»   » 'ವೀಕೆಂಡ್ ವಿತ್ ರಮೇಶ್' ಮೊದಲೆರಡು ಸೀಸನ್ ಗಳತ್ತ ಜಗ್ಗೇಶ್ ಮುಖ ಮಾಡ್ಲಿಲ್ಲ.! ಯಾಕೆ.?

'ವೀಕೆಂಡ್ ವಿತ್ ರಮೇಶ್' ಮೊದಲೆರಡು ಸೀಸನ್ ಗಳತ್ತ ಜಗ್ಗೇಶ್ ಮುಖ ಮಾಡ್ಲಿಲ್ಲ.! ಯಾಕೆ.?

Posted By:
Subscribe to Filmibeat Kannada

ಜೀ ಕನ್ನಡ ವಾಹಿನಿಯ ಜನಪ್ರಿಯ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದ ಮೂರನೇ ಸೀಸನ್ ನ ಎರಡನೇ ಅತಿಥಿಯಾಗಿ ನವರಸ ನಾಯಕ ಜಗ್ಗೇಶ್ ಪಾಲ್ಗೊಂಡಿದ್ದರು. ತಮ್ಮ ಜೀವನದ ಫ್ಲ್ಯಾಶ್ ಬ್ಯಾಕ್ ನೋಡಿ ಜಗ್ಗೇಶ್ ಭಾವುಕರಾದರು.

ಅಷ್ಟಕ್ಕೂ, 'ವೀಕೆಂಡ್ ವಿತ್ ರಮೇಶ್' ಮೊದಲ ಆವೃತ್ತಿಯಲ್ಲಿಯೇ ಅತಿಥಿಯಾಗಿ ನಟ ಜಗ್ಗೇಶ್ ಭಾಗವಹಿಸಬೇಕಿತ್ತು. ಆದ್ರೆ, ಈ ಶೋ ಕಡೆ ಜಗ್ಗೇಶ್ ಮುಖ ಮಾಡಲಿಲ್ಲ. ಅದಕ್ಕೆ ಕಾರಣ ಏನು ಗೊತ್ತಾ.?

ಜಗ್ಗೇಶ್ ಗೆ ಸಂಕೋಚ

ನಟ ಜಗ್ಗೇಶ್ ಕೊಂಚ ಸಂಕೋಚದ ಸ್ವಭಾವದವರಂತೆ. ಹೀಗಾಗಿ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಭಾಗವಹಿಸಲು ಹಿಂದು ಮುಂದು ನೋಡಿದ್ದಾರೆ.

ರಮೇಶ್ ಪ್ರಶ್ನೆ ಮಾಡಿದರು

ಈ ಬಗ್ಗೆ 'ವೀಕೆಂಡ್ ವಿತ್ ರಮೇಶ್' ವೇದಿಕೆಗೆ ಕಾಲಿಟ್ಟ ತಕ್ಷಣ ನಟ ಜಗ್ಗೇಶ್ ರವರನ್ನ ಸ್ವತಃ ನಟ ರಮೇಶ್ ಅರವಿಂದ್ ಪ್ರಶ್ನೆ ಮಾಡಿದರು.

ರಿಸರ್ಚ್ ಟೀಮ್ ಗೆ ಸಿಗಬಾರದ್ದೆಲ್ಲ ಸಿಕ್ಕಿಬಿಟ್ರೆ..

ರಮೇಶ್ ಪ್ರಶ್ನೆ ಮಾಡಿದಾಗ ಜಗ್ಗೇಶ್ ಹೇಳಿದಿಷ್ಟು - ''ನನಗೆ ಸ್ವಲ್ಪ ಸಂಕೋಚದ ಸ್ವಭಾವ. ರಮೇಶ್ ಕೇಳಬಾರದ್ದೆಲ್ಲ ಕೇಳಿ, ನಾನು ಫೀಲಿಂಗ್ ಮಾಡಿಕೊಂಡ್ಬಿಟ್ರೆ, ರಿಸರ್ಚ್ ಟೀಮ್ ಅವರಿಗೆ ಸಿಗಬಾರದ್ದೆಲ್ಲ ಸಿಕ್ಕಿಬಿಟ್ರೆ... ಇದೆಲ್ಲ ಯಾಕೆ ಬೇಕು ನಮಗೆ... ಎಸ್ಕೇಪ್ ಆಗ್ಬಿಡೋಣ ಅಂತ ಇದ್ದೆ'' ಎಂದರು.

ಸ್ಫೂರ್ತಿಯ ಚಿಲುಮೆ

ಕಡೆಗೂ ತಮ್ಮ ಸಂಕೋಚವನ್ನ ಬದಿಗಿಟ್ಟು ಈ ಬಾರಿಯ ಸಾಧಕರ ಕುರ್ಚಿ ಮೇಲೆ ನಟ ಜಗ್ಗೇಶ್ ಕುಳಿತಿದ್ದಾಯ್ತು. ತಮ್ಮ ನೆನಪಿನ ಬುತ್ತಿಯನ್ನ ಬಿಚ್ಚಿಟ್ಟು ಅನೇಕರಿಗೆ ಸ್ಫೂರ್ತಿಯ ಚಿಲುಮೆಯಾಗಿದ್ದಾರೆ ನಟ ಜಗ್ಗೇಶ್.

English summary
Why didn't Kannada Actor Jaggesh took part in Zee Kannada Channel's Weekend With Ramesh first two seasons.? Read the article to know the reason.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada