For Quick Alerts
  ALLOW NOTIFICATIONS  
  For Daily Alerts

  ಆರ್ಯನಿಗೆ ಕಂಟಕ: ಇನ್ಮುಂದೆ ಆರ್ಯವರ್ಧನ್ ಕಥೆಯೇ ಇರೊದಿಲ್ಲ!

  |

  ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಈಗ ಹೊಸ ಟ್ವಿಸ್ಟ್ ಶುರುವಾಗಿದೆ. ನಟ ಹರೀಶ್ ರಾಜ್ ಅವರ ಮೂಲಕ ಹೊಸ ಕ್ಯಾರೆಕ್ಟರ್ ಆರಂಭವಾಗಿದೆ. ಇದು ಪ್ರೇಕ್ಷಕರಲ್ಲಿ ಮತ್ತಷ್ಟು ಕುತೂಹಲವನ್ನು ಹೆಚ್ಚಿಸಿದೆ.

  ಬಿಸಿನೆಸ್ ನಲ್ಲಿ ನಷ್ಟ ಅನುಭವಿಸಿರುವ ವಿಕಾಸ್ ಈಗ ತಲೆ ಮೇಲೆ 700 ಕೋಟಿ ರೂಪಾಯಿ ಸಾಲವನ್ನು ಹೊತ್ತುಕೊಂಡು ಭಾರತಕ್ಕೆ ವಾಪಸ್ ಆಗಿದ್ದಾನೆ. ಬಿಸಿನೆಸ್ ಸ್ನೇಹಿತರಿಗೆ ಕರೆ ಮಾಡಿ ತಾನು ಸೋತಿದ್ದು, ಸಾಲ ಮರುಪಾವತಿ ತಡವಾಗುತ್ತದೆ ಎಂದು ಕ್ಷಮೆಯಾಚಿಸಿದ್ದಾನೆ.

  ಪೂರ್ವಿ ಬಳಿ ನಿಜ ಹೇಳಿದ ಕಂಠಿ: ಕಂಠಿ ಮದುವೆ ತಪ್ಪುತ್ತದಾ?ಪೂರ್ವಿ ಬಳಿ ನಿಜ ಹೇಳಿದ ಕಂಠಿ: ಕಂಠಿ ಮದುವೆ ತಪ್ಪುತ್ತದಾ?

  ಅವರ ತಾಯಿ ಪ್ರಿಯಾಗೆ ಈಗ ಆರ್ಯವರ್ಧನ್ ನಿಂದ ಎಲ್ಲವೂ ಸರಿ ಹೋಗುತ್ತದೆ ಎಂದು ಬಲವಾಗಿ ನಂಬಿದ್ದಾರೆ. ಹಾಗಾಗಿ ಆರ್ಯವರ್ಧನ್ ಕರೆ ಮಾಡುತ್ತಿದ್ದು, ಸಂಪರ್ಕಕ್ಕೆ ಸಿಗುತ್ತಿಲ್ಲ. ಆದರೂ ಕೂಡ ಪ್ರಿಯಾ ವಿಕಾಸ್ ಸಮಸ್ಯೆ ಬಗೆಹರಿಸಲು ಆರ್ಯ ಸಹಾಯ ಮಾಡುತ್ತಾನೆ ಎಂದುಕೊಂಡಿದ್ದಾಳೆ.

  ಮನೆ ಎರಡು ಭಾಗವಾಯ್ತಾ..?

  ಮನೆ ಎರಡು ಭಾಗವಾಯ್ತಾ..?

  ಅನು ತುಂಬಾ ಬೇಸರದಲ್ಲಿದ್ದಾಳೆ. ಸದಾ ಜೊತೆ ಜೊತೆಯಲಿ ಇರಬೇಕು ಎಂದು ಬಯಸಿದರೂ, ಮನೆ ಎರಡು ಭಾಗವಾಗುತ್ತದೆ. ಅದನ್ನು ನೋಡುವುದಕ್ಕೆ ಸಂಕಟವಾಗುತ್ತಿದೆ ಎಂದು ಅನು ಆರ್ಯನ ಬಳಿ ಅಳುತ್ತಾ ಹೇಳಿಕೊಂಡಿದ್ದಾಳೆ. ಇದಕ್ಕೆ ಮಾತನಾಡಿದ ಆರ್ಯ, ಇದೆಲ್ಲಾ ಟೈಮ್ ಬೀಯಿಂಗ್ ಅಷ್ಟೇ ಅನು. ಮಾನ್ಸಿ ಮತ್ತು ಹರ್ಷಗೆ ಅವರ ಸ್ಪೇಸ್ ಕೊಡಬೇಕಾಗಿದೆ. ಇದೆಲ್ಲವನ್ನೂ ನಾನು ಸರಿ ಮಾಡುತ್ತೇನೆ. ನನ್ನನ್ನು ನಂಬು. ನೀನು ಹೀಗೆ ಬೇಸರ ಮಾಡಿಕೊಂಡರೆ ನಿನ್ನ ಮಗು ಕೂಡ ಬೇಸರ ಮಾಡಿಕೊಳ್ಳುತ್ತದೆ. ಈ ಮಗು ನಾವಿಬ್ಬರು ಜೊತೆ ಜೊತೆಯಲಿ ಇರುವುದರ ಹಾಗೂ ನಮ್ಮಿಬ್ಬರ ಪ್ರೀತಿಯ ಸಂಕೇತ ಎಂದು ಹೇಳುತ್ತಾನೆ.

  ಪಾರುವನ್ನು ಸೊಸೆ ಎಂದು ಒಪ್ಪಿಕೊಂಡ ಅಖಿಲಾಂಡೆಶ್ವರಿಪಾರುವನ್ನು ಸೊಸೆ ಎಂದು ಒಪ್ಪಿಕೊಂಡ ಅಖಿಲಾಂಡೆಶ್ವರಿ

  ಆರ್ಯನ ತಾಯಿಗೆ ಜೋಗ್ವತ್ತ ಎಚ್ಚರಿಕೆ!

  ಆರ್ಯನ ತಾಯಿಗೆ ಜೋಗ್ವತ್ತ ಎಚ್ಚರಿಕೆ!

  ಜೋಗ್ತವ್ವ ಈಗ ಸೀದಾ ಪ್ರಿಯಾ ಮನೆಗೆ ಬಂದಿದ್ದಾಳೆ. ಬಂದವಳೇ ನಿನ್ನ ಮಕ್ಕಳಲ್ಲಿ ಒಬ್ಬರಿಗೆ ಕಂಟಕವಿದೆ ಕಾಪಾಡಿಕೋ ಎಂದು ಹೇಳಿದ್ದಾಳೆ. ಯಾರಿಗೆ ಕಂಟಕ, ಏನು ಸಮಸ್ಯೆ ಎಂದು ಹೇಳಿಲ್ಲ. ಪ್ರಿಯಾ ಜೋಗ್ತವ್ವನನ್ನು ಮನೆಯ ಒಳಗೆ ಕರೆದಿದ್ದಾಳೆ. ಆದರೆ ಜೋಗ್ತವ್ವ ಕಂಟಕ ಕಳೆಯುವವರೆಗೂ ನಾನು ಮನೆಯೊಳಗೆ ಬರುವುದಿಲ್ಲ ಎಂದು ಹೇಳಿ ಹೋಗಿದ್ದಾಳೆ. ಈ ಮಾತು ಪ್ರಿಯಾಗೆ ಇನ್ನಷ್ಟು ಚಿಂತೆಗೀಡು ಮಾಡಿದೆ. ನಾನೀಗ ಯಾವ ಮಗನನ್ನು ನೋಡಲಿ. ಒಬ್ಬ ಸೋತು ಬಂದಿದ್ದಾನೆ. ಈಗ ಅವನ ಚಿಂತೆಯಲ್ಲಿರುವಾಗಲೇ, ನೀನು ಹೀಗೆ ಹೇಳಿದರೆ, ನಾನು ಎಲ್ಲಿಗೆ ಹೋಗಲಿ ಎಂದು ಹೇಳುತ್ತಾಳೆ.

  ಎಲ್ಲಿಗೆ ಹೋದ ಆರ್ಯ..?

  ಎಲ್ಲಿಗೆ ಹೋದ ಆರ್ಯ..?

  ಇನ್ನು ಅನು ಮತ್ತು ಶಾರದಾ ಮಾತನಾಡುತ್ತಿರುತ್ತಾರೆ. ಅನು ನೀವು ನನ್ನಿಂದ ಏನೋ ಮುಚ್ಚಿಟ್ಟಿದ್ದೀರಾ ಎಂದು ಹೇಳುತ್ತಾಳೆ. ಅದಕ್ಕೆ ಶಾರದಾ ನೀನು ಕೂಡ ನನ್ನಿಂದ ಮುಚ್ಚಿಟ್ಟಿದ್ಯಾಕೆ ಎಂದು ಹೇಳುತ್ತಾಳೆ. ಹೀಗೆ ಇಬ್ಬರು ಮಾತನಾಡುತ್ತಾರೆ. ನಂತರ ಝೇಂಡೇ ಒಬ್ಬನೇ ಸಂಪಿಗೆ ಪುರದ ರಸ್ತೆ ಬದಿ ನಿಂತು ತನ್ನ ಬಗ್ಗೆ ತಾನೇ ಮಾತನಾಡಿಕೊಳ್ಳುತ್ತಿರುತ್ತಾನೆ. ಈ ವೇಳೆಗೆ ಆರ್ಯನ ಕಾರು ಪಾಸ್ ಆಗುತ್ತದೆ. ಇದನ್ನು ನೋಡಿ ಝೇಂಡೇ ಶಾಕ್ ಆಗಿ ಕಾರನ್ನು ಫಾಲೋ ಮಾಡುತ್ತಾನೆ. ಆದರೆ ಕಾರು ಸ್ಪೀಡ್ ಆಗಿ ಹೋಗುತ್ತದೆ.

  ಝೇಂಡೆಗೆ ಆತಂಕ!

  ಝೇಂಡೆಗೆ ಆತಂಕ!

  ಅನುಗೆ ಝೇಂಡೇ ಕರೆ ಮಾಡಿ ಆರ್ಯ ಎಲ್ಲಿ ಎಂದು ಕೇಳುತ್ತಾನೆ. ಆದರೆ ಅನು ಝೇಂಡೇಗೆ ಸರಿಯಾಗಿ ಉತ್ತರ ಕೊಡುವುದಿಲ್ಲ. ಇದರಿಂದ ಝೇಂಡೇ ಸೀದಾ ಮನೆಗೆ ಬಂದು ಕೇಳುತ್ತಾನೆ. ಆಗ ಅನು ಗೊತ್ತಿಲ್ಲ. ಏನು ಹೇಳದೇ ಹೋಗಿದ್ದಾರೆ ಎಂದು ಹೇಳುತ್ತಾಳೆ. ಇವರಿಬ್ಬರೂ ಮಾತನಾಡಿದ್ದನ್ನು ಕೇಳಿಸಿಕೊಂಡ ಮಾನ್ಸಿ ಮತ್ತೆ ಅನುಳನ್ನು ಅನುಮಾನಿಸುತ್ತಾಳೆ. ಇತ್ತ ಜೋಗ್ತವ್ವ ಸೀದಾ ಪ್ರಿಯಾ ಮನೆಯೊಳಗೆ ಬರುತ್ತಾಳೆ. ಇದರ ಅರ್ಥ ಆರ್ಯಗೆ ಏನೋ ಆಗಿದೆ ಎಂಬುದು. ಆದರೆ, ಈ ಬಗ್ಗೆ ಮುಂದಿನ ಸಂಚಿಕೆಯಲ್ಲಿ ತಿಳಿಯಲಿದೆ.

  English summary
  Jothe Jotheyali Serial Writen Update On September 2nd, New Hero Enty With Anu, Know More,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X