»   » ಶಿಲ್ಪಾ ಮೇಲೆ 'ಚಿನ್ನದ ಹುಡುಗ' ಗಣೇಶ್ ಗೆ ಲವ್ ಆಗಿದ್ದು ಹೇಗೆ.?

ಶಿಲ್ಪಾ ಮೇಲೆ 'ಚಿನ್ನದ ಹುಡುಗ' ಗಣೇಶ್ ಗೆ ಲವ್ ಆಗಿದ್ದು ಹೇಗೆ.?

Posted By:
Subscribe to Filmibeat Kannada

2008ರಲ್ಲಿ ಶಿಲ್ಪಾ ರವರನ್ನ 'ಮಳೆ ಹುಡುಗ' ಗಣೇಶ್ ಮದುವೆ ಆದರು. ಗಣೇಶ್ ಮದುವೆ ಅವರ ಫ್ಯಾನ್ಸ್ ಗಂತೂ 'ಹಾರ್ಟ್ ಬ್ರೇಕಿಂಗ್ ನ್ಯೂಸ್' ಆಗಿತ್ತು. ದಿಢೀರ್ ಅಂತ ಮದುವೆ ಆಗಿ ನಟ ಗಣೇಶ್ ಸಿಕ್ಕಾಪಟ್ಟೆ ಸದ್ದು ಮಾಡಿದ್ದಂತೂ ನಿಜ.

ಗಣೇಶ್ ಮದುವೆಯ ಸುತ್ತ ಅನೇಕ ಗುಸು ಗುಸು ಕೇಳಿಬಂದಿದ್ದರೂ, ಗಣೇಶ್-ಶಿಲ್ಪಾ ವೈವಾಹಿಕ ಜೀವನ ಮಾತ್ರ ಖುಷಿ ಖುಷಿಯಾಗಿದೆ. ಒಂಬತ್ತು ವರ್ಷಗಳ ಗಣೇಶ್-ಶಿಲ್ಪಾ ದಾಂಪತ್ಯ ಜೀವನಕ್ಕೆ ಸಾಕ್ಷಿಯಾಗಿ ಚಾರಿತ್ರ್ಯ ಹಾಗೂ ವಿಹಾನ್ ಎಂಬ ಮಕ್ಕಳಿದ್ದಾರೆ.

ಅಷ್ಟಕ್ಕೂ, ಶಿಲ್ಪಾ ಹಾಗೂ ಗಣೇಶ್ ಮಧ್ಯೆ ಪ್ರೀತಿ ಚಿಗುರಿದ್ದು ಹೇಗೆ ಎಂಬುದನ್ನ ಸ್ವತಃ ನಟ ಗಣೇಶ್ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಬಹಿರಂಗ ಪಡಿಸಿದರು. ಅದೆಲ್ಲವನ್ನ ಅವರ ಮಾತುಗಳಲ್ಲೇ ಓದಿರಿ, ಫೋಟೋ ಸ್ಲೈಡ್ ಗಳಲ್ಲಿ...

ಗಣೇಶ್-ಶಿಲ್ಪಾ ಭೇಟಿ ಆಗಿದ್ದು.?

''ಕಾಮನ್ ಫ್ರೆಂಡ್ ನಿಂದ ಇಬ್ಬರೂ ಪರಿಚಯ ಆದ್ವಿ. ಪರಿಚಯ ಆದ್ಮೇಲೆ ಫ್ರೆಂಡ್ ಶಿಪ್ ಬೆಳೆಯಿತು. ಮೊದಲ ನಾನೇ ಶಿಲ್ಪಾಗೆ ಮೆಸೇಜ್ ಮಾಡಿದ್ದು. 'ಹಾಯ್.. ದಿ ಈಸ್ ಕಾಮಿಡಿ ಟೈಮ್ ಗಣೇಶ್' ಅಂತ. ಆ ಕಡೆಯಿಂದ ರಿಪ್ಲೈ ಬರಲಿಲ್ಲ. ಆಮೇಲೆ ಫ್ರೆಂಡ್ ಶಿಪ್ ಲವ್ ಗೆ ಟರ್ನ್ ಆಯ್ತು'' - ಗಣೇಶ್, ನಟ

ರಿಪ್ಲೈ ಮಾಡಲು ಒಂದು ದಿನ.!

''ಕಾಮನ್ ಫ್ರೆಂಡ್ಸ್ ನಿಂದ ಗಣೇಶ್ ಪರಿಚಯ ಆಗಿ ಒಂದು ವಾರ ಆದ್ಮೇಲೆ ಗಣೇಶ್ ಕಡೆಯಿಂದ ಒಂದು ಮೆಸೇಜ್ ಬಂತು. ನಾನು ಆಲ್ಮೋಸ್ಟ್ ಒಂದು ಇಡೀ ದಿನ ತೆಗೆದುಕೊಂಡಿದ್ದೆ ರಿಪ್ಲೈ ಮಾಡೋಕೆ'' - ಶಿಲ್ಪಾ ಗಣೇಶ್, ಗಣೇಶ್ ಪತ್ನಿ

ಪ್ರಪೋಸ್ ಮಾಡಿದ್ದು ಯಾರು.?

''ಎರಡು ತಿಂಗಳು ಆದ್ಮೇಲೆ ಪ್ರಪೋಸ್ ಮಾಡಿದ್ರು. ಅಲ್ಲಿಂದ ಶುರು ಆಯ್ತು ನಮ್ಮ ಜರ್ನಿ'' - ಶಿಲ್ಪಾ ಗಣೇಶ್, ಗಣೇಶ್ ಪತ್ನಿ

ಯಾರಿಗೂ ಗೊತ್ತಿರಲಿಲ್ಲ

''ಮದುವೆ ಆಗಬೇಕು ಅಂತ ಡಿಸೈಡ್ ಮಾಡಿದ್ವಿ. ಆದ್ರೆ ಯಾರಿಗೂ ಗೊತ್ತಿರಲಿಲ್ಲ. ಒಂದ್ಸಲಿ ನಾವು 'ಗಾಳಿಪಟ' ಶೂಟಿಂಗ್ ಮುಗಿಸಿಕೊಂಡು ಬರಬೇಕಾದ್ರೆ, ಮಾತ್ರ ಏರ್ ಪೋರ್ಟ್ ನಲ್ಲಿ ಯೋಗರಾಜ್ ಭಟ್ರು ನೋಡಿಬಿಟ್ಟರು. 'ಯಾರೋ ಹುಡುಗಿ ಬಂದು ಇವನನ್ನ (ಗಣೇಶ್) ಪಿಕಪ್ ಮಾಡಿಕೊಂಡು ಹೋದಲಲ್ಲ' ಅಂತ'' - ಗಣೇಶ್, ನಟ

ಮದುವೆ ಮಾತುಕತೆ ಆರಂಭ ಆಗಿದ್ದು..

''ಮುಂಗಾರು ಮಳೆ' ಶುರು ಆಗುವ ಮುಂಚಿನಿಂದಲೂ ನಾವಿಬ್ಬರು ಸ್ನೇಹಿತರು. 'ಮುಂಗಾರು ಮಳೆ' ಸಿನಿಮಾ ಬಂದ್ಮೇಲೆ ಮದುವೆ ಆಗೋಣ ಅನಿಸ್ತು. ಮದುವೆ ಆದ್ವಿ'' - ಗಣೇಶ್, ನಟ

ಶಿಲ್ಪಾ ತಾಯಿ ಏನಂತ ಹೇಳಿದ್ದರು.?

''ನಾನು ಲವ್ ಮಾಡಿಬಿಟ್ಟೆ. ಒಮ್ಮೆ ಅವರ ತಾಯಿ ಹತ್ತಿರ ಮಾತನಾಡಿದಾಗ, ''ಫಿಲ್ಮ್ ಆಕ್ಟರ್ ಗೆ ನನ್ನ ಮಗಳನ್ನು ಕೊಡುವುದಿಲ್ಲ'' ಅಂತ ಹೇಳಿಬಿಟ್ಟರು. ''ನಾನು ಚೆನ್ನಾಗಿ ನೋಡಿಕೊಳ್ಳುತ್ತೇನೆ. ಅವಳಿಗೂ ಇಷ್ಟ'' ಅಂತ ಹೇಳಿದ್ಮೇಲೆ ಒಪ್ಪಿಕೊಂಡರು'' - ಗಣೇಶ್, ನಟ

ಸಂಜೆ ಮದುವೆ

''ಮದುವೆ ಆಗಲು ನಾನು ಡಿಸೈಡ್ ಮಾಡಿದಾಗ ನನ್ನ ಗ್ಯಾಂಗ್ ನಲ್ಲಿ ಇದ್ದ ಐದು ಜನಕ್ಕೆ ಫೋನ್ ಮಾಡಿದೆ. ಸಂಜೆ ಮದುವೆ ಆದೆ'' - ಗಣೇಶ್, ನಟ

ಮಕ್ಕಳಿಗೂ ಸಿನಿಮಾ ಹುಚ್ಚು

''ಫ್ಯಾಮಿಲಿಗೆ ತುಂಬಾ ಪ್ರಾಮುಖ್ಯತೆ ಕೊಡುತ್ತಾರೆ. ಮಕ್ಕಳಿಗೆ ಪ್ರತಿ ವಾರ ಒಂದೊಂದು ಸಿನಿಮಾ ತೋರಿಸುತ್ತಾರೆ. ಚಾರಿತ್ರ್ಯ ಸಿನಿಮಾ ಮಾಡಬೇಕು ಅಂತ ಈಗಲೇ ಹೇಳುತ್ತಿದ್ದಾಳೆ'' - ಶಿಲ್ಪಾ ಗಣೇಶ್, ಗಣೇಶ್ ಪತ್ನಿ

ಶಿಲ್ಪಾ ಬಗ್ಗೆ ಗಣೇಶ್ ಮಾತು

''ಗೋಲ್ಡನ್ ಸ್ಟಾರ್ ಗಣೇಶ್ ಆದ್ಮೇಲೆ, ಆ ಗೋಲ್ಡನ್ ಸ್ಟಾರ್ ಪಟ್ಟವನ್ನ ಉಳಿಸಿಕೊಟ್ಟಿದ್ದೇ ಶಿಲ್ಪಾ'' - ಗಣೇಶ್, ನಟ

English summary
Kannada Actor Ganesh revealed his love story in Zee Kannada Channel's popular show 'Weekend With Ramesh-3'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada