For Quick Alerts
  ALLOW NOTIFICATIONS  
  For Daily Alerts

  ನವರಸ ನಾಯಕ ಜಗ್ಗೇಶ್ ಬಗ್ಗೆ ಅಪಹಾಸ್ಯ ಮಾಡಿದವರು ಯಾರು?

  By Harshitha
  |

  ಒಂದೇ ನಿಮಿಷದಲ್ಲಿ ಡೈಲಾಗ್ ಇಲ್ಲದೆ ಮುಖ ಭಾವದಲ್ಲೇ ನವರಸಗಳನ್ನೂ ತೋರಿಸುವ ಅಪ್ರತಿಮ ಕಲಾವಿದ ನಟ ಜಗ್ಗೇಶ್. ಇದೇ ಕಾರಣಕ್ಕೆ ಅವರಿಗೆ 'ನವರಸ ನಾಯಕ' ಅಂತ ಅಭಿಮಾನಿಗಳು ಪ್ರೀತಿಯಿಂದ ಕರೆಯುವುದು.

  ಮಾತಿನಲ್ಲಿ ಜಗತ್ಕಿಲಾಡಿ ಆಗಿರುವ ನಟ ಜಗ್ಗೇಶ್ ನಿನ್ನೆ 'ಬಿಗ್ ಬಾಸ್-3' ವೇದಿಕೆಗೆ ಆಗಮಿಸಿದ್ದರು. ಕನ್ನಡ ಚಿತ್ರರಂಗದಲ್ಲಿ ಅವರು ಬೆಳೆದು ಬಂದ ಹಾದಿ, ಎದುರಿಸಿದ ಅವಮಾನ, ಅನುಭವಿಸಿದ ಯಾತನೆಯನ್ನೆಲ್ಲಾ ಕಿಚ್ಚ ಸುದೀಪ್ ಮುಂದೆ ಬಿಚ್ಚಿಟ್ರು. ['ಬಿಗ್ ಬಾಸ್' ವೇದಿಕೆಯಲ್ಲಿ ಉಪೇಂದ್ರ 'ರಿಯಲ್ ಸ್ಟಾರ್' ಆದ ಜರ್ನಿ]

  ವಿಲನ್ ಆಗಿ, ಕಾಮಿಡಿ ನಟನಾದ ನಂತರ ಜಗ್ಗೇಶ್ ಹೀರೋ ಆಗಿ ಬಡ್ತಿ ಪಡೆದ ಸಿನಿಮಾ ರಿಲೀಸ್ ಆಗದೇ ಇದ್ದಾಗ ಅವರಿಗೆ ಆದ ಅವಮಾನ ಅಷ್ಟಿಷ್ಟಲ್ಲ. ಇನ್ನೂ ಇತ್ತೀಚಿನ 'ವಾಸ್ತುಪ್ರಕಾರ' ಸಿನಿಮಾದ ಶೂಟಿಂಗ್ ಸಂದರ್ಭದಲ್ಲೂ ಜಗ್ಗೇಶ್ ತೂಕದ ಬಗ್ಗೆ ಅಪಹಾಸ್ಯ ಮಾಡಿದವರಿದ್ದಾರೆ.

  ಎಲ್ಲವನ್ನ 'ಸೂಪರ್ ಸಂಡೆ ವಿತ್ ಸುದೀಪ್' ಕಾರ್ಯಕ್ರಮದಲ್ಲಿ ಜಗ್ಗೇಶ್ ಹಂಚಿಕೊಂಡರು. ಮುಂದೆ ಓದಿ.....

  ಜಗ್ಗೇಶ್ 'ಲೂಸರ್'?

  ಜಗ್ಗೇಶ್ 'ಲೂಸರ್'?

  ''ಲೂಸರ್' ಅಂದ್ರೆ ವೇಯ್ಟ್ ಲೂಸರ್ ಅಗಿದ್ದೀನಿ. ಸ್ವಲ್ಪ ಯಂಗ್ ಹೀರೋಗಳ ತರಹ ಮೇನ್ಟೇನ್ ಮಾಡೋಣ ಅಂತ. 12 ತಿಂಗಳಲ್ಲಿ 22 ಕೆ.ಜಿ ಡೌನ್'' - ಜಗ್ಗೇಶ್ [ಇಬ್ಬರಲ್ಲಿ ಕಾಲು ಎಳ್ದೋರ್ ಯಾರು? ಎಳ್ಸ್ಕೊಂಡೋರು ಯಾರು?]

  ಬುಡಕ್ಕೆ ಬಾಂಬ್ ಇಟ್ಟವರು ಯಾರು?

  ಬುಡಕ್ಕೆ ಬಾಂಬ್ ಇಟ್ಟವರು ಯಾರು?

  ''ವಾಸ್ತು ಪ್ರಕಾರ' ಟೈಮ್ ನಲ್ಲಿ ಒಬ್ರು ಮಹಾನೀಯರು, 'ಇವರಿಗೆ ಡಬಲ್ ಚಿನ್ ಬಂದ್ಬಿಟ್ಟಿದೆ. ಹೊಟ್ಟೆ ಬಂದು ಬಿಟ್ಟಿದೆ. ಇವರೆಲ್ಲಾ ಯಾಕೆ ಬೇಕು. ಕಳುಹಿಸಿ ಇವರನ್ನ ಆಚೆ'' ಅನ್ನೋ ತರಹ ಅಂದಾಗ ನಾವೆಲ್ಲಾ ಮೂವಿ ಫೀಲ್ಡ್ ಗೆ ಬಂದಾಗ ಡಾ.ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಪ್ರಭಾಕರ್ ಮಧ್ಯೆ ಎಸ್ಕೇಪ್ ಆಗಿ ಬೆಳೆದವರು ನಾವು. ಇದನ್ನೆಲ್ಲಾ ಈಗಿನವರು ಹೆಂಗ್ ಬಂದ್ರು ಅಂತ ಯೋಚನೆ ಮಾಡದೆ ನಮ್ಮ ಬುಡಕ್ಕೆ ಬಾಂಬ್ ಇಡುವುದಕ್ಕೆ ಬಂದ್ಬುಟ್ರಲ್ಲಾ'' - ಜಗ್ಗೇಶ್ [ಕಿಚ್ಚ ಸುದೀಪ್ ಗೆ ರಿಯಲ್ ಸ್ಟಾರ್ ಉಪೇಂದ್ರ ಹೇಳಿದ ಫಿಲಾಸಫಿ]

  ನಾವೆಲ್ಲಾ ಹಿಂಗೆ....

  ನಾವೆಲ್ಲಾ ಹಿಂಗೆ....

  ''ನಾವೆಲ್ಲಾ ಹೆಂಗೆ ಅಂದ್ರೆ ನಿಮ್ಮ ಸಾಧನೆ ನೋಡಿದಾಗ ತುಂಬಾ ಖುಷಿ ಆಗುತ್ತೆ. ನಿಮ್ಮ ಸಾಧನೆ ಹಿಂದೆ ನಿಮ್ಮ ಬೆವರಿನ ಹನಿ ನಿಮಗೆ ಮಾತ್ರ ಗೊತ್ತಿರುತ್ತೆ. ಬೇರೆಯವರಿಗಲ್ಲ. 'ಸುದೀಪ್ ಏನು ದೊಡ್ಡ ಇದಾ' ಅಂತ ಹೇಳುವವನು ಕಿಸಿಯೋದಕ್ಕೆ ಆಗದವನು. ಸತ್ಯ ಹೇಳ್ತೀನಿ'' - ಜಗ್ಗೇಶ್

  ಮೀಟರ್ ಇದ್ರೆ ಕಾಮೆಂಟ್ ಮಾಡಿ....

  ಮೀಟರ್ ಇದ್ರೆ ಕಾಮೆಂಟ್ ಮಾಡಿ....

  ''ಯಾವತ್ತೂ ಯಾರಿಗಾದರೂ ಕಾಮೆಂಟ್ಸ್ ಮಾಡಬೇಕಾದ್ರೆ, ನಿಮ್ಮ ಮೀಟರ್ ಅವರಿಗಿಂತ ಜೋರಾಗಿದ್ರೆ ಮಾಡಿ. ಇಲ್ಲಾಂದ್ರೆ ಸುಮ್ನಿರ್ರಪ್ಪಾ ಮಾತಾಡ್ಬೇಡಿ'' - ಜಗ್ಗೇಶ್

  ಜಗ್ಗೇಶ್ ಗೆ ರೆಹಮಾನ್ ಹೇಳಿದ್ದೇನು?

  ಜಗ್ಗೇಶ್ ಗೆ ರೆಹಮಾನ್ ಹೇಳಿದ್ದೇನು?

  ''ಇದೇ ರೆಹಮಾನ್ ಒಂದು ಇಂಟರ್ವ್ಯೂ ಮಾಡಿದ್ರು. ನನಗೆ ಬಹಳ ಹರ್ಟ್ ಆಯ್ತು. ನಾನು ತುಂಬಾ ಭಾವನಾ ಜೀವಿ. ''ನೀವು ಎಂತೆಂಥ ಸಿನಿಮಾಗಳನ್ನ ಮಾಡಿದ್ದೀರಾ. ಸ್ವಲ್ಪ ಶಟ್ ಡೌನ್ ಮಾಡಿ ಅಂದ್ರು'' ಆಮೇಲೆ ಪವನ್ ಅಂತ ನನ್ನ ಟ್ರೇನರ್. ಸ್ಕೂಲ್ ಮಕ್ಕಳ ತರಹ ನನ್ನ ಟ್ರೇನ್ ಮಾಡಿದ್ರು. ವೇಯ್ಟ್ ಲಾಸ್ ಮಾಡಿಕೊಂಡೆ'' - ಜಗ್ಗೇಶ್

  ಎಲ್ಲವನ್ನೂ ಸ್ವೀಕಾರ ಮಾಡಬೇಕು!

  ಎಲ್ಲವನ್ನೂ ಸ್ವೀಕಾರ ಮಾಡಬೇಕು!

  ''ಯಾವ ಮನುಷ್ಯನಿಗೆ ಅಣಕ ಮತ್ತು ಅವಮಾನ ಮಾಡಿದಾಗ, ಅವನಿಗೆ ಗೊತ್ತಿಲ್ಲದೆ ಅವನ ಒಳಗೆ ಜ್ವಾಲೆ ಎದ್ದೇಳುತ್ತೆ. ಜ್ವಾಲೆಯನ್ನ ಬುದ್ಧಿವಂತಿಕೆಯಿಂದ ಚಿಂತನೆ ಮಾಡಿದ್ರೆ, ನಿಮ್ಮ ತರಹ ಆಗ್ತಾನೆ. ನಿಮಗೂ ಜೀವನದಲ್ಲಿ ಅವಮಾನ ಮಾಡಿದ್ದಾರೆ. ಅವತ್ತು ನಿಮ್ಮ ಜೊತೆ ಇದ್ದವರು ನಿಮ್ಮ ತಂದೆ ತಾಯಿ. ನೀವು ನೀವಾದ್ಮೇಲೆ ಇಡೀ ವಿಶ್ವವೇ ನಿಮ್ಮ ಹತ್ರ ತಿರುಗಿ ನೋಡುತ್ತೆ. ಎಲ್ಲವನ್ನೂ ನಾವು ಸ್ವೀಕಾರ ಮಾಡ್ಬೇಕು'' - ಜಗ್ಗೇಶ್

  ಅಂಬರೀಶ್ ಸ್ಪೂರ್ತಿ

  ಅಂಬರೀಶ್ ಸ್ಪೂರ್ತಿ

  ''ನಾನು ನಾಯಕ ನಟನಾಗಿ ಬೆಳೀಬೇಕು ಅನ್ನೋದಕ್ಕೆ ಸ್ಪೂರ್ತಿನೇ ಅಂಬರೀಶ್. 'ನೋಡಯ್ಯಾ, ನಿನ್ನ ಜನ ಎಷ್ಟು ಇಷ್ಟಪಡ್ತಿದ್ದಾರೆ. ನೀನ್ಯಾಕೆ ಹೀರೋ ಆಗ್ಬಾರ್ದು' ಅಂದ್ರು. ಆಗ ಒಂದು ಸಿನಿಮಾ ಸ್ಟಾರ್ಟ್ ಆಯ್ತು. ಆ ಸಿನಿಮಾ ಕಾರಣಾಂತರಗಳಿಂದ ನಿಂತುಹೋಗುತ್ತೆ. ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಶೂಟಿಂಗ್. ಆಗ ಚಾಮುಂಡೇಶ್ವರಿ ಸ್ಟುಡಿಯೋ ಒಂಥರಾ ಧರ್ಮ ಛತ್ರ ಇದ್ಹಾಗೆ. ಮೃಷ್ಟಾನ್ನ ಭೋಜನ ಸಿಗುವ ಜಾಗ. ಅವತ್ತಿನ ದಿನ ದುಡ್ಡು ಇರ್ಲಿಲ್ಲ. ಅನ್ನದಾತರು ಇದ್ದರು. ಆಗ 'ಬೇಕಿತ್ತಾ ನಿನಗೆ ಇದೆಲ್ಲಾ' ಅಂತ ಅವಮಾನ ಮಾಡ್ತಿದ್ರು'' - ಜಗ್ಗೇಶ್

  'ಭಂಡ ನನ್ನ ಗಂಡ' ರಿಲೀಸ್ ಆಗಿದ್ಹೇಗೆ?

  'ಭಂಡ ನನ್ನ ಗಂಡ' ರಿಲೀಸ್ ಆಗಿದ್ಹೇಗೆ?

  ''ನನ್ನ ಬಾವ ಜೊತೆಗೆ ಸೇರಿಕೊಂಡು 'ಭಂಡ ನನ್ನ ಗಂಡ' ಕಥೆ ಬರ್ದ್ವಿ. ಮೂರು ದಿನದಲ್ಲಿ ಕಥೆ ರೆಡಿ ಮಾಡಿದ್ವಿ. ನನ್ನ ಮೊದಲನೇ ಚಿತ್ರ 'ತರ್ಲೆ ನನ್ಮಗ' ರಿಲೀಸ್ ಆಗ್ಲಿಲ್ಲ. ಗಾಂಧಿನಗರದಲ್ಲಿ ಎಲ್ಲರೂ ನಗಾಡ್ತಾ ಇದ್ದರು. ರಾಯರನ್ನ ನಂಬಿದ್ದೆ. ಅಲ್ಲಿ ಪೂಜೆ ಮಾಡಿ, 'ಭಂಡ ನನ್ನ ಗಂಡ' ಪ್ರಿಂಟ್ ನ ಕೈಯಲ್ಲಿ ಹಿಡ್ಕೊಂಡು, ಸಿನಿಮಾ ರಿಲೀಸ್ ಮಾಡೋಕೆ ನಾಲ್ಕು ಲಕ್ಷ ಕೇಳ್ತಾರೆ. ನನ್ನ ಹತ್ರ ದುಡ್ಡು ಇಲ್ಲ. ಮಗನ ಫೀಸ್ ಕಟ್ಟೋಕೆ ದುಡ್ಡು ಇಲ್ಲ. ನನಗೆ ಹೆಲ್ಪ್ ಮಾಡ್ಬೇಕು ಅಂತ ಅಂಬರೀಶ್ ಗೆ ಹೇಳ್ದೆ'' - ಜಗ್ಗೇಶ್

  'ಭಂಡ' ಕಾರಣ

  'ಭಂಡ' ಕಾರಣ

  ''ಹೋಗೋ ಮಾಡ್ತೀನಿ' ಅಂತ ಮಾಣಿಕ್ ಚಂದ್ ಗೆ ಫೋನ್ ಮಾಡಿದ್ರು. ಸಿನಿಮಾ ರಿಲೀಸ್ ಆಯ್ತು. ಮೊದಲನೇ ದಿನ ಮೇನಕ ಥಿಯೇಟರ್ ಮುಂದೆ ಜನ ತುಂಬಿದ್ರು. ಅವತ್ತು ನಾನು ಮಗು ತರಹ ಕೂತ್ಕೊಂಡು ಅತ್ತುಬಿಟ್ಟೆ. ಇಡೀ ದಿನ ಚಿತ್ರಮಂದಿರ ಬಿಟ್ಟು ಆಚೆ ಬರ್ಲೇಯಿಲ್ಲ. 'ಭಂಡ ನನ್ನ ಗಂಡ' ಗೆದ್ದ. ಇವತ್ತು ನಾನು ಏನೇನು ಗಳಿಸಿದ್ದೀನಿ, ಅದೆಲ್ಲಾ ಭಂಡ ನನ್ಮಗನಿಗೆ ಹೋಗ್ಬೇಕು. ಸತ್ತು ಸ್ವರ್ಗದಲ್ಲಿರುವ ರಾಜ್ ಕಿಶೋರ್ ಗೆ ಹೋಗ್ಬೇಕು. ನನ್ನ ಭುಜ ತಟ್ಟಿ ಬೆಳೆಸಿದ ಅಂಬರೀಶ್ ಗೆ ಹೋಗ್ಬೇಕು. ನನ್ನ ಹೆಂಡತಿ ಮತ್ತು ಬಾವಗೆ ಹೋಗ್ಬೇಕು. ನನ್ನಲ್ಲಿರುವ ಸ್ವಾಭಿಮಾನಕ್ಕೆ ಹೋಗ್ಬೇಕು'' - ಜಗ್ಗೇಶ್

  ರಾಜಕೀಯಕ್ಕೆ ಸಿಕ್ಕಾಕೊಂಡಿದ್ದು!

  ರಾಜಕೀಯಕ್ಕೆ ಸಿಕ್ಕಾಕೊಂಡಿದ್ದು!

  ''ನಾನು ರಾಜಕೀಯಕ್ಕೆ ಇಷ್ಟಪಟ್ಟು ಹೋದವನಲ್ಲ. ಸಿಕ್ಕಾಕೊಂಡವನು. ನನಗೆ ಗಾಂಧಿನಗರಕ್ಕೆ ಟಿಕೆಟ್ ಕೊಟ್ರು. ಆಗ ನನ್ನ ತಂದೆ ಒಂದು ಗಂಟೆ ಮುಖಕ್ಕೆ ಉಗ್ದ್ರು. ಗಾಂಧಿನಗರಕ್ಕೆ ಯಾಕೆ? ನಮ್ಮ ಊರಿಗೆ ಬಾ ಅಂತ ಹೇಳಿದ್ರು. ಅಲ್ಲಿಗೆ ಹೋದಾಗಲೇ ಗೊತ್ತಾಗಿದ್ದು ರಾಜಕೀಯ ಹೇಗೆ ಅಂತ. ಎರಡನೇ ಬಾರಿ ನಾನು ಪ್ರಾಮಾಣಿಕ ಪ್ರಯತ್ನ ಮಾಡಿದೆ. ಕೊನೆಗೆ ಬಿಟ್ಟುಬಿಟ್ಟೆ. ರಾಜಕೀಯದಲ್ಲಿ ನಾನು ಗಳಿಸಿರುವುದಕ್ಕಿಂತ ಕಳ್ಕೊಂಡಿರೋದೇ ಹೆಚ್ಚು'' - ಜಗ್ಗೇಶ್

  ಕಾಮಿಡಿ ರೋಲ್ ಸಿಕ್ಕಿದ್ದು ಹೇಗೆ?

  ಕಾಮಿಡಿ ರೋಲ್ ಸಿಕ್ಕಿದ್ದು ಹೇಗೆ?

  ''ನನ್ನ ಇನ್ನೊಬ್ಬ ಗುರುಗಳು ಬಂದು ಕೆ.ವಿ.ರಾಜು ಅವರು. ನಟನೆಗೆ ಅವರ ಹತ್ರ ಅವಕಾಶ ಸಿಕ್ತು. 'ಯುದ್ಧ ಕಾಂಡ' ಸಿನಿಮಾದಲ್ಲಿ ಡ್ಯಾನ್ಸಿಂಗ್ ವಿಲನ್ ರೋಲ್ ಅಂದ್ರು. ನಾನು ಕನಸು ಕಟ್ಟಿಕೊಂಡಿದ್ದೆ. ಒಂದಿನ ಊಟ ಮಾಡುವಾಗ, ನನ್ನ ರೋಲ್ ಗೆ ಶಶಿ ಕುಮಾರ್ ಸೆಲೆಕ್ಟ್ ಆಗೋದ್ರು. ನಾನು ಅಳ್ತಾ ಕೂತಿದ್ದಾಗ, ತೂಗುದೀಪ ಶ್ರೀನಿವಾಸ್ ಸಮಾಧಾನ ಮಾಡಿದ್ರು. ನಂತರ ಅವರು ಕೆ.ವಿ.ರಾಜು ಹತ್ರ ಮಾತನಾಡಿದ್ರು'' - ಜಗ್ಗೇಶ್

  ಪಾತ್ರ ಸೃಷ್ಟಿಸಿದರು

  ಪಾತ್ರ ಸೃಷ್ಟಿಸಿದರು

  ''ನಂತರ ಕೆ.ವಿ.ರಾಜು ಬಂದು ಮಾತನಾಡಿ, ವಿಲನ್ ಮಗನ ರೋಲ್ ಡೆವಲಪ್ ಮಾಡಿದ್ರು. ಅದರಲ್ಲಿ ನಂದು ಕಾಮಿಡಿ ರೋಲ್. ಅಲ್ಲಿಂದ ನಾನು ಕಾಮಿಡಿ ಶುರುಮಾಡಿದ್ದು. ನನ್ನಲ್ಲಿ ಒಬ್ಬ ಕಾಮಿಡಿಯನ್ ಇದಾನೆ ಅಂತ ಗುರುತು ಹಿಡಿದದ್ದು ಕೆ.ವಿ.ರಾಜು. ಅಲ್ಲಿಂದ ಇಲ್ಲಿವರೆಗೂ ಬಂದಿದ್ದೇನೆ'' - ಜಗ್ಗೇಶ್

  English summary
  Kannada Actor Jaggesh spoke about his movies and his journey in Kannada Film Industry during a chit-chat with Sudeep in Super Sunday with Sudeep (Bigg Boss Kannada-3) show.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X