾಳೆ. ಹೇಗಾದರೂ ಮಾಡಿ ಅನು ಸಿರಿಮನೆಗೆ ಬುದ್ಧಿ ಕಲಿಸಬೇಕು. ಅವಳನ್ನು ಕೊಲ್ಲಬೇಕು ಎಂದು ಪ್ಲಾನ್ ಮಾಡಿರುವ ಝೇಂಡೇ, ಹುಡುಗರನ್ನು ದೇವಸ್ಥಾನಕ್ಕೆ ಕಳಿಸಿದ್ದಾನೆ. ತನ್ನ ಪ್ಲಾನ್ ಪ್ರಕಾರವೇ ಎಲ್ಲವೂ ನಡೆಯಬೇಕು ಎಂದು ಹೇಳಿದ್ದಾನೆ.

ದೇವಸ್ಥಾನ ಸುತ್ತುವರಿದ ಝೇಂಡೆ!

ದೇವಸ್ಥಾನ ಸುತ್ತುವರಿದ ಝೇಂಡೆ!

ಅನು ಸಿರಿಮನೆಯನ್ನು ಕೊಲ್ಲಬೇಕು ಎಂದು ಝೇಂಡೆ ಪ್ಲಾನ್ ಮಾಡಿದ್ದಾನೆ. ಹೀಗಾಗಿ ತನ್ನ ಹುಡುಗರಿಗೆ ಗನ್ ಕೊಟ್ಟು, ಒಬ್ಬೊಬ್ಬರಿಗೆ ಒಂದೊಂದು ವೇಷದಲ್ಲಿ ದೇವಸ್ಥಾನಕ್ಕೆ ಬಂದಿದ್ದಾರೆ. ದೇವಸ್ಥಾನದ ಸುತ್ತ ಝೇಂಡೆ ಕಡೆಯವರು ಸುತ್ತುವರಿದಿದ್ದಾರೆ. ಎಲ್ಲರೂ ಅನು ಸಿರಿಮನೆಯ ಓಡಾಟದ ಮೇಲೆ ಕಣ್ಣಿಟ್ಟಿದ್ದಾರೆ. ಆಕೆಗೆ ಗುರಿ ಇಟ್ಟು ಕೊಲ್ಲಲು ಮುಂದಾಗಿದ್ದಾರೆ. ಆದರೆ ಇದೇ ವೇಳೆಗೆ ಆರ್ಯ ಕೂಡ ದೇವಸ್ಥಾನಕ್ಕೆ ಎಂಟ್ರಿ ಕೊಟ್ಟಿದ್ದಾನೆ. ಆರ್ಯ ಬಂದರೂ ಹೆದರದ ಝೇಂಡೆ, ಆಕೆಯನ್ನು ಇಂದು ಕೊಲ್ಲಲೇಬೇಕು ಎಂದು ತೀರ್ಮಾನಿಸಿದ್ದಾನೆ.

ದೇವಸ್ಥಾನಕ್ಕೆ ಬಂದ ಅನು ಸಿರಿಮನೆ

ದೇವಸ್ಥಾನಕ್ಕೆ ಬಂದ ಅನು ಸಿರಿಮನೆ

ಪೂಜೆ ಮುಗಿದಿದೆ. ನಾವೆಲ್ಲಾ ವಾಪಸ್‌ ಮನೆಕಡೆ ಹೊರಟಿದ್ದೀವಿ. ನೀವು ಬರುವುದು ಬೇಡ ಎಂದು ಅನು ಸಿರಿಮನೆ ಆರ್ಯವರ್ಧನ್ ಹೇಳಿದ್ದಾಳೆ. ದೇವಸ್ಥಾನಕ್ಕೆ ಬರಬೇಡಿ ಎಂದರೂ ಆರ್ಯವರ್ಧನ್ ಬಂದಿದ್ದಾನೆ. ಇದನ್ನು ನೋಡಿದ ಅನು ಸಿರಿಮನೆ ಶಾಕ್‌ ಆಗಿದ್ದಾಳೆ. ಇನ್ನು ಆರ್ಯವರ್ಧನ್ ಬಂದು ನಿನ್ನ ಆಸೆಗಳನ್ನು ಹಾಳು ಮಾಡಲು ನನಗೆ ಇಷ್ಟವಿಲ್ಲ. ನಿನ್ನ ಬೇಡಿಕೆಗಳನ್ನು ನಾನು ಈಡೇರಿಸಬೇಕು. ಅದು ನನ್ನ ಕರ್ತವ್ಯ. ಹಾಗಾಗಿ ಬಂದಿದ್ದೀನಿ ಅನು ಎಂದು ಹೇಳಿದ್ದಾನೆ.

ಸತ್ಯ ಹೇಳಿದ ಆರ್ಯವರ್ಧನ್!

ಸತ್ಯ ಹೇಳಿದ ಆರ್ಯವರ್ಧನ್!

ಮಾತು ಮುಂದುವರಿಸಿ ನಿನ್ನ ಬಳಿ ಕೆಲ ವಿಚಾರಗಳನ್ನು ಹೇಳಬೇಕು ಎಂದಾಗ, ಅನು ಸಿರಿಮನೆ ಏನದು? ಹೇಳಿ ಎಂದು ಕೇಳಿದ್ದಾಳೆ. ಆಗ ಆರ್ಯವರ್ಧನ್ ತನ್ನ ಹಾಗೂ ರಾಜನಂದಿನಿಯ ಸತ್ಯ ಕಥೆಯನ್ನು ಹೇಳಲು ಮುಂದಾಗಿದ್ದಾನೆ. ನಾನು ನಿನ್ನಿಂದ ಏನನ್ನೂ ಮುಚ್ಚಿಡಲು ಇಷ್ಟಪಡುವುದಿಲ್ಲ ಅನು. ನಾನು ನಿನ್ನನ್ನು ತುಂಬಾ ಇಷ್ಟಪಡುತ್ತೇನೆ. ಅಂದು ನಾನು ಜಲಂಧರ್‌ನನ್ನು ಭೇಟಿಯಾದ ಮೇಲೆ ಏನೇನಾಯ್ತು ಎಂದು ಹೇಳಿದ್ದೆನಲ್ಲ. ರಾಜವರ್ಧನ್ ಸಾಹೇಬರು ನನ್ನನ್ನು ಮೆಚ್ಚಿಕೊಂಡರು ಎಂದು ಹೇಳಿದ್ದೆಲ್ಲಾ ಸುಳ್ಳು ಎನ್ನುತ್ತಾನೆ.

ಕಿಡ್ನ್ಯಾಪ್ ಆದ ಅನು ಸಿರಿಮನೆ!

ಕಿಡ್ನ್ಯಾಪ್ ಆದ ಅನು ಸಿರಿಮನೆ!

ಆದರೆ ಈ ಯಾವ ಮಾತುಗಳನ್ನು ಅನು ಸಿರಿಮನೆ ಕೇಳಿಸಿಕೊಳ್ಳುವುದಿಲ್ಲ. ಯಾಕೆಂದರೆ, ಹಿಂದಿನಿಂದ ಬಂದ ಝೇಂಡೇ ಹುಡುಗರು, ಅನು ಪ್ರಜ್ಞೆ ತಪ್ಪಿಸಿ ಆಕೆಯನ್ನು ಹೊತ್ತುಕೊಂಡು ಹೋಗಿದ್ದಾರೆ. ಅನುಗೆ ಬೆನ್ನು ಮಾಡಿ ಸತ್ಯ ಹೇಳಿದ ಆರ್ಯ ಹಿಂತಿರುಗಿ ನೋಡಿದಾಗ ಅಲ್ಲಿ ಆಕೆ ಇರುವುದಿಲ್ಲ. ಆಗ ಶಾಕ್‌ ಆದ ಆರ್ಯವರ್ಧನ್ ದೇವಸ್ಥಾನವೆಲ್ಲಾ ಹುಡುಕಿದ್ದಾನೆ. ಆಕೆಯನ್ನು ಯಾರೋ ಹೊತ್ತುಕೊಂಡು ಹೋಗುತ್ತಿರುವುದನ್ನು ಕಂಡು ಶಾಕ್‌ ಆಗಿದ್ದು, ಹಿಂದೆಯೇ ಓಡಿದ್ದಾನೆ. ನಾಳಿನ ಸಂಚಿಕೆಯಲ್ಲಿ ಏನಾಗುತ್ತೆ ಎಂಬ ಕುತೂಹಲ ಸೃಷ್ಟಿಯಾಗಿದೆ. ಝೇಂಡೆ ಅನು ಸಿರಿಮನೆಯನ್ನು ಕೊಲ್ಲುತ್ತಾನಾ? ಇಲ್ಲ ಆರ್ಯವರ್ಧನ್ ಅನುಳನ್ನು ಸೇವ್ ಮಾಡುತ್ತಾನಾ? ಅಥವಾ ಆರ್ಯನಿಗೆ ಝೇಂಡೆನೇ ಕಿಡ್ನ್ಯಾಪ್ ಮಾಡಿರುವುದು ಎಂಬ ಸತ್ಯ ಗೊತ್ತಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.

More from Filmibeat

English summary
Jothe Jotheyali Serial Update On June 30th Episode, Aryavardhan Secret Reveal
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X